ತಲೆಕೂದಲ ಬಗ್ಗೆ ಎಲ್ಲರೂ ಆರಾಮಾಗಿ ಮಾತಾಡುತ್ತೇವೆ. ಆದರೆ ದೇಹದ ಮೇಲಿನ, ಅದರಲ್ಲೂ ಗುಪ್ತಾಂಗದ ಸುತ್ತ ಬೆಳೆವ ಕೂದಲ ಬಗ್ಗೆ ಯಾರೂ ಬಾಯಿ ಬಿಡುವುದಿಲ್ಲ. ಮೀಡಿಯಾ, ಫ್ರೆಂಡ್ಸ್, ರೊಮ್ಯಾಂಟಿಕ್ ಪಾರ್ಟ್ನರ್ ಈ ಕುರಿತು, ಅದನ್ನು ಶೇವ್ ಮಾಡಬೇಕೋ ಬೇಡವೋ ಎಂಬ ಬಗ್ಗೆ ಕೆಲ ಮಿಶ್ರ ಸಂದೇಶಗಳನ್ನು ನೀಡಿ ಕನ್ಫ್ಯೂಸ್ ಮಾಡಬಹುದು. ಆದರೆ, ನೀವು ತಿಳಿದುಕೊಳ್ಳಬಯಸುವ ಈ ಕುರಿತ ವೈಜ್ಞಾನಿಕ ಸತ್ಯಗಳನ್ನು ಇಲ್ಲಿ ಹೇಳುತ್ತೇವೆ. 

1. ಬಹುತೇಕರು ಗುಟ್ಟಾಗಿ ಗಾರ್ಡನ್ ಗ್ರೂಮ್ ಮಾಡ್ತಾರೆ

ಇತ್ತೀಚಿನ ಅಧ್ಯಯನದ ಫಲಿತಾಂಶದಂತೆ ಶೇ.80ರಷ್ಟು ಯುವತಿಯರು ನಿಯಮಿತವಾಗಿ ಪ್ಯೂಬಿಕ್ ಹೇರ್ ರಿಮೂವ್ ಮಾಡುತ್ತಾರೆ. ಅವರಲ್ಲಿ ಶೇ.5ರಷ್ಟು ಹುಡುಗಿಯರು ಪ್ರತಿದಿನ ಮಾಡಿದರೆ, ಇನ್ನುಳಿದವರು ತಿಂಗಳಿಗೊಮ್ಮೆಯಂತೆ ಮಾಡುತ್ತಾರೆ. ಪುರುಷರ ವಿಷಯಕ್ಕೆ ಬಂದರೆ ಶೇ.50ರಷ್ಟು ಯುವಕರು 'ಅಲ್ಲಿ' ಟ್ರಿಮ್ ಮಾಡಿಕೊಳ್ಳುತ್ತಾರೆ. 

2. ಗಾಯ ಮಾಡಿಕೊಳ್ಳುವವರೂ ಹೆಚ್ಚು

ಕೆಳಗೆ ಹೇರ್‌ಲೆಸ್ ಆಗುವ ಭರದಲ್ಲಿ ಶೇ.25ರಷ್ಟು ಜನರು ಅಲ್ಲಿ ಒಮ್ಮೆಯಾದರೂ ಗಾಯ ಮಾಡಿಕೊಂಡರೆ, ಮಹಿಳೆಯರು ಪುರುಷರಿಗಿಂತ ಹೆಚ್ಚು ಗಾಯ ಮಾಡಿಕೊಳ್ಳುತ್ತಾರೆ. ಸೂಕ್ಷ್ಮ ಸ್ಥಳವಾದ್ದರಿಂದ ಶೇವ್, ಟ್ರಿಮ್, ಎಪಿಲೇಟ್ ಏನೇ ಮಾಡುವಾಗಲೂ ಹೆಚ್ಚು ಎಚ್ಚರಿಕೆ ವಹಿಸುವುದು ಅಗತ್ಯ. ವ್ಯಾಕ್ಸಿಂಗ್‌ನಿಂದ ಗಾಯಗಳಾಗುವ ಸಂಭವ ಕಡಿಮೆ.

ಸುಖಿ ದಾಂಪತ್ಯಕ್ಕೆ ಪಂಚ ಸೂತ್ರಗಳು!

3. ವಯಸ್ಸಾದವರು ಹೆಚ್ಚು ಜಾಗರೂಕರಾಗಿರುವುದು ಅಗತ್ಯ

ವಯಸ್ಸಾದಂತೆಲ್ಲ ಚರ್ಮ ಸುಕ್ಕಾಗುತ್ತದೆ. ಇಂಥ ಚರ್ಮದ ಮೇಲಿನ ಹೇರ್ ರಿಮೂವ್ ಮಾಡುವಾಗ ಗಾಯಗಳಾಗುವ ಸಾಧ್ಯತೆಗಳು ಹೆಚ್ಚು. ಫೋರ್ನಿಯರ್ಸ್ ಗ್ಯಾಂಗ್ರಿನ್ ಕೂಡಾ ಆಗಬಹುದು. ಡಯಾಬಿಟೀಸ್, ಕ್ರೋನ್ಸ್ ಡಿಸೀಸ್, ಲುಕೇಮಿಯಾ, ಎಚ್ಐವಿ ಕಾಯಿಲೆಯಿದ್ದಾಗ ಫೋರ್ನಿಯರ್ಸ್ ಗ್ಯಾಂಗ್ರಿನ್ ಆಗುವ ರಿಸ್ಕ್ ಜಾಸ್ತಿ. 7500 ಜನರಲ್ಲಿ ಒಬ್ಬರಿಗೆ ಮಾತ್ರ ಇದು ಆಗುವುದಾದರೂ, ಆ ಒಬ್ಬರು ನೀವಾಗದಂತೆ ಜಾಗರೂಕತೆ ವಹಿಸುವುದು ಮುಖ್ಯವಲ್ಲವೇ? 

4. ಪೀರಿಯಡ್ಸ್ ಸಂದರ್ಭದಲ್ಲಿ ಹೇರ್ ರಿಮೂವ್ ಬೇಡ

ಮುಟ್ಟಿನ ಸಂದರ್ಭದಲ್ಲಿ ಕೂಡಾ ಪ್ಯೂಬಿಕ್ ಹೇರ್ ತೆಗೆಯಬಹುದು. ಆದರೆ ಮುಟ್ಟು ಹತ್ತಿರ ಬಂದಾಗ ಹಾಗೂ ಆ ದಿನಗಳಲ್ಲಿ ಹಾರ್ಮೋನ್ ಏರುಪೇರಿನ ಕಾರಣದಿಂದಾಗಿ ವ್ಯಾಕ್ಸ್ ಹೆಚ್ಚು ನೋವಾಗುತ್ತದೆ. 

5. ಸೆಕ್ಸ್‌ಗೂ ಮುನ್ನ ಹೇರ್ ರಿಮೂವ್ ಮಾಡುವವರ ಸಂಖ್ಯೆ ಹೆಚ್ಚು

ಸೆಕ್ಸ್‌ಗೂ ಮುನ್ನಾ ದಿನ, ಬಹುತೇಕರು ಅಲ್ಲಿ ಕೂದಲನ್ನು ತೆಗೆದುಕೊಂಡು ಸ್ವಚ್ಛಗೊಳಿಸಿಕೊಳ್ಳುತ್ತಾರೆ. ಸರ್ವೆಯೊಂದರ ಪ್ರಕಾರ ಯುವ ವಯಸ್ಸಿನವರಲ್ಲಿ ಶೇ.73 ಪುರುಷರು, ಶೇ.55.6ರಷ್ಟು ಮಹಿಳೆಯರು ಮದುವೆ ಸಂದರ್ಭದಲ್ಲಿ ಹಾಗೂ ನಂತರದಲ್ಲಿ ಹೇರ್ ರಿಮೂವ್ ಮಾಡಿಕೊಳ್ಳುತ್ತಾರೆ. 

ಉರಗದೊಂದಿಗೇ ಸಮರದ ಜೀವನ ನಡೆಸೋ ಗ್ರಾಮವಿದು!

6. ಓರಲ್ ಸೆಕ್ಸ್ ಮತ್ತು ಪ್ಯೂಬಿಕ್ ಹೇರ್

ಹೀಗೆ ಹೇರ್ ರಿಮೂವ್ ಮಾಡುವವರಲ್ಲಿ ಬಹುತೇಕರು ಓರಲ್ ಸೆಕ್ಸ್ ಟ್ರೈ ಮಾಡುತ್ತಾರೆ. ಇದರಲ್ಲಿ ಲಿಂಗ ಬೇಧವಿಲ್ಲ. 

7. ಹೇರ್ ರಿಮೂವಲ್‌ಗೂ ಪ್ಲೆಶರ್‌ಗೂ ಸಂಬಂಧವಿಲ್ಲ

ಪ್ಯೂಬಿಕ್ ಹೇರ್ ತೆಗೆದರೆ ಹೆಚ್ಚು ಸೆಕ್ಷುಯಲ್ ಪ್ಲೆಶರ್ ಸಿಕ್ಕಿಬಿಡುವುದಿಲ್ಲ. ಅಂಥ ಮ್ಯಾಜಿಕ್ ಅಲ್ಲೇನೂ ಇಲ್ಲ. ಇದು ವೈಯಕ್ತಿಕ ಆಸಕ್ತಿಯನ್ನವಲಂಬಿಸುತ್ತದೆ. ಆದರೆ, ಪ್ಯೂಬಿಕ್ ಹೇರ್ ರಿಮೂವಲ್‌ನಿಂದ ಹೆಚ್ಚು ಹೈಜೀನ್ ಎನಿಸಬಹುದು. ಇದರಿಂದ ಆ ಬಗ್ಗೆ ಯೋಚನೆಯಿಲ್ಲದೆ ಇಬ್ಬರೂ ಲೈಂಗಿಕ ಕ್ರಿಯೆಯಲ್ಲಿ ತೊಡಗಬಹುದು. 

8. ಪಾರ್ಟ್ನರ್ ಮೆಚ್ಚಿಸಲು ಗ್ರೂಮ್ ಮಾಡಿಕೊಳ್ಳುತ್ತಾರೆ

ಶೇ.20ಕ್ಕಿಂತಾ ಅಧಿಕ ಮಹಿಳೆಯರು ಸರ್ವೆಯಲ್ಲಿ ತಾವು ತಮ್ಮ ಪಾರ್ಟ್ನರ್ ಬಯಸುವುದರಿಂದಾಗಿ ಹೇರ್ ರಿಮೂವ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಶೇ.60ರಷ್ಟು ಪುರುಷರು ಹೇರ್‌ಲೆಸ್ ಪಾರ್ಟ್ನರ್ ಬೇಕೆಂದು ಬಯಸುತ್ತಾರಾದರೆ ಈ ಸಂಖ್ಯೆ ಮಹಿಳೆಯರಲ್ಲಿ ಶೇ.24ರಷ್ಟು. 

9. ಹೇರ್ ರಿಮೂವಿಂಗ್‌ನಿಂದ ಆತ್ಮವಿಶ್ವಾಸ ಹೆಚ್ಚುತ್ತದೆ

ಒಂದು ಅಧ್ಯಯನದ ಪ್ರಕಾರ ಪ್ಯೂಬಿಕ್ ಹೇರ್ ರಿಮೂವಲ್ ಮಹಿಳೆಯರಲ್ಲಿ ಸೆಲ್ಫ್ ಇಮೇಜ್ ಹೆಚ್ಚಿಸುತ್ತದೆ. ಸಂಗಾತಿಯೊಂದಿಗಿನ ಲೈಂಗಿಕ ಜೀವನದಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಮತ್ತೊಂದು ಅಧ್ಯಯನವು ಹೇರ್ ರಿಮೂವಲ್‌ನಿಂದ ಪುರುಷರ ಕಾನ್ಫಿಡೆನ್ಸ್ ಹೆಚ್ಚುವುದನ್ನೂ ಸಾಬೀತುಪಡಿಸಿದೆ. ಅಲ್ಲಿ ಕೂದಲಿರುವುದು ಸಂಪೂರ್ಣ ನಾರ್ಮಲ್. ಆದರೆ, ಅದಿಲ್ಲದಿದ್ದರೆ ಆತ್ಮವಿಶ್ವಾಸ ಹೆಚ್ಚುತ್ತದಾದರೆ ತೆಗೆಯುವುದರಲ್ಲಿ ತಪ್ಪೇನಿದೆ?

10. ಡಾಕ್ಟರ್ ವಿಸಿಟ್‌ಗಾಗಿ ಗ್ರೂಮ್ ಮಾಡಿಕೊಳ್ಳುತ್ತಾರೆ

ಶೇ.40ರಷ್ಟು ಮಹಿಳೆಯರು ಮಹಿಳಾ ತಜ್ಞರ ಬಳಿ ಹೋಗಬೇಕಾದ ಸಂದರ್ಭದಲ್ಲಿ ಅಲ್ಲಿ ಹೇರ್ ರಿಮೂವ್ ಮಾಡಲು ಆರಂಭಿಸಿ, ಆನಂತರದಲ್ಲಿ ಅದನ್ನು ಮುಂದುವರೆಸುತ್ತಾರೆ. ಆದರೆ, ಈ ಕಾರಣಕ್ಕಾಗಿ ಹೇರ್ ರಿಮೂವ್ ಮಾಡುವ ಪುರರುಷರ ಸಂಖ್ಯೆ ಶೇ.20ಕ್ಕಿಂತ ಕಡಿಮೆ.