ಮೈಸೂರು: ಪತ್ನಿ, ಮಕ್ಕಳು, ತಾಯಿಯನ್ನೇ ಕೊಲೆ ಮಾಡಿದ್ದವನಿಗೆ ಮರಣದಂಡನೆ
ಪ್ರಕರಣದ ವಿಚಾರಣೆ ನಡೆಸಿದ ಮೈಸೂರಿನ ಐದನೆಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಅಭಿಯೋಜಕರು ಆರೋಪಿಯ ಪಿಯ ವಿರುದ್ದ ಆಪಾದಿಸಲಾದ ಆರೋಪವನ್ನು ನಿಸ್ಸಂದೇಹವಾಗಿ ಸಾಬೀತುಪಡಿಸಿದ್ದಾರೆಂದು ನ್ಯಾಯಾಧೀಶ ಗುರುರಾಜ್ ಸೋಮಕ್ಕಲವರ್ ಅವರು ಅಪರಾಧಿಯಾದ ಮಣಿಕಂಠ ಸ್ವಾಮಿಗೆ ಮರಣದಂಡನೆ ವಿಧಿಸಿ ಆದೇಶ ನೀಡಿದ್ದಾರೆ.
ಮೈಸೂರು(ನ.28): ಹೆಂಡತಿ, ಮಕ್ಕಳ ಜೊತೆಗೆ ತನ್ನ ತಾಯಿಯನ್ನೂ ಕೊಲೆ ಮಾಡಿದ ಅಪರಾಧಿಗೆ ಮೈಸೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಮರಣ ದಂಡನೆ ವಿಧಿಸಿ ತೀರ್ಪು ನೀಡಿದೆ.
ಸರಗೂರು ತಾಲೂಕು ಚಾಮೇಗೌಡನಹುಂಡಿ ಗ್ರಾಮದ ನಿವಾಸಿ ಲೇಟ್ ಚಿಕ್ಕನಾಯಕ ಎಂಬವರ ಪುತ್ರ ಮಣಿಕಂಠಸ್ವಾಮಿ ಅ. ಕುಂಟ ಎಂಬ ವ್ಯಕ್ತಿ ವಿಶಿಷ್ಟ ಚೇತನನಾಗಿದ್ದು, ಆತ 2014ರ ಮಾರ್ಚ್ ತಿಂಗಳಲ್ಲಿ ಗಂಗೆ ಎಂಬುವರನ್ನು ವಿವಾಹವಾದ. ಆತನಿಗೆ 4 ವರ್ಷದ ಸಾಮ್ರಾಟ್ ಮತ್ತು ಒಂದೂವರೆ ವರ್ಷದ ರೋಹಿತ್ ಎಂಬ ಇಬ್ಬರು ಮಕ್ಕಳಿದ್ದರು. ಅಲ್ಲದೆ ಆತನ ಹೆಂಡತಿ 9 ತಿಂಗಳ ಗರ್ಭಿಣಿಯಾಗಿದ್ದು ಆಕೆಯ ಅನುಮಾನ ಪಟ್ಟು ಪದೇ ಮೇಲೆ ಪದೇ ಜಗಳವಾಡುತ್ತಿದ್ದ.
ಕೊಪ್ಪಳ: ಅಸ್ಪೃಶ್ಯತೆ ಕೇಸ್, ಜೀವಾವಧಿಗೆ ಗುರಿಯಾದ 98 ಮಂದಿಗೆ ಸಿಕ್ತು ಬೇಲ್!
ಆತನ ತಾಯಿ ಕೆಂಪಾಜಮ್ಮ ಸಮಾಧಾನ ಮಾಡುತ್ತಿದ್ದಾಗ ಆಕೆಯೊಂದಿಗೂ ಜಗಳವಾಡುತ್ತಿದ್ದ. 2021ರ ಏಪ್ರಿಲ್ 28 ರಂದು ಸಂಜೆ ಮಣಿಕಂಠಸ್ವಾಮಿಯು ತನ್ನ ಹೆಂಡತಿಯ ಶೀಲ ಶಂಕಿಸಿ ಆಕೆಯೊಂದಿಗೆ ಮತ್ತು ತನ್ನ ತಾಯಿ ಕೆಂಪಾಜಮ್ಮನೊಂದಿಗೆ ಜಗಳವಾಡಿ ಗಲಾಟೆ ಮಾಡಿದ್ದ. ಬಳಿಕ ಅದೇ ದಿನ ರಾತ್ರಿ 9 ಗಂಟೆಗೆ ಮನೆಗೆ ಬಂದು ಮಧ್ಯರಾತ್ರಿ 12 ಗಂಟೆವರೆಗೆ ಟಿವಿ ನೋಡಿ ಬೆಳಗಿನ ಜಾವ 4 ಗಂಟೆಯಲ್ಲಿ ಎಲ್ಲರೂ ಮಲಗಿದ್ದ ವೇಳೆ ತಾನು ನಡೆದಾಡಲು ಉಪಯೋಗಿಸುತ್ತಿದ್ದ ಅಂಗವಿಕಲರ ಸಾಧನವಾದ ಕಬ್ಬಿಣದ ಊರುಗೋಲಿನಿಂದ ಒಂಬತ್ತು ತಿಂಗಳ ಗರ್ಭಣಿಯಾದ ತನ್ನ ಹೆಂಡತಿ, ತಾಯಿ ಕೆಂಪಾಜಮ್ಮ ಹಾಗೂ ತನ್ನ ನಾಲ್ಕು ವರ್ಷದ ಮಗ ಸಾಮ್ರಾಟ್ ಸೇರಿದಂತೆ ಮೂರೂ ಜನರಿಗೆ ತಲೆಗೆ ಮುಖಕೆ ಬಲವಾಗಿ ಹೊಡೆದು ಸಾಯಿಸಿದ್ದಲ್ಲದೆ, ಇನ್ನೊಬ್ಬ ಒಂದೂವರೆ ವರ್ಷದ ಮಗ ರೋಹಿತ್ ನನ್ನು ಕತ್ತು ಹಿಸುಕಿ ಉಸಿರುಗಟ್ಟಿಸಿ ಸಾಯಿಸಿದ್ದ. ಜೊತೆಗೆ ತನ್ನ ಪತ್ನಿಯ ಗರ್ಭದಲ್ಲಿದ್ದ ಮಗುವಿನ ಸಾವಿಗೂ ಕಾರಣವಾಗಿದ್ದ.
ಘಟನೆಯ ಮಾಹಿತಿ ತಿಳಿದ ಸರಗೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಮೈಸೂರಿನ ಐದನೆಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಅಭಿಯೋಜಕರು ಆರೋಪಿಯ ಪಿಯ ವಿರುದ್ದ ಆಪಾದಿಸಲಾದ ಆರೋಪವನ್ನು ನಿಸ್ಸಂದೇಹವಾಗಿ ಸಾಬೀತುಪಡಿಸಿದ್ದಾರೆಂದು ನ್ಯಾಯಾಧೀಶ ಗುರುರಾಜ್ ಸೋಮಕ್ಕಲವರ್ ಅವರು ಅಪರಾಧಿಯಾದ ಮಣಿಕಂಠ ಸ್ವಾಮಿಗೆ ಮರಣದಂಡನೆ ವಿಧಿಸಿ ಆದೇಶ ನೀಡಿದ್ದಾರೆ. ರಾಜ್ಯದ ಪರವಾಗಿ ಅಭಿಯೋಜಕ ಬಿ.ಇ. ಯೋಗೇಶ್ವರ್ ವಾದಿಸಿದ್ದರು.
ನ್ಯಾಯಾಲಯದ ಶಿಕ್ಷೆ ಸೇಡಿನ ಕ್ರಮವಲ್ಲ. ಅಪರಾಧ ಎಸಗುವವನಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂಬ ಸತ್ಯವು ಸಮಾಜಕ್ಕೆ ತಿಳಿಯಲಿ ಎಂದು. ಅಪರಾಧ ಎಸಗುವವನು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬ ಸತ್ಯ ಬಹಿರಂಗವಾದರೆ ಅಪರಾಧ ಎಸಗುವವರು ಅಪರಾಧ ಎಸಗಲು ಹಿಂದೇಟು ಹಾಕಬಹುದು ಎಂಬ ಕಾರಣಕ್ಕಾಗಿಯೇ ಅಪರಾಧಿಗೆ ಶಿಕ್ಷೆ ನೀಡುವುದು. ಶಿಕ್ಷೆಯ ಭಯವೇ ಶಾಂತಿಯ ಮೂಲ. ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಅಪರಾಧಿಗೆ ಶಿಕ್ಷೆಯಾಗಲೇಬೇಕು ಎಂದು ಮೈಸೂರು ನ್ಯಾಯವಾದಿ ಪಿ.ಜೆ. ರಾಘವೇಂದ್ರ ತಿಳಿಸಿದ್ದಾರೆ.
ದಲಿತರ ಮೇಲಿನ ದೌರ್ಜನ್ಯ ಪ್ರಕರಣ: ಒಂದೇ ಕೇಸಲ್ಲಿ 98 ಜನಕ್ಕೆ ಜೀವಾವಧಿ!
ತುಮಕೂರು: ದಲಿತ ಮಹಿಳೆ ಡಾಬಾ ಹೊನ್ನಮ್ಮ ಮರ್ಡರ್ ಕೇಸ್, 21 ಆರೋಪಿಗಳಿಗೆ ಜೀವಾವಧಿ ಶಿಕ್ಷೆ
ತುಮಕೂರು: ಅದು ಬರೊಬ್ಬರಿ 14 ವರ್ಷಗಳ ಹಿಂದೆ ನಡೆದಿದ್ದ ದಲಿತ ಮಹಿಳೆಯ ಭರ್ಬರ ಕೊಲೆ ಪ್ರಕರಣ. ರಕ್ತದ ಮಡುವಿನಲ್ಲಿ ನರಳಾಡಿ ಪ್ರಾಣಬಿಟ್ಟಿದ್ದ ಆಕೆಗೆ ಇಂದು ನ್ಯಾಯಾಲಯ ನೀಡಿದ ತೀರ್ಪಿನಿಂದ ಶಾಂತಿ ಸಿಕ್ಕಂತಾಗಿದೆ.
ಇಡೀ ರಾಜ್ಯಾದ್ಯಂತ ಸದ್ದು ಮಾಡಿದ್ದ ಡಾಬಾ ಹೊನ್ನಮ್ಮ ಕೊಲೆ ಪ್ರಕರಣ..!
ಯಸ್.. ಅದು 2010 ರ ಜೂನ್ 28 ರಂದು ಸಂಜೆ 7.30 ವೇಳೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಬಳಿಯ ಗೋಪಾಲಪುರ ಗ್ರಾಮದಲ್ಲಿ ನಡೆದಿದ್ದ ಡಾಬಾ ಹೊನ್ನಮ್ಮ ಕೊಲೆ. ಆ ಭೀಕರ ಕೊಲೆ ಪ್ರಕರಣ ಇಡೀ ರಾಜ್ಯಾದ್ಯಂತ ಭಾರೀ ಸದ್ದು ಮಾಡಿತ್ತು. ಕೊಲೆ ಪ್ರಕರಣವನ್ನ ಖಂಡಿಸಿ ಇಡೀ ರಾಜ್ಯಾದ್ಯಂತ ದಲಿತ ಪರ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ, ಹೋರಾಟಗಳನ್ನ ಮಾಡಿದ್ರು. ಸತತ 14 ವರ್ಷಗಳಿಂದ ಪ್ರಕರಣವನ್ನ ವಿಚಾರಣೆ ನಡೆಸಿದ ತುಮಕೂರಿನ 3 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಮಹತ್ವದ ಆದೇಶ ನೀಡಿ ಕೊಲೆಗೈದಿದ್ದ 21 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದೆ.