ಕಾಂಗ್ರೆಸ್ ಕಾರ್ಯಕ್ರಮದಿಂದ ಅರ್ಧಕ್ಕೆ ಎದ್ದು ಹೋಗಿರುವುದಕ್ಕೆ ಸ್ಪಷ್ಟನೆ ಕೊಟ್ಟ ಸಿದ್ದು
* ಕಾರ್ಯಕ್ರಮದದಿಂದ ಅರ್ಧಕ್ಕೆ ಎದ್ದು ಹೋಗಿರುವುದಕ್ಕೆ ಸ್ಪಷ್ಟನೆ ಕೊಟ್ಟ ಸಿದ್ದು
* ಕಾಂಗ್ರೆಸ್ ವೇದಿಕೆ ತೊರೆದು ಹೋಗಿದ್ದ ಸಿದ್ದರಾಮಯ್ಯ
* ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ
ಬೆಂಗಳೂರು, (ನ.17): ಅರಮನೆ ಮೈದಾನದಲ್ಲಿ ನಿನ್ನೆ (ನ.16) ನಡೆದಿದ್ದ ಕೆಪಿಸಿಸಿ (KPCC) ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ (Siddaramaiah) ಅರ್ಧಕ್ಕೆ ಭಾಷಣ ನಿಲ್ಲಿಸಿ ವೇದಿಕೆಯಿಂದ ಕೆಳಗೆ ಇಳಿದು ತೆರಳಿದ್ದರು.
ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಡಿಕೆ ಶಿವಕುಮಾರ್ (DK Shivakumar) ಹಾಗೂ ಸಿದ್ದರಾಮಯ್ಯನವರ ಬಣ ಮತ್ತೆ ಸ್ಫೋಟವಾಗದ್ಯಾ ಎನ್ನುವ ಗುಸು-ಗುಸು ಶುರುವಾಗಿದೆ. ಇನ್ನು ಈ ಬಗ್ಗೆ ಸ್ವತಃ ಸಿದ್ದರಾಮಯ್ಯ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ.
ಕಾಂಗ್ರೆಸ್ ಕಾರ್ಯಕ್ರಮಕ್ಕೆ ಜಮೀರ್ ಗೈರು, ಬೆಂಬಲಿಗರ ಗಲಾಟೆ, ಸಿದ್ದು ಭಾಷಣ ಮೊಟಕು, ಡಿಕೆಶಿ ಗರಂ
ನಾನು ಭಾಷಣ ಮಾಡುವುದಿಲ್ಲವೆಂದು ಮೊದಲೇ ಹೇಳಿದ್ದೆ. ನಿನ್ನೆ (ಮಂಗಳವಾರ) ಭಾಷಣ ವೇಳೆ ಯಾರೂ ಅಡ್ಡಿಪಡಿಸಿಲ್ಲ. ಸಮಯದ ಅಭಾವದಿಂದ ಕಾರ್ಯಕ್ರಮದಿಂದ ಬಂದುಬಿಟ್ಟೆ ಎಂದು ಸ್ಪಷ್ಟಪಡಿಸಿದರು.
ಅರಮನೆ ಮೈದಾನದಲ್ಲಿ ನಿನ್ನೆ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರ ಪದಗ್ರಹಣ ಸಮಾರಂಭ ನಡೆದಿತ್ತು. ಸಭಾ ವೇದಿಕೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದರು. ಈ ವೇಳೆ ಕೆಲವರು ಡಿಕೆಶಿ, ಡಿಕೆಶಿ ಅಂತ ಮತ್ತು ಜಮೀರ್ ಹೆಸರು ಹೇಳಿ ಘೋಷಣೆ ಕೂಗಿದ್ದಾರೆ. ಹೀಗಾಗಿ ಸಿಟ್ಟಾದ ಸಿದ್ದರಾಮಯ್ಯ ಅರ್ಧಕ್ಕೆ ಭಾಷಣ ನಿಲ್ಲಿಸಿ ವೇದಿಕೆಯಿಂದ ಕೆಳಗೆ ಇಳಿದು ಹೋಗಿದ್ದರು.
Siddaramaiah speech:ಸಿದ್ದು ಭಾಷಣಕ್ಕೆ ಜಮೀರ್ ಬೆಂಬಲಿಗರಿಂದ ಅಡ್ಡಿ, ವೇದಿಕೆ ತೊರೆದ ಕಾಂಗ್ರೆಸ್ ನಾಯಕ!
ಬಳಿಕ ವೇದಿಕೆಗೆ ಬಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಪಕ್ಷ ನಾಯಕರು ಮಾತನಾಡಬೇಕಾದರೆ ನೀವು ಕೂಗುತ್ತೀರಿ. ನೀವು ಕಾಂಗ್ರೆಸ್ ದ್ರೋಹಿಗಳೆಂದು ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದರು.
ವಿಸ್ತರಿಸಿಕೊಂಡ ಕಾಂಗ್ರೆಸ್ ಬಣ ರಾಜಕೀಯ..!
ಹೌದು...ಇಲ್ಲಿಯವರೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನಡುವೆ ಕೋಲ್ಡ್ ವಾರ್ ನಡೆದಿತ್ತು. ಇದಿಷ್ಟೇ ಅಲ್ಲಾ ಹಲವು ಹಿರಿಯರ ನಡುವೆಯೂ ಬಣರಾಜಕೀಯವಿತ್ತು. ಅದು ಈಗ ಪಕ್ಷದ ಸಣ್ಣ ಘಟಕಗಳಿಗೂ ವಿಸ್ತರಣೆಯಾಗಿದೆ. ಇದಕ್ಕೆ ಸ್ಪಷ್ಟ ಉದಾಹರಣೆ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ
ಅಲ್ಪಸಂಖ್ಯಾತ ಸಮುದಾಯದ ನಾಯಕತ್ವಕ್ಕಾಗಿ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ತನ್ವೀರ್ ಸೇಠ್ ನಡುವೆ ಕೋಲ್ಡ್ ವಾರ್ ನಡೆದಿತ್ತು. ನಂತರ ಅದು ಜಮೀರ್ ವರ್ಸಸ್ ಹ್ಯಾರಿಸ್ ಮಧ್ಯೆ ಮುಸುಕಿನ ಗುದ್ದಾಟ ಶರುವಾಗಿದೆ. ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನದ ಆಯ್ಕೆ ವೇಳೆ ಜಮೀರ್ ಆಪ್ತನಿಗೆ ತಪ್ಪಿಸಿ ಹ್ಯಾರಿಸ್ ಬೆಂಬಲಿಗ ಮಾಜಿ ಎಂಎಲ್ಸಿ ಅಬ್ದುಲ್ ಜಬ್ಬಾರ್ಗೆ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಇದು ಜಮೀರ್ ಕಣ್ಣು ಕೆಂಪಾಗಿಸಿದೆ.
ಇನ್ನು ಅಲ್ಪಸಂಖ್ಯಾತರ ಪದಗ್ರಹಣ ಕಾರ್ಯಕ್ರಮವನ್ನ ಜಮೀರ್ ಅವರನ್ನ ಹೊರಗಿಟ್ಟೇ ಮಾಡಲಾಗಿದೆ. ಇದು ಜಮೀರ್ಗೆ ಮತ್ತಷ್ಟು ಅಸಮಾಧಾನ ತಂದಿಟ್ಟಿದೆ. ಹೀಗಾಗಿ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ಜಮೀರ್ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು.
ತಮ್ಮ ನಾಯಕರನ್ನು ಕರೆಯದೆ ಕಾರ್ಯಕ್ರಮ ಮಾಡ್ತಿದ್ದೀರೆಂದು ಆರೋಪಿಸಿ ಘೋಷಣೆ ಕೂಗುವ ಮೂಲಕ ಆಕ್ರೋಶ ಹೊರಹಾಕಿದ್ರು. ಇನ್ನು ಕಾರ್ಯಕ್ರಮ ಪ್ರಾರಂಭವಾದಾಗಿನಿಂದ ಮುಗಿಯುವವರೆಗೂ ಜಮೀರ್ ಬೆಂಬಲಿಗರ ಪ್ರತಿಭಟನೆ ನಿಲ್ಲಲಿಲ್ಲ. ಪದೇ ಪದೇ ಘೋಷಣೆ ಕೂಗುವ ಮೂಲಕ ನಾಯಕರ ಭಾಷಣಕ್ಕೆ ಅಡ್ಡಿಪಡಿಸಿದ್ರು. ಸಿದ್ದರಾಮಯ್ಯ ಭಾಷಣದ ವೇಳೆಯೂ ಸುಮ್ಮನಾಗಲಿಲ್ಲ. ಕೂತ್ಕೊಳ್ರಯ್ಯ ಎಂದು ಹಲವು ಬಾರಿ ಹೇಳಿದ್ರೂ ಬೆಂಬಲಿಗರು ಡೋಂಟ್ ಕೇರ್ ಎಂದ್ರು. ಜಮೀರ್ ಪರ ಘೋಷಣೆ ಮುಂದುವರಿಸಿದ್ರು. ಮತ್ತೊಂದೆಡೆ ಡಿಕೆ-ಡಿಕೆ ಘೋಷಣೆಗಳು ಮೊಳಗಿದವು. ಇದರಿಂದ ಸಿದ್ದರಾಮಯ್ಯ ಭಾಷಣ ಮೊಟಕುಗೊಳಿಸಿ ವೇದಿಕೆಯಿಂದ ನಿರ್ಗಮಿಸಿದ್ದರು.