Asianet Suvarna News Asianet Suvarna News

Uttara Kannada: ಕರಾವಳಿಯ ಅಖಾಡದಲ್ಲಿ ಬಿಜೆಪಿ ವಿರುದ್ದ ತೊಡೆ ತಟ್ಟಿದ ಕಾಂಗ್ರೆಸ್

ಕಳೆದ ವಿಧಾನಸಭಾ ಚುನಾವಣೆಯಲ್ಲಿ ತೀವ್ರ ಸೋಲನ್ನು ಅನುಭವಿಸಿದ್ದ ಕೈಪಡೆ ಇದೀಗ  ಕರಾವಳಿಯಲ್ಲಿ ಯಶಸ್ವಿ ಜನಜಾಗೃತಿ ಸಮಾವೇಶ ಹಮ್ಮಿಕೊಳ್ಳುವ ಮೂಲಕ ರಣಕಹಳೆ‌ ಮೊಳಗಿಸಿದೆ. 

Congress Outraged Against BJP For Congress Convention At Kumta gvd
Author
First Published Nov 24, 2022, 7:45 PM IST

ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್‌‌‌ ಸುವರ್ಣ ನ್ಯೂಸ್‌, ಕಾರವಾರ

ಉತ್ತರ ಕನ್ನಡ (ನ.24): ಕಳೆದ ವಿಧಾನಸಭಾ ಚುನಾವಣೆಯಲ್ಲಿ ತೀವ್ರ ಸೋಲನ್ನು ಅನುಭವಿಸಿದ್ದ ಕೈಪಡೆ ಇದೀಗ  ಕರಾವಳಿಯಲ್ಲಿ ಯಶಸ್ವಿ ಜನಜಾಗೃತಿ ಸಮಾವೇಶ ಹಮ್ಮಿಕೊಳ್ಳುವ ಮೂಲಕ ರಣಕಹಳೆ‌ ಮೊಳಗಿಸಿದೆ. ಪರೇಶ್ ಮೇಸ್ತಾ ಪ್ರಕರಣದಲ್ಲಿ ಬಿಜೆಪಿ ಅಪಪ್ರಚಾರ ಮಾಡಿದೆ ಎಂದು ಜನರಿಗೆ ಮನದಟ್ಟು ಹೊರಟಿರುವ ಕಾಂಗ್ರೆಸ್, ಬಿಜೆಪಿಯನ್ನು ಪ್ರತಿಯೊಂದು ರೀತಿಯಲ್ಲೂ ಟಾರ್ಗೆಟ್ ಮಾಡಲು ಪ್ರಾರಂಭಿಸಿದೆ. ಈ ಮೂಲಕ ಕಾಂಗ್ರೆಸ್ ಕೈ ತಪ್ಪಿರುವ ಜಿಲ್ಲೆಯನ್ನು ಮತ್ತೆ ವಶಕ್ಕೆ ತೆಗೆದುಕೊಳ್ಳಲು ಮುಂದಡಿಯಿಟ್ಟಿದೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ. 

ಹೌದು! ಪರೇಶ್ ಮೇಸ್ತಾ ಪ್ರಕರಣದಲ್ಲಿ ಸಿಬಿಐ ಬಿ ರಿಪೋರ್ಟ್ ಸಲ್ಲಿಕೆ ಮಾಡಿದ ಬೆನ್ನಲ್ಲೇ ಬಿಜೆಪಿ ವಿರುದ್ಧ ಅದನ್ನೇ ಅಸ್ತ್ರವಾಗಿಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. ಇಂದು ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಆಯೋಜಿಸಲಾಗಿದ್ದ ಬೃಹತ್ ಜನಜಾಗೃತಿ ಸಮಾವೇಶವನ್ನು ಯಶಸ್ವಿಯಾಗಿ ನಡೆಸಿ ತನ್ನ ಶಕ್ತಿ ಪ್ರದರ್ಶನ ನಡೆಸಿದ ಕಾಂಗ್ರೆಸ್, ಪರೇಶ್ ಮೇಸ್ತಾ ಪ್ರಕರಣವನ್ನೇ ಪ್ರಮುಖ ವಿಚಾರವನ್ನಾಗಿ ಬಳಸಿಕೊಂಡಿತು. ಈ ಸಮಾವೇಶಕ್ಕೆ ಚಾಲನೆ ನೀಡಿದ  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು. 

Congress Ticket: ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ಗೆ ಭಾರೀ ಕಸರತ್ತು: 33 ಅರ್ಜಿ ಸಲ್ಲಿಕೆ

ರಾಜ್ಯದಲ್ಲಿ ಜನರು ನೆಮ್ಮದಿಯಿಂದ ಜೀವನ ನಡೆಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿರುವ ಬಿಜೆಪಿ ಜನರಿಗೆ ನೀಡಿದ ಭರವಸೆಗಳಲ್ಲಿ ಯಾವುದನ್ನೂ ಈಡೇರಿಸಿಲ್ಲ. ಉತ್ತರ ಕನ್ನಡದ ಜನತೆ ನಮಗೆ ಶಕ್ತಿ ಕೊಡುತ್ತೀರೆಂದು ನಂಬಿ ಬಂದಿದ್ದೇನೆ. ಡಬಲ್ ಎಂಜಿನ್ ಸರಕಾರ ತನ್ನ ಪ್ರಣಾಳಿಕೆಯಲ್ಲಿ‌ ನೀಡಿದ ಭರವಸೆಯನ್ನೇ ಈವರೆಗೆ ಈಡೇರಿಸಿಲ್ಲ. ಕೊರೊನಾ‌‌ ಸಮಯದಲ್ಲಂತೂ ಯಾರಿಗೂ ಪರಿಹಾರ ಒದಗಿಸಿಲ್ಲ. ಮಂತ್ರಿ ಸುರೇಶ್ ಅಂಗಡಿ ಮೃತಗೊಂಡಾಗ ಅವರ‌ ಮೃತದೇಹವನ್ನು ಕೂಡಾ ಅವರ ಮನೆಗೆ ತರಿಸಲು ಕೂಡಾ ಇವರಿಗೆ ಆಗಿಲ್ಲ. 

ದಲಿತರು, ಕಾಂಗ್ರೆಸ್ ಬೆಂಬಲಿಗರು ಸೇರಿದಂತೆ 27 ಲಕ್ಷ ಮತದಾರರನ್ನು ಬಿಜೆಪಿ ಮತದಾರರ ಪಟ್ಟಿಯಿಂದಲೇ ಕೈಬಿಡುವ ಮೂಲಕ ಅನ್ಯಾಯ ಮಾಡಿದೆ. ಈ ಕುರಿತು ಎಲೆಕ್ಷನ್ ಕಮಿಷನ್‌ಗೆ ದೂರು ಕೂಡಾ ಸಲ್ಲಿಸಿ ಬಂದಿದ್ದೇನೆ. ಮತದಾರರು ಈ ಬಾರಿಗೆ ಕಾಂಗ್ರೆಸ್ ಅನ್ನು ಗೆಲ್ಲಿಸಲೇಬೇಕು ಎಂದು ಅವರು ಕರೆಕೊಟ್ಟರು.‌‌ ಇನ್ನು ಜನಜಾಗೃತಿ ಸಮಾವೇಶದಲ್ಲಿ ಭಾಗವಹಿಸಿದ್ದ ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಯು.ಟಿ.ಖಾದರ್, ವಿನಯಕುಮಾರ ಸೊರಕೆ ಸೇರಿದಂತೆ ಕಾಂಗ್ರೆಸ್ ಹಿರಿಯ ಮುಖಂಡರುಗಳು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. 

ಮಾಜಿ ಸಚಿವ ಯು.ಟಿ.ಖಾದರ್ ಮಾತನಾಡಿ, ಪರೇಶ್ ಮೇಸ್ತಾ ಪ್ರಕರಣವನ್ನ ಬಿಜೆಪಿ ಮರು ತನಿಖೆಗೆ ಹಾಕುತ್ತಿರುವುದು ಅವರಿಗೆ ನ್ಯಾಯ ಕೊಡಿಸುವ ಉದ್ದೇಶದಿಂದಲ್ಲ. ಬದಲಿಗೆ ಚುನಾವಣೆಯವರೆಗೆ ಜೀವಂತವಾಗಿರಿಸುವ ಉದ್ದೇಶದಿಂದ. ಬಿಜೆಪಿಯವರು ಮತ್ತೊಬ್ಬ ಪರೇಶ್‌ನನ್ನ ಹುಡುಕುತ್ತಿದ್ದು, ಅದಕ್ಕಾಗಿ ನಿಮ್ಮ ಸಹೋದರರನ್ನ ರಕ್ಷಿಸಿಕೊಳ್ಳುವಂತೆ ಎಚ್ಚರಿಸಲು ಈ ಜಾಗೃತಿ ಸಮಾವೇಶ ಎಂದು ಖಾದರ್ ಹೇಳಿದರು. ಬಳಿಕ ಮಾತನಾಡಿದ ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ,‌ ಬಿಜೆಪಿಯವರು ಯಾರು ಸಾಯ್ತಾರೆ, ಅದನ್ನು ಹೇಗೆ ರಾಜಕೀಯವಾಗಿ ಬಳಸಿಕೊಳ್ಳಬಹುದು ಅನ್ನೋದನ್ನ ಬಿಜೆಪಿಯವರು ಹುಡುಕುತ್ತಿದ್ದಾರೆ. 

ಸಿದ್ದರಾಮಯ್ಯ ಬರ್ತಾರಂದ್ರೆ ಜನತೆ ಭಯ ಪಡ್ತಾರೆ: ಬಿಜೆಪಿ ನಾಯಕ ನಾಗರಾಜ

ಇಂತಹ ಘಟನೆಗಳು ಮರುಕಳಿಸಬಾರದು ಅಂದ್ರೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದರು. ಒಟ್ಟಿನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್ ಟೇಕಾಫ್ ಆಗದ ಹಿನ್ನೆಲೆ ಸಿದ್ಧರಾಮಯ್ಯ ಸಮಾವೇಶಕ್ಕೆ ಗೈರಾದರೂ ಉಳಿದ ಕಾಂಗ್ರೆಸ್ ಪ್ರಮುಖರಿಂದಾಗಿ ಸಮಾವೇಶ ಮಾತ್ರ ಭರ್ಜರಿ‌ ಯಶಸ್ಸು ಕಂಡಿತ್ತು‌  ಪರೇಶ್‌ ಮೇಸ್ತಾ ಪ್ರಕರಣಕ್ಕೆ ಮಾತ್ರ ಸೀಮಿತವಾಗದೇ ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡರು ಚಾಟಿ ಬೀಸಿದ್ದು, ಈ ಮೂಲಕ ಕರಾವಳಿಯಲ್ಲಿ ಚುನಾವಣಾ ಅಖಾಡಕ್ಕೆ ಕಾಂಗ್ರೆಸ್ ತೊಡೆತಟ್ಟಿ ಬಿಜೆಪಿಯನ್ನು ಆಹ್ವಾನಿಸಿದಂತಾಗಿದೆ.

Follow Us:
Download App:
  • android
  • ios