Love at first sight and Love is blind ಎನ್ನುವುದು ಪ್ರೀತಿ ವಿಷಯವಾಗಿ ಸಾಮಾನ್ಯವಾಗಿ ಕೇಳಿ ಬರುವ ಮಾತುಗಳು. ಯಾವುದೋ ಕ್ಷಣದಲ್ಲಿ ಅರಳುವ ಪ್ರೀತಿ, ಹೇಗೆ ಹೆಮ್ಮರವಾಗಿ ಬೆಳೆಯುತ್ತದೋ ಗೊತ್ತಾಗುವುದಿಲ್ಲ. ಇದಕ್ಕೆ ವಿಜ್ಞಾನ ಹೇಳುವುದೇನು?
ಯಾರ ಮೇಲಾಯ್ತೋ ಅವರ ಮೇಲೆ ಪ್ರೀತಿ ಹುಟ್ಟುತ್ತೆ. ಅದಕ್ಕೆ 'ಪ್ರೀತಿ ಕುರುಡು...' ಎನ್ನುತ್ತಾರೆ. ವಿಜ್ಞಾನವೂ ಈ ಹೇಳಿಕೆಯನ್ನು ಅನುಮೋದಿಸುತ್ತದೆ. ರಾಬರ್ಟ್ ಫ್ರೇಯೆರ್ ತಮ್ಮ ಪ್ರಯೋಗದಲ್ಲಿ ನ್ಯೂರೋ ಕೆಮಿಕಲ್, ಇನಾಯಿಲ್ ಇಥಾಯಿಲ್ ಅಮೀನ್ ಕಾರಣದಿಂದ ಸಂಗಾತಿ ತಪ್ಪುಗಳು ಕಾಣೋದೇ ಇಲ್ಲವಂತೆ ಪ್ರೇಮ ಪಾಶದಲ್ಲಿ ಬಿದ್ದಿರುವವವರಿಗೆ. ಇದು ಯಾವಾಗಲೂ ಒಂದೇ ತರಹ ಇರೋದಿಲ್ಲ. ಅದಕ್ಕೆ ಪ್ರೀತಿಯಲ್ಲಿ ಕೆಲವೊಮ್ಮೆ ಏರಿಳಿತವಾಗುತ್ತದೆ.
ದೇಹದ ಕಾಮನೆ: ಕಾಮನೆ ಎಂಬುದು ಸೆಕ್ಸ್ ಹಾರ್ಮೋನ್ ಟೆಸ್ಟೋಸ್ಟೆರಾನ್ ಮತ್ತು ಇಸ್ಟ್ರೋಜನ್‌ನಿಂದ ಹುಟ್ಟುತ್ತದೆ. ಟೆಸ್ಟೋಸ್ಟೆರಾನ್ ಕೇವಲ ಪುರುಷರಲ್ಲಿ ಮಾತ್ರವಲ್ಲ, ಮಹಿಳೆಯರಲ್ಲೂ ಸಕ್ರಿಯವಾಗಿರುತ್ತದೆ.
ಮನದ ಕಾಮನೆ: ಇಲ್ಲೇ ಆರಂಭವಾಗುತ್ತೆ ಪ್ರೇಮ. ಇಲ್ಲಿ ಜನರು ಪ್ರೀತಿಯಲ್ಲಿ ಬೀಳುತ್ತಾರೆ. ಈ ಸಂದರ್ಭದಲ್ಲಿ ಅವರಿಗೆ ಎದುರಿನವರ ತಪ್ಪು ಏನೆಂಬುವುದೇ ಅರಿವಿಗೆ ಬರುವುದಿಲ್ಲ. ಅವರು ಹೆಚ್ಚಾಗಿ ಪ್ರೇಮಿಯ ಬಗ್ಗೆಯೇ ಯ ಚಿಸುತ್ತಿರುತ್ತಾರೆ. ಪ್ರೀತಿಯ ಈ ಸ್ಥರದಲ್ಲಿ ನ್ಯೂರೋ ಟ್ರಾನ್ಸ್ ಮೀಟರ್ ಸಮೂಹ ಮತ್ತು ಮೊನೊ ಅಮಿನಸ್ ಮುಖ್ಯ ಪಾತ್ರ ವಹಿಸುತ್ತದೆ. ಈ ನ್ಯೂರೋ ಕೆಮಿಕಲ್ ಕಾರಣದಿಂದ ತಮ್ಮ ಪ್ರೇಮಿ ಏನು ಮಾಡಿದರೂ ಸರಿ ಎಂದೆನಿಸುತ್ತದೆ. ಅವರು ತಪ್ಪು ಮಾಡಿದರೂ ಅದನ್ನು ತಪ್ಪೆಂದು ಮನಸ್ಸು ಒಪ್ಪಿ ಕೊಳ್ಳುವುದೇ ಇಲ್ಲ. ತಪ್ಪೆಲ್ಲವೂ ಸರಿ ಎನಿಸುತ್ತದೆ. ಈ ಸಂದರ್ಭದಲ್ಲಿ ಅವರಿಗೆ ಕಾಣುವುದು ಕೇವಲ ಪ್ರೀತಿ ಮಾತ್ರ. ಅದಕ್ಕೆ ಹೇಳುವುದು ಪ್ರೀತಿ ಕುರುಡೆಂದು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 2, 2019, 3:32 PM IST