Asianet Suvarna News Asianet Suvarna News

ಮೈಸೂರು ಝೋನಿಂದ ಆನೆ ದತ್ತು ಪಡೆದ ಸಚಿವ ಸೋಮಶೇಖರ್‌

*  ಒಂದು ವರ್ಷದ ಅವಧಿಗೆ 1.75 ಲಕ್ಷ ಪಾವತಿ
*  ಮೃಗಾಲಯಕ್ಕೆ ಬರುವ ಪ್ರವಾಸಿಗರಿಗೆ ಹೊಸ ಪ್ರಾಣಿಗಳನ್ನು ತೋರಿಸಬೇಕೆಂದು ಅಧಿಕಾರಿಗಳ ಶ್ರಮ
*  ಮಲೇಷಿಯಾ ಮತ್ತು ಸಿಂಗಾಪುರದಿಂದ ತರಲಾದ ಒರಾಂಗೂಟಾನ್‌ ವೀಕ್ಷಿಸಿದ ಸಚಿವರು 

Elephant Adopted Minister ST Somashekhar from Mysuru Zoo grg
Author
Bengaluru, First Published Oct 7, 2021, 7:58 AM IST

ಮೈಸೂರು(ಅ.07): ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯದ(Mysuru Zoo) ಚಾಮುಂಡಿ ಆನೆಯನ್ನು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌(ST Somashekhar) ದತ್ತು ಸ್ವೀಕರಿಸಿದ್ದಾರೆ.

1.75 ಲಕ್ಷ ಪಾವತಿಸಿದ ಸಚಿವರು, ಒಂದು ವರ್ಷದ ಅವಧಿಗೆ ದತ್ತು ಸ್ವೀಕರಿಸಿದರು. ಬಳಿಕ ಮಲೇಷಿಯಾ ಮತ್ತು ಸಿಂಗಾಪುರದಿಂದ ತರಲಾದ ಒರಾಂಗೂಟಾನ್‌ ವೀಕ್ಷಿಸಿದರು. ಮೈಸೂರು ಮೃಗಾಲಯವು ಸುಮಾರು 50 ವರ್ಷಗಳ ಹಿಂದೆ ಒಂದು ಜೊತೆ ಒರಾಂಗೂಟಾನ್‌ ಹೊಂದಿತ್ತು. ಪ್ರವಾಸಿಗರಿಗೆ ಈ ಅಪರೂಪದ ಪ್ರಾಣಿಯನ್ನು ಮತ್ತೆ ನೋಡುವ ಅವಕಾಶ ಒದಗಿಸಲು ಮಲೇಶಿಯಾದಿಂದ ಒಂದು ಜೊತೆ ಹಾಗೂ ಸಿಂಗಾಪುರದಿಂದ ಒಂದು ಜೊತೆ ತರಿಸಿಕೊಳ್ಳಲಾಗಿದೆ. ಅಂತೆಯೇ ಅಳಿವಿನ ಹಂಚಿನಲ್ಲಿರುವ ಅಪರೂಪದ ಗೊರಿಲ್ಲಾವನ್ನು ವೀಕ್ಷಿಸಿದರು.

ಮೃಗಾಲಯದಲ್ಲಿ ಪ್ರಾಣಿಗಳ ಅನುಕೂಲಕ್ಕಾಗಿ ಕೈಗೊಂಡಿರುವ ಕಾಮಗಾರಿಯನ್ನು ವೀಕ್ಷಿಸಿದರು. ಈ ವೇಳೆ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್‌.ಆರ್‌. ಮಹದೇವಸ್ವಾಮಿ ಅವರು ಸಚಿವರನ್ನು ಅಭಿನಂದಿಸಿದರು.
ಬಳಿಕ ಮಾತನಾಡಿ ಸಚಿವರು, ಮಲೇಷಿಯಾ- ಸಿಂಗಾಪುರದಿಂದ ತರಿಸಲಾಗಿರುವ ಅಪರೂಪದ ಪ್ರಾಣಿಗಳನ್ನು ವೀಕ್ಷಿಸುತ್ತಿದ್ದೇನೆ. ಮೃಗಾಲಯಕ್ಕೆ ಬರುವ ಪ್ರವಾಸಿಗರಿಗೆ ಹೊಸ ಪ್ರಾಣಿಗಳನ್ನು ತೋರಿಸಬೇಕೆಂದು ಅಧಿಕಾರಿಗಳು ಶ್ರಮವಹಿಸಿದ್ದಾರೆ ಎಂದರು.

ಮೈಸೂರು ಮೃಗಾಲಯಕ್ಕೆ ಆಗಮಿಸಿದ ವಿದೇಶಿ ಅತಿಥಿಗಳು

ಗೊರಿಲ್ಲಾ ಮತ್ತು ಒರಾಂಗೂಟಾನ್‌ ಪ್ರಾಣಿಗಳ ಅನುಕೂಲಕ್ಕಾಗಿ ಉದಾರವಾಗಿ ನೆರವು ನೀಡಿರುವ ಇನ್ಪೋಸಿಸ್‌ ಫೌಂಡೇಷನ್‌ ಅಧ್ಯಕ್ಷೆ ಸುಧಾಮೂರ್ತಿ ಅವರು 3 ಕೋಟಿ, ರಿಸರ್ವ ಬ್ಯಾಂಕ್‌ ತನ್ನ ಸಿಎಸ್‌ಆರ್‌ ಅನುದಾನದಲ್ಲಿ ಅನುದಾನ ನೆರವು ನೀಡಿದೆ.

ಅಟಿನಾ ತರಿಸಿಕೊಳ್ಳಲಾಗಿದೆ: 

ಮೃಗಾಲಯದ ಆಕರ್ಷಣೀಯ ಕೇಂದ್ರಬಿಂದುವಾಗಿದ್ದ ಪೋಲೋ ಎಂಬ ಗೊರಿಲ್ಲಾ 2014ನೇ ಸಾಲಿನಲ್ಲಿ ವೃದ್ಧಾಪ್ಯದಿಂದ ಸಾವನ್ನಪ್ಪಿದ್ದ ನಂತರ ಗೊರಿಲ್ಲಾವನ್ನು ಮೃಗಾಲಯಕ್ಕೆ ತರಲು ಸತತ ಪ್ರಯತ್ನ ನಡೆಸುತ್ತಿದ್ದರ ಫಲವಾಗಿ ಈ ವರ್ಷದ ಆಗಸ್ಟ್‌ನಲ್ಲಿ ತಿಂಗಳಲ್ಲಿ ಜರ್ಮನಿಯಿಂದ 2 ಗಂಡು ಗೊರಿಲ್ಲಾಗಳನ್ನು ತರಲಾಗಿದೆ. ಅವುಗಳಿಗೆ ತಾಬೊ ಡೆಂಬ ಎಂದು ಹೆಸರಿಡಲಾಗಿದೆ. ಪ್ರಸ್ತುತ ಈ ಎಲ್ಲಾ ಪ್ರಾಣಿಗಳು ದಿಗ್ಭಂಧನದಲ್ಲಿವೆ.

ಈ ವೇಳೆ ಶಾಸಕ ಎಲ್‌. ನಾಗೇಂದ್ರ, ಬಿಜೆಪಿ ಉಪಾಧ್ಯಕ್ಷ ಎಂ. ರಾಜೇಂದ್ರ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್‌.ಆರ್‌. ಮಹದೇವಸ್ವಾಮಿ, ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ. ರವಿ, ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್‌ ಕುಲಕರ್ಣಿ ಮೊದಲಾದವರು ಇದ್ದರು.
 

Follow Us:
Download App:
  • android
  • ios