Cockroach: ಓಡಿಸೋದಲ್ಲ, ಮುಗಿಸಿಬಿಡಿ; ಈ ಐಡಿಯಾ ಬಳಸಿದ್ರೆ ಮನೆಯಲ್ಲಿರಲ್ಲ ಜಿರಳೆ!
ಮನೆಯಲ್ಲಿರುವ ಜಿರಳೆಗಳನ್ನು ಓಡಿಸಲು ರಾಸಾಯನಿಕಗಳ ಬದಲಿಗೆ ಸುಲಭವಾದ ಮನೆಮದ್ದನ್ನು ಬಳಸಬಹುದು. ಖಾಲಿ ಬಾಟಲಿ, ವಿನೇಗರ್ ಮತ್ತು ಬೇಕಿಂಗ್ ಸೋಡಾ ಬಳಸಿ ಜಿರಳೆಗಳನ್ನು ಸುಲಭವಾಗಿ ಹಿಡಿಯುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ.

ಜಿರಳೆ
ಮನೆಗಳಲ್ಲಿ ಒಮ್ಮೆ ಜಿರಳೆಗಳಾದ್ರೆ, ಅವುಗಳನ್ನು ಹೊರಗೆ ಓಡಿಸೋದು ದೊಡ್ಡ ಸವಾಲು. ಮಾರುಕಟ್ಟೆಯಲ್ಲಿ ಹಲವು ಉತ್ಪನ್ನಗಳು ಲಭ್ಯವಿದ್ರೂ, ಅವುಗಳು ತಾತ್ಕಾಲಿಕ ಪರಿಹಾರ ಮಾತ್ರ ನೀಡುತ್ತವೆ. ಡೀಪ್ ಕ್ಲೀನ್ ಮಾಡಿ ರಾಸಾಯಾನಿಕ ಸಿಂಪಡಿಸಿದ್ರೂ ಒಂದೆರಡು ತಿಂಗಳಲ್ಲಿ ಜಿರಳೆಗಳು ಕಾಣಿಸಿಕೊಳ್ಳಲು ಆರಂಭಿಸುತ್ತವೆ. ಇಂದು ನಾವು ನಿಮಗೆ ಜಿರಳೆಗಳನ್ನ ಹೇಗೆ ಓಡಿಸೋದು ಎಂದು ಹೇಳುತ್ತಿದ್ದೇವೆ.
ಸೂಪರ್ ಐಡಿಯಾಗೆ ಬೇಕಾಗುವ ಸಾಮಾಗ್ರಿಗಳು
ಜಿರಳೆಗಳ ನಿವಾರಣೆಗೆ ನಿಮಗೆ 1 ಲೀಟರ್ ಸಾಮಾರ್ಥ್ಯದ ಖಾಲಿ ವಾಟರ್ ಬಾಟೆಲ್, 5 ರಿಂದ 6 ಟೀ ಸ್ಪೂನ್ ವಿನೇಗರ್, 1 ಟೀ ಸ್ಪೂನ್ ಡಿಟರ್ಜೆಂಟ್ ಲಿಕ್ವಿಡ್, ಚಿಕ್ಕ ಬ್ರೆಡ್ ತುಂಡು, 100 ಎಂಎಲ್ ನೀರು, 2 ಟೀ ಸ್ಪೂನ್ ಬೇಕಿಂಗ್ ಸೋಡಾ
ಬಾಟೆಲ್ನ ಕೆಳಭಾಗದ ಭಾಗದಲ್ಲಿ ಲಿಕ್ವಿಡ್ ಮಾಡಿಕೊಳ್ಳಿ
ಈಗ ಬಾಟೆಲ್ನ್ನು ಮಧ್ಯ ಭಾಗದಲ್ಲಿ ಕತ್ತರಿಸಿಕೊಳ್ಳಿ. ತಳಭಾಗದ ಬಾಟೆಲ್ನಲ್ಲಿ ವಿನೇಗರ್, ಡಿಟರ್ಜೆಂಟ್ ಲಿಕ್ವಿಡ್, ಬ್ರೆಡ್ ತುಂಡು, ಬ್ರೇಕಿಂಗ್ ಸೋಡಾ ಹಾಕಿಕೊಳ್ಳಿ. ನಂತರ ಇದಕ್ಕೆ 100 ಎಂಎಲ್ ನಷ್ಟು ನೀರು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ವಿನೇಗರ್, ಬ್ರೆಡ್ ವಾಸನೆ
ಈಗ ಕತ್ತರಿಸಿಕೊಂಡಿರುವ ಬಾಟೆಲ್ನ ಮತ್ತೊಂದು ಭಾಗವನ್ನು ಚಿತ್ರದಲ್ಲಿ ತೋರಿಸಿರುವಂತೆ ಉಲ್ಟಾ ಮಾಡಿಡಿ. ಈಗ ಜಿರಳೆಗಳು ಹೆಚ್ಚಾಗಿ ಬರೋ ಪ್ರದೇಶದಲ್ಲಿ ಬಾಟೆಲ್ ಇಡಬೇಕು. ವಿನೇಗರ್, ಬ್ರೆಡ್ ವಾಸನೆಯಿಂದ ಜಿರಳೆಗಳು ಬಾಟೆಲ್ನತ್ತ ಬರುತ್ತವೆ.
ಜಿರಳೆಗಳ ಸಂಖ್ಯೆ
ಕೆಳಭಾಗದಲ್ಲಿರುವ ಆಹಾರ ಹುಡುಕಿ ಬರೋ ಜಿರಳೆಗಳು ಬಾಟೆಲ್ ಕೆಳಭಾಗದಲ್ಲಿ ಸಿಲುಕುತ್ತವೆ. ಬಾಟೆಲ್ನಿಂದ ಮೇಲಗ್ಡೆ ಬರಲು ಸಾಧ್ಯವಾಗದೇ ಕೆಳಭಾಗದಲ್ಲಿಯೇ ಸಿಲುಕೊಳ್ಳುತ್ತವೆ. ನಂತರ ಬಾಟೆಲ್ ನಲ್ಲಿರೋ ಜಿರಳೆಗಳನ್ನು ಮನೆಯಿಂದ ಹೊರಗೆ ಹಾಕಬಹುದು. ಹೀಗೆ ನಾಲ್ಕೈದು ದಿನ ಈ ರೀತಿಯಾಗಿ ಮಾಡಿದ್ರೆ ಜಿರಳೆಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು.
ಇದನ್ನೂ ಓದಿ: ನಾಲಿಗೆಗೆ ಹೊಸ ಚೈತನ್ಯ ನೀಡುವ ಖಾರ-ಖಾರವಾದ ಸಾಸಿವೆ ರಸಂ; ಅಜ್ಜಿಯ ರೆಸಿಪಿ ಮಾಡಿ ನೋಡಿ
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.













