ಧಾರವಾಡ: ಬಡವರ ಮಕ್ಕಳು ಬರುವ ಹಾಸ್ಟೆಲ್‌ನಲ್ಲಿ ಕಳಪೆ ಆಹಾರ; ವಾರ್ಡನ್ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ
ದೂರದಿಂದ ಬಡವರು ಮಕ್ಕಳು ಬರುವ ಧಾರವಾಡ ಸರ್ಕಾರಿ ಹಾಸ್ಟೆಲ್‌ನಲ್ಲಿ ಕಳಪೆ ಆಹಾರ ನೀಡುತ್ತಿದ್ದು ಇದರಿಂದ ಅನೇಕ ಆರೋಗ್ಯ ಸಮಸ್ಯೆ ಎದುರಿಸುವಂತಾಗಿದೆ ಎಂದು ವಿದ್ಯಾರ್ಥಿಗಳು ಹಾಸ್ಟೆಲ್ ವಾರ್ಡನ್ ವಿರುದ್ಧ ಪ್ರತಿಭಟನೆ ನಡೆಸಿದರು.
ವರದಿ : ಪರಮೇಶ್ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ
ಧಾರವಾಡ (ಜೂ.1): ಧಾರವಾಡ ಸರಕಾರಿ ಹಾಸ್ಟೆಲ್ ಗಳಿಗೆ ಬರೋದು ಬಡವರ ಮಕ್ಕಳು, ರಾಜ್ಯದ ಮೂಲೆ ಮೂಲೆಯಿಂದ ವಿದ್ಯಾಕಾಶಿ ಧಾರವಾಡಕ್ಕೆ ವಿದ್ಯ ಕಲಿಯಲು ಪ್ರತಿವರ್ಷ ಬಡ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಬರ್ತಾರೆ ಅಂತವರಗೆಂದೆ ಸರಕಾರ ಹಾಸ್ಟೆಲ್ ಗಳಲ್ಲಿ ವಸತಿ ಸೌಲಭ್ಯ ನೀಡಿ ಅವರಿಗೆ ಸಹಾಯ ಮಾಡುತ್ತಿದೆ ಆದರೆ ಎನ್ ಪ್ರಯೋಜನ ಹೇಳಿ ಹಾಸ್ಟೆಲ್ ನಲ್ಲಿ ಇರೋ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕೊಡುವ ಆಹಾರದಲ್ಲಿ ಕಳಪೆ ಮಟ್ಟದ ಆಹಾರವನ್ನ ನೀಡುತ್ತಿದ್ದಾರೆ ನಮಗೆ ನಮ್ಮ ಹಾಸ್ಡೆಲ್ ಗೆ ಇರುವ ಹಾಸ್ಟೆಲ್ ಮೇಲ್ವಿಚಾರಕ ಪ್ರಸನ್ನ ಅಂಗಡಿ ಅವರನ್ನ ತೆಗೆದು ಬೇರೆ ಮೇಲ್ವಿಚಾರಕರನ್ನ ಹಾಕಬೇಕು ಎಂದು ವಿದ್ಯಾರ್ಥಿಗಳು ನಿನ್ನೆ ರಾತ್ರಿ ಹಾಸ್ಟೆಲ್ ಎದುರಿಗೆ ವಾರ್ಡನ್ ವಿರುದ್ದ ದಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದರು.
ಹೌದು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ದೇವರಾಜ್ ಅರಸು ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದಾರೆ.ಆದರೆ ಅವರಿಗೆ ಕಳೆದ ಎರಡು ವರ್ಷಗಳಿಂದ ಆ ಬಡ ವಿದ್ಯಾರ್ಥಿಗಳಿಗೆ ಸರಕಾರದಿಂದ ಕೊಡುವ ಮೂಲ ಸೌಲಭ್ಯಗಳನ್ನ ಹಾಸ್ಟೆಲ್ ಮೇಲ್ವಿಚಾರಕ ಪ್ರಸನ್ನ ಅಂಗಡಿ ನೀಡುತ್ತಿಲ್ಲ ಎಂದು ವಿದ್ಯಾರ್ಥಿಗಳು ಮೇಲ್ವಿಚಾರಕನ ವಿರುದ್ದ ದಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ ಜೊತೆಗೆ ತಾಲೂಕಾ ಅಧಿಕಾರಿಗಳಿಗೆ ದೂರನ್ನ ಕೂಡ ಕೊಟ್ಟಿದ್ದಾರೆ ಆದರೆ ಇಲ್ಲಿಯವರೆಗೂ ಪ್ರಸನ್ನ ಅಂಗಡಿ ವಿರುದ್ದ ಯಾವುದು ಕ್ರಮ ಕೈಗೊಂಡಿಲ್ಲ ಅನ್ನೋ ಆರೋಪವನ್ನ ವಿದ್ಯಾರ್ಥಿಗಳು ಮಾಡುತ್ತಿದ್ದಾರೆ.
ಹಿರಿಯ ನಾಗರಿಕ ಸಮಸ್ಯೆಗೆ ಸ್ಪಂದಿಸಿದ ಜಿಲ್ಲಾ ಗ್ರಾಹಕರ ಆಯೋಗ: ಎಸ್‌ಬಿಐ ಬ್ಯಾಂಕ್‌ಗೆ ದಂಡ ವಿಧಿಸಿ ಆದೇಶ
ಇನ್ನು ಈ ಹಾಸ್ಟೆಲ್ ನಲ್ಲಿ ಒಂದೂ ರೂಮಿನಲ್ಲಿ ಮೂವರು ವಿದ್ಯಾರ್ಥಿಗಳು ಅದ್ಯಯನಕ್ಕೆ ಅನೂಕೂಲವಾಗುವಂತ ಕೋಠಡಿಗಳು ಇವೆ, ಆದರೆ ಒಂದೆ ರೂಮಿನಲ್ಲಿ 6 ಜನ ವಿದ್ಯಾರ್ಥಿಗಳನ್ನ ಹಾಕಿದ್ದಾರೆ ಇನ್ನು ರೂಮಿನ ಮೆಲೆ ಮಲಗಿಕ್ಕೊಳ್ಳೋ ವಿದ್ಯಾರ್ಥಿಗಳು ಏನಾದರೂ ಸ್ವಲ್ಪ ಯಾಮಾರಿದ್ರೂ ಪ್ಯಾನ್ ನಿಂದ ಅವರ ತಲೆ ಕಟ್ಟ ಆಗೋ ಭಯದಲ್ಲಿ ವಿದ್ಯಾರ್ಥಿಗಳು ಇದ್ದಾರೆ.ಇನ್ನು ಪ್ರತಿದಿನ ಗುಣಮಟ್ಟದ ಅಡುಗೆಯನ್ನ ವಿದ್ಯಾರ್ಥಿಗಳಿಗೆ ನೀಡುತ್ತಿಲ್ಲ ಎಂದು ವಿದ್ಯಾರ್ಥಿಗಳು ಸಾಕಷ್ಟು ದೂರುಗಳನ್ನ ಬರೆದು ಹಿರಿಯ ಅಧಿಕಾರಿಗಳಿಗೆ ಪತ್ರವನ್ನ ಕೂಡಾ ಬರೆದಿದ್ದಾರೆ ಆದರೆ ಈ ಪ್ರಸನ್ನ ಅಂಗಡಿಯ ವಿರುದ್ದ ಯಾವುದೆ ಕ್ರಮಗಳನ್ನ ಕೈಗೊಳ್ಳುತ್ತಿಲ್ಲ ಎಂದು ವಿದ್ಯಾರ್ಥಿಗಳು ಸಂಭಂದಪಟ್ಟವರ ವಿರುದ್ದ ಆಕ್ರೋಶವನ್ನ ಹೊರ ಹಾಕುತ್ತಿದ್ದಾರೆ.
ಇನ್ನು ಮೇ 26 ರಂದು ತಾಲೂಕಾ ಹಿಂದುಳಿದ ಕಲ್ಯಾಣಾಧಿಕಾರಿಗಳು ವಿದ್ಯಾರ್ಥಿಗಳ ಕರೆಯ ಮೇರೆಗೆ ಹಾಸ್ಟೆಲ್ ಗೆ ಬೇಟಿ ನೀಡಿದಾಗ ಮೇಲ್ವಿಚಾರಕ ಪ್ರಸನ್ನ ಅಂಗಡಿ ಅವರ ಮೆಲೆ ಸಾಕಷ್ಡು ದೂರುಗಳನ್ನ ನೀಡಿದ್ದಾರೆ..ಕಳೆದ 15 ದಿನಗಳಿಂದ ಹಾಸ್ಟೆಲ್ ಗೆ ಗೈರು ಹಾಜರಿ, ಜೊತೆಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರದೆ ಗೈರಾಗಿದ್ದಾರೆ, ಒಂದು ತಿಂಗಳಿಗೆ ಒಂದು ಸಾರಿ ಸೌಚಾಲಯವನ್ನ ಸ್ವಚ್ಚ ಮಾಡಿಸುತ್ತಿದ್ದಾರೆ, ವಿದ್ಯಾರ್ಥಿಗಳು ಕರೆ ಮಾಡಿದಾಗ ಸ್ಪಂದನೆ ಕೊಡುತ್ತಿಲ್ಲ, ಊಟದಲ್ಲಿ ಹುಳಗಳು ಬರುತ್ತಿವೆ, ಮೇಲ್ವಿಚಾರಕರ ಚೇರನಲ್ಲೆ ಬೇರೆ ಖಾಸಗಿ ವ್ಯಕ್ತಿ ಬಂದು ಆಡಳಿತ ನಡಿಸೋದು, ಅಡುಗೆ ಮಾಡುವವರು ಗುಟ್ಕಾ ತಿನ್ನುತ್ತು ಅಡಿಗೆ ಮಾಡೋದು ಇದರಿಂದ ಅಡುಗೆಯಲ್ಲಿ ಕೂದಲು, ಹುಳಗಳು ಸಾಕಷ್ಟು ಸಾರಿ ಬಂದಿವೆ, ಈ ರೀತಿಯಾಗಿ ಮೇಲ್ವಿಚಾರಕರ ಮೆಲೆ ವಿದ್ಯಾರ್ಥಿಗಳು 10 ಕ್ಕೂ ಹೆಚ್ಚು ದೂರುಗಳನ್ನ ಕೊಟ್ಟಿರುವ ಹಿನ್ನಲೆ ಸದ್ಯ ತಾಲೂಕ ಅಧಿಕಾರಿಗಳು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ..ಆದರೆ ಇದಕ್ಕೆ ಯಾವುದೆ ಪ್ರತಿಕ್ರಿಯೇ ನೀಡದೆ ಸರ್ವಾಧಿಕಾರಿಯಂತೆ ಅಧಿಕಾರವನ್ನು ದುರ್ಬಳಕೆ ಮಾಡಿಕ್ಕೊಳ್ಳುತ್ತಿದ್ಧಾರೆ ಎಂದು ವಿದ್ಯಾರ್ಥಿಗಳು ಆರೋಪ ಮಾಡಿದರು.
ಇಂಗ್ಲೀಷ್ ಟೀಚರ್ ಆಗಿ ಪಾಠ ಮಾಡಿ ಮಕ್ಕಳಲ್ಲಿ ಉತ್ಸಾಹ ತುಂಬಿದ ಜಿಲ್ಲಾಧಿಕಾರಿ ದಿವ್ಯಪ್ರಭು!
ಇನ್ನು ಈ ಮೇಲ್ವಿಚಾರಕ ಪ್ರಸನ್ನ ಅಂಗಡಿ ವಿರುದ್ದ ಸಾಕಷ್ಟು ಭಾರಿ ದೂರು ಸಲ್ಲಿಸಿದರು ಯಾವ ಅಧಿಕಾರಿಗಳು ಇತನ ಮೆಲೆ ಕ್ರಮ ಕೈಗೊಂಡಿಲ್ಲ,ಆದರೆ ವಿದ್ಯಾರ್ಥಿಗಳು ನಮಗೆ ಈ ಮೇಲ್ವಿಚಾರಕ ಬೇಡ, ಜೊತೆಗೆ ಅಡುಗೆ ಸಿಬ್ಬಂದಿಗಳನ್ನ ಬದಲಾವಣೆ ಮಾಡಬೇಕು ಎಂದು ಪಟ್ಟು ಹಿಡದಿದ್ದಾರೆ..ಇನ್ನು ಈ ಮೇಲ್ವಿಚಾರಕ ಸರ್ವಾಧಿಕಾರಿಯಂತೆ ನನಗೆ ಹೇಳೋರು, ಕೇಳೋರು,ಯಾರು ಇಲ್ಲ ಎಂಬ ಮನೋಭಾವೆನಯಲ್ಲಿ ಮೇಲ್ವಿಚಾರಕರು ಇದ್ದಾರೆ ಅನ್ನೋ ಆರೋಪಗಳ ಮಧ್ಯ ಹಿರಿಯ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಆ ವಿದ್ಯಾರ್ಥಿ ನಿಲಯಕ್ಕೆ ಬೇಟಿ ನೀಡಿ ಇತನ ಮೇಲೆ ಕ್ರಮ ಜರುಗಿಸುತ್ತಾರೆ ಎಂದು ಕಾದುನೋಡಬೇಕಿದೆ..