Roti Maker Hacks: ಹೆಚ್ಚಿನ ಮನೆಗಳಲ್ಲಿ ಸಮಯ ಉಳಿಸಲು ರೋಟಿ ಮೇಕರ್ ಬಳಸಲಾಗುತ್ತದೆ. ಆದರೆ ಇದರಲ್ಲಿ ಚಪಾತಿ ಮೃದುವಾಗಿ ಬರುವುದಿಲ್ಲ ಅಥವಾ ಉಬ್ಬುವುದಿಲ್ಲ ಎಂಬುದು ಹಲವರ ದೂರು. ನೀವು ಕೂಡ ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆ,  ಹಿಟ್ಟು ಕಲೆಸುವ ಹದದಿಂದ ಹಿಡಿದು ಮಗುಚುವ ಸಮಯದವರೆಗೆ.. ರೋಟಿ ಮೇಕರ್‌ನಲ್ಲಿ ಪರ್ಫೆಕ್ಟ್ ರೊಟ್ಟಿ ತಯಾರಿಸಲು ಬೇಕಾದ ಸುಲಭ ಟ್ರಿಕ್ಸ್‌ಗಳನ್ನು ಇಲ್ಲಿ ಹಂತ ಹಂತವಾಗಿ ವಿವರಿಸಲಾಗಿದೆ. 

ವಾ ಮೇಲೆ ಚಪಾತಿ ತಯಾರಿಸುವುದು ಬಹುತೇಕ ಎಲ್ಲರಿಗೂ ತಿಳಿದಿರುವ ವಿಷಯ. ಗ್ಯಾಸ್ ಉರಿಯ ಮೇಲೆ ಚಪಾತಿ ಸುಲಭವಾಗಿ ಉಬ್ಬುತ್ತವೆ. ಆದರೆ ಅದೇ ರೋಟಿ ಮೇಕರ್‌ ವಿಷಯಕ್ಕೆ ಬಂದಾಗ ಅದು ಸ್ವಲ್ಪ ಕಷ್ಟದ ಕೆಲಸವೆನಿಸುತ್ತದೆ. ಹೌದು, ರೋಟಿ ಮೇಕರ್ ಚಪಾತಿ ಮಾಡುವ ಶ್ರಮವನ್ನು ಕಡಿಮೆ ಮಾಡಿರಬಹುದು, ಆದರೆ ಅದರಲ್ಲಿ ಮೃದುವಾದ ಮತ್ತು ಚೆನ್ನಾಗಿ ಉಬ್ಬಿದ ಚಪಾತಿ ಮಾಡುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ನಿಮ್ಮ ರೋಟಿ ಮೇಕರ್‌ನಲ್ಲಿ ಚಪಾತಿ ಉಬ್ಬುವ ಬದಲು ಹಪ್ಪಳದಂತೆ ಗಟ್ಟಿಯಾಗುತ್ತಿದ್ದರೆ ಚಿಂತಿಸಬೇಡಿ. ಇಲ್ಲಿದೆ ಒಂದು ಪುಟ್ಟ ಟ್ರಿಕ್, ಇದನ್ನು ಪಾಲಿಸಿದರೆ ನಿಮ್ಮ ಚಪಾತಿ ತವಾ ಮೇಲೆ ಮಾಡಿದಂತೆ ಮೃದುವಾಗಿ ಬರುತ್ತವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪರ್ಫೆಕ್ಟ್ ಚಪಾತಿ ತಯಾರಿಸಲು ಹಂತ ಹಂತದ ವಿಧಾನ

ಹಂತ 1: ಹಿಟ್ಟು ಕಲೆಸುವ ಸರಿಯಾದ ರೀತಿ
ರೋಟಿ ಮೇಕರ್‌ನಲ್ಲಿ ಪರ್ಫೆಕ್ಟ್ ಚಪಾತಿ ಮಾಡಲು ಮೊದಲ ಮತ್ತು ಪ್ರಮುಖ ಹಂತವೆಂದರೆ ಹಿಟ್ಟನ್ನು ಸರಿಯಾಗಿ ಕಲೆಸುವುದು. ಇಲ್ಲಿ ನೀವು ಹಿಟ್ಟನ್ನು ಸ್ವಲ್ಪ ಹೆಚ್ಚು ಮೃದುವಾಗಿ ಮತ್ತು ಲಘುವಾಗಿ ತೇವವಿರುವಂತೆ (Sticky ಅಲ್ಲದಿದ್ದರೂ ಮೃದುವಾಗಿ) ಕಲಸಬೇಕು. ನೆನಪಿಡಿ, ಹಿಟ್ಟು ಕೈಗೆ ಅಂಟಿಕೊಳ್ಳುವಷ್ಟು ನೀರಾಗಿರಬಾರದು. ಆದರೆ ರೋಟಿ ಮೇಕರ್‌ನಲ್ಲಿ ಸುಲಭವಾಗಿ ಹರಡುವಷ್ಟು ಸಾಫ್ಟ್ ಆಗಿರಬೇಕು. ಹಿಟ್ಟು ಸರಿಯಾದ ಹದದಲ್ಲಿದ್ದರೆ ಚಪಾತಿ ತಾವಾಗಿಯೇ ಮೃದುವಾಗುತ್ತವೆ ಮತ್ತು ಉಬ್ಬುವ ಸಾಧ್ಯತೆ ಹೆಚ್ಚಿರುತ್ತದೆ.

ಹಂತ 2: ಹಿಟ್ಟನ್ನು ಸ್ವಲ್ಪ ಸಮಯ ಹಾಗೆ ಬಿಡಿ
ಹಿಟ್ಟು ಕಲಸಿದ ತಕ್ಷಣ ಚಪಾತಿ ಮಾಡಲು ಮುಂದಾಗಬೇಡಿ. ಇದನ್ನು ಸುಮಾರು 15 ನಿಮಿಷಗಳ ಕಾಲ ಮುಚ್ಚಿಡಿ. ಇದರಿಂದ ಹಿಟ್ಟು ಚೆನ್ನಾಗಿ ಸೆಟ್ ಆಗುತ್ತದೆ ಮತ್ತು ಅದರಲ್ಲಿ ತೇವಾಂಶ ಸಮಾನವಾಗಿ ಹರಡುತ್ತದೆ.

ಹಂತ 3: ರೋಟಿ ಮೇಕರ್ ಪ್ರಿ-ಹೀಟ್ (Pre-heat) ಮಾಡಿ
ಹಿಟ್ಟು ಸೆಟ್ ಆಗುವಷ್ಟರಲ್ಲಿ ರೋಟಿ ಮೇಕರ್ ಅನ್ನು ಪ್ರಿ-ಹೀಟ್ ಮಾಡಲು ಮರೆಯಬೇಡಿ. ಮಷೀನ್ ಆನ್ ಮಾಡಿ ಅದು ಚೆನ್ನಾಗಿ ಬಿಸಿಯಾಗಲು ಬಿಡಿ. ಹೆಚ್ಚಿನ ರೋಟಿ ಮೇಕರ್‌ಗಳಲ್ಲಿ ಇಂಡಿಕೇಟರ್ ಲೈಟ್ ಇರುತ್ತದೆ, ಗ್ರೀನ್ ಲೈಟ್ ಉರಿದಾಗ ಮಷೀನ್ ಸಿದ್ಧವಾಗಿದೆ ಎಂದರ್ಥ. ಬಿಸಿಯಾಗುವ ಮೊದಲೇ ಚಪಾತಿ ಹಾಕಿದರೆ ಅದು ಸರಿಯಾಗಿ ಬೇಯುವುದಿಲ್ಲ ಮತ್ತು ಉಬ್ಬುವುದೂ ಇಲ್ಲ.

ಹಂತ 4: ಚಪಾತಿ ತಯಾರಿಸುವ ವಿಧಾನ
ಹಿಟ್ಟಿನ ಸಣ್ಣ ಉಂಡೆ ಮಾಡಿ, ಅದಕ್ಕೆ ಸ್ವಲ್ಪ ಒಣ ಹಿಟ್ಟನ್ನು ಹಚ್ಚಿ. ನಂತರ ಕೈಯಿಂದಲೇ ಸ್ವಲ್ಪ ಅಗಲ ಮಾಡಿ ರೋಟಿ ಮೇಕರ್ ಮಧ್ಯದಲ್ಲಿ ಇಡಿ. ಹೆಚ್ಚು ಒತ್ತಡ ಹಾಕಬೇಡಿ, ಹಗುರವಾಗಿ ಶೇಪ್ ನೀಡಿ. ಈಗ ರೋಟಿ ಮೇಕರ್‌ನ ಮೇಲಿನ ಪ್ಲೇಟ್ ಅನ್ನು ಹಗುರವಾಗಿ ಒತ್ತಿ ಮುಚ್ಚಿ.

ಹಂತ 5: ಸರಿಯಾದ ಸಮಯದಲ್ಲಿ ಮಗುಚುವುದು (ಪ್ರಮುಖ ಟ್ರಿಕ್)
ಇಲ್ಲಿ ಅತ್ಯಂತ ಮುಖ್ಯವಾದ ವಿಷಯವೆಂದರೆ, ಚಪಾತಿಯನ್ನು ಬೇಗನೆ ಮಗುಚುವ ತಪ್ಪು ಮಾಡಬೇಡಿ. ಒಂದು ಬದಿ ಚೆನ್ನಾಗಿ ಬೆಂದು, ಚಪಾತಿಯ ಮೇಲೆ ಸಣ್ಣ ಕಂದು ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುವವರೆಗೆ ಕಾಯಿರಿ. ಚುಕ್ಕೆಗಳು ಕಂಡ ತಕ್ಷಣ ಚಪಾತಿಯನ್ನು ಮಗುಚಿ ಹಾಕಿ. ಸರಿಯಾದ ಸಮಯದಲ್ಲಿ ಚಪಾತಿಯನ್ನು ತಿರುಗಿಸುವುದೇ ಇಲ್ಲಿನ ಅಸಲಿ ಟ್ರಿಕ್. ಇದರಿಂದ ಚಪಾತಿ ಒಳಗೆ ಹಬೆ (Steam) ನಿರ್ಮಾಣವಾಗಿ ಅದು ಸುಲಭವಾಗಿ ಉಬ್ಬುತ್ತದೆ.

ಈ ಸುಲಭ ವಿಧಾನಗಳನ್ನು ಅನುಸರಿಸುವ ಮೂಲಕ ನೀವು ರೋಟಿ ಮೇಕರ್‌ನಲ್ಲಿ ಕೂಡ ತವೆಯ ಮೇಲೆ ಮಾಡಿದಷ್ಟೇ ಮೃದುವಾದ ಮತ್ತು ಉಬ್ಬಿದ ಚಪಾತಿಯನ್ನು ಆರಾಮವಾಗಿ ತಯಾರಿಸಬಹುದು. 

View post on Instagram