Kitchen cleaning hacks: ಚಹಾ ಸೋಸುವ ಜಾಲರಿಯ ಮೇಲಿನ ಜಿಡ್ಡು ಕಲೆಗಳನ್ನು ತೆಗೆಯುವುದು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುವ ಕೆಲಸ. ಚಹಾ ಜಾಲರಿಯನ್ನು ಸುಲಭವಾಗಿ ಸ್ವಚ್ಛಗೊಳಿಸಲು ಇಷ್ಟು ಮಾಡಿದರೆ ಸಾಕು.
ಅಡುಗೆಮನೆಯಲ್ಲಿ ಯಾವಾಗಲೂ ಬಳಸುವ ಒಂದು ವಸ್ತು ಎಂದರೆ ಅದು ಚಹಾ ಸೋಸುವ ಜಾಲರಿ. ಪ್ರತಿಯೊಬ್ಬರ ಮನೆಯಲ್ಲಿ ಇದು ಇದ್ದೇ ಇರುತ್ತೆ. ಇದನ್ನು ನಿರಂತರವಾಗಿ ಬಳಸುವುದರಿಂದ ಅದರಲ್ಲಿ ಕಲೆ ಹಿಡಿದು ಕೊಳೆಯಾಗುತ್ತದೆ. ಇದು ನಂತರ ಸೂಕ್ಷ್ಮಾಣುಗಳ ಬೆಳವಣಿಗೆಗೆ ಕಾರಣವಾಗಬಹುದು. ಆದರೆ ಹೆಚ್ಚು ಸಮಯ ವ್ಯಯಿಸದೆ ಚಹಾ ಜಾಲರಿಯನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು. ಹೀಗೆ ಮಾಡಿದರೆ ಸಾಕು.
ಚಹಾ ಸೋಸುವ ಜಾಲರಿಯ ಜಿಡ್ಡು ಕಲೆ ತೆಗೆಯಲು ಹೀಗೆ ಮಾಡಿ:
1. ಡಿಶ್‌ವಾಶ್ ಲಿಕ್ವಿಡ್
ಬಿಸಿ ನೀರಿನಲ್ಲಿ ಚಹಾ ಜಾಲರಿಯನ್ನು ನೆನೆಸಿಡಬೇಕು. ಸ್ವಲ್ಪ ಸಮಯದ ನಂತರ, ಡಿಶ್‌ವಾಶ್ ಲಿಕ್ವಿಡ್ ಮತ್ತು ಸ್ಕ್ರಬ್ಬರ್ ಬಳಸಿ ಚೆನ್ನಾಗಿ ಉಜ್ಜಿ ತೊಳೆಯಿರಿ. ಇದು ಸುಲಭವಾಗಿ ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
2. ಅಡುಗೆ ಸೋಡಾ
ಪ್ಲಾಸ್ಟಿಕ್ ಮತ್ತು ಸ್ಟೀಲ್‌ನಿಂದ ಮಾಡಿದ ಚಹಾ ಜಾಲರಿಗಳನ್ನು ಸ್ವಚ್ಛಗೊಳಿಸಲು ಅಡುಗೆ ಸೋಡಾ ಸಾಕು. ಉಗುರುಬೆಚ್ಚಗಿನ ನೀರಿಗೆ ಒಂದು ಸ್ಪೂನ್ ಅಡಿಗೆ ಸೋಡಾ ಸೇರಿಸಿ. ಇದರಲ್ಲಿ ಚಹಾ ಜಾಲರಿಯನ್ನು ನೆನೆಸಿಡಿ. ಸ್ವಲ್ಪ ಸಮಯದ ನಂತರ ಬ್ರಷ್ ಬಳಸಿ ಚೆನ್ನಾಗಿ ಉಜ್ಜಿ ತೊಳೆಯಿರಿ.
3. ಗ್ಯಾಸ್ ಸ್ಟೌವ್ ಬಳಸಿ
ಗ್ಯಾಸ್ ಸ್ಟೌವ್ ಬಳಸಿ ಲೋಹದ ಚಹಾ ಜಾಲರಿಗಳನ್ನು ಸ್ವಚ್ಛಗೊಳಿಸಬಹುದು. ಗ್ಯಾಸ್ ಉರಿಸಿ ಅದರ ಮೇಲೆ ಜಾಲರಿಯನ್ನು ಇಡಿ. ಶಾಖ ತಗುಲಿದಾಗ ಜಾಲರಿಯಲ್ಲಿ ಅಂಟಿಕೊಂಡಿರುವ ಕಲೆ ಸುಲಭವಾಗಿ ಹೋಗುತ್ತದೆ. ನಂತರ ಡಿಶ್‌ವಾಶ್ ಲಿಕ್ವಿಡ್ ಬಳಸಿ ತೊಳೆದು ಸ್ವಚ್ಛಗೊಳಿಸಿದರೆ ಸಾಕು.


