ಕುಕ್ಕರ್‌ನಲ್ಲಿ ಬೇಳೆ ಬೇಯಿಸುವಾಗ ನೀರು ಮತ್ತು ನೊರೆ ಹೊರಬರುವುದು ಸಾಮಾನ್ಯ ಸಮಸ್ಯೆಯಾಗಿದೆ. ಕುಕ್ಕರ್ ಅತಿಯಾಗಿ ತುಂಬುವುದು ಇದಕ್ಕೆ ಮುಖ್ಯ ಕಾರಣ. ಬೇಳೆ ಬೇಯಿಸುವಾಗ ಸ್ವಲ್ಪ ಎಣ್ಣೆ ಸೇರಿಸುವ ಮೂಲಕ ಮತ್ತು ಕುಕ್ಕರ್ ಅತಿಯಾಗಿ ತುಂಬಿಸದಿರುವ ಮೂಲಕ ಈ ಸಮಸ್ಯೆಯನ್ನು ಸುಲಭವಾಗಿ ತಡೆಯಬಹುದು.

ಪ್ರತಿಯೊಬ್ಬರ ಮನೆಯಲ್ಲಿ ಬೇಳೆ ಇರಲೇಬೇಕು. ಬೇಳೆಯಿಲ್ಲದೆ ಅಡುಗೆ ಅಪೂರ್ಣ. ಅದು ಅನ್ನ ಆಗಲಿ, ಚಪಾತಿ, ಪಲಾವ್ ಏನೇ ಅಡುಗೆ ಮಾಡಿದ್ರೂ ಅಲ್ಲಿ ಬೇಳೆ ಇರಲೇಬೇಕು. ಸಾಮಾನ್ಯವಾಗಿ ಅನ್ನ ಮಾಡಿದ್ರೆ ಅದಕ್ಕೆ ಬೇಳೆ ಮಾಡುವುದು ರೂಢಿ, ಅನ್ನಕ್ಕೆ ಬೇಳೆ ಮಾಡುವುದು. ಪ್ರೊಟಿನ್ ಸಮೃದ್ಧವಾಗಿರುವ ಬೇಳೆ ಇದರ ರುಚಿ, ಆರೋಗ್ಯಕರ ಪ್ರಯೋಜನಗಳು ತುಂಬಾ ಇವೆ. ಹೀಗಾಗಿ ಬೇಳೆಯನ್ನೇ ಹೆಚ್ಚು ಮಾಡುವುದು.

ಕುಕ್ಕರ್ ನಲ್ಲಿ ಬೇಳೆ ಬೇಯಿಸುವಾಗ ಎದುರಾಗುವ ಒಂದು ದೊಡ್ಡ ಸಮಸ್ಯೆ ಎಂದರೆ ಕುಕ್ಕರ್‌ನಿಂದ ನೀರು, ನೊರೆ ಜೊತೆಗೆ ಬೇಳೆಕಾಳುಗಳು ಲೀಕ್ ಆಗುವುದು. ಕುಕ್ಕರ್ ನಲ್ಲಿ ಸಿಟಿ ಒಡೆದಾಗ ಅದರೊಂದಿಗೆ ಕುದಿಯುವ ನೀರು ಕುಕ್ಕರ್ ಮೇಲೆ ಸ್ಟೌ ಮೇಲೆ ಚೆಲ್ಲಿರುತ್ತದೆ. ಇದರೊಂದಿಗೆ ಕುಕ್ಕರ್ ಸುತ್ತಲೂ ಬೆಂದ ಬೇಳೆಕಾಳುಗಳು ಹೊರಬಂದಿರುವುದು ಕಾಣಬಹುದು. ಈ ಸಮಸ್ಯೆ ಯಾಕೆ ಆಗುತ್ತೆ. ಬೇಳೆ ಕಾಳು ಲೀಕ್ ಆಗದಂತೆ ತಡೆಯುವುದು ಹೇಗೆ ಎಂದು ಬಹುತೇಕರು ತಲೆಕೆಡಿಸಿಕೊಳ್ಳುತ್ತಾರೆ. ಅಂಥವರಿಗೆ ಇಲ್ಲಿ ಸಿಂಪಲ್ ಟಿಪ್ಸ್ ಇದೆ. ಇದನ್ನ ಫಾಲೋ ಮಾಡಿದ್ರೆ ಇನ್ನುಮುಂದೆ ಮುಂದೆ ಬೇಳೆ ಕಾಳು ಲೀಕ್ ಆಗೋದನ್ನ ತಪ್ಪಿಸಬಹುದು.

ಬೇಳೆಕಾಳು ಬೇಯಿಸುವಾಗ ಕುಕ್ಕರ್‌ನಿಂದ ನೀರು ಏಕೆ ಬರುತ್ತೆ?

ಅನ್ನ ಅಥವಾ ಬೇಳೆ ಬೇಯಿಸುವಾಗ ನೊರೆ ನೀರು ಹೊರಬರುವುದು ಸಹಜ. ಕುಕ್ಕರ್‌ನಲ್ಲಿ ಕಡಿಮೆ ಸ್ಥಳವಿದ್ದಾಗ ನೀರು ಉಕ್ಕಿ ನೊರೆ ಬರುತ್ತೆ. ಕುಕ್ಕರ್‌ನ್ನು ಅತಿಯಾಗಿ ತುಂಬಿಸುವುದು ಇನ್ನೊಂದು ಕಾರಣ. ಇದರಿಂದ ಬೇಳೆ ಬೇಯಿಸುವಾಗ ಹಿಗ್ಗುತ್ತವೆ. ಅದರ ಮೇಲೆ ಫೋಮ್ ಅಥವಾ ನೊರೆ ರೂಪುಗೊಂಡು ಒತ್ತಡದಿಂದ ಕುಕ್ಕರ್‌ನಿಂದ ಹೊರಬರುತ್ತೆ.

ಬೇಳೆ ಬೇಯಿಸುವಾಗ ಸ್ವಲ್ಪ ಎಣ್ಣೆ ಸೇರಿಸಿ

ಪ್ರೆಶರ್ ಕುಕ್ಕರ್‌ನಲ್ಲಿ ಬೇಳೆ ಬೇಯಿಸುವಾಗ ನೀರು ಅಥವಾ ನೊರೆ, ಬೇಳೆ ಕಾಳು ಹೊರಬರಬಾರದು ಎಂದರೆ ಈ ಒಂದು ಸರಳ ಟ್ರಿಕ್ಸ್ ಪ್ರಯತ್ನಿಸಿ. ಕುಕ್ಕರ್‌ನಲ್ಲಿ ಬೇಳೆ, ನೀರು, ಅರಿಶಿನ ಮತ್ತು ಉಪ್ಪು ಸೇರಿಸಿದ ನಂತರ ನಾಲ್ಕೈದು ಹನಿ ಎಣ್ಣೆ ಸೇರಿಸಿಬಿಡಿ. 2 ಸ್ವಲ್ಪ ಕುಕ್ಕರ್‌ನ ಮುಚ್ಚಳದ ಮೇಲಿನ ಸೀಟಿಗೆ 3 ರಿಂದ 4 ಹನಿ ಎಣ್ಣೆ ಸೇರಿಸಬಹುದು. ನಂತರ ಕುಕ್ಕರ್ ಒಲೆಯ ಮೇಲಿಡಿ. ಎಣ್ಣೆ ಅಂಶ ನೊರೆ ಹೆಚ್ಚು ಏರುವುದನ್ನು ತಡೆಯುತ್ತೆ. ಸಿಟಿ ಊದಿದಾಗ ಅದರೊಂದಿಗೆ ಬೇಳೆ ನೀರು ಹೊರಬರುವುದು ತಪ್ಪುತ್ತೆ.

ಕುಕ್ಕರ್ ತುಂಬಾ ಬೇಳೆ ಹಾಕಬೇಡಿ

ಒಂದು ವೇಳೆ ನಿಮ್ಮ ಮನೆಯಲ್ಲಿ ಸಣ್ಣ ಪ್ರೆಶರ್ ಕುಕ್ಕರ್‌ ಇದ್ರೆ, ಹೆಚ್ಚು ಬೇಳೆಕಾಳು ಹಾಕಿಬೇಯಿಸುತ್ತಿದ್ದರೆ. ಹಾಗೆ ಮಾಡಬೇಡಿ. ಇದರಿಂದ ಕುಕ್ಕರ್ ಒಳಗಡೆ ನೀರು ನೊರೆಗೆ ಸಾಕಷ್ಟು ಸ್ಥಳವಿರುವುದಿಲ್ಲ. ಇದರಿಂದ ಬೇಳೆಕಾಳು ಮೇಲೆದ್ದು, ಸೀಟಿಯಿಂದ ಹೊರಗೆ ಚೆಲ್ಲುವಂತೆ ಮಾಡಬಹುದು. ಹೀಗಾಗಿ ಬೇಳೆಕಾಳು, ನೀರನ್ನು ತುಂಬುವಾಗ ಕುಕ್ಕರ್‌ನ ಎಷ್ಟು ಹಿಡಿಯುತ್ತೆ ಅನ್ನೋದು ಗಮನಿಸಿ ಹಾಕಿ.

ಕುಕ್ಕರ್‌ನ ರಬ್ಬರ್, ಸೀಟಿ ಸರಿಪಡಿಸಿ

ಬಹಳಷ್ಟು ಸಲ ಕುಕ್ಕರ್‌ನಿಂದ ನೀರು ಅನ್ನ, ಬೇಳೆ ಹೊರಬರಲು ಕುಕ್ಕರ್‌ನ ರಬ್ಬರ್ ಸರಿಯಾಗಿ ಅಳವಡಿಸದಿರುವುದು, ಸೀಟಿ ಸರಿಯಾಗಿ ಹಾಕದಿರುವುದು ಕಾರಣವಾಗಿರುತ್ತೆ. ಕುಕ್ಕರ್‌ನ ಗ್ಯಾಸ್ಕೆಟ್ ಲೂಸ್ ಆಗಿದ್ರೆ ಅಥವಾ ಸವೆದುಹೋಗಿದ್ರೆ ಅದು ಕುಕ್ಕರ್ ಒಳಗಡೆ ಒತ್ತಡ ಉಂಟುಮಾಡಲು ಸಾಧ್ಯವಾಗದೆ ಇರಬಹುದು. ಇದರಿಂದಾಗಿ ಕುಕ್ಕರ್‌ನಿಂದ ಸೀಟಿ ಹೊಡೆಯುವ ಮೊದಲೇ ನೀರು, ಉಗಿ ಹೊರಬರುವಂತಾಗುತ್ತೆ. ಈ ಪದೇ ಪದೆ ಸಮಸ್ಯೆ ಆಗುತ್ತಿದ್ದರೆ ಮೊದಲು ಕುಕ್ಕರ್‌ನ ಗ್ಯಾಸ್ಕೆಟ್ ಹೇಗಿದೆ ನೋಡಿ. ಒಂದು ವೇಳೆ ಪೂರ ಸೆವೆದುಹೋಗಿದ್ದರೆ ಬದಲಾಯಿಸಿ. ಅದೇ ರೀತಿ ಕುಕ್ಕರ್ ಸ್ವಚ್ಛವಾಗಿಡುವುದು ಕೂಡ ಅಷ್ಟೇ ಮುಖ್ಯ. ಕುಕ್ಕರ್ ಸೀಟಿ ಎಲ್ಲೆಂದರಲ್ಲ ಬಿಸಾಡುವುದರಿಂದ ಅದರೊಳಗೆ ಸಣ್ಣ ಸಣ್ಣ ಕಣಗಳು, ಕ್ರಿಮಿಗಳು ಸೇರಿ ಹಾಳುಮಾಡುತ್ತವೆ. ಇದರಿಂದಾಗಿ ಅದು ಸರಿಯಾಗಿ ಕೆಲಸ ಮಾಡುವುದಿಲ್ಲ.

ಬೇಳೆ ಬೇಯಿಸುವಾಗ ಈ ವಿಷಯ ನೆನಪಿನಲ್ಲಿಡಿ

  • ಕುಕ್ಕರ್‌ಗೆ ಸೇರಿಸುವ ಮುನ್ನ ಬೇಳೆಕಾಳು ಚೆನ್ನಾಗಿ ತೊಳೆಯಿರಿ.
  • ನೀರಿನ ಪ್ರಮಾಣ ಕುಕ್ಕರ್‌ನ ಅಳತೆ ಗ್ರಾತ್ರಕ್ಕೆ ಸರಿಹೊಂದುವಂತೀ ಇರಲಿ.
  • ಕುಕ್ಕರ್ ತುಂಬಾ ನೀರು ತುಂಬಬೇಡಿ.
  • ಬೇಳೆ ಬೇಯಿಸುವಾಗ ಹೆಚ್ಚು ನೊರೆ ಬಂದ್ರೆ ನಿರ್ಲಕ್ಷ್ಯ ಬೇಡ.
  • ಕುಕ್ಕರ್‌ ಸೀಟಿ, ಗ್ಯಾಸ್ಕೆಟ್ ಆಗಾಗ ಚೆಕ್ ಮಾಡಿ, ಸವೆದುಹೋಗಿದ್ದರೆ ತಕ್ಷಣ ಬದಲಾಯಿಸಿ.
  • ಕುಕ್ಕರ್‌ನಿಂದ ಅನ್ನದ ನೀರು, ಬೇಳೆಕಾಳು, ನೊರೆ ಸಿಡಿಯುತ್ತಿದ್ದರೆ ಅಡುಗೆ ಮನೆ ಹಾಳು.
  • ಮುಂದಿನ ಬಾರಿ ಅನ್ನ ಅಥವಾ ಬೇಳೆ ಬೇಯಿಸುವಾಗ ಕುಕ್ಕರ್‌ಗೆ ಸರಿಯಾದ ಪ್ರಮಾಣದಲ್ಲಿ ನೀರು, ಬೇಳೆ ಸೇರಿಸಿ.
  • ಕುಕ್ಕರ್‌ನಲ್ಲಿ ಒಂದೆರಡು ಹನಿ ಎಣ್ಣೆ ಹಾಕುವುದರಿಂದ ನೊರೆ ತಡೆಯುತ್ತೆ.