ಯಾರೇ ಇರಲಿ ಬಹಳ ದಿನಗಳ ಕಾಲ ಎಲ್ಲರನ್ನು ಮೋಸ ಮಾಡಲು ಆಗುವು ದಿಲ್ಲ. ನನ್ನ 45 ವರ್ಷದ ರಾಜಕಾರಣದಲ್ಲಿ ನಾಕಂಡಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ಮುತ್ಸದ್ದಿ. ಅಂಥವರ ಮೇಲೆ ಆರೋಪ ಬಂದಿದೆ. ಅವರು ಮಾಡಿದ್ದಾರೋ ಇಲ್ಲವೋ ನಮಗೆ ಗೊತ್ತಿಲ್ಲ. ಈಗಾಗಲೇ ತನಿಖೆಗೆ ರಾಜ್ಯಪಾಲರು ಆದೇಶಿಸಿದ್ದಾರೆ. ಕೋರ್ಟ್ ವಿಚಾರಣೆ ನಡೆಸುತ್ತಿದು ಆದೇಶ ಏನು ಬರುತ್ತದೆಯೋ ಕಾದು ನೋಡಬೇಕಿದೆ. ಪ್ರಕರಣ ಇತ್ಯರ್ಥವಾದ ಮೇಲೆ ಅವರೇ ಸಿಎಂ ಆಗಿ ಮುಂದುವರೆಯಲಿ ಎಂದ ಕೇಂದ್ರ ಸಚಿವ ವಿ. ಸೋಮಣ್ಣ  

ರಾಯಚೂರು(ಸೆ. 04): ಮುಡಾ ಹಗರಣ ನಾವು ತಿಳಿದುಕೊಂಡ ಮಟ್ಟಕ್ಕಿಂತ ಹೆಚ್ಚಿನ ಆಳವಾಗಿದ್ದು, ನ್ಯಾಯಾ ಲಯದಲ್ಲಿ ಪ್ರಕರಣದ ವಿಚಾರಣೆ ಸಾಗಿರುವುದರಿಂದ ಈ ಬಗ್ಗೆ ಜಾಸ್ತಿ ಚರ್ಚೆ ಮಾಡುವ ಅಗತ್ಯವಿಲ್ಲ. ಆದರೆ, ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಕೇಂದ್ರ ಸಚಿವ ವಿ. ಸೋಮಣ್ಣ ವ್ಯಂಗ್ಯವಾಡಿದರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿ, ಯಾರೇ ಇರಲಿ ಬಹಳ ದಿನಗಳ ಕಾಲ ಎಲ್ಲರನ್ನು ಮೋಸ ಮಾಡಲು ಆಗುವು ದಿಲ್ಲ. ನನ್ನ 45 ವರ್ಷದ ರಾಜಕಾರಣದಲ್ಲಿ ನಾಕಂಡಂತೆಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ಮುತ್ಸದ್ದಿ. ಅಂಥವರ ಮೇಲೆ ಆರೋಪ ಬಂದಿದೆ. ಅವರು ಮಾಡಿದ್ದಾರೋ ಇಲ್ಲವೋ ನಮಗೆ ಗೊತ್ತಿಲ್ಲ. ಈಗಾಗಲೇ ತನಿಖೆಗೆ ರಾಜ್ಯಪಾಲರು ಆದೇಶಿಸಿದ್ದಾರೆ. ಕೋರ್ಟ್ ವಿಚಾರಣೆ ನಡೆಸುತ್ತಿದು ಆದೇಶ ಏನು ಬರುತ್ತದೆಯೋ ಕಾದು ನೋಡಬೇಕಿದೆ. ಪ್ರಕರಣ ಇತ್ಯರ್ಥವಾದ ಮೇಲೆ ಅವರೇ ಸಿಎಂ ಆಗಿ ಮುಂದುವರೆಯಲಿ ಎಂದರು. 

ಮುಡಾ ಸುಳಿಯಲ್ಲಿ ಸಿಲುಕಿ ಚಾಮುಂಡಿ ತಾಯಿಗೆ ಶರಣಾದ ಸಿದ್ದರಾಮಯ್ಯ, ಅರ್ಚಕರಿಂದ ಕುಂಕುಮ ಹಚ್ಚಿಸಿಕೊಂಡ ಸಿಎಂ!

ನಾನು ಮೈಸೂರು ಉಸ್ತುವಾರಿ ಮಂತ್ರಿಯಾಗಿದ್ದಾಗ 7900 ನಿವೇಶನಗಳನ್ನು ಎರಡೂವರೆ ವರ್ಷದಲ್ಲಿ ಸಿದ್ದ ಮಾಡಿಸಿದೆ. ಕೋವಿಡ್ ಮುಗಿದ ಬಳಿಕ ಹರಾಜು ಹಾಕಿಸಿ 15000 ಕೋಟಿ ಆದಾಯ ಸಂಗ್ರಹಿಸಲು ನಿರ್ಧರಿಸಿದ್ದೆ. ಇದಾದ ಬೆನ್ನಲ್ಲೆ ರಾತ್ರಿ 1 ಗಂಟೆಗೆ ನನ್ನನ್ನು ಮೈಸೂರು ಉಸ್ತುವಾರಿ ಸ್ಥಾನದಿಂದಲೇ ಮಾಡಲಾಯಿತು. ಡಲಾಯಿತು ಎತ್ತಂಗಡಿ ರಾಜ್ಯದಲ್ಲಿ ಸದ್ಯ ಪರಿಸ್ಥಿತಿ ಕುದಿಯುತ್ತಿದೆ. ಇಂಥ ವೇಳೆ ಕಾಂಗ್ರೆಸ್‌ನವರು ಇನ್ನೊಂದು ಮತ್ತೊಂದು ಹೇಳಿಕೆ ನೀಡುವುದು ಸಮಂಜಸ ಅಲ್ಲ. ನಾವು ಎಷ್ಟೇ ದೊಡ್ಡವರಾದರೂ ಕಾನೂನಿನ ಎದುರು ಎಲ್ಲರೂ ಒಂದೇ ಎಂದರು.