ರಾಮ​ನ​ಗರ [ಜ.03]: ಕನ​ಕ​ಪುರ ತಾಲೂ​ಕಿನ ಹಾರೋ​ಬೆಲೆ ಬಳಿಯ ಕಪಾಲ ಬೆಟ್ಟ​ದಲ್ಲಿ ಮುನೇ​ಶ್ವ​ರ ದೇಗು​ಲದ ಮೇಲೆ ಏಸು​ಕ್ರಿ​ಸ್ತನ ಪ್ರತಿಮೆ ಸ್ಥಾಪಿ​ಸಲು ಹೊರ​ಟಿ​ರುವ ಮಾಜಿ ಸಚಿವ ಡಿ.ಕೆ.​ಶಿ​ವ​ಕು​ಮಾರ್‌ ಮೊಘಲ್‌ ಸಾಮ್ರಾ​ಜ್ಯ​ದ ಬಾಬರ್‌ ಸಂತ​ತಿಗೆ ಸೇರಿ​ದವರು ಎಂದು ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥ್ ನಾರಾ​ಯ​ಣ​ಗೌಡ ಟೀಕಿ​ಸಿ​ದರು.

ರಾಮನಗರದಲ್ಲಿ ಮಾತ​ನಾ​ಡಿದ ಅವರು, ಬಾಬರ್‌ ದೇವ​ಸ್ಥಾ​ನ​ಗ​ಳನ್ನು ಕೆಡವಿ ಅದರ ಮೇಲೆ ಮಸೀ​ದಿ​ಗ​ಳನ್ನು ನಿರ್ಮಾಣ ಮಾಡಿ​ದನು. ಈಗ ಅದೇ ಬಾಬರ್‌ ಸಂತ​ತಿಗೆ ಸೇರಿ​ರುವ ಡಿ.ಕೆ. ​ಶಿ​ವ​ಕು​ಮಾರ್‌ ದೇಗು​ಲದ ಮೇಲೆ ಏಸು​ಪ್ರ​ತಿಮೆಯ ಪ್ರತಿ​ಷ್ಠಾ​ಪ​ನೆಗೆ ಹೊರ​ಟಿ​ದ್ದಾರೆ ಎಂದರು.

ದೇಗುಲ ಇರು​ವು​ದು ಸ್ಪಷ್ಟ :  ಬೆಟ್ಟದಲ್ಲಿ ಬಂಡೆ ಮೇಲೆ ಮುನೇ​ಶ್ವರ ದೇಗುಲ ಇರು​ವು​ದು ಸ್ಪಷ್ಟ​ವಾ​ಗಿದೆ. ಬೆಟ್ಟ​ವನ್ನು ಕಬ​ಳಿ​ಸುವ ಉದ್ದೇ​ಶ​ದಿಂದ ದೇಗು​ಲದ ಮೇಲೆಯೇ ಸ್ಲಾಬ್‌ಗಳನ್ನು ಹಾಕಿ ಏಸು ಪ್ರತಿಮೆ ನಿಲ್ಲಿ​ಸಲು ತಳ​ಪಾಯ ಸಿದ್ಧ​ಪ​ಡಿ​ಸಿ​ದ್ದಾರೆ. ದೇವ​ಸ್ಥಾ​ನ​ವನ್ನು ನಾಶ ಮಾಡಿ​ರುವ ಡಿ.ಕೆ.​ಶಿ​ವ​ಕು​ಮಾರ್‌ ಅವ​ರಿಗೆ ಶಾಪ ತಟ್ಟದೆ ಬಿಡು​ವು​ದಿಲ್ಲ ಎಂದು ಹೇಳಿ​ದರು.

ಕಂದಾಯ ಸಚಿವ ಅಶೋಕ್‌ ಅವರು ಕಪಾಲ ಬೆಟ್ಟ​ದಲ್ಲಿ 10 ಎಕರೆ ಜಾಗ ಕಪಾ​ಲ​ಬೆಟ್ಟಅಭಿ​ವೃದ್ಧಿ ಟ್ರಸ್ಟ್‌ ಮಂಜೂ​ರಾ​ಗಿ​ರುವ ಸಂಬಂಧ ದಾಖ​ಲೆ​ಗ​ಳನ್ನು ಪಡೆದು ಪರಿ​ಶೀ​ಲಿ​ಸಲು ಆದೇ​ಶಿ​ಸಿ​ದ್ದಾರೆ. ಜಾಗ ಮಂಜೂ​ರಾ​ತಿ​ಯಲ್ಲಿ ಕಾನೂನು ಉಲ್ಲಂಘನೆ ಆಗಿ​ರು​ವುದು ಸ್ಪಷ್ಟ​ವಾ​ಗಿದೆ. ಬೆಟ್ಟಕಬ​ಳಿ​ಸಲು ಹುನ್ನಾರ ಊರ್ಜಿತ ಆಗು​ವು​ದಿಲ್ಲ ಎಂದು ತಿಳಿ​ಸಿ​ದರು.

ಸಿಎಎ ಬೆಂಬ​ಲಿಸಿ ಬೃಹತ್‌ ಜನಾಂದೋ​ಲ​ನ ಜಾಥಾ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಜನ ಸಾಮಾನ್ಯರಿಗೆ ನಿಜಾಂಶ ತಿಳಿಸುವ ದಿಕ್ಕಿನಲ್ಲಿ ರಾಷ್ಟ್ರೀಯ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ವಿವಿಧ ಜನಪರ ಸಂಘಟನೆಗಳು ಜ. 4ರಂದು ನಗರದಲ್ಲಿ ಬೃಹತ್‌ ಜನಾಂದೋಲನ ಜಾಥಾ ಹಮ್ಮಿಕೊಂಡಿವೆ ಎಂದು ಅಶ್ವತ್‌್ಥ ನಾರಾಯಣ್‌ಗೌಡ ಹೇಳಿ​ದ​ರು.

ಜನವರಿ 4ರ ಬೆಳಗ್ಗೆ 10ಗಂಟೆಗೆ ನಗರದ ಐಜೂರಿನಿಂದ ಆರಂಭವಾಗುವ ಜಾಥಾ, ಕಂಪೇಗೌಡ ವೃತ್ತದ ಮಾರ್ಗವಾಗಿ, ಸರ್ಕಾರಿ ಬಸ್‌ನಿಲ್ದಾಣ, ಹಳೇ ಬಸ್‌ನಿಲ್ದಾಣ, ಮುಖ್ಯರಸ್ತೆ, ಎಂ.ಜಿ.ರಸ್ತೆ, ಕಾಮನಗುಡಿ ವೃತ್ತ ಮಾರ್ಗವಾಗಿ ಪಿಡಬ್ಲ್ಯೂಡಿ ವೃತ್ತದಲ್ಲಿ ಮುಕ್ತಾಯವಾಗಿ, ಸರ್ಕಾರಿ ಕಾಲೇಜು ಮೈದಾನದಲ್ಲಿ ಸಮಾವೇಶಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಯೇಸು ಕ್ರಿಸ್ತನ ಪೋಟೋಕ್ಕೆ ಡಿಕೆಶಿ ಮುಖ.. ಇದೆಂಥಾ ಕುಚೇಷ್ಟೆ!...

ಲೋಕಸಭೆ ಮತ್ತು ರಾಜ್ಯಸಭೆಗಳೆರಡರಲ್ಲೂ ಬಹುಮತದಿಂದ ಅಂಗೀಕಾರಗೊಂಡಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕಾಂಗ್ರೆಸ್‌ ಹಾಗೂ ಎಡಪಕ್ಷಗಳು ಈಗ ವಿರೋಧಿಸುತ್ತಿವೆ. ಆದರೆ, ಕಾಯ್ದೆ ಅನುಷ್ಠಾನಕ್ಕೂ ಮುನ್ನ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳ ನಾಯಕರನ್ನು ಒಳ​ಗೊಂಡ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚಿಸಲಾಗಿತ್ತು. ಆಗ ಯಾವುದೇ ವಿರೋಧ ಮಾಡದ ಪ್ರತಿಪಕ್ಷಗಳು, ಬಿಜೆಪಿ ಸರ್ಕಾರದ ಜನಪರ ಯೋಜನೆಗಳನ್ನು ಜೀರ್ಣಿಸಿಕೊಳ್ಳಲಾರದೆ ವಿನಾಕಾರಣ ಆರೋಪ ಮಾಡುತ್ತಿವೆ ಎಂದು ಕುಟುಕಿದರು.

ದಾರಿ ತಪ್ಪಿಸುವ ಕೆಲಸ:

ಸಿಎಎ ವಿರೋಧಿಸಿ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಹಿಂದೆ ಕಾಂಗ್ರೆಸ್‌ ಮತ್ತು ಎಡಪಕ್ಷಗಳ ಕೈವಾಡವಿದ್ದು, ಅಲ್ಪಸಂಖ್ಯಾತ ಯುವಕರು ಮತ್ತು ವಿದ್ಯಾರ್ಥಿಗಳನ್ನು ಎತ್ತಿಕಟ್ಟಿ, ಪ್ರತಿಭಟನೆ ಮೂಲಕ ದಾರಿತಪ್ಪಿಸುವ ಕೆಲಸ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ನಿಜಾಂಶ ತಿಳಿಸುವ ದಿಕ್ಕಿನಲ್ಲಿ ರಾಷ್ಟ್ರೀಯ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ವಿವಿಧ ಜನಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಜನಸಾಮಾನ್ಯರು ಸ್ವಯಂ ಪ್ರೇರಿತರಾಗಿ ಬೃಹತ್‌ ಜನಾಂದೋಲನ ಜಾಥದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅಶ್ವಥ್‌ ನಾರಾಯಣ್‌ಗೌಡ ತಿಳಿಸಿದರು.