Asianet Suvarna News Asianet Suvarna News

ತಾಯಿ, ತಂಗಿಯನ್ನೆ ಹತ್ಯೆ ಮಾಡಿ ನೀಚ ಕೃತ್ಯ ಎಸಗಿದ

  • ಕ್ಷುಲ್ಲಕ ಕಾರಣಕ್ಕೆ ಮದ್ಯದ ನಶೆಯಲ್ಲಿ ಗುಂಡು ಹಾರಿಸಿ ಹೆತ್ತ ತಾಯಿ ಮತ್ತು ತಂಗಿಯನ್ನು ಕೊಲೆ 
  • ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ದೊಡ್ಮನೆ ಗ್ರಾಮ ಪಂಚಾಯಿತಿ ಕುಡೆಗೋಡು ಬಳಿ ಘಟನೆ
youth arrested For  Killed His mother and sister in siddapura snr
Author
Bengaluru, First Published Oct 16, 2021, 7:25 AM IST
  • Facebook
  • Twitter
  • Whatsapp

 ಸಿದ್ದಾಪುರ (ಅ.16):  ಕ್ಷುಲ್ಲಕ ಕಾರಣಕ್ಕೆ ಮದ್ಯದ (Liquor) ನಶೆಯಲ್ಲಿ ಗುಂಡು ಹಾರಿಸಿ ಹೆತ್ತ ತಾಯಿ ಮತ್ತು ತಂಗಿಯನ್ನು ಕೊಲೆ (Murder) ಮಾಡಿರುವ ಘಟನೆ ಉತ್ತರ ಕನ್ನಡ (Uttara kannada) ಜಿಲ್ಲೆಯ ಸಿದ್ದಾಪುರ ತಾಲೂಕಿನ ದೊಡ್ಮನೆ ಗ್ರಾಮ ಪಂಚಾಯಿತಿ ಕುಡೆಗೋಡು ಬಳಿ ಸಂಭವಿಸಿದೆ.

ತಾಯಿ ಪಾರ್ವತಿ ನಾರಾಯಣ ಹಸ್ಲರ್‌ (42) ಮತ್ತು ತಂಗಿ ರಮ್ಯಾ ನಾರಾಯಣ (19) ಎಂಬವರೇ ಕೊಲೆಯಾದವರು. ಮಂಜುನಾಥ್‌ (24) ಎಂಬುವವನೇ ಕೊಲೆ ಮಾಡಿದ ಆರೋಪಿ. ಸದ್ಯ ಸಿದ್ದಾಪುರ ಪೊಲೀಸರು (police) ಆರೋಪಿಯನ್ನು ಬಂಧಿಸಿದ್ದಾರೆ.

ಬೆಂಗಳೂರು; ಹೆತ್ತ ಮಗನನ್ನೇ ಹತ್ಯೆ ಮಾಡಿದ..ಹುಡುಕಿದರೆ ಕಾರಣವೇ ಇಲ್ಲ!

ಮಂಜುನಾಥ ಹಸ್ಲರ್‌ ವಿಪರೀತ ಕುಡಿತದ (Drunker) ಚಟಕ್ಕೆ ಅಂಟಿಕೊಂಡಿದ್ದ. ಕುಡಿದು ​ಬಂದು ಸಾಂಬಾರ್‌ ಸರಿಯಾಗಿಲ್ಲ ಎಂದು ಮನೆಯಲ್ಲಿ ಜಗಳವಾಡಿದ್ದಾನೆ. ಕುಡಿದ ಅಮಲಿನಲ್ಲೇ ಜಗಳವಾಡಿ ನಾಡ ಬಂದೂಕಿನಿಂದ (Gun) ಗುಂಡು ಹಾರಿಸಿ ತಾಯಿ ಮತ್ತು ತಂಗಿಯ ಕೊಲೆ ಮಾಡಿದ್ದಾನೆ. ಈ ವೇಳೆ ಇಬ್ಬರೂ ಸ್ಥಳದಲ್ಲೇ ಪ್ರಾಣ​ಬಿ​ಟ್ಟಿ​ದ್ದು, ಘಟನೆ ನಡೆದ ವೇಳೆ ತಂದೆ ನಾರಾಯಣ ಮನೆಯಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ.

ಕುಡುಕ ಆರೋಪಿ ಮಗನ ವಿರುದ್ಧ ತಂದೆ ನಾರಾಯಣ ಹಸ್ಲರ್‌ ಪೊಲೀಸರಿಗೆ ದೂರು ನೀಡಿದ್ದು, ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ. ಘಟನೆ ಸಂಬಂಧಿಸಿ ಸಿದ್ದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಂದೆಯಿಂದಲೇ ನೀಚ ಕೃತ್ಯ

  ಮಗಳ ಮೇಲೆ ಅಪ್ಪನೇ ಅತ್ಯಾಚಾರ(Rape) ನಡೆಸಿದ್ದೂ, ಅಲ್ಲದೆ ತನ್ನ ಉದ್ಯಮ ಸಂಬಂಧಿ ಪರಿಚಯಸ್ಥ ಇತರೆ 27 ಜನರಿಗೂ ಮಗಳ(Daughter) ಮೇಲೆ ಅತ್ಯಾಚಾರಕ್ಕೆ ಅವಕಾಶ ಮಾಡಿಕೊಟ್ಟ ಹೇಯ ಘಟನೆಯೊಂದು ಉತ್ತರಪ್ರದೇಶದ(Uttarpradesh) ಲಲಿತ್‌ಪುರ ಜಿಲ್ಲೆಯಲ್ಲಿ9lalitpur District) ನಡೆದಿದೆ. ಪ್ರಕರಣ ಸಂಬಂಧ 11ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿ ನೀಡಿದ ದೂರಿನ ಮೇರೆಗೆ ಇದೀಗ ಆಕೆಯ ತಂದೆ ಸೇರಿದಂತೆ ಅತ್ಯಾಚಾರ ಎಸಗಿದ್ದ 28 ಜನರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಎಸ್‌ಪಿ, ಬಿಎಸ್‌ಪಿ ಪಕ್ಷದ ಹಲವು ನಾಯಕರು ಕೂಡಾ ಸೇರಿದ್ದಾರೆ ಎಂಬುದು ನಾಚಿಕೆಗೇಡಿನ ಸಂಗತಿ.

ಬಾಲಕಿ ಹೇಳಿದ್ದೇನು?:

ನಾನು 6ನೇ ತರಗತಿ ಓದುತ್ತಿದ್ದಾಗ ಮೊದಲ ಬಾರಿ ನನ್ನ ತಂದೆ ನನ್ನ ಮೇಲೆ ಅತ್ಯಾಚಾರ ಎಸಗಿದ್ದರು. ಬಳಿಕವೂ ಹಲವು ಬಾರಿ ನನಗೆ ಲೈಂಗಿಕ ಕಿರುಕುಳ(Sexual harassment) ನೀಡಿದ್ದರು. ಜೊತೆಗೆ ತಮ್ಮ ಉದ್ಯಮ ಸಂಬಂಧ ತಂದೆ ಹಲವರನ್ನು ಮನೆಗೆ ಬರಲು ಹೇಳುತ್ತಿದ್ದರು. ಹೀಗೆ ಬಂದವರಿಗೂ ನನ್ನ ಮೇಲೆ ಅತ್ಯಾಚಾರವೆಸಗಲು ಅವಕಾಶ ಕೊಡುತ್ತಿದ್ದರು. ಈ ವಿಷಯ ತಿಳಿಸಿದರೆ ನನ್ನ ತಾಯಿಯನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ.

 

Follow Us:
Download App:
  • android
  • ios