ಮಾಜಿ ಬಾಯ್‌ಫ್ರೆಂಡ್‌ನ ಬಿಟ್‌ಕಾಯಿನ್‌ ಇದ್ದ ಹಾರ್ಡ್‌ಡ್ರೈವ್‌ ಕಸದ ಗಾಡಿಗೆ ಎಸೆದ ಯುವತಿ, ಇದರ ಮೌಲ್ಯ 5900 ಕೋಟಿ!

ಮಾಜಿ ಬಾಯ್‌ಫ್ರೆಂಡ್‌ನ 8 ಸಾವಿರ ಬಿಟ್‌ಕಾಯಿನ್‌ಗಳಿದ್ದ ಹಾರ್ಡ್‌ಡ್ರೈವ್‌ಅನ್ನು ಅಕಸ್ಮಾತ್ ಕಸದ ಗಾಡಿಗೆ ಎಸೆದಿದ್ದಾಗಿ ಯುವತಿ ಹೇಳಿಕೊಂಡಿದ್ದಾರೆ. ಈ ಹಾರ್ಡ್‌ಡ್ರೈವ್‌ ವೇಲ್ಸ್‌ನ ನ್ಯೂಪೋರ್ಟ್‌ನಲ್ಲಿರುವ ಕಸದ ರಾಶಿಯಲ್ಲಿದೆ ಎಂದು ನಂಬಲಾಗಿದೆ.

 

Ex Girlfriend Disposes of Hard Drvive Containing 8k Bitcoin Worth 5900 crore san

ನವದೆಹಲಿ (ನ.28): ಮಾಜಿ ಬಾಯ್‌ಫ್ರೆಂಡ್‌ನ 8 ಸಾವಿರ ಬಿಟ್‌ ಕಾಯಿನ್‌ಗಳಿದ್ದ ಹಾರ್ಡ್‌ಡ್ರೈವ್‌ಅನ್ನು ನಾನು ಅಚಾನಕ್‌ ಆಗಿ ಕಸದ ಗಾಡಿಗೆ ಎಸೆದಿದ್ದೆ ಎಂದು ಯವತಿಯೊಬ್ಬಳು ಹೇಳಿಕೊಂಡಿದ್ದಾಳೆ. 8 ಸಾವಿರ ಬಿಟ್‌ಕಾಯಿನ್‌ನ ಸದ್ಯದ ಮೌಲ್ಯ 5900 ಕೋಟಿ ರೂಪಾಯಿ ಆಗಿದೆ. ಇದರ ಬೆನ್ನಲ್ಲಿಯೇ ಯುವತಿಯ ಹೇಳಿಕೆ ಹೊಸ ಸಂಚಲನ ಸೃಷ್ಟಿಸಿದೆ. ಪ್ರಸ್ತುತ ಈ ಹಾರ್ಡ್‌ಡ್ರೈವ್‌ ವೇಲ್ಸ್‌ನ ನ್ಯೂಪೋರ್ಟ್‌ನಲ್ಲಿರುವ 1 ಲಕ್ಷ ಟನ್‌ ಕಸದ ರಾಶಿಯ ಒಳಗೆ ಸಿಕ್ಕಿಹಾಕಿಕೊಂಡಿದೆ ಎಂದು ನಂಬಲಾಗಿದೆ. ಜೇಮ್ಸ್ ಹೋವೆಲ್ಸ್ ಅವರ ಮಾಜಿ ಗೆಳತಿ ಹಾಲ್ಫಿನಾ ಎಡ್ಡಿ-ಇವಾನ್ಸ್ ಈ ಹೇಳಿಕೆ ನೀಡಿದ್ದಾರೆ. ಮನೆಯನ್ನು ಕ್ಲೀನ್‌ ಮಾಡುವ ವೇಳೆ ಈ ಹಾರ್ಡ್‌ಡ್ರೈವ್‌ಅನ್ನು ನಾನು ಅಕಸ್ಮಾತ್‌ ಆಗಿ ಕಸದ ಗಾಡಿಗೆ ಹಾಕಿದ್ದೆ ಎಂದು ತಿಳಿಸಿದ್ದಾರೆ. ಆ ಬಳಿಕ ಕಸದ ಗುಡ್ಡೆ ಇರುವ ತುದಿಗೆ ಒಂದು ಬ್ಯಾಗ್‌ ತೆಗೆದುಕೊಂಡು ಹೋಗುವಂತೆ ಆತ ನನ್ನ ಬೇಡಿಕೊಂಡಿದ್ದ. ಆದರೆ, ಆ ಬ್ಯಾಗ್‌ನಲ್ಲಿ ಏನಿತ್ತು ಅನ್ನೋದೇ ನನಗೆ ಗೊತ್ತಿರಲಿಲ್ಲ. ಅದನ್ನು ಕಳೆದುಕೊಂಡಿದ್ದು ನನ್ನ ತಪ್ಪಾಗಿರಲಿಲ್ಲ ಎಂದು ಹೇಳಿದ್ದಾರೆ.

ಜೇಮ್ಸ್ ಹೋವೆಲ್ಸ್ ಜೊತೆ ಎರಡು ಮಕ್ಕಳನ್ನ ಹೊಂದಿರುವ ಎಡ್ಡಿ-ಇವಾನ್ಸ್, ಆತನ ಸಂಪತ್ತಿನಲ್ಲಿ ಒಂದು ಬಿಡಿಗಾಸು ನನಗೆ ಬೇಡ ಎಂದು ಆಕೆ ಸ್ಪಷ್ಟಪಡಿಸಿದ್ದಾಳೆ. 'ಆತ ಇದನ್ನು ಹುಡುಕುತ್ತಾನೆ ಎನ್ನುವ ವಿಶ್ವಾಸವಿದೆ. ಇದರಲ್ಲಿ ನನಗೆ ಒಂದು ಪೈಸೆಯೂ ಬೇಡ. ಆದರೆ, ಈ ವಿಚಾರ ಬಗ್ಗೆ ಆತ ಇನ್ನೆಲ್ಲೂ ಮಾತನಾಡದೇ ಇದ್ದರೆ ಸಾಕು. ಇದು ಆತನ ಮಾನಸಿಕ ಆರೋಗ್ಯಕ್ಕೆ ಸಹಾಯ ಮಾಡೋದಿಲ್ಲ' ಎಂದಿದ್ದಾರೆ.

ಆದರೆ, ಈ ನಿಧಿ ಹುಡುಕಾಟವನ್ನು ಕೈಬಿಡುವ ಯಾವುದೇ ಗುರಿ ತಮಗಿಲ್ಲ ಎಂದು ಜೇಮ್ಸ್‌ ಹೋವೆಲ್ಸ್‌ ಹೇಳಿದ್ದಾರೆ. ಈಗಾಗಲೇ ನ್ಯೂಪೋರ್ಟ್‌ ಸಿಟಿ ಕೌನ್ಸಿಲ್‌ ವಿರುದ್ಧ 4900 ಕೋಟಿ ರೂಪಾಯಿಯ ಮೊಕದ್ದಮೆಯನ್ನೂ ಹೂಡಿಕೆ ಮಾಡಿದ್ದಾರೆ. ಲ್ಯಾಂಡ್‌ಫಿಲ್‌ಗೆ ತಮಗೆ ಪ್ರವೇಶ ನೀಡಲು ನಿರಾಕರಿಸುತ್ತಿರುವ ಕಾರಣಕ್ಕೆ ಈ ದಾವೆ ಹೂಡಿದ್ದಾರೆ. ಈ ನಿಧಿ ಹುಡುಕಾಟ ಸದ್ಯಕ್ಕೆ ಮುಕ್ತಾಯ ಕಾಣುವ ಲಕ್ಷಣ ಕಾಣುತ್ತಿಲ್ಲ. ಇದರ ಮೌಲ್ಯ ದಿನದಿಂದ ದಿನಕ್ಕೆ ಏರುತ್ತಿದೆ ಎಂದು ಹೇಳಿದ್ದಾರೆ.

'ಅಜ್ಮೇರ್‌ ದರ್ಗಾ ಮೂಲತಃ ಶಿವ ದೇವಸ್ಥಾನ..' ಅರ್ಜಿ ಪುರಸ್ಕರಿಸಿದ ರಾಜಸ್ಥಾನ ಕೋರ್ಟ್‌, ನೋಟಿಸ್‌ ಜಾರಿ

ಹೇಗಾದರೂ ಮಾಡಿ ಹಾರ್ಡ್‌ಡ್ರೈವ್‌ಅನ್ನು ವಾಪಾಸ್‌ ಪಡೆದುಕೊಳ್ಳಲೇಬೇಕು ಎಂದಿರುವ ಹೋವೆಲ್ಸ್‌, ತನ್ನ ಬಿಟ್‌ಕಾಯಿನ್ ಮೌಲ್ಯದ ಶೇ. 10ರಷ್ಟನ್ನು ನ್ಯೂಪೋರ್ಟ್‌ಅನ್ನು ಇಂಗ್ಲೆಂಡ್‌ನ ದುಬೈ ಅಥವಾ ಲಾಸ್‌ವೇಗಾಸ್‌ ಆಗಿ ಬದಲಾಯಿಸಲು ನೀಡುವುದಾಗಿ ತಿಳಿಸಿದ್ದಾರೆ.  ವಿವಾದದ ಬಗ್ಗೆ ಕಾನೂನು ಪ್ರಕ್ರಿಯೆಗಳನ್ನು ಡಿಸೆಂಬರ್ ಆರಂಭದಲ್ಲಿ ನಿಗದಿಪಡಿಸಲಾಗಿದೆ.

Chitradurga: 20 ವರ್ಷದ ಯುವತಿಗೆ 40ರ ಅಂಕಲ್‌ ಜೊತೆ ಲವ್‌-ಮದುವೆ; ಅಳಿಯನ ಜೀವ ತೆಗೆದ ಪೋಷಕರು!

ಇನ್ನೊಂದೆಡೆ ನ್ಯೂಪೋರ್ಟ್‌ ಸಿಟಿ ಕೌನ್ಸಿಲ್‌ ತನ್ನ ನಿರ್ಧಾರಕ್ಕೆ ಬದ್ಧವಾಗಿದೆ. ಪರಿಸರ ಕಾಳಜಿಯನ್ನು ಕೌನ್ಸಿಲ್‌ ಮುಂದೆ ಇಟ್ಟಿದೆ. ಪರಿಸರದ ಕಾಳಜಿಯ ಕಾರಣಕ್ಕೆ ಲ್ಯಾಂಡ್‌ಫಿಲ್‌ಅನ್ನು ಅಗೆಯುವುದು ಸಾಧ್ಯವೇ ಇಲ್ಲ. ಹಾಗೇನಾದರೂ ಮಾಡಿದರೆ, ಇದು ಸುತ್ತಲ ಪರಿಸರದ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರುತ್ತದೆ ಎಂದು ಹೇಳಿದೆ.

 

Latest Videos
Follow Us:
Download App:
  • android
  • ios