ಉರಗದೊಂದಿಗೇ ಸಮರದ ಜೀವನ ನಡೆಸೋ ಗ್ರಾಮವಿದು!
ನಾವು ಮನೆಯಲ್ಲಿ ನಾಯಿ, ಬೆಕ್ಕು, ಇಲ್ಲವೇ ಮೊಲ ಅಥವಾ ಪಕ್ಷಿಗಳನ್ನು ಪ್ರೀತಿಯಿಂದ ಸಾಕುತ್ತೇವೆ. ಆದರೆ ಯಾವತ್ತಾದರೂ ಹಾವನ್ನು ಸಾಕುವ ಬಗ್ಗೆ ಯೋಚನೆ ಮಾಡಿದ್ದೀರಾ? ಇಲ್ಲಾ ಆಲ್ವಾ? ಆದ್ರೆ ಈ ಊರಲ್ಲಿ ಹಾವಿನ ಜೊತೆ ಜೊತೆಯೇ ಜನರು ಜೀವನ ಸಾಗಿಸುತ್ತಾರೆ.
ಇದನ್ನ ಕೇಳಿದ್ರೆ ನಿಮಗೆ ಶಾಕ್ ಆಗಬಹುದು. ಹಾವು ಮತ್ತು ಮನುಷ್ಯರು ಜೊತೆ ಜೊತೆಯಾಗಿ ಹೇಗೆ ಜೀವಿಸುತ್ತಾರೆ? ಅದು ಒಂದು ಚೂರು ಹೆದರದೆ, ಅದು ಕಚ್ಚಬಹುದು ಎಂಬ ಭಯವೇ ಇಲ್ಲದೇ ಹೇಗೆ ಜೀವಿಸುತ್ತಾರೆ ಆಲ್ವಾ? ಆದ್ರೆ ಇದೆಲ್ಲಾ ನಿಜವಾಗಿದೆ ಮಹಾರಾಷ್ಟ್ರದ ಶೆಪ್ತಾಲ್ ಗ್ರಾಮದಲ್ಲಿ. ಹೌದು ಇಲ್ಲಿ ಜನರು ಹಾವಿನ ಜೊತೆ ಉತ್ತಮ ಜೀವನ ನಡೆಸುತ್ತಿದ್ದಾರೆ.
ಶೆಪ್ತಾಲ್ ಮಹಾರಾಷ್ಟ್ರದ ಪುಣೆಯಿಂದ ಸುಮಾರು 200 ಕಿ.ಮೀ ದೂರದಲ್ಲಿದೆ. ಈ ಊರಿನಲ್ಲಿರುವ ಒಣ ವಾತಾವರಣದಿಂದ ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬೇರೆ ಬೇರೆ ವಿಧದ ಹಾವುಗಳಿವೆ. ಇಲ್ಲಿನ ಜನರು ಹಾವನ್ನು ತಮ್ಮ ಕುಟುಂಬದ ಸದಸ್ಯನಂತೆ ಕಾಣುತ್ತಾರೆ. ಜೊತೆಗೆ ಮನೆಯೊಳಗೆ ಬರಲೂ ಅನುಮತಿ ನೀಡುತ್ತಾರೆ. ಹೆಚ್ಚಾಗಿ ಹಾವುಗಳು ಮನೆಯ ಒಳಗೆ ಜೀವಿಸುತ್ತವೆ.
ಶೋಲಾಪುರ ಜಿಲ್ಲೆಯಲ್ಲಿರುವ ಈ ಗ್ರಾಮದಲ್ಲಿನ ಜನರು ಪ್ರತಿದಿನ ಎಲ್ಲಾ ರೀತಿಯ ಹಾವನ್ನೂ ಪೂಜಿಸುತ್ತಾರೆ. ಈ ಗ್ರಾಮದಲ್ಲಿ ಸುಮಾರು 2500 ಜನರು ವಾಸಿಸುತ್ತಾರೆ. ಆದರೆ ಯಾರಿಗೂ ಹಾವನ್ನು ಪೂಜಿಸುವ ಪದ್ಧತಿ ಹೇಗೆ ಆರಂಭವಾಯಿತು ಅನ್ನೋದು ಗೊತ್ತಿಲ್ಲ.
ಧಾರ್ಮಿಕತೆ, ರಹಸ್ಯದ ಒಡಲು ಯಮುನೇತ್ರಿ ಯಾತ್ರೆ!
ಇಲ್ಲಿನ ಜನರು ಮನೆ ನಿರ್ಮಿಸುವಾಗ ಅಲ್ಲಿ ಹಾವಿಗೆ ನೆಲೆಸಲು ಸಾಧ್ಯವಾಗುವಂಥ ಒಂದು ಜಾಗವನ್ನೂ ನಿರ್ಮಿಸುತ್ತಾರೆ. ಈ ಜಾಗವನ್ನು ದೇವಸ್ಥಾನ ಎನ್ನುತ್ತಾರೆ. ಈ ಊರಲ್ಲಿ ವಿಷಕಾರಕ ನಾಗರ ಹಾವು, ಕಾಳಿಂಗ ಸರ್ಪವೂ ಮನೆಯೊಳಗೇ ಓಡಾಡುತ್ತವೆ. ಆದರೆ ಜನರು ಯಾವತ್ತೂ ಅದಕ್ಕೆ ನೋವು ಮಾಡಿದ ಉದಾಹರಣೆ ಇಲ್ಲ. ಮನೆಯಲ್ಲಿ ತುಬಾ ಹಾವಿದ್ದರೆ, ದೇವರ ಆಶೀರ್ವಾದ ಹೆಚ್ಚಿದೆ ಎಂದೇ ಭಾವಿಸುತ್ತಾರೆ.
ಹೇಗೆ ನಮ್ಮ ಮಕ್ಕಳು ಆಟಿಕೆಗಳೊಂದಿಗೆ ಆಡುತ್ತಾರೋ, ಅದೇ ರೀತಿ ಇಲ್ಲಿನ ಮಕ್ಕಳು ಹಾವಿನೊಂದಿಗೆ ಆಡುತ್ತಾರೆ. ಜೊತೆ ಶಾಲೆ ಮತ್ತು ಕ್ಲಾಸ್ ರೂಮ್‌ಗಳಲ್ಲೂ ಹಾವು ಇರುವುದು ಕಾಮನ್.
ನೋಡಿದಷ್ಟು ಚೆಂದ ಅಂದ ಈ ಕೆಂಪು ಸಮುದ್ರ... ಎಲ್ಲಿದೆ ಗೊತ್ತಾ?
ಈ ಊರಿನಲ್ಲಿ ಸಿದ್ದೇಶ್ವರ ದೇವಾಲಯವಿದೆ. ಇಲ್ಲಿ ಹಾವು ಕಚ್ಚಿದವರಿಗೆ ಔಷಧಿ ನೀಡಿ ಗುಣಪಡಿಸಲಾಗುತ್ತದೆ. ಇಲ್ಲಿನ ದೇವರಿಗೆ ಹಾವು ಕಚ್ಚಿದವರನ್ನು ಗುಣಪಡಿಸುವ ಶಕ್ತಿ ಇದೆ ಎಂದು ಹೇಳಲಾಗುತ್ತದೆ. ಈ ದೇವಾಲಯದಲ್ಲಿ ಶಿವನ ಮೇಲೆ ಏಳು ತಲೆಯುಳ್ಳ ಹಾವಿನ ವಿಗ್ರಹವಿದೆ. ಇಲ್ಲಿವರೆಗೆ ಈ ಊರಲ್ಲಿ ಹಾವು ಕಚ್ಚಿದ ವರದಿ ಆಗೇ ಇಲ್ಲ ಎಂಬುದು ಇಲ್ಲಿನ ಮತ್ತೊಂದು ಅಚ್ಚರಿ.