ನಿಮ್ಮ ದೇಹದ ಬಗ್ಗೆ ಚೆನ್ನಾಗಿ ಗೊತ್ತಿದೆ ಎಂದು ನೀವಂದುಕೊಂಡಿರಬಹುದು. ಇಷ್ಟಕ್ಕೂ ಅದನ್ನು ನೋಡುವವರು, ತಿನ್ನಿಸಿ ಬೆಳೆಸುವವರು, ಬೇಕೆಂದಂತೆ ಬಳಸುವವರು ನೀವೇ ತಾನೇ? ಆದರೆ, ನೀವು ಮೆಟಲ್ ತಿಂದು ಕೂಡಾ ಜೀರ್ಣಿಸಿಕೊಳ್ಳಬಲ್ಲಿರಿ ಎಂಬ ವಿಷಯ ಗೊತ್ತೇ? ಒಂದೊಂದು ಬಾರಿ ಖಣ್ಣು ಮುಚ್ಚಿ ಬಿಟ್ಟಾಗಲೂ ಮೈಕ್ರೋ ನಿದ್ದೆ ಮಾಡಿದಿರೆಂಬುದು ಗೊತ್ತೇ? ಇಲ್ಲ ಅಲ್ಲವೇ? ಹೀಗೆ ನಿಮ್ಮ ದೇಹದ ಬಗ್ಗೆ ನಿಮಗೆ ಗೊತ್ತಿಲ್ಲದ್ದು ಸಾಕಷ್ಟಿದೆ. ಅವುಗಳಲ್ಲಿ ಕೆಲವನ್ನು ನೋಡೋಣ ಬನ್ನಿ. 

1. ಕಣ್ಣಿನ ರೆಪ್ಪೆ ಮುಚ್ಚಿ ಬಿಡುವುದು ಮೈಕ್ರೋನ್ಯಾಪ್

ಕಣ್ಣುಗಳನ್ನು ತೇವವಾಗಿಟ್ಟುಕೊಳ್ಳಲು ಹಾಗೂ ಧೂಳನ್ನು ಹೊರದಬ್ಬಲು ನೀವು ಕಣ್ಣಿನ ರೆಪ್ಪೆ ಮುಚ್ಚಿ ತೆಗೆಯುತ್ತೀರಾ ಎಂಬುದು ನಿಮಗೆ ಗೊತ್ತಿರಬಹುದು. ಅದು ತುಂಬಾ ದೊಡ್ಡ ಕೆಲಸವೇ. ಆದರೆ, ವಾಷಿಂಗ್ಟನ್ ಯೂನಿವರ್ಸಿಟಿಯ ಸಂಶೋಧನೆಯ ಪ್ರಕಾರ, ಹೀಗೆ ನಿಮಿಷಕ್ಕೆ 15-20 ಬಾರಿ ಕಣ್ಣು ಮುಚ್ಚಿ ಬಿಟ್ಟಾಗ ದೇಹ ಪುಟಾಣಿಯಾಗಿ ರಿಚಾರ್ಜ್ ಆಗಿರುತ್ತದೆ ಜೊತೆಗೆ ಗಮನ ಹೆಚ್ಚು ಶಾರ್ಪ್ ಆಗಿರುತ್ತದೆ. ಬ್ಲಿಂಕಿಂಗ್ ಮೈಕ್ರೋ ನ್ಯಾಪ್‌ನಂತೆ ಕೆಲಸ ಮಾಡುತ್ತದೆ. 

2. ದೊಡ್ಡ ಕಣ್ಣುಗಳಿದ್ದರೆ ಮೈಯೋಪಿಯಾ ಆಗುತ್ತದೆ

ದೊಡ್ಡ ದೊಡ್ಡ ಕಣ್ಣುಗಳು ಸೌಂದರ್ಯದ ಪ್ರತೀಕ ಎನಿಸಿಕೊಂಡಿರಬಹುದು. ಆದರೆ ಅದರಿಂದ ದೂರ ದೃಷ್ಟಿ ದೋಷ ಬರುತ್ತದೆ. 

ಮಕ್ಕಳಿಗೆ ಕ್ಲೀನ್ ಕ್ಲೀನ್ ಅಂತ ಕಾಟ ಕೊಡುವ ಪೋಷಕರೇ ಒಮ್ಮೆ ಇದನ್ನು ಓದಿ!

3. ಕೂದಲು ರುಚಿ ನೋಡಬಲ್ಲದು?

ಮೂಗಿನ ಹೊಳ್ಳೆಗಲು ಹಾಗೂ ಶ್ವಾಸಕೋಶದಲ್ಲಿ ಸಿಲಿಯಾ ಎಂಬ ಸಣ್ಣ ಕೂದಲುಗಳಿರುತ್ತವೆ. ಅವು ಕಸಕೊಳೆಯನ್ನು ಗುರುತಿಸಿ ಹೊರದಬ್ಬುತ್ತಿರುತ್ತವೆ. ಆದರೆ, ಹೇಗೆ ಗುರುತಿಸುತ್ತವೆ ಗೊತ್ತೇ? ರುಚಿ ನೋಡಿ! ಹೌದು, ಅವುಗಳಲ್ಲಿ ಪಾಸ್ ಆಗುವ ವಸ್ತು ಕಹಿಯಿದ್ದರೆ ತಕ್ಷಣ ಅವಕ್ಕೆ ತಿಳಿಯುತ್ತದೆ. ಆಗ ಅವು ಚಲನೆ ಹೆಚ್ಚಿಸಿ, ಕೆಟ್ಟ ಪದಾರ್ಥ ಹೊರದಬ್ಬುತ್ತವೆ.

4. ನಿಮ್ಮನ್ನು ನೀವು ಕಚಗುಳಿ ಮಾಡಿಕೊಳ್ಳಲು ಸಾಧ್ಯವೇ ಇಲ್ಲ!

ಕಚಗುಳಿ ಮಾಡಿದಾಗ ಮೆದುಳಿನ ಸೊಮ್ಯಾಟೋಸೆನ್ಸರಿ ಕಾರ್ಟೆಕ್ಸ್ ಸ್ಪರ್ಶ ಗುರುತಿಸಿದರೆ, ಆ್ಯಂಟೀರಿಯರ್ ಸಿಂಗುಲೇಟ್ ಕಾರ್ಟೆಕ್ಸ್ ಸಂತೋಷದ ಮಾಹಿತಿ ನೀಡುತ್ತದೆ. ಆದರೆ, ನಮಗೆ ನಾವೇ ಕಚಗುಳಿ ಮಾಡಿಕೊಂಡಾಗ ಇವೆರಡೂ ಅಂಗಗಳು ತೆಪ್ಪಗೆ ಕುಳಿತಿರುವುದನ್ನು ಸಂಶೋಧನೆಗಳು ಕಂಡುಕೊಂಡಿವೆ. 

5. ನಿಮ್ಮ ಕೂದಲು ಪರಿಸರಸ್ನೇಹಿ!

ಗಲೀಜಾದ ಕೂದಲು ವಾತಾವರಣಕ್ಕೆ ಒಳ್ಳೆಯದು. ಮಿಸೌರಿ ಯೂನಿವರ್ಸಿಟಿಯ ಪರಿಸರ ಎಂಜಿನಿಯರ್ಸ್ ಪ್ರಕಾರ, ಕೊಳಕು ಕೂದಲು ವಾಯುಮಾಲಿನ್ಯಕಾರಕ ಓಜೋನ್‌ನ್ನು ಹೀರಿಕೊಳ್ಳಬಲ್ಲದು. ನೆತ್ತಿಯ ಎಣ್ಣೆಯು ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ಸುತ್ತಮುತ್ತಲಿನ ಗಾಳಿಯ ಗುಣಮಟ್ಟ ಹೆಚ್ಚಿಸಬೇಕೆಂದರೆ, ತಲೆ ಸ್ನಾ!ನ ಮಾಡದೇ ಹಾಗೇ ಇರಿ. 

6. ನಮ್ಮ ದೇಹಕ್ಕೆ ಬೆಳಕಿದೆ!

ದೇವರ ಫೋಟೋಗಳಲ್ಲಿ ದೇವರ ಸುತ್ತ ಬೆಳಕಿರುವುದನ್ನು ನೀವು ನೋಡಿರಬಹುದು. ಇಂಥ ಬೆಳಕು ನಮ್ಮ ನಿಮ್ಮ ಸುತ್ತಲೂ ಇದೆ. ಇದು ಆಗಾಗ ಹೆಚ್ಚೂ ಕಡಿಮೆಯಾಗುತ್ತಿರುತ್ತದೆ. ಆದರದು ನಮ್ಮ ಕಣ್ಣಿನ ಸಾಮರ್ಥ್ಯಕ್ಕೆ ನಿಲುಕುವುದಿಲ್ಲ. ಮನುಷ್ಯರ ಕಣ್ಣು ಗುರುತಿಸಬಲ್ಲ ಬೆಳಕಿಗಿಂತ 1000 ಪಟ್ಟು ಕಡಿಮೆ ಇರುವುದರಿಂದ ಅವು ಗೋಚರಿಸುವುದಿಲ್ಲ. ಅಂದ ಹಾಗೆ, ಸಕಾರಾತ್ಮಕ ಜನರಲ್ಲಿ ಈ ಗ್ಲೋ ಹೆಚ್ಚಿರುತ್ತದೆ ಎಂದು ಆಧ್ಯಾತ್ಮದಲ್ಲಿ ಹೇಳಿರುವುದನ್ನು ನೀವೂ ಕೇಳಿರಬಹುದು. 

ದೇಹ ಬೆಳೆದ್ರೆ ಸಾಲಲ್ಲ, ಬುದ್ಧೀನೂ ಬೆಳೀಬೇಕು ಸ್ವಾಮಿ, ಮೆದುಳಿಗೂ ಬೇಕು ವರ್ಕೌಟ್!

7. ಜೀರ್ಣರಸಗಳು ರೇಜರ್ ಬ್ಲೇಡನ್ನು ಕರಗಿಸಬಲ್ಲವು!

ಹಾಗಂಥ ನೀವು ರೇಜರ್ ಬ್ಲೇಡ್ ತಿಂದು ನೋಡುವ ಅಗತ್ಯವಿಲ್ಲ. ಆದರೆ, ಜೀರ್ಣರಸಗಳಿಗೆ ಈ ಮೆಟಲ್ ಬ್ಲೇಡನ್ನು ಕರಗಿಸುವ ಸಾಮರ್ಥ್ಯವಿರುತ್ತದೆ. 

8. ವಯಸ್ಸಾದಂತೆಲ್ಲ ಟೇಸ್ಟ್‌ಬಡ್ಸ್ ಡಲ್ ಆಗುತ್ತವೆ 

ಹೆಚ್ಚು ವರ್ಷಗಳಾದಷ್ಟೂ ವೈನ್‌ನ ರುಚಿ ಹೆಚ್ಚಬಹುದು. ಆದರೆ, ಅಷ್ಟರಲ್ಲಿ ನಮ್ಮ ನಾಲಿಗೆಯ ರಸಗ್ರಂಥಿಗಳು ರುಚಿ ನೋಡುವ ಸಾಮರ್ಥ್ಯ ಬಹುತೇಕ ಕಳೆದುಕೊಂಡಿರುತ್ತವೆ. ಹಾಗಾಗಿ, ವೈನ್‌ಗೆ ವಯಸ್ಸಾಗುವವರೆಗೆ ಕಾಯಬೇಡಿ!ವಯಸ್ಸಾದಂತೆಲ್ಲ ಕಣ್ಣು ಕಿವಿ ಮಂದವಾದಂತೆ ಟೇಸ್ಟ್‌ಬಡ್ ಕೂಡಾ ಮಂದವಾಗುತ್ತದೆ.

9. ನಿಮ್ಮ ಕರುಳು ನಿಮಗಿಂತ 4 ಪಟ್ಟು ಉದ್ದವಿರುತ್ತದೆ

ನಿಮ್ಮ ಸಣ್ಣ ಕರುಳು 18ರಿಂದ 23 ಅಡಿ ಉದ್ದವಿರುತ್ತದೆ. ನೀವದನ್ನು ಬಿಚ್ಚಿ ಹರಡಿದರೆ ನಿಮಗಿಂತ ನಾಲ್ಕು ಪಟ್ಟು ಉದ್ದಕ್ಕೆ ಮೈ ಚಾಚುತ್ತದೆ.

ಬೇಡದ ಕೂದಲ ಮುಕ್ತಿಗೆ ರೇಜರ್ ಬಳಸುವುದೇ ಆದಲ್ಲಿ....?

10. ನಿಮ್ಮ ದೇಹದ ಪೊಸಿಷನ್ ನೆನಪಿನ ಮೇಲೆ ಪರಿಣಾಮ ಬೀರುತ್ತದೆ

ಕುಳಿತುಕೊಂಡು ಕೆಳಗೆ ನೋಡುತ್ತಿದ್ದರೆ ನಿಮ್ಮ ನೆಗೆಟಿವ್ ನೆನಪುಗಳನ್ನು ರಿಕಾಲ್ ಮಾಡುವುದು ಸುಲಭ. ನೇರ ಕುಳಿತು ಮೇಲ್ಮುಖ ಮಾಡಿದ್ದರೆ ಪಾಸಿಟಿವ್ ನೆನಪುಗಳು ಸುರುಳಿ ಬಿಚ್ಚುತ್ತವೆ.