ಗೋಧಿ ಹಿಟ್ಟಿಗೆ ನೀರು ಹಾಕಿ ಕಲಸುವ ಮೊದಲು, ಒಂದು ಅವಕಾಡೊ ಹಣ್ಣಿನ ಸಿಪ್ಪೆ, ಬೀಜ ತೆಗೆದು ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ಗೋಧಿ ಹಿಟ್ಟಿಗೆ ಸೇರಿಸಿ ಕಲಸಿ.
Image credits: freepik
Kannada
ಉಪ್ಪು ಮತ್ತು ತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ
ಅವಕಾಡೊ ಪೇಸ್ಟ್ ಹಾಕಿದ ಹಿಟ್ಟಿಗೆ ಸ್ವಲ್ಪ ಉಪ್ಪು, ತುಪ್ಪ ಸೇರಿಸಿ ಚೆನ್ನಾಗಿ ಕಲಸಿ. ನಂತರ ಬೇಕಾದಷ್ಟು ಹಿಟ್ಟು ತೆಗೆದುಕೊಂಡು ಸಣ್ಣ ಉಂಡೆಗಳನ್ನಾಗಿ ಮಾಡಿ ಲಟ್ಟಿಸಿ. ಮಾಮೂಲಿ ಚಪಾತಿಯಂತೆ ಬೇಯಿಸಿಕೊಳ್ಳಿ.
Image credits: Getty
Kannada
ತುಪ್ಪ ಸೇರಿಸುವುದನ್ನು ಮರೆಯಬೇಡಿ
ಚಪಾತಿ ಹಿಟ್ಟು ಕಲಸುವಾಗ ಸ್ವಲ್ಪ ತುಪ್ಪ ಸೇರಿಸಿದರೆ ಚಪಾತಿ ಮೃದುವಾಗಲು ಸಹಾಯವಾಗುತ್ತದೆ. ಇದು ಹಿಟ್ಟನ್ನು ಇನ್ನಷ್ಟು ಸಾಫ್ಟ್ ಮಾಡುತ್ತದೆ.
Image credits: Getty
Kannada
ಮೊಸರು ಬಳಸಿ ಹಿಟ್ಟು ಕಲಸಿ ನೋಡಿ
ಗೋಧಿ ಹಿಟ್ಟಿಗೆ ಸ್ವಲ್ಪ ಮೊಸರು ಸೇರಿಸಿ ಚಪಾತಿ ಹಿಟ್ಟನ್ನು ಕಲಸಬಹುದು. ನಂತರ ಒಂದರಿಂದ ಎರಡು ಗಂಟೆಗಳ ಕಾಲ ಹಿಟ್ಟನ್ನು ನೆನೆಯಲು ಬಿಟ್ಟು, ಆಮೇಲೆ ಚಪಾತಿ ಮಾಡಿ.
Image credits: Getty
Kannada
ಬಿಸಿ ನೀರನ್ನು ಬಳಸಿ ಹಿಟ್ಟು ಕಲಸಿ
ಚಪಾತಿ ಹಿಟ್ಟು ಕಲಸುವಾಗ ತಣ್ಣೀರಿನ ಬದಲು ಬಿಸಿ ನೀರನ್ನು ಬಳಸಿ. ಇದರಿಂದಲೂ ಚಪಾತಿ ಹೆಚ್ಚು ಮೃದುವಾಗಿ ಬರುತ್ತದೆ.
Image credits: Pixabay
Kannada
ಕೊಬ್ಬರಿ ಎಣ್ಣೆ ಬಳಕೆ
ಮನೆಯಲ್ಲಿ ತುಪ್ಪ ಅಥವಾ ಮೊಸರು ಇಲ್ಲದಿದ್ದರೆ, ಚಿಂತಿಸಬೇಡಿ. ಸ್ವಲ್ಪ ಕೊಬ್ಬರಿ ಎಣ್ಣೆ ಸೇರಿಸಿ ಚಪಾತಿ ಹಿಟ್ಟು ಕಲಸಬಹುದು. ಇದು ಕೂಡ ಚಪಾತಿಯನ್ನು ಹೆಚ್ಚು ಮೃದುವಾಗಿಸುತ್ತದೆ.