ಬೆಂಗ್ಳೂರಲ್ಲಿ ಭಾರೀ ಮಳೆ: ಬಿಲ್ಡಿಂಗ್ ಕುಸಿದು ಇಬ್ಬರು ಕಾರ್ಮಿಕರ ದುರ್ಮರಣ

ರಾತ್ರಿ ಮಳೆಗೆ ಬಿಲ್ಡಿಂಗ್ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಈ ವೇಳೆ ಕೆಳಗೆ ರೂಮ್‌ನಲ್ಲಿ ಮಲಗಿದ್ದ ಇಬ್ಬರ ಸಾವು

Two Workers Dies Due to Building Collapsed in Bengaluru grg

ಬೆಂಗಳೂರು(ಅ.11):  ಬಿಲ್ಡಿಂಗ್‌ವೊಂದು ಕುಸಿದ ಪರಿಣಾಮ ಇಬ್ಬರು ಕೂಲಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟು ಮೂರು ಮಂದಿಗೆ ಗಂಭೀರವಾದ ಗಾಯಗಳಾದ ಘಟನೆ ನಗರದ ವೈಟ್ ಫೀಲ್ಡ್ ಬಳಿಯ ಹೂಡಿಯಲ್ಲಿ ಇಂದು(ಮಂಗಳವಾರ) ನಡೆದಿದೆ. ಮೃತ ಕೂಲಿ ಕಾರ್ಮಿಕರನ್ನ ಬಿಹಾರ ಮೂಲದ ಜೈನುದ್ದೀನ್, ಹರಮಾನ್ ಅಂತ ಗುರುತಿಸಲಾಗಿದೆ. 

ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಮೂವರನ್ನು ಬಿಲ್ಡಿಂಗ್‌ನಿಂದ ಹೊರ ತೆಗೆದಿದ್ದಾರೆ. ಬಿಎಲ್ ಆರ್ ಕಂಪನಿಗೆ ಸೇರಿದ ಕಟ್ಟಡ ತೆರವು ಮಾಡಲಾಗುತ್ತಿತ್ತು. ನಿನ್ನೆ ರಾತ್ರಿ ಮಳೆ ಬಂದ ಹಿನ್ನೆಲೆಯಲ್ಲಿ ಕಟ್ಟಡದ ಕೆಳಗಿನ ರೂಮ್‌ನಲ್ಲಿ ಕಾರ್ಮಿಕರು ಮಲಗಿದ್ದರು. ರಾತ್ರಿ ಮಳೆಗೆ ಬಿಲ್ಡಿಂಗ್ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಈ ವೇಳೆ ಕೆಳಗೆ ರೂಮ್‌ನಲ್ಲಿ ಮಲಗಿದ್ದ ಇಬ್ಬರು ಸಾವನ್ನಪ್ಪಿದ್ದಾರೆ. ಮಹಾದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

Davanagere Rains: ಭಾರೀ ಮಳೆಗೆ ಹಳ್ಳ, ರಸ್ತೆಗಳು ಮುಳುಗಡೆ

ನಗರದಲ್ಲಿ ಮಳೆಯ ಆರ್ಭಟ, 2 ಕಡೆ ಮರ ಧರೆಗೆ, ಕೆಲವೆಡೆ ತಳ ಮಹಡಿಗೆ ನುಗ್ಗಿದ ನೀರು

ನಗರದಲ್ಲಿ ಕೆಲ ದಿನಗಳಿಂದ ವಿರಾಮ ನೀಡಿದ್ದ ಮಳೆರಾಯ ಸೋಮವಾರದಿಂದ ಮತ್ತೆ ತನ್ನ ಆರ್ಭಟ ಆರಂಭಿಸಿದ್ದು, ರಸ್ತೆ, ಅಂಡರ್‌ ಪಾಸ್‌ ಹಾಗೂ ಮೇಲ್ಸೇತುವೆಗಳ ಮೇಲೆ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು.
ಕಳೆದ ಎರಡ್ಮೂರು ದಿನಗಳಿಂದ ನಗರದ ಅಲ್ಲಲ್ಲಿ ಮಳೆಯಾಗಿತ್ತು. ಆದರೆ, ಸೋಮವಾರ ಸಂಜೆ ನಗರದಾದ್ಯಂತ ವ್ಯಾಪಕ ಮಳೆಯಾಗಿದೆ. ಸಂಜೆ 5.45ರ ಸುಮಾರಿಗೆ ಶುರುವಾದ ಮಳೆ ಸುಮಾರು ಒಂದು ಗಂಟೆ ಕಾಲ ಧಾರಾಕಾರವಾಗಿ ಸುರಿತು.

ಶಿವಾನಂದ ವೃತ್ತ, ಮಲ್ಲೇಶ್ವರ, ಎಂಜಿ ರಸ್ತೆ, ಡಬ್ಬಲ್‌ ರೋಡ್‌, ಆನಂದ್‌ರಾವ್‌ ವೃತ್ತ, ಶೇಷಾದ್ರಿ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳು ಹಾಗೂ ಅಂಡರ್‌ ಪಾಸ್‌ನಲ್ಲಿ ನೀರು ನಿಂತುಕೊಂಡ ಪರಿಣಾಮ ಟ್ರಾಫಿಕ್‌ ಜಾಮ್‌ ಸಮಸ್ಯೆ ಎದುರಾಯಿತು.

ಮಳೆ ನಿಂತು ಹೋದ ಮೇಲೆ ಎಚ್ಚೆತ್ತ ಬಿಬಿಎಂಪಿ: ಬೆಂಗ್ಳೂರು ಪ್ರವಾಹ ನಿಯಂತ್ರಣಕ್ಕೆ ವಿಶ್ವ ಬ್ಯಾಂಕ್ ಎಂಟ್ರಿ..!

ಮಳೆಯಿಂದ ಶಾಂತಿನಗರದ ಬಳಿಯ ಆನೆಪಾಳ್ಯ ಹಾಗೂ ಸದಾಶಿವನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ ಸೇರಿದಂತೆ ವಿವಿಧ ಕಡೆ ಮರ ಹಾಗೂ ಮರದ ಕೊಂಬೆಗಳು ಧರೆಗುರುಳಿದ ವರದಿಯಾಗಿದೆ. ಏಕಾಏಕಿ ಭಾರೀ ಪ್ರಮಾಣ ಮಳೆ ಸುರಿದ ಪರಿಣಾಮ ತಗ್ಗುಪ್ರದೇಶದಲ್ಲಿರುವ ಕಟ್ಟಡದ ತಳ ಮಹಡಿಗೆ ಮಳೆ ನೀರು ನುಗ್ಗಿ ಅವಾಂತರ ಉಂಟಾದ ವರದಿಯಾಗಿದೆ.

ನಗರದಲ್ಲಿ ಸರಾಸರಿ 4.45 ಮಿ.ಮೀ ಮಳೆಯಾದ ವರದಿಯಾಗಿದೆ. ಮಹದೇವಪುರ ಹಾಗೂ ದಕ್ಷಿಣ ವಲಯದಲ್ಲಿ ಅತಿ ಹೆಚ್ಚಿನ ಪ್ರಮಾಣ ಮಳೆಯಾಗಿದೆ. ಅಟ್ಟೂರಿನಲ್ಲಿ ಅತಿ ಹೆಚ್ಚು 4.5 ಸೆಂ.ಮೀ ಮಳೆಯಾಗಿದೆ. ಉಳಿದಂತೆ ಕೆಎಸ್‌ಎನ್‌ಡಿಎಂ ಆವರಣದಲ್ಲಿ 3.9, ಸಂಪಗಿರಾಮನಗರ 2.9, ಬಿಳೆಕಹಳ್ಳಿ 2.7, ಪಟ್ಟಾಭಿರಾಮನಗರ ಹಾಗೂ ಬಿಟಿಎಂನಲ್ಲಿ ತಲಾ 2.65 ದೊರೆಸಾನಿಪಾಳ್ಯ 2.55, ವಿದ್ಯಾರಣ್ಯಪುರ 2.3, ರಾಜಮಹಲ್‌ ಗುಟ್ಟಹಳ್ಳಿ 1.9, ಹಂಪಿನಗರ 1.75, ಕಾಟನ್‌ ಪೇಟೆ 1.7, ಅರಕೆರೆ 1.55, ಸಾರಕ್ಕಿ 1.5, ಕೋಣನಕುಂಟೆ 1.45, ವನ್ನಾರ್‌ಪೇಟೆ 1.3, ನಂದಿನಿ ಲೇಔಟ್‌ ಹಾಗೂ ಗಾಳಿ ಆಂಜನೇಯ ದೇವಸ್ಥಾನದ ಬಳಿ ತಲಾ 1.25 ಬೇಗೂರು ಹಾಗೂ ಆಗ್ರಹಾರ ದಾಸರಹಳ್ಳಿಯಲ್ಲಿ ತಲಾ 1.2 ಸೆಂ.ಮೀ ಮಳೆಯಾದ ವರದಿಯಾಗಿದೆ.
 

Latest Videos
Follow Us:
Download App:
  • android
  • ios