ಬೆಂಗಳೂರು (ಮಾ.21):   ಅಡುಗೆ ತಯಾರಿಸುವ ವಿಚಾರಕ್ಕೆ ಯುವಕರಿಬ್ಬರ ನಡುವಿನ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಚಾಕುವಿನಿಂದ ಇರಿದು ಪಶ್ವಿಮ ಬಂಗಾಳದ ಮೂಲದ ಯುವಕನ ಬರ್ಬರ ಹತ್ಯೆ  ಮಾಡಲಾಗಿದೆ. 

ಜೆ.ಪಿ.ನಗರದ ವಾಲ್ ಸ್ಟ್ರೀಟ್ ಪಬ್ ನಲ್ಲಿ ಸಾಗರ್ (22) ಎಂಬ ಯುವಕನ ಕೊಲೆ ಮಾಡಲಾಗಿದೆ. ಶನಿವಾರ  ತಡರಾತ್ರಿ ಘಟನೆ ನಡೆದಿದೆ.  

ಆಸಿಡ್ ಲಾರಿ ಪಲ್ಟಿ : ಇಬ್ಬರು ಸಜೀವ ದಹನ

ಪಬ್ ನಲ್ಲಿ ಶೆಫ್ ಗಳಾಗಿ‌ ಕೆಲಸ ಮಾಡುತ್ತಿದ್ದ  ಸಾಗರ್ ನನ್ನು ಮೌಸಿಕ್  ಎಂಬ ಯುವಕ ಹತ್ಯೆ ಮಾಡಿದ್ದಾನೆ. ನಿನ್ನೆ ರಾತ್ರಿ ಅಡುಗೆ ರೆಡಿ ಮಾಡುವ ವಿಚಾರಕ್ಕೆ ಸಾಗರ್ ಹಾಗೂ ಮೌಸಿಕ್ ಮಧ್ಯೆ ಗಲಾಟೆ ಆಗಿದೆ.  ಸರಿಯಾಗಿ ಕೆಲಸ ಮಾಡಲ್ಲ ಎಂದು ಆರೋಪಿ‌ ಮೌಸಿಕ್ ಮೇಲೆ ಸಾಗರ್ ಹಲ್ಲೆ ಮಾಡಿದ್ದು, ಈ ವೇಳೆ ಸ್ಥಳದಲ್ಲಿದ್ದ ಚಾಕುವಿನಿಂದ ಸಾಗರ್ ನ ಹೊಟ್ಟೆ ಹಾಗೂ ಎದೆಭಾಗಕ್ಕೆ ಸಾಗರ್ ಇರಿದಿದ್ದಾನೆ. 

ಕೂಡಲೇ ಗಾಯಾಳು ಸಾಗರನನ್ನ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾಗರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.  

ಘಟನೆಯ ನಂತರ ಆರೋಪಿ ಮೌಸಿಕ್ ಸ್ಥಳದಿಂದ ಪರಾರಿಯಾಗಿದ್ದಾನೆ.  ಸ್ಥಳಕ್ಕೆ ಜೆಪಿ‌ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ಮೌಸಿಕ್‌ಗಾಗಿ ಹುಡುಕಾಟ ನಡೆಸಿದ್ದಾರೆ.