Asianet Suvarna News Asianet Suvarna News

Council Election : SM ಕೃಷ್ಣ ಮೂಲಕ ನನ್ನ ಆಪ್ತಗೆ ಕಾಂಗ್ರೆಸ್ ಟಿಕೆಟ್‌ : ಗೊತ್ತಾಗಿ ವಜಾ ಮಾಡಿದೆ

  •  ಮಂಡ್ಯ ವಿಧಾನಪರಿಷತ್‌ ಚುನಾವಣೆಯಲ್ಲಿ ದಿನೇಶ್‌ ಗೂಳಿಗೌಡ ಕಾಂಗ್ರೆಸ್‌ ಅಭ್ಯರ್ಥಿ
  • ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ತೀವ್ರ ಅಸಮಾಧಾನ
ST Somashekar Unhappy over Mandya Congress MLC Candidate  Dinesh guligowda snr
Author
Bengaluru, First Published Nov 24, 2021, 11:44 AM IST

ಮೈಸೂರು (ನ.24): ಮಂಡ್ಯ (Mandya) ವಿಧಾನ ಪರಿಷತ್‌ ಚುನಾವಣೆಯಲ್ಲಿ (MLC Election) ತಮ್ಮ ಆಪ್ತ ಸಹಾಯಕ ದಿನೇಶ್‌ ಗೂಳಿಗೌಡ (Dinesh Guligowda) ಕಾಂಗ್ರೆಸ್‌ (Congress) ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕುರಿತು ಕೇಳಿಬರುತ್ತಿರುವ ಟೀಕೆಗಳಿಗೆ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ (St Somashekar) ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತನಗೆ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ (SM Krishna) ಅವರ ಮೂಲಕ ಕಾಂಗ್ರೆಸ್‌ ಟಿಕೆಟ್‌ ಸಿಗುತ್ತಿದೆ ಎಂದು ಆತ ಹೇಳಿಕೊಂಡಿದ್ದು, ತಕ್ಷಣ ಕರ್ತವ್ಯದಿಂದ ಆತನನ್ನು ತೆಗೆದುಹಾಕಿದ್ದಾನೆ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಮಂಗಳವಾರ ಪ್ರತಿಕ್ರಿಯಿಸಿದ ಅವರು, ನಾನು ಯಾವತ್ತೂ ಕೀಳುಮಟ್ಟದ ರಾಜಕಾರಣ ಮಾಡುವುದಿಲ್ಲ. ಬಿಜೆಪಿಯಲ್ಲಿದ್ದು ನನ್ನ ಆಪ್ತ ಸಹಾಯಕನನ್ನು ಕಾಂಗ್ರೆಸ್‌ಗೆ ಕಳುಹಿಸುವಂಥ ಹೇಯ ರಾಜಕೀಯ ಯಾವತ್ತೂ ಮಾಡಿಲ್ಲ ಎಂದಿದ್ದಾರೆ.

ಎಂಟು ದಿನದ ಹಿಂದೆ ಆತನೇ ಬಂದು, ಎಸ್‌.ಎಂ. ಕೃಷ್ಣ (SM Krishna) ಅವರ ಮೂಲಕ ಕಾಂಗ್ರೆಸ್‌ (Congress) ಟಿಕೆಟ್‌ ಸಿಗುತ್ತಿದೆ ಎಂದು ಹೇಳಿದ. ಆ ಕ್ಷಣವೇ ನಾನು ಆತನನ್ನು ಕರ್ತವ್ಯದಿಂದ ತೆಗೆದು ಹಾಕುವಂತೆ ಸರ್ಕಾರಕ್ಕೆ (Govt) ವರದಿ ಮಾಡಿದೆ. ನನಗೂ ಆತನಿಗೂ ಯಾವ ಸಂಬಂಧವೂ ಇಲ್ಲ. ನನ್ನ ಆತ್ಮ ಸಾಕ್ಷಿ ಯಾವತ್ತೂ ಪಕ್ಷ ದ್ರೋಹದ ಕೆಲಸ ಮಾಡಿಸುವುದಿಲ್ಲ. ನನ್ನ 25 ವರ್ಷದ ರಾಜಕೀಯದಲ್ಲಿ (Politics) ಯಾವುದೇ ಹೊಲಸು ರಾಜಕೀಯ (Politics) ಮಾಡಿಲ್ಲ. ಈ ವಿಚಾರದಲ್ಲಿ ಯಾರು ಏನೇ ಹೇಳಬಹುದು. ಆದರೆ ನನ್ನ ಆತ್ಮ ಸಾಕ್ಷಿ ಸರಿ ಇದೆ ಎಂದು ಸ್ಪಷ್ಟಪಡಿಸಿದರು.

ಸಚಿವ ಎಸ್‌.ಟಿ. ಸೋಮಶೇಖರ್‌ ಆಪ್ತ ಸಹಾಯಕ ದಿನೇಶ್‌ ಗೂಳಿಗೌಡ ಅವರು ಪರಿಷತ್‌ ಚುನಾವಣೆಯಲ್ಲಿ (MLC Election) ಕಾಂಗ್ರೆಸ್‌  ಟಿಕೆಟ್‌ನಿಂದ ಸ್ಪರ್ಧಿಸುತ್ತಿರುವುದು ಬಿಜೆಪಿ ಮಾತ್ರವಲ್ಲದೆ ಕಾಂಗ್ರೆಸ್‌ನಲ್ಲೂ ಅಚ್ಚರಿ ಮೂಡಿಸಿದ್ದು, ರಾಜ್ಯ ರಾಜಕೀಯದಲ್ಲಿ (Karnataka Politics) ತೀವ್ರ ಸಂಚಲನ ಮೂಡಿಸಿತ್ತು.

ಸಾಮಾನ್ಯ ಸಿಬ್ಬಂದಿಗೆ ಟಿಕೆಟ್ :  ಕೆಪಿಸಿಸಿ (KPCC)  ಕಚೇರಿಯ ಸಾಮಾನ್ಯ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸಿ ಕ್ರಮೇಣ ಮಾಧ್ಯಮ ಘಟಕದ ಅಧ್ಯಕ್ಷನ ಹುದ್ದೆವರೆಗೂ ಬೆಳೆದ ದಿನೇಶ್‌ ಗೂಳಿಗೌಡ (Dinesh Gooligowda) ಸೋಮವಾರ ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (DK Shivakumar) ಅವರಿಂದ ಮಂಡ್ಯ (Mandya) ಕ್ಷೇತ್ರಕ್ಕೆ ಬಿ-ಫಾರ್ಮ್ ಪಡೆದಾಗ ಕಚೇರಿಯ ಸಿಬ್ಬಂದಿಯಲ್ಲಿ ಅಚ್ಚರಿ, ಹರ್ಷದ ಭಾವ ಮಿಳಿತವಾಗಿತ್ತು.  ಎಸ್‌.ಎಂ. ಕೃಷ್ಣ (SM krishna) ಅವರು ಮುಖ್ಯ ಮಂತ್ರಿಯಾಗಿದ್ದ ಅವಧಿಯಲ್ಲಿ ಕೆಪಿಸಿಸಿ ಕಚೇರಿಯನ್ನು ಸಿಬ್ಬಂದಿಯಾಗಿ ಸೇರಿದ್ದ ದಿನೇಶ್‌ ಗೂಳಿಗೌಡ ಹಂತ-ಹಂತವಾಗಿ ಬೆಳೆದವರು. ಡಾ. ಜಿ. ಪರಮೇಶ್ವರ್‌ (Dr G Parameshwar) ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕೆಪಿಸಿಸಿ ಮಾಧ್ಯಮ ಘಟಕದ ಅಧ್ಯಕ್ಷರಾಗಿ ದಿನೇಶ್‌ ಕಾರ್ಯ ನಿರ್ವಹಿಸಿದ್ದರು. ಕಾಂಗ್ರೆಸ್‌ (Congres ) ಸರ್ಕಾರ ಅಧಿಕಾರಕ್ಕೆ ಬಂದ ನಂತರ ಡಾ. ಜಿ. ಪರಮೇಶ್ವರ್‌ ಅವರು ಉಪ ಮುಖ್ಯಮಂತ್ರಿಯಾದ ನಂತರ ಅವರು ಕೆಪಿಸಿಸಿ ಕಚೇರಿ ತ್ಯಜಿಸಿ ಪರಮೇಶ್ವರ್‌ ಅವರ ವಿಶೇಷಾಧಿಕಾರಿಯಾಗಿ ಕಾರ್ಯ ನಿರ್ವಹಿಸಲು ಆರಂಭಿಸಿದ್ದರು.

ಅನಂತರ ಸರ್ಕಾರದಲ್ಲಿ ಬದಲಾವಣೆಯಾದ ನಂತರ ಹಾಲಿ ಸಹಕಾರಿ ಸಚಿವ ಎಸ್‌.ಟಿ. ಸೋಮಶೇಖರ್‌ (ST Somashekar) ಅವರ ವಿಶೇಷಾಧಿಕಾರಿಯಾಗಿ ಕಾರ್ಯ ನಿರ್ವಹಣೆ ಮಾಡಿದ್ದರು. ಹೀಗಾಗಿ ಹಾಲಿ ಸಚಿವರೊಂದಿಗೆ ಇದ್ದ ದಿನೇಶ್‌ ಗೂಳಿಗೌಡ ಅವರು ಹಠಾತ್‌ ವಿಧಾನ ಪರಿಷತ್‌ ಚುನಾವಣೆಗೆ ಮಂಡ್ಯ ಕ್ಷೇತ್ರದ ಆಕಾಂಕ್ಷಿಯಾಗಿ ಕಾಣಿಸಿಕೊಂಡ ಹಲವು ಹುಬ್ಬುಗಳೇರಿದ್ದವು. ಜೆಡಿಎಸ್‌ನ  (JDS) ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಆದಿಯಾಗಿ ಹಲವರು ಈ ಬಗ್ಗೆ ಟೀಕೆಗಳನ್ನು ಮಾಡಿದ್ದರು.

ಆದರೆ, ದಿನೇಶ್‌ ಗೂಳಿಗೌಡ ಅವರಿಗೆ ಟಿಕೆಟ್‌ ನೀಡಿರುವುದನ್ನು ಸಮರ್ಥಿಸಿಕೊಂಡಿರುವ ಕಾಂಗ್ರೆಸ್‌ ನಾಯಕತ್ವವು ಕಾಂಗ್ರೆಸ್‌ ಪಕ್ಷವು ಕಚೇರಿಯ ಸಾಮಾನ್ಯ ಸಿಬ್ಬಂದಿಯಾಗಿದವರ ಸಾಮರ್ಥ್ಯ ಗುರುತಿಸಿ ಟಿಕೆಟ್‌ ನೀಡುವಷ್ಟರ ಮಟ್ಟಿಕೆ ಪ್ರಜಾತಾಂತ್ರಿಕವಾಗಿದೆ. ಆದರೆ, ಜೆಡಿಎಸ್‌ನಲ್ಲಿ ಈ ರೀತಿ ಕಾರ್ಯಕರ್ತರಿಗೆ ಅವಕಾಶ ಸಿಗುವುದು ಸುಲಭವಲ್ಲ.ಅಲ್ಲಿ ಕುಟುಂಬದ ಸದಸ್ಯರಿಗೆ ಆದ್ಯತೆ ಹೆಚ್ಚು ಎಂದೇ ಬಿಂಬಿಸಿದೆ.

Follow Us:
Download App:
  • android
  • ios