ಬಂದಿದೆ, ಕಡ್ಡಿರಹಿತ ಅಗರಬತ್ತಿ ತಯಾರಿ ಯಂತ್ರ: ಗಂಟೆಗೆ 100 ಕೆಜಿ ಅಗರಬತ್ತಿ ತಯಾರಿ
ಬಿದಿರಿನ ಆಮದು ಕಡಿಮೆ ಮಾಡಿಕೊಳ್ಳುವ ಜೊತೆಗೆ ಪರಿಸರ ರಕ್ಷಣೆಯ ಉದ್ದೇಶದಿಂದ ಸೂರತ್‌ನ ಸಂಸ್ಥೆಯೊಂದು ಬಿದಿರು ಕಡ್ಡಿರಹಿತ ಅಗರಬತ್ತಿ ತಯಾರಿಸುವ ಯಂತ್ರವನ್ನು ಅಭಿವೃದ್ಧಿಪಡಿಸಿದೆ.
ಬೆಂಗಳೂರು (ನ.25): ಬಿದಿರಿನ ಆಮದು ಕಡಿಮೆ ಮಾಡಿಕೊಳ್ಳುವ ಜೊತೆಗೆ ಪರಿಸರ ರಕ್ಷಣೆಯ ಉದ್ದೇಶದಿಂದ ಸೂರತ್‌ನ ಸಂಸ್ಥೆಯೊಂದು ಬಿದಿರು ಕಡ್ಡಿರಹಿತ ಅಗರಬತ್ತಿ ತಯಾರಿಸುವ ಯಂತ್ರವನ್ನು ಅಭಿವೃದ್ಧಿಪಡಿಸಿದೆ. ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಅಖಿಲ ಭಾರತ ಅಗರಬತ್ತಿ ಉತ್ಪಾದಕರ ಸಂಘ ಆಯೋಜಿಸಿರುವ ‘ಐಮಾ ಎಕ್ಸ್‌ಪೋ’ದಲ್ಲಿ ಈ ಯಂತ್ರಗಳು ಗಮನ ಸೆಳೆಯುತ್ತಿವೆ.
ಕಡ್ಡಿರಹಿತ ಅಗರಬತ್ತಿಯನ್ನು ಅನೇಕ ಕಂಪನಿಗಳು ತಯಾರಿಸುತ್ತಿವೆ. ಚೀನಾ ಸೇರಿದಂತೆ ವಿದೇಶದಿಂದ ಆಮದು ಮಾಡಿಕೊಂಡ ಯಂತ್ರಗಳನ್ನು ಖರೀದಿಸುತ್ತಿವೆ. ಆದರೆ ಸೂರತ್‌ನ ಕೃಷ್ಣ ಫ್ಯಾಬ್ ಟೆಕ್ (ಕೆಎಫ್‌ಟಿ) ಮತ್ತು ಕೃಷ್ಣ ಇಂಟರ್ ನ್ಯಾಷನಲ್ ಓವರ್‌ಸೀಸ್ (ಕೆಐಒ) ಸಂಸ್ಥೆಗಳು ಕಡ್ಡಿರಹಿತ ಅಗರಬತ್ತಿ ತಯಾರಿಸುವ ಯಂತ್ರವನ್ನು ಅಭಿವೃದ್ಧಿಪಡಿಸಿವೆ.
ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ: ಡಾ.ಜಿ.ಪರಮೇಶ್ವರ್
ತಮ್ಮ ಯಂತ್ರದ ಬಗ್ಗೆ ಮಾತಾಡಿದ ಕೆಐಒದ ಅಂಕಿತ್ ದೊರಾಜಿಯಾ, ಚೀನಾಕ್ಕಿಂತ ಹೆಚ್ಚು ದಕ್ಷವಾಗಿರುವ ನಮ್ಮ ಯಂತ್ರ 8 ಗಂಟೆಯಲ್ಲಿ 700ರಿಂದ 800 ಕೆ.ಜಿ. ಅಗರಬತ್ತಿ ತಯಾರಿಸಬಲ್ಲದು. ಚೀನಾದ ಯಂತ್ರಕ್ಕೆ 20 ಲಕ್ಷ ರು. ವೆಚ್ಚವಾದರೆ, ನಮ್ಮ ಯಂತ್ರ 5 ಲಕ್ಷ ರು. ಅಸುಪಾಸಿನಲ್ಲಿ ಲಭ್ಯವಿದೆ. ಕಾರ್ಮಿಕರ ಸಂಖ್ಯೆಯು ಕಡಿಮೆ ಬೇಕು. ವಿವಿಧ ಆಕೃತಿಯ ಊದುಬತ್ತಿಯನ್ನು ತಯಾರಿಸಬಹುದು ಎಂದು ಹೇಳುತ್ತಾರೆ.
ಅಗರಬತ್ತಿ ಘಮಲು: ತ್ರಿಪುರವಾಸಿನಿಯಲ್ಲಿ ಅಗರಬತ್ತಿಯ ಸಾಂಪ್ರದಾಯಿಕ ಪರಿಮಳದ ಜೊತೆಗೆ ಭಿನ್ನ ವಿಭಿನ್ನ ಪರಿಮಳ, ಸುಗಂಧ ಸೂಸುವ ಊದುಬತ್ತಿ, ಧೂಪಗಳು ಗಮನ ಸೆಳೆಯುತ್ತಿವೆ. ಮಣ್ಣಿನ ಪರಿಮಳ ಸೂಸುವುದು ಸೇರಿದಂತೆ ಸೇಬು, ಅನಾನಸ್ ಸೇರಿದಂತೆ ಇಡಿ ವಾತಾವರಣದಲ್ಲಿ ಊದುಬತ್ತಿಗಳ ಘಮಲು ಹರಡಿಕೊಂಡಿದೆ.
ಕರಾವಳಿಯ ಅಖಾಡದಲ್ಲಿ ಬಿಜೆಪಿ ವಿರುದ್ದ ತೊಡೆ ತಟ್ಟಿದ ಕಾಂಗ್ರೆಸ್
ರಾಜ್ಯದ ಅಗರಬತ್ತಿಗೆ ಡಿಮ್ಯಾಂಡ್: ಕರ್ನಾಟಕ ರಾಜ್ಯ ಅಗರಬತ್ತಿ ಉತ್ಪಾದಕರ ಸಹಕಾರ ಸಂಘದ ಸೇಲ್ಸ್ ಎಕ್ಸಿಕ್ಯೂಟಿವ್ ರಮೇಶ್ ಪ್ರಕಾರ, ರಾಜ್ಯದ ಊದುಬತ್ತಿಗೆ ದೇಶ-ವಿದೇಶದಲ್ಲಿ ವಿಶಿಷ್ಟಸ್ಥಾನವಿದೆ. ಸದ್ಯ ರಾಜ್ಯದಲ್ಲಿ ಸಾವಿರಕ್ಕಿಂತ ಹೆಚ್ಚು ಅಗರಬತ್ತಿ ಉತ್ಪಾದಕರಿದ್ದು, ಸುಮಾರು 60 ಸಾವಿರ ಜನರಿಗೆ ಉದ್ಯೋಗ ಅವಕಾಶ ಲಭಿಸಿದೆ. ಬೆಂಗಳೂರು, ಮೈಸೂರಿಗೆ ಸೀಮಿತವಾಗಿದ್ದ ಅಗರಬತ್ತಿ ಉದ್ದಿಮೆ ಇದೀಗ ದಾವಣಗೆರೆ, ಶಿವಮೊಗ್ಗ, ಹುಬ್ಬಳ್ಳಿ, ಗದಗ, ಬೀದರ್ ಜಿಲ್ಲೆಗೆ ವಿಸ್ತರಿಸಿದೆ ಎಂದು ಹೇಳಿದರು.