Asianet Suvarna News Asianet Suvarna News

ಸುವರ್ಣ ನ್ಯೂಸ್ ವರದಿ ಇಂಪ್ಯಾಕ್ಟ್; ಹಾಸ್ಟೆಲ್ ಮೇಲ್ವಿಚಾರಕ ಪ್ರಸನ್ನ ಅಂಗಡಿ ವರ್ಗಾವಣೆ

ವಸತಿ ನಿಲಯದಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯಗಳ ಬಗ್ಗೆ ಸುವರ್ಣ ನ್ಯೂಸ್ ಮಾಡಿದ್ದ ವರದಿಗೆ ಎಚ್ಚೆತ್ತ ಜಿಲ್ಲಾ ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ಲಮಾಣಿ, ತಾಲೂಕಾ ಅಧಿಕಾರಿ ಬೇಟಿ ನೀಡಿ ಹಾಸ್ಟೆಲ್ ಸಮಸ್ಯ ಗಳನ್ನ ಆಲಿಸಿ ನಿನ್ನೆಯಿಂದಲೆ ಪ್ರಸನ್ನ ಅವರನ್ನ ವರ್ಗಾವಣೆ ಮಾಡಿ,ಆದೇಶ ಹೊರಡಿಸಿದ್ದಾರೆ

Suvarna News Report Impact Hostel supervisor Prasanna angadi Transfer rav
Author
First Published Jun 2, 2024, 1:46 PM IST

ವರದಿ : ಪರಮೇಶ್ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ

ಧಾರವಾಡ ಸರಕಾರಿ ಹಾಸ್ಟೆಲ್ ಗಳಿಗೆ ಬರೋದು ಬಡವರ ಮಕ್ಕಳು, ರಾಜ್ಯದ ಮೂಲೆ ಮೂಲೆಯಿಂದ ವಿದ್ಯಾಕಾಶಿ ಧಾರವಾಡಕ್ಕೆ ವಿದ್ಯ ಕಲಿಯಲು ಪ್ರತಿವರ್ಷ ಬಡ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಬರ್ತಾರೆ ಅಂತವರಗೆಂದೆ ಸರಕಾರ ಹಾಸ್ಟೆಲ್ ಗಳಲ್ಲಿ ವಸತಿ ಸೌಲಭ್ಯ ನೀಡಿ ಅವರಿಗೆ ಸಹಾಯ ಮಾಡುತ್ತಿದೆ ಆದರೆ ಎನ್ ಪ್ರಯೋಜನ ಹೇಳಿ ಹಾಸ್ಟೆಲ್ ನಲ್ಲಿ ಇರೋ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕೊಡುವ ಆಹಾರದಲ್ಲಿ ಕಳಪೆ ಮಟ್ಟದ ಆಹಾರವನ್ನ ನೀಡುತ್ತಿದ್ದಾರೆ ನಮಗೆ ನಮ್ಮ ಹಾಸ್ಡೆಲ್ ಗೆ ಇರುವ ಹಾಸ್ಟೆಲ್ ಮೇಲ್ವಿಚಾರಕ ಪ್ರಸನ್ನ ಅಂಗಡಿ ಅವರನ್ನ ತೆಗೆದು ಬೇರೆ ಮೇಲ್ವಿಚಾರಕರನ್ನ ಹಾಕಬೇಕು ಎಂದು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿ ಆಕ್ರೋಶ ಹೊರ ಹಾಕಿದ್ದರು..ಈ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಮಾಡಿತ್ತು..ಸದ್ಯ ವರದಿ ಬೆನ್ನಲ್ಲೆ ಆ ಮೇಲ್ವಿಚಾರಕ ಪ್ರಸನ್ನ ಅಂಗಡಿ ಅವರನ್ನ ವರ್ಗಾವಣೆ ಮಾಡಿ ಆದೇಶ ಮಾಡಿದ್ದಾರೆ..

ವಿದ್ಯಾರ್ಥಿಗಳ ಸಮಸ್ಯಗಳ ಬಗ್ಗೆ ಸುವರ್ಣ ನ್ಯೂಸ್ ವರದಿ ಮಾಡಿತ್ತು, ಜೊತೆಗೆ ಈ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿತ್ತು ಎಚ್ಚೆತ್ತುಕ್ಕೊಂಡು ಸ್ಥಳಕ್ಕೆ ಜಿಲ್ಲಾ ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ಲಮಾಣಿ, ತಾಲೂಕಾ ಅಧಿಕಾರಿ ಬೇಟಿ ನೀಡಿ ಹಾಸ್ಟೆಲ್ ನಲ್ಲಿರುವ ಸಮಸ್ಯ ಗಳನ್ನ ಆಲಿಸಿ ಜೊತೆಗೆ ಮೇಲ್ವಿಚಾರಕ ಪ್ರಸನ್ನ ಅಂಗಡಿ ಅವರ ಮೆಲೆ ಇರುವ ದೂರುಗಳನ್ನ ಆಲಿಸಿ ನಿನ್ನೆಯಿಂದಲೆ ಪ್ರಸನ್ನ ಅವರನ್ನ ಅಳ್ನಾವರಕ್ಕೆ ವರ್ಗಾವಣೆ ಮಾಡಿ, ಆ ಜಾಗಕ್ಕೆ ಮಹದೇವ ಬಸೆಟ್ಟಿ ಎಂಬುವರನ್ನ ನೇಮಕ ಮಾಡಿ ಆದೇಶವನ್ನ ಮಾಡಿದ್ದಾರೆ...

ಹೌದು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಅಂಡರನಲ್ಲಿ ಬರುವ ದೇವರಾಜ್ ಅರಸು ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ ಆದರೆ ಅವರಿಗೆ ಕಳೆದ ಎರಡು ವರ್ಷಗಳಿಂದ ಆ ಬಡ ವಿದ್ಯಾರ್ಥಿಗಳಿಗೆ ಸರಕಾರದಿಂದ ಕೊಡುವ ಮೂಲ ಸೌಲಭ್ಯಗಳನ್ನ ಹಾಸ್ಟೆಲ್ ಮೇಲ್ವಿಚಾರಕ ಪ್ರಸನ್ನ ಅಂಗಡಿ ನೀಡುತ್ತಿಲ್ಲ ಎಂದು ವಿದ್ಯಾರ್ಥಿಗಳು ಮೇಲ್ವಿಚಾರಕನ ವಿರುದ್ದ ದಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದರು ಜೊತೆಗೆ ತಾಲೂಕಾ ಅಧಿಕಾರಿಗಳಿಗೆ ದೂರನ್ನ ಕೂಡ ಕೊಟ್ಟಿದ್ದಾರೆ ಆದರೆ ಇಲ್ಲಿಯವರೆಗೂ ಪ್ರಸನ್ನ ಅಂಗಡಿ ವಿರುದ್ದ ಯಾವುದು ಕ್ರಮ ಕೈಗೊಂಡಿರಲಿಲ್ಲ.

ಧಾರವಾಡ: ಬಡವರ ಮಕ್ಕಳು ಬರುವ ಹಾಸ್ಟೆಲ್‌ನಲ್ಲಿ ಕಳಪೆ ಆಹಾರ; ವಾರ್ಡನ್ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ

ಇನ್ನು ಮೇ 26 ರಂದು ತಾಲೂಕಾ ಹಿಂದುಳಿದ ಕಲ್ಯಾಣಾಧಿಕಾರಿಗಳು ವಿದ್ಯಾರ್ಥಿಗಳ ಕರೆಯ ಮೇರೆಗೆ ಹಾಸ್ಟೆಲ್ ಗೆ ಬೇಟಿ ನೀಡಿದಾಗ ಮೇಲ್ವಿಚಾರಕ ಪ್ರಸನ್ನ ಅಂಗಡಿ ಅವರ ಮೆಲೆ ಸಾಕಷ್ಡು ದೂರುಗಳನ್ನ ನೀಡಿದ್ದಾರೆ..ಕಳೆದ 15 ದಿನಗಳಿಂದ ಹಾಸ್ಟೆಲ್ ಗೆ ಗೈರು ಹಾಜರಿ, ಜೊತೆಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರದೆ ಗೈರಾಗಿದ್ದಾರೆ, ಒಂದು ತಿಂಗಳಿಗೆ ಒಂದು ಸಾರಿ ಸೌಚಾಲಯವನ್ನ ಸ್ವಚ್ಚ ಮಾಡಿಸುತ್ತಿದ್ದಾರೆ, ವಿದ್ಯಾರ್ಥಿಗಳು ಕರೆ ಮಾಡಿದಾಗ ಸ್ಪಂದನೆ ಕೊಡುತ್ತಿಲ್ಲ, ಊಟದಲ್ಲಿ ಹುಳಗಳು ಬರುತ್ತಿವೆ, ಮೇಲ್ವಿಚಾರಕರ ಚೇರನಲ್ಲೆ ಬೇರೆ ಖಾಸಗಿ ವ್ಯಕ್ತಿ ಬಂದು ಆಡಳಿತ ನಡಿಸೋದು, ಅಡುಗೆ ಮಾಡುವವರು ಗುಟ್ಕಾ ತಿನ್ನುತ್ತು ಅಡಿಗೆ ಮಾಡೋದು ಇದರಿಂದ ಅಡುಗೆಯಲ್ಲಿ ಕೂದಲು, ಹುಳಗಳು ಸಾಕಷ್ಟು ಸಾರಿ ಬಂದಿವೆ, ಈ ರೀತಿಯಾಗಿ ಮೇಲ್ವಿಚಾರಕರ ಮೆಲೆ ವಿದ್ಯಾರ್ಥಿಗಳು 10 ಕ್ಕೂ ಹೆಚ್ಚು ದೂರುಗಳನ್ನ ಕೊಟ್ಟಿರುವ ಹಿನ್ನಲೆ ಸದ್ಯ ತಾಲೂಕ ಅಧಿಕಾರಿಗಳು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ..ಆದರೆ ಇದಕ್ಕೆ ಯಾವುದೆ ಪ್ರತಿಕ್ರಿಯೇ ನೀಡದೆ ಸರ್ವಾಧಿಕಾರಿಯಂತೆ ಅಧಿಕಾರವನ್ನು ದುರ್ಬಳಕೆ ಮಾಡಿಕ್ಕೊಳ್ಳುತ್ತಿದ್ಧಾರೆ ಎಂದು ವಿದ್ಯಾರ್ಥಿಗಳು ಆರೋಪ ಮಾಡಿದರು.

ಇಂಗ್ಲೀಷ್ ಟೀಚರ್ ಆಗಿ ಪಾಠ ಮಾಡಿ ಮಕ್ಕಳಲ್ಲಿ ಉತ್ಸಾಹ ತುಂಬಿದ ಜಿಲ್ಲಾಧಿಕಾರಿ ದಿವ್ಯಪ್ರಭು!

ಸದ್ಯ ಕಳೆದ ಎರಡು ವರ್ಷವಳಿಂದ ಪ್ರಸನ್ನ ಅಂಗಡಿ ಅವರ ಮೆಲೆ ಸಾಕಷ್ಟು ದೂರುಗಳಿದ್ದರು ಯಾವ ಹಿರಿಯ ಅಧಿಕಾರಿಗಳು ಕ್ರಮ ಕೈಗೊಂಡಿರಲಿಲ್ಲ ಸದ್ಯ ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಬೆನ್ನಲ್ಲೆ ಸ್ಥಳಕ್ಕೆ ಬೇಟಿ ನಿಡಿದ ಹಿಂದೂಳಿದ ವರ್ಗಗಳ ಜಿಲ್ಲಾ ಅಧಿಕಾರಿಯಾದ ಗೋಪಾಲ ಲಮಾಣಿ ಅವರ ಮೌಖಿಕ ಆದೇಶದ ಮೇರೆಗೆ  ತಾಲೂಕಾ ಅಧಿಕಾರಿಯಾದ ಶಾಂತಾ ಮರಿಗೌಡರ್ ಅವರು ಪ್ರಸನ್ನ ಅಂಗಡಿ ಅವರನ್ನ ಮೇಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಅಳ್ನಾವರಕ್ಕೆ ವರ್ಗಾವಣೆ ಮಾಡಿ ಅವರ ಜಾಗಕ್ಕೆ ಮಹಾದೇವ ಬಸೆಟ್ಟಿ ಎಂಬುವರನ್ನ ಆಯ್ಕೆ ಮಾಡಿ ಆದೇಶ ಮಾಡಿದ್ದಾರೆ...

Latest Videos
Follow Us:
Download App:
  • android
  • ios