ರಜೆಯ ನಂತರ ಮನೆಗೆ ಬಂದಾಗ ಸಿಂಕ್‌ನಿಂದ ಬರುವ ದುರ್ವಾಸನೆ ನಿಮ್ಮನ್ನು ಕಾಡುತ್ತಿದೆಯೇ? ಕಾಗದ ಮತ್ತು ನೀರಿನ ಗ್ಲಾಸ್ ಬಳಸಿ ಈ ಸಮಸ್ಯೆಯಿಂದ ಮುಕ್ತಿ ಪಡೆಯಿರಿ. ಈ ಸರಳ ಉಪಾಯವು ಚರಂಡಿಯಿಂದ ಬರುವ ದುರ್ಗಂಧವನ್ನು ತಡೆಯುತ್ತದೆ ಮತ್ತು ನಿಮ್ಮ ಮನೆಯನ್ನು ತಾಜಾವಾಗಿರಿಸುತ್ತದೆ.

ಬೆಂಗಳೂರು (ಜು.06): ರಜೆಗೆ ಎಲ್ಲಾದರೂ ಮೂರ್ನಾಲ್ಕು ದಿನ ಪ್ರವಾಸಕ್ಕೆ ಹೊರಡುವಾಗ ಮನೆ ಬಿಟ್ಟು ಹೋಗುವುದು ಎಷ್ಟು ಖುಷಿಯ ವಿಷಯವೋ, ಮರಳಿ ಮನೆಗೆ ಬಂದು ದುರ್ವಾಸನೆ ಬರುತ್ತದಲ್ಲಾ ಅದನ್ನು ಸಹಿಸಿಕೊಳ್ಳುವುದು ಅಷ್ಟೇ ಅಸಹನೀಯವೂ ಹೌದು. ನೀವು ಮನೆಗೆ ಮರಳಿದಾಗ ಸಿಂಕ್‌ನ ನಾಳದಿಂದ ಬರುವ ದುರ್ಗಂಧ ಎಲ್ಲ ಖುಷಿಯನ್ನು ಕೆಡಿಸಿಬಿಡಬಹುದು. ಆದರೆ, ಈ ಕೆಟ್ಟ ಅನುಭವದಿಂದ ತಪ್ಪಿಸಿಕೊಳ್ಳಲು ಒಂದು ಸರಳ ವಿಧಾನವಿದೆ. ಒಂದು ಕಾಗದದ ದಪ್ಪನೆಯ ಹಾಳೆ ಮತ್ತು ನೀರಿನ ಗ್ಲಾಸ್ ಟ್ರಿಕ್!

ದುರ್ವಾಸನೆ ಹಿಂದಿರುವ ವೈಜ್ಞಾನಿಕ ಕಾರಣ:

ನೀವು ಮನೆ ಬಿಟ್ಟು ಹೋದಾಗ, ಸಿಂಕ್ ಅಥವಾ ಇತರ ನಾಳಗಳ ಕೆಳಭಾಗದಲ್ಲಿ ಇರುವ ‘ಸೈಫನ್‌’ (ಬಾಗಿದ ಪೈಪ್) ಭಾಗದಲ್ಲಿರುವ ನೀರು ಬಿಸಿಲಿನಿಂದ ಆವಿಯಾಗಬಹುದು. ಈ ನೀರು ಚರಂಡಿ ಅಥವಾ ಡ್ರೈನ್‌ನಿಂದ್ ಬರುವ ಕೆಟ್ಟ ವಾಸನೆಯನ್ನು (ಸೆಪ್ಟಿಕ್ ಗ್ಯಾಸ್) ಮನೆಯೊಳಗೆ ಬರದಂತೆ ತಡೆಯುತ್ತದೆ. ಆದರೆ, ದೀರ್ಘ ಕಾಲ ನೀವು ಮನೆಯಲ್ಲಿ ಯಾರೂ ಇಲ್ಲದ್ದರಿಂದ ಸೈಫನ್‌ನಲ್ಲಿ ಉಳಿದ ನೀಡು ನಿಧಾನವಾಗಿ ಆವಿಯಾಗುತ್ತದೆ. ಆಗ ಚರಂಡಿಯಲ್ಲಿನ ಕೆಟ್ಟ ದುರ್ವಾಸನೆಯ ಗ್ಯಾಸ್ ಅನಿಲಗಳು ನೇರವಾಗಿ ಮನೆಯೊಳಗೆ ಬಂದು ಹರಡಿಕೊಳ್ಳುತ್ತದೆ. ಹೀಗಾಗಿ, ರಜೆಗೆ ಹೋಗಿ ವಾಪಸ್ ಬಂದಾಗ ಮನೆಯ ಬಾಗಿಲು ತೆಗೆದಾಕ್ಷಣ ದೊಡ್ಡ ಮಟ್ಟದಲ್ಲಿ ವಾಸನೆಗಳು ಬರುತ್ತದೆ. ಆಗ ಮನೆಯ ಎಲ್ಲ ಕಿಟಕಿ, ಬಾಗಿಲು ತೆರೆದು ಒಂದಷ್ಟು ಕಾಲ ಫ್ಯಾನ್ ಹಾಕಿ ಕೆಟ್ಟ ಗಾಳಿಯನ್ನು ಹೊರ ಹಾಕಲು ಪ್ರಯತ್ನ ಮಾಡುತ್ತೇವೆ. ಇದೀಗ ಕೆಟ್ಟ ಅನಿಲಗಳು ಮನೆಯೊಳಗೆ ಬಾರದಂತೆ ತಡೆಯಲು ಕಾಗದದ ಹಾಳೆ ಮತ್ತು ಗ್ಲಾಸ್ ಬಳಕೆಯೇ ಸಿಂಪಲ್ ಟ್ರಿಕ್ ಆಗಿದೆ.

ಕಾಗದ ಮತ್ತು ಗ್ಲಾಸ್ ಟ್ರಿಕ್ ಹೇಗೆ ಸಹಾಯ ಮಾಡುತ್ತದೆ?

ಒಂದು ದಪ್ಪ ಕಾಗದ (ಕಾರ್ಡ್‌ಬೋರ್ಡ್ ಶೀಟ್, ರಟ್ಟಿನ ಬಾಕ್ಸ್ ಪೇಪರ್) ಮತ್ತು ಗ್ಲಾಸ್‌ನಿಂದ ಜೀನಿಯಸ್ ಹ್ಯಾಕ್ ಬರುತ್ತದೆ. ನೀವು ರಜೆಗೆ ಹೊರಡುವ ಮೊದಲು, ಪ್ರತಿ ಸಿಂಕ್ ಡ್ರೈನ್ ಮೇಲೆ ಕಾಗದದ ಹಾಳೆಯನ್ನು ಇರಿಸಿ ಮತ್ತು ಅದರ ಮೇಲೆ ನೀರಿನಿಂದ ತುಂಬಿದ ಗ್ಲಾಸ್ ಅನ್ನು ಇರಿಸಿ. ಈ ಸರಳ ತಡೆಗೋಡೆ ಡ್ರೈನ್ ಅನ್ನು ಗಾಳಿಯಾಡದ ರೀತಿಯಲ್ಲಿ ಮುಚ್ಚುವ ಮೂಲಕ ಪೈಪ್‌ನಲ್ಲಿರುವ ನೀರು ಆವಿಯಾಗುವಿಕೆಯನ್ನು ನಿಧಾನಗೊಳಿಸುತ್ತದೆ. ಆಗ ಪೈಪ್‌ನ ಸೈಫನ್‌ನಲ್ಲಿರುವ ನೀರು ಹೆಚ್ಚು ಕಾಲ ಉಳಿಯಲು ಸಹಾಯ ಮಾಡುತ್ತದೆ. ಇನ್ನು ನೀರು ತುಂಬಿದ ಗಾನಿನ ಲೋಟವು ಪೇಪರ್ ಮೇಲೆ ಇಡುವುದರಿಂದ ಪೇರ್ ಶೀಟ್ ಭಾರವಾಗಿ ಕೆಟ್ಟ ಗಾಳಿ ಮನೆಯೊಳಗೆ ಬರುವುದನ್ನು ತಡೆಯುತ್ತದೆ. ಇದು ತ್ವರಿತ, ಸುಲಭ ಉಪಾಯವಾಗಿದೆ. ಒಂದು ವಾರದ ರಜೆಗೆ ಮೊದಲು ನಾನು ಈ ವಿಧಾನವನ್ನು ಅನುಸರಿಸಿ, ಹಿಂತಿರುಗಿದಾಗ ಮನೆ ಸ್ವಚ್ಛ ಮತ್ತು ತಾಜಾ ಆಗಿರುವಂತೆ ಮಾಡಿ.

ಮನೆಯಿಂದ ಹೊರಗೆ ಹೋದಾಗ ಚರಂಡಿಯ ವಾಸನೆ ಬರದಂತೆ ತಡೆಯಲು ಹೆಚ್ಚುವರಿ ಸಲಹೆಗಳು.

ಗಾಜು ಮತ್ತು ಕಾಗದದ ವಿಧಾನದ ಮೂಲಕ ನಿಮಗೆ ತುಂಬಾ ಅನುಕೂಲವಾದರೂ ಹೆಚ್ಚುವರಿ ಸಲಹೆಗಳು ಇಲ್ಲಿವೆ. ಮನೆಯಿಂದ ಹೊರಗೆ ಹೋಗುವ ಮೊದಲು, ನೀರಿನ ಸಿಂಕ್‌ಗಳ ಸಫೈನ್‌ಗಳು ಸಂಪೂರ್ಣವಾಗಿ ಸಾಕಷ್ಟು ನೀರನ್ನು ಬಿಡಬೇಕು. ಪೈಪ್‌ಗಳು ಸೋರಿಕೆಯಾಗಿದ್ದರೆ ಅದನ್ನು ದುರಸ್ತಿಪಡಿಸಿ. ಇನ್ನು ಮುಚ್ಚಿಹೋಗಿರುವ ಕೊಳಾಯಿಗಳು ಕೆಲವೊಮ್ಮೆ ವಾಸನೆಯ ಸಮಸ್ಯೆಗಳನ್ನು ಉಂಟುಮಾಡಬಹುದು. ಬೇಸಿಗೆ ಕಾಲದಲ್ಲಿ ನಿಮ್ಮ ಸಿಂಕ್‌ಗಳನ್ನು ಬಿಸಿ ನೀರಿನಿಂದ ತೊಳೆಯಬೇಕು.