Asianet Suvarna News Asianet Suvarna News

ಡಿಕೆಶಿ ನಾಡಲ್ಲಿ 25 ಎಕರೆಯಲ್ಲಿ ತಿರು​ಪತಿ ಮಾದ​ರಿ​ ದೇಗುಲ : ರಾಜ್ಯ ಸರ್ಕಾರದಿಂದ ಅಸ್ತು

ರಾಮನಗರದ ತಿರುಪತಿ ಮಾಧರಿಯಲ್ಲಿ ಬೃಹತ್ ದೇಗುಲ ನಿರ್ಮಾಣವಾಗಲಿದೆ. ಈಗಾಗಲೇ ಜಾಗ ವೀಕ್ಷಣೆಗೂ ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್  ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.

TTD  To Be Built Temple In Ramanagara
Author
Bengaluru, First Published Jan 4, 2020, 10:46 AM IST
  • Facebook
  • Twitter
  • Whatsapp

ಎಂ. ಅ​ಫ್ರೋಜ್ ಖಾನ್‌

ರಾಮ​ನ​ಗರ [ಜ.04]:  ರಾಮನಗರದಲ್ಲಿ ಸೂಕ್ತ ಜಾಗ ಸಿಗದ ಕಾರಣ ತಿರುಮಲ ತಿರುಪತಿ ಮಾದರಿಯ ದೇವಸ್ಥಾನ ನಿರ್ಮಾಣಕ್ಕೆ ಹಿಂದೇಟು ಹಾಕಿದ್ದ ತಿರುಪತಿ ದೇಗುಲ ಆಡಳಿತ ಮಂಡಳಿ (ಟಿಟಿಡಿ) ಇದೀಗ ಮತ್ತೆ ಜಮೀ​ನು ವೀಕ್ಷಿಸ​ಲು ಮುಂದಾ​ಗಿದೆ.

ಎಚ್‌.ಡಿ.​ ಕು​ಮಾ​ರ​ಸ್ವಾಮಿ ಮುಖ್ಯ​ಮಂತ್ರಿ​ಯಾ​ಗಿದ್ದ ಸಮ​ಯ​ದಲ್ಲಿ ತಿರು​ಪತಿ ದೇಗುಲ ಆಡ​ಳಿತ ಮಂಡಳಿ ರಾಮನಗರದಲ್ಲಿ ತಿರುಪತಿ ಮಾದರಿಯ ದೇಗುಲ ನಿರ್ಮಾಣ ಮಾಡುವ ಕುರಿತು ಪ್ರಸ್ತಾವ ಸಲ್ಲಿಸಿತ್ತು. ಇದ​ರಿಂದ ಉತ್ಸು​ಕ​ರಾ​ಗಿದ್ದ ಕುಮಾ​ರ​ಸ್ವಾಮಿ, ಜಮೀನು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದ​ರು.

ಜಿಲ್ಲಾ​ಡ​ಳಿ​ತಕ್ಕೆ ಮನವಿ:  ದೇಗು​ಲದ ಆಡ​ಳಿತ ಮಂಡಳಿ ದೇವಾ​ಲಯ ನಿರ್ಮಾ​ಣಕ್ಕೆ ಬೆಂಗಳೂರು - ಮೈಸೂರು ಹೆದ್ದಾರಿ ಅಥವಾ ಬೆಂಗಳೂರು - ಹಾಸನ ಹೆದ್ದಾರಿ ಸಮೀ​ಪ​ದ​ಲ್ಲಿಯೇ 15ರಿಂದ 25ಎಕರೆ ಭೂಮಿ ನೀಡು​ವಂತೆ ಜಿಲ್ಲಾ​ಡ​ಳಿ​ತಕ್ಕೆ ಮನವಿ ಮಾಡಿತ್ತು. ಅದ​ರಂತೆ ಕಂದಾಯ ಇಲಾಖೆ ಅಧಿ​ಕಾ​ರಿ​ಗಳು ಜಾಗ ಗುರು​ತಿ​ಸಲು ಸಭೆ​ಗಳ ಮೇಲೆ ಸಭೆ​ಗ​ಳನ್ನು ನಡೆ​ಸಿ​ದ್ದರು.

ದೇಗುಲ ಕಟ್ಟಲು ಆಡ​ಳಿತ ಮಂಡ​ಳಿಗೆ ಕಂದಾಯ ಇಲಾಖೆ ಕೂಟ​ಗಲ್‌, ಬಸ​ವ​ನ​ಪುರ, ಚಾಮುಂಡಿ​ಪುರ ಬಳಿಯ ಜಾಗ​ಗ​ಳನ್ನು ತೋರಿ​ಸಿತ್ತು. ಆದರೆ, ಈ ಪ್ರದೇ​ಶ​ಗಳು ಸಮ​ತಟ್ಟು ಇಲ್ಲದ ಕಾರಣ ಆಡ​ಳಿತ ಮಂಡಳಿ ನಿರಾ​ಕ​ರಿ​ಸಿತ್ತು. ಹೆದ್ದಾರಿ ಬದಿ​ಯ​ಲ್ಲಿಯೇ ಸಮ​ತ​ಟ್ಟಿನ ಜಾಗ ಬೇಕೆಂದು ಆಡ​ಳಿತ ಮಂಡಳಿ ಪಟ್ಟು ಹಿಡಿ​ದಿ​ತ್ತು.

ರಾಮನಗರ ಜಿಲ್ಲೆಗೆ ಹೊಸ ಹೆಸರು!?...

ಕಳೆದ ಒಂದೂ​ವರೆ ವರ್ಷದಿಂದ ಹುಡುಕುತ್ತಿದ್ದರೂ ಜಿಲ್ಲೆಯಲ್ಲಿ ದೇಗುಲ ನಿರ್ಮಾಣಕ್ಕೆ ಸೂಕ್ತ ಜಾಗವೇ ದೊರೆಯದ ಕಾರಣ ಜಿಲ್ಲಾ​ಡ​ಳಿ​ತವೂ ಭೂಮಿ ಹುಡು​ಕಾಟ ಪ್ರಯ​ತ್ನ​ವನ್ನು ಕೈಚೆಲ್ಲಿತ್ತು. ಆದ​ರೀಗ ಆಡ​ಳಿತ ಮಂಡಳಿ ಉಪ​ಮು​ಖ್ಯ​ಮಂತ್ರಿಗಳಾದ ರಾಮ​ನ​ಗರ ಜಿಲ್ಲಾ ಉಸ್ತು​ವಾರಿ ಸಚಿವರಾದ ಅಶ್ವತ್ಥ್ ನಾರಾ​ಯಣ್‌ ಅವ​ರಿಗೆ ರಾಮ​ನ​ಗ​ರ​ದಲ್ಲಿ ತಿರು​ಪತಿ ದೇಗುಲ ನಿರ್ಮಾ​ಣಕ್ಕೆ ಯಾವು​ದಾ​ದರೂ ಜಾಗ ಮಂಜೂರು ಮಾಡಿಸಿ​ಕೊಡು​ವಂತೆ ಕೋರಿಕೆ ಸಲ್ಲಿ​ಸಿದೆ.

ಉಪ​ಮು​ಖ್ಯ​ಮಂತ್ರಿ ಅಶ್ವತ್ಥ್ ನಾರಾ​ಯಣ್‌ ರವರು ದೇಗುಲ ನಿರ್ಮಾ​ಣ​ಕ್ಕಾಗಿ ಸೂಕ್ತ ಭೂಮಿ ತೋರಿ​ಸು​ವಂತೆ ಜಿಲ್ಲಾ​ಡ​ಳಿ​ತಕ್ಕೆ ಸೂಚನೆ ನೀಡಿ​ದ್ದಾರೆ. ಆಡ​ಳಿತ ಮಂಡಳಿ ಹೆದ್ದಾರಿ ಪಕ್ಕ ಹಾಗೂ ಸಮ​ತಟ್ಟು ಭೂಮಿಗೆ ಪಟ್ಟು ಹಿಡಿ​ಯದೆ ಬೆಟ್ಟ​ಗುಡ್ಡ ಪ್ರದೇ​ಶ​ವಾ​ದರೂ ಸರಿ ಸೂಕ್ತ​ವಾದ ಜಾಗ ತೋರಿ​ಸು​ವಂತೆ ಮನವಿ ಮಾಡಿ​ರುವ ಹಿನ್ನೆ​ಲೆ​ಯಲ್ಲಿ ಕಂದಾಯ ಇಲಾಖೆ ನಾಲ್ಕೈದು ಜಾಗ​ಗ​ಳನ್ನು ತೋರಿ​ಸಲು ಸಿದ್ಧತೆ ಮಾಡಿ​ಕೊಂಡಿದೆ.

ಷರತ್ತುರಹಿತ ಬೇಡಿಕೆ 

ಈ ಮೊದಲು ದೇವಾಲಯ ನಿರ್ಮಿಸಲು ಬೇಕಿರುವ 15ರಿಂದ 20 ಎಕರೆ ಜಾಗವನ್ನು ಹೊಂದಿಸುವುದು ಕಂದಾಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿತ್ತು. ಆದ​ರೀಗ ಆಡ​ಳಿತ ಮಂಡಳಿ ಯಾವುದೇ ಷರತ್ತು ಹಾಕ​ದಿ​ರುವ ಕಾರಣ ಅಧಿ​ಕಾ​ರಿ​ಗಳು ಭೂಮಿ ಹುಡು​ಕಾ​ಟಕ್ಕೆ ಕಾರ್ಯ​ಪ್ರ​ವೃ​ತ್ತ​ರಾ​ಗಿ​ದ್ದಾ​ರೆ.

ಯಾವ ಉದ್ದೇ​ಶಕ್ಕೆ ದೇಗುಲ ನಿರ್ಮಾ​ಣ:

ರಾಮನಗರದಲ್ಲಿ ದೇಗುಲ ನಿರ್ಮಾಣಗೊಂಡರೆ, ರಾಜ್ಯದಲ್ಲಿ ಮೊದಲ ಹಾಗು ದೇಶದ 4ನೇ ತಿರುಪತಿ ದೇವಾಲಯ ಇದಾಗಲಿದೆ. ಪುಣೆಯಲ್ಲಿ ಈಗಾಗಲೇ ತಿರುಪತಿ ದೇವಾಲಯ ಇದೆ. ಹೀಗಾಗಿ ಜಿಲ್ಲಾಡಳಿತ ಮಾತ್ರವಲ್ಲ, ಉಪ​ಮು​ಖ್ಯ​ಮಂತ್ರಿ ಅಶ್ವತ್ಥ್  ನಾರಾ​ಯಣ್‌ ಅವರ ಸಹ ಜಿಲ್ಲೆಯಲ್ಲಿ ದೇವಾಲಯ ನಿರ್ಮಿಸಲು ಉತ್ಸಕರಾಗಿದ್ದಾರೆ.

‘ಡಿ.ಕೆ.​ಶಿ​ವ​ಕು​ಮಾರ್‌ ಅವರು ಬಾಬರ್‌ ಸಂತ​ತಿಗೆ ಸೇರಿ​ದ​ವರು...

ತಿರುಮಲ ತಿರುಪತಿ ದೇವಸ್ಥಾನದ ಮಾದರಿಯಲ್ಲಿ ದೇಶದಾದ್ಯಂತ ದೇವಸ್ಥಾನ ನಿರ್ಮಾಣ, ಹಿಂದೂ ಸನಾತನ ಪರಂಪರೆಯನ್ನು ಎತ್ತಿ ಹಿಡಿಯುವ ಹಾಗೂ ಶ್ರೀ ವೆಂಕಟೇಶ್ವರ ಭಕ್ತಿ ಪಂಥವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ತಿರು​ಪತಿ ದೇಗುಲ ಆಡ​ಳಿತ ಮಂಡಲಿ ಮುಂದಡಿಯಿಟ್ಟಿದೆ. ರಾಜ್ಯ ಸರ್ಕಾರ ತಿರುಮಲ ತಿರುಪತಿ ದೇವಸ್ಥಾನ ಟ್ರಸ್ವ್‌ ಜತೆ ಕೈ ಜೋಡಿಸಿ ಈ ದೇಗುಲ ನಿರ್ಮಿಸಲಿದೆ. ಇದರ ನಿರ್ವಹಣೆಯನ್ನು ಟಿಟಿಡಿ ನೋಡಿಕೊಳ್ಳಲಿದೆ.

ತಿರುಮಲ ತಿರುಪತಿ ಮಾದರಿಯ ದೇವಸ್ಥಾನ ನಿರ್ಮಿಸಲು ರಾಮ​ನ​ಗ​ರ​ದಲ್ಲಿ ಭೂಮಿ ಒದ​ಗಿ​ಸಿ​ಕೊ​ಡು​ವಂತೆ ಉಪ​ಮು​ಖ್ಯ​ಮಂತ್ರಿ​ ಅಶ್ವತ್‌್ಥ ನಾರಾ​ಯಣ್‌ ಅವ​ರನ್ನು ಭೇಟಿ​ಯಾ​ಗಿ​ದ್ದಾರೆ. ಉಪ​ಮು​ಖ್ಯ​ಮಂತ್ರಿ​ಗಳು ನಮಗೆ ಭೂಮಿ ಗುರು​ತಿ​ಸಿ ತೋರಿ​ಸು​ವಂತೆ ಸೂಚನೆ ನೀಡಿ​ದ್ದಾರೆ. ಆಡ​ಳಿತ ಮಂಡಳಿಯವರು ಬಂದಲ್ಲಿ ಜಾಗ ತೋರಿ​ಸು​ತ್ತೇ​ವೆ.

- ಎಂ.ಎಸ್‌. ಅ​ರ್ಚನಾ, ಜಿಲ್ಲಾ​ಧಿ​ಕಾ​ರಿ​ಗಳು, ರಾಮ​ನ​ಗರ

Follow Us:
Download App:
  • android
  • ios