Asianet Suvarna News Asianet Suvarna News

Tumakuru: ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ: ಡಾ.ಜಿ.ಪರಮೇಶ್ವರ್‌

ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಮುಂದುವರೆದಿದೆ. ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರದಿಂದ ವಿಶೇಷ 16 ಕೋಟಿ ರು.ಗಳ ಅನುದಾನ ಮಂಜೂರು ಮಾಡಿಸಲಾಗಿದೆ. ಅದರಲ್ಲಿ ಇಂದು 11 ಕೋಟಿ 11 ಲಕ್ಷ 13 ಸಾವಿರ ರು.ಗಳ ಕಾಮಗಾರಿಗಳಿಗೆ ಇಂದು ಎಲ್ಲಾ ವಾರ್ಡ್‌ಗಳಿಗೂ ಚಾಲನೆ ನೀಡಲಾಗಿದೆ ಎಂದು ಶಾಸಕ ಡಾ.ಜಿ.ಪರಮೇಶ್ವರ ಹೇಳಿದರು. 

There is no need for politics in the matter of development says dr g parameshwar gvd
Author
First Published Nov 24, 2022, 8:04 PM IST

ಕೊರಟಗೆರೆ (ನ.24): ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಮುಂದುವರೆದಿದೆ. ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರದಿಂದ ವಿಶೇಷ 16 ಕೋಟಿ ರು.ಗಳ ಅನುದಾನ ಮಂಜೂರು ಮಾಡಿಸಲಾಗಿದೆ. ಅದರಲ್ಲಿ ಇಂದು 11 ಕೋಟಿ 11 ಲಕ್ಷ 13 ಸಾವಿರ ರು.ಗಳ ಕಾಮಗಾರಿಗಳಿಗೆ ಇಂದು ಎಲ್ಲಾ ವಾರ್ಡ್‌ಗಳಿಗೂ ಚಾಲನೆ ನೀಡಲಾಗಿದೆ ಎಂದು ಶಾಸಕ ಡಾ.ಜಿ.ಪರಮೇಶ್ವರ ಹೇಳಿದರು. ಪಟ್ಟಣದ 15 ವಾರ್ಡ್‌ಗಳಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ಡಾ.ಜಿ.ಪರಮೇಶ್ವರ ಶಂಕುಸ್ಥಾಪನೆ ನೆರವೇರಿಸಿದರು. ಕೊರಟಗೆರೆ ಪಟ್ಟಣದ ಅಭಿವೃದ್ಧಿಗೆ ನಾನು ಶಾಸಕ, ಮಂತ್ರಿ, ಉಪಮುಖ್ಯಮಂತ್ರಿಯಾದ ಕಾಲದಿಂದಲೂ ಕೆಲಸ ಮಾಡುತ್ತಿದ್ದೇನೆ. 2008ರಲ್ಲಿ ಶಾಸಕನಾಗಿ ಬಂದ ಕಾಲದಲ್ಲಿ ಪಟ್ಟಣ ಮುಖ್ಯ ರಸ್ತೆ ಅತ್ಯಂತ ಕಿರಿದಾಗಿದ್ದು ದಿನವೂ ಅಪಘಾತದ, ಜನರ ಪರದಾಟದ ದೂರುಗಳು ಬಂದವು. 

ಆಗ ಕೆಲ ಅಂಗಡಿ ಮಾಲೀಕರ ಮನವೊಲಿಸಿ ಕೆಲವರ ವಿರೋಧದ ನಡುವೆಯೂ ರಸ್ತೆ ಅಗಲೀಕರಣ ಮಾಡಲಾಯಿತು. ಕೆಲವರು ನನ್ನ ವಿರುದ್ಧ ಇದರ ರಾಜಕೀಯ ಲಾಭ ಪಡೆಯಲು ಕೆಲಸ ಮಾಡಿದರು, ಆದರೂ ರಸ್ತೆ ಅಗಲೀಕರಣ ಮಾಡಲಾಯಿತು, ಜೊತೆಗೆ ಬೈಪಾಸ್‌ ರಸ್ತೆಯನ್ನು ಮಾಡಿಸಲಾಯಿತು. ಈ ಮುಖ್ಯ ರಸ್ತೆಗೆ ಉಪಮುಖ್ಯಮಂತ್ರಿ ಕಾಲದಲ್ಲಿ 9 ಕೋಟಿ ವೈಟ್‌ಟ್ಯಾಪ್‌ ರಸ್ತೆ ಮಂಜೂರು ಮಾಡಿಸಲಾಯಿತು. ಆದರೆ ನಮ್ಮ ಸರ್ಕಾರ ಪತನ ನಂತರ ಬಿಜೆಪಿ ಸರ್ಕಾರ ಅದರ ಹಣ ವಾಪಸ್‌ ಪಡೆದ್ದಿತ್ತು. ನಿರಂತರ ಓಡಾಟ ಮಾಡಿ ಹಣ ಮತ್ತೆ ತಂದು ವೈಟ್‌ಟ್ಯಾಪಿಂಗ್‌ ರಸ್ತೆ ಮಾಡಿಸಲಾಗಿದೆ ಹಾಗೂ ಇನ್ನು ಮುಂದುವರಿಕೆಗೆ 7 ಕೋಟಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಕನ್ನಡ ಕೇವಲ ಅಕ್ಷರವಲ್ಲ ಅದು ನಮ್ಮ ಸಂಸ್ಕೃತಿ: ಬರಗೂರು ರಾಮಚಂದ್ರಪ್ಪ

ಪಟ್ಟಣಕ್ಕೆ 6 ಕೋಟಿಗಳ ವೆಚ್ಚದಲ್ಲಿ ಪಟ್ಟಣದಿಂದ ಮಲ್ಲೇಶಪುರ, ಕಾಮರಾಜನಹಳ್ಳಿ ಸಂಪರ್ಕ ಸೇತುವೆ, ನೂತನ ಪಟ್ಟಣ ಪಂಚಾಯತಿ ಕಚೇರಿ, ಪಟ್ಟಣದಲ್ಲಿ ಎಲ್ಲಾ ಭಾಗದಲ್ಲೂ ಸಿಸಿ ರಸ್ತೆ, ಚರಂಡಿ, ಕುಡಿಯುವ ನೀರು, ಪಟ್ಟಣದ ಜನರಿಗೆ ಹೇಮಾವತಿ ಕುಡಿಯುವ ನೀರಿನ ಯೋಜನೆ, ಈ ಯೋಜನೆಯ ಎರಡು ದೊಡ್ಡ ನೀರಿನ ಟ್ಯಾಂಕ್‌ಗಳ ಕಾಮಗಾರಿ ಮಾಡಲಾಗಿದೆ. ಇದರೊಂದಿಗೆ ಪಟ್ಟಣ ಜನತೆಗೆ ಆರೋಗ್ಯ ವಿಹಾರಕ್ಕೆ ಗೋಕುಲ ಕೆರೆ ಅಭಿವೃದ್ಧಿ, ಪ್ರವಾಸಿ ಮಂದಿರದ ಹತ್ತಿರ ಬೃಹತ್‌ ಪಾರ್ಕ್ ನಿರ್ಮಾಣ, ಬಸ್‌ಸ್ಟ್ಯಾಂಡ್ ವೃತ್ತದಲ್ಲಿ 2000 ಮಂದಿ ಕುಳಿತು ಆನಂದಿಸುವ ಕಲಾಭವನ, ವಾಣಿಜ್ಯ ಮಳಿಗೆ, ಸುಸರ್ಜಿತ ಆಸ್ಪತ್ರೆ ಸೇರಿದಂತೆ ಹಲವು ಯೋಜನೆಗಳನ್ನು ಗುರಿಯನ್ನು ಹಾಕಿಕೊಂಡಿದ್ದೇನೆ ಎಂದರು.

ಅಧ್ಯಕ್ಷೆ ಕಾವ್ಯಶ್ರೀ ರಮೇಶ್‌ ಮಾತನಾಡಿ, ಪಟ್ಟಣದ ಅಭಿವೃದ್ಧಿಗೆ 11.12 ಕೋಟಿ ವಿಶೇಷ ಅನುದಾನ ನೀಡಿರುವ ಶಾಸಕ ಡಾ.ಜಿ.ಪರಮೇಶ್ವರ್‌ ಮತ್ತು ಸರ್ಕಾರಕ್ಕೆ ಪಟ್ಟಣ ಪಂಚಾಯತಿ ವತಿಯಿಂದ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಭಾರತಿ ಸಿದ್ದಮಲ್ಲಪ್ಪ, ಸದಸ್ಯರಾದ ಕೆ.ಆರ್‌.ಓಬಳರಾಜು, ಪುಟ್ಟನರಸಯ್ಯ, ಲಕ್ಷ್ಮೇನಾರಾಯಣ, ನಾಗರಾಜು, ನಟರಾಜು, ಪ್ರದೀಪ್‌ಕುಮಾರ್‌, ನಂದಿಶ್‌, ಹೇಮಲತಾ ಮಂಜುನಾಥ್‌, ಮಂಜುಳ ಸತ್ಯನಾರಾಯಣ, ಹುಸ್ನಫರೀಯಾಕಲಿಂ, ಅನಿತಾ,ಬಲರಾಮಯ್ಯ, ಮುಖ್ಯಾಧಿಕಾರಿ ಭಾಗ್ಯಮ್ಮ, ಅಭಿಯಂತರ ಮುರಳಿ, ಆರೋಗ್ಯಾಧಿಕಾರಿ ಮಹಮದ್‌ ಹುಸೇನ್‌, ಆರ್‌ಐ ವೇಣುಗೋಪಾಲ್‌, ಸಿಬ್ಬಂದಿ ಮಹೇಶ್‌, ತುಳಸಿಕುಮಾರಿ, ನಾಗರತ್ನಮ್ಮ, ಸಾವಿತ್ರಮ್ಮ, ಶೈಲೇಂದ್ರ, ಮಹೇಶ್ವರಿ, ವನಿತಾ, ಚೈತ್ರ, ನರಸಿಂಹ, ರತ್ನಮ್ಮ, ಸಾಕಮ್ಮ, ಮಂಜುಳಮ್ಮ ಸೆರಿದಂತೆ ಇತರರು ಹಾಜರಿದ್ದರು.

Tumakuru: ಸತತ 110 ದಿನದಿಂದ ಹರಿಯುತ್ತಿರುವ ಜಯಮಂಗಲಿ ನದಿ: ರೈತರಲ್ಲಿ ಸಂತಸ

35 ವರ್ಷದ ರಾಜಕೀಯ ಜೀವನದಲ್ಲಿ ನಾನೆಂದು ಚಿಲ್ಲರೆ ರಾಜಕೀಯ ಮಾಡಿಲ್ಲ. ಅಭಿವೃದ್ಧಿ ವಿಚಾರದಲ್ಲಿ ನಾನು ಯಾರಿಗೂ ಹೆದರುವ ನಾಯಕನಲ್ಲ. ನಾನು ನನಗೋಸ್ಕರ ಕೆಲಸ ಮಾಡುತ್ತಿಲ್ಲ, ಕೊರಟಗೆರೆ ಜನತೆಗಾಗಿ ಕೆಲಸ ಮಾಡುತ್ತಿದ್ದೇನೆ. ಕೊರಟಗೆರೆ ಕ್ಷೇತ್ರದ ಜನತೆಯ ಋುಣ ನನ್ನ ಮೇಲಿದೆ. ನಾನು ಇರುವವರೆಗೂ ಅನುದಾನ ತಂದು ಕೊರಟಗೆರೆ ಜನರ ಕೆಲಸ ಮಾಡೇ ಮಾಡುತ್ತೇನೆ.
-ಡಾ.ಜಿ.ಪರಮೇಶ್ವರ್‌, ಶಾಸಕರು, ಕೊರಟಗೆರೆ

Follow Us:
Download App:
  • android
  • ios