Dharwad ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ವೇತನ ತಾರತಮ್ಯ
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ವೇತನ ತಾರತಮ್ಯ ಮತ್ತೆ ಮುಂದುವರಿದಿದೆ. ರಾಜ್ಯದ 635 ವಿಶ್ವವಿದ್ಯಾಲಯಗಳಂತೆ ವೇತನ ಪರಿಷ್ಕರಣೆ ಹಾಗೂ ಪದನಾಮ ಬದಲಾವಣೆ ಬೇಡಿಕೆಗೆ ಕ್ಯಾರೇ ಅನ್ನುತ್ತಿಲ್ಲ.
ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್
ಧಾರವಾಡ (ಮೇ.25): ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ನಗರದ ಕರ್ನಾಟಕ ವಿಶ್ವವಿದ್ಯಾಲಯವು (Karnataka University dharwad - KUD) ಅತಿಥಿ ಉಪನ್ಯಾಸಕರು ( Guest Faculty), ಸಹಾಯಕ ಉಪನ್ಯಾಸಕರ ( Assistant Professor ) ವೇತನ ತಾರತಮ್ಯ (Wage) ಮುಂದುವರಿಸಿದೆ.
ರಾಜ್ಯದ 635 ವಿಶ್ವವಿದ್ಯಾಲಯಗಳಂತೆ (University) ವೇತನ ಪರಿಷ್ಕರಣೆ ಹಾಗೂ ಪದನಾಮ ಬದಲಾವಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಡಳಿತ ಮಂಡಳಿ ಸೊಪ್ಪು ಹಾಕುತ್ತಿಲ್ಲ. ಕವಿವಿಯಲ್ಲಿ ಸಹಾಯಕ ಹಾಗೂ ಸಹ ಪ್ರಾಧ್ಯಾಪಕರ ನೇಮಕಾತಿ (Recruitment) ಗಗನ ಕುಸುಮವಾಗಿದೆ. ಇದರಿಂದಾಗಿ ಹಲವು ವರ್ಷಗಳಿಂದ ಜಿಎಸ್ ಹಾಗೂ ಟಿಎಗಳು ಗುತ್ತಿಗೆ ಆಧಾರದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿ, ಸ್ನಾತಕೋತ್ತರ ಕೇಂದ್ರಗಳು ಮತ್ತು ಸಂಲಗ್ನ ಮಹಾವಿದ್ಯಾಲಯಗಳಲ್ಲಿ ಕಾಯಂ ಪಾಧ್ಯಾಪಕರು ವಿರಳ, ಬಹುತೇಕ ವಿಭಾಗಗಳಲ್ಲಿ ಕೆಲವೇ ಕಾಯಂ ಪಾಧ್ಯಾಪಕರನ್ನು ಹೊರತುಪಡಿಸಿದರೆ ಅತಿಥಿ ಉಪನ್ಯಾಸಕರು, ನಿದದಾಯಕ ಉಪನ್ಯಾಸಕರೇ ನಿರ್ವಹಿಸುತ್ತಿದ್ದಾರೆ. ಜವಾಬ್ದಾರಿಗೆ ಕೊಡುತ್ತಿರುವ ಮಾಸಿಕ ವೇತನ ರಾಜ್ಯದ ಬೇರೆ ವಿಶ್ವವಿದ್ಯಾಲಯಗಳಿಗೆ ಹೋಲಿಸಿದರೆ ತೀರ ಕನಿಷ್ಠವಾಗಿದೆ.
CHAMARAJANAGARA ಕೆರೆ ತುಂಬಿದ್ದಕ್ಕೆ ಕ್ರೆಡಿಟ್, ಕಾಂಗ್ರೆಸ್-ಬಿಜೆಪಿ ಕೆಸರೆರಚಾಟ
ಅಥಿತಿ ಉಪನ್ಯಾಸಕರಿಗೆ ಮಾಸಿಕ 18,000 ಸಾವಿರ ವೇತನ ನೀಡಲಾಗುತ್ತಿದೆ. ಪಿಎಚ್.ಡಿ (PhD) ಸೆಟ್ ನೆಟ್ ತೇರ್ಗಡೆಯಾಗಿ ಸಹಾಯಕ ಪ್ರಾಧ್ಯಾಪಕರಾಗಲು ಅರ್ಹತೆ ಹೊಂದಿದವರಿದ್ದರೂ ಅವರಿಗೆ ನೀಡುತ್ತಿರುವುದು ಮಾಸಿಕ 28,000 ರೂ. ಮಾತ್ರ. ಬೇರೆ ವಿಶ್ವವಿದ್ಯಾಲಯಗಳಂತೆ ವೇತನ ಪರಿಷ್ಕರಣೆಗೆ ಒತ್ತಾಯಿಸಿ ಹಲವು ಬಾರಿ ಬೀದಿಗಿಳಿದು ಹೋರಾಟ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಮೇಲಿಂದ ಮೇಲೆ ಮನವಿ ಪತ್ರ ಸಲ್ಲಿಸಿದರೂ ಆಡಳಿತಾಧಿಕಾರಿಗಳು ಸರ್ಕಾರಕ್ಕೆ ರವಾನಿಸಿ ಹೈ ತೊಳೆದುಕೊಳ್ಳುತ್ತಿದ್ದಾರೆ.
ಯುಜಿಸಿ ನಿಯಮ ಉಲ್ಲಂಘನೆ : ಯುಜಿಸಿ ( University Grants Commission - UGC) 2019ರಲ್ಲಿ ಆದೇಶ ಹೊರಡಿಸಿದ್ದು, ಅದರನ್ವಯ ಮಾಸಿಕ 55,000 ವೇತನ ಕರ್ನಾಟಕ ವಿಶ್ವವಿದ್ಯಾಲಯವು ವೇತನ ನಿಗದಿಪಡಿಸಿದೆ, ಅದರ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ನಿಯಮಾವಳಿಗಳನ್ನು ಉಲ್ಲಂಘಿಸುತ್ತಲೇ ಬಂದಿದೆ. ರಾಜ್ಯದ ಹಲವು ವಿಶ್ವವಿದ್ಯಾಲಯಗಳು ಯುಜಿಸಿ ನಿಗದಿಪಡಿಸಿದ ವೇತನಕ್ಕೆ ಹತ್ತಿರದ ಸಂಬಳ ನೀಡುತ್ತಿವೆ. ಅಲ್ಲದೆ, ಅತಿಥಿ ಉಪನ್ಯಾಸಕರು, ಸಹಾಯಕ ಉಪನ್ಯಾಸಕರ ಪದನಾಮವನ್ನೂ ಬದಲಿಸಿವೆ. ಆ ರೀತಿ ಅತಿಥಿ ಉಪನ್ಯಾಸಕ ಬದಲು ಹೊಸ ಹೆಸರು ಮತ್ತು ಬೋಧನಾ ಸಹಾಯಕ ಬದಲು ಸಹಾಯಕ ಪ್ರಾಧ್ಯಾಪಕ ಎಂದು ಪದನಾಮ ಬದಲಿಸಬೇಕು ಎಂದು ಸಂಘ ಒತ್ತಾಯಿಸಿದ್ದಾರೆ.
Chikkamagaluru ಧರ್ಮಸ್ಥಳದ ಬಾಗಿಲು ಬಡಿದ ನಗರಸಭೆ ವಿವಾದ
ಡಾ. ನಿಟ್ಟೂರು ಶಿವಸೋಮಣ್ಣ ಅಧ್ಯಕ್ಷ, ಕವಿವಿ ಸಹಾಯಕ ಉಪನ್ಯಾಸಕ: ಸಹಾಯಕ ಹಾಗೂ ಪ್ರಾಧ್ಯಾಪಕರಾಗುವ ಎಲ್ಲ ಅರ್ಹತೆ ಇದ್ದರೂ ವಿಶ್ವವಿದ್ಯಾಲಯಗಳಲ್ಲಿ ಕಾಯಂ ನೇಮಕಾತಿ ಆಗುತ್ತಿಲ್ಲ. ಅತಿಥಿ ಪಟ್ಟ ನೀಡಿ ಕಾರ್ಮಿಕರ ರೀತಿ ದುಡಿಸಿಕೊಳ್ಳುವುದು ಮುಂದುವರಿದಿದೆ. ಕಡಿಮೆ ವೇತನ ಮತ್ತು ಸೇವಾ ಭದ್ರತೆ ಇಲ್ಲದೆ ಹಲವರು ಖಿನ್ನತೆಗೆ ಒಳಗಾಗುತ್ತಿದ್ದಾರೆ. ಬೇರೆ ವಿವಿಗಳಂತೆ ಕವಿವಿ ವೇತನ ಪರಿಷ್ಕರಿಸದಿದ್ದರೆ ಮೇ 30ರ ನಂತರ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.