ದಾಳಿ ಮಾಡಿದವರನ್ನು ಎಲ್ಲಿಗೆ ಅಟ್ಟಬೇಕೋ ನಮಗೆ ಗೊತ್ತಿದೆ: ಕಾಗೇರಿ
* ಸನಾತನ ಧರ್ಮವು ಜಗತ್ತಿಗೇ ಜ್ಞಾನದ ಬೆಳಕು ನೀಡಿದ ಶ್ರೇಷ್ಠ ಧರ್ಮ
* ನಮ್ಮ ವೇದ ಉಪನಿಷತ್ತುಗಳು ಸರ್ವೇಜನಾಃ ಸುಖಿನೋ ಭವಂತು ಎಂದು ಸಾರಿವೆ
* ನಾವು ಗೋವುಗಳನ್ನು ಪೂಜಿಸುವ ಸಂಸ್ಕೃತಿಯವರಾದರೆ, ನಮ್ಮಲ್ಲಿಯೇ ಗೋ ಹತ್ಯೆ ನಡೆಯುತ್ತದೆ
ಭಟ್ಕಳ(ಏ.19): ಭಾರತೀಯರಾದ ನಾವು ಎಂದೂ ಯಾವ ದಾಳಿಯನ್ನೂ ಮಾಡಿಲ್ಲ. ದಾಳಿ ಮಾಡಿದವರನ್ನು ಎಲ್ಲಿಗೆ ಅಟ್ಟಬೇಕೋ ಅಲ್ಲಿಗೆ ಅಟ್ಟಿದ್ದೇವೆ. ಆ ಛಲ ಶಕ್ತಿ ನಮ್ಮಲ್ಲಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ(Vishweshwar Hegde Kageri) ಹೇಳಿದರು. ಸಾರದಹೊಳೆ ಹನುಮಂತ ದೇವಸ್ಥಾನದ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಮುಖ್ಯಅತಿಥಿಯಾಗಿ ಸೋಮವಾರ ಪಾಲ್ಗೊಂಡು ಅವರು ಮಾತನಾಡಿದರು.
ನಿರಂತರವಾಗಿ ಪರಕೀಯರ ಆಕ್ರಮಣ, ಆಳ್ವಿಕೆಯಿಂದ ನಾವು ನಮ್ಮ ಶಕ್ತಿಯನ್ನು ಮರೆತಿದ್ದೇವೆಯೇ ವಿನಃ ಶಕ್ತಿ ಕುಂದಿಲ್ಲ. ಸನಾತನ ಧರ್ಮವು ಜಗತ್ತಿಗೇ ಜ್ಞಾನದ ಬೆಳಕು ನೀಡಿದ ಶ್ರೇಷ್ಠ ಧರ್ಮವಾಗಿದೆ. ನಮ್ಮ ವೇದ ಉಪನಿಷತ್ತುಗಳು ಸರ್ವೇಜನಾಃ ಸುಖಿನೋ ಭವಂತು ಎಂದು ಸಾರಿವೆ. ನಾವು ಗೋವುಗಳನ್ನು ಪೂಜಿಸುವ ಸಂಸ್ಕೃತಿಯವರಾದರೆ, ನಮ್ಮಲ್ಲಿಯೇ ಗೋ ಹತ್ಯೆ ನಡೆಯುತ್ತದೆ. ರಾಮ, ಗೋವು, ದೇವರ(God) ಬಗ್ಗೆ ಹಗುರವಾಗಿ ಮಾತನಾಡುವವರು ನಮ್ಮಲ್ಲಿಯೇ ಇದ್ದಾರೆ ಎಂದು ವಿಷಾಧಿಸಿದರು.
Uttara Kannada: ಕಾರವಾರದಲ್ಲಿ ಗಮನ ಸೆಳೆದ ಮೀನು ಹಿಡಿಯುವ ಸ್ಪರ್ಧೆ
ದೇಶದಲ್ಲಿ(India) ನೂರಾರು ವರ್ಷಗಳಿಂದ ಸಾಗಿದ್ದ ರಾಮಮಂದಿರ(Ram Mandir) ನಿರ್ಮಾಣದ ಕನಸು ನರೇಂದ್ರ ಮೋದಿ ಬಂದ ನಂತರ ನನಸಾಗಿದೆ. ನಮ್ಮ ಎದುರು ಅನೇಕ ಸವಾಲುಗಳಿವೆ. ಅವುಗಳನ್ನು ಧೈರ್ಯ, ವಿಶ್ವಾಸದಿಂದ ಎದುರಿಸಬೇಕಾಗಿದೆ ಎಂದರು.
ಹಳೇಕೋಟೆ ಹನುಮಂತ ದೇವಸ್ಥಾನವನ್ನು ಬಹಳ ಶ್ರಮಪಟ್ಟು ಸುಂದರವಾಗಿ ನಿರ್ಮಿಸಲಾಗಿದೆ. ದೇವಾಲಯ(Temple) ಮಾತ್ರವಲ್ಲ ಎಲ್ಲ ದೇವಾಲಯಗಳನ್ನು ಕೂಡ ಉದ್ಧಾರ ಮಾಡಬೇಕು. ಶಿರಾಲಿಯ ಸಾರದಹೊಳೆ ಹಳೇಕೋಟೆ ಹನುಮಂತ ದೇವಾಲಯ ಅತ್ಯಂತ ಸುಂದರವಾಗಿ ಮೂಡಿಬಂದಿದೆ. ವಿಶೇಷವಾಗಿ ಈ ದೇವಾಲಯವನ್ನು ಇಲ್ಲಿನ ಶಿಲ್ಪಿಗಳೇ ನಿರ್ಮಿಸಿದ್ದಾರೆ ಎನ್ನುವುದು ಅತ್ಯಂತ ಹೆಮ್ಮೆಯ ವಿಚಾರವಾಗಿದೆ ಎಂದರು.
'ಮುಂದಿನ ಕರ್ನಾಟಕ ವಿಧಾನಸಭಾ ಚುನಾವಣೆಗೆ 50 ಕ್ಷೇತ್ರಗಳಲ್ಲಿ ಸಾಧು- ಸಂತರ ಸ್ಪರ್ಧೆ'
ಶಾಸಕ ಸುನೀಲ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಪರಮೇಶ್ವರ ನಾಯ್ಕ ಕೊಡ್ಸೂಳು ಬರೆದ ದೇವಸ್ಥಾನದ ಪರಿಚಯದ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.
ವೇದಿಕೆಯಲ್ಲಿ ಧರ್ಮದರ್ಶಿ ಸುಬ್ರಾಯ ಜೆ. ನಾಯ್ಕ, ಆಡಳಿತ ಮಂಡಳಿ ಅಧ್ಯಕ್ಷ ಸುಬ್ರಾಯ ಎಂ. ನಾಯ್ಕ, ಸಹಾಯಕ ಆಯುಕ್ತೆ ಮಮತಾದೇವಿ, ತಹಸೀಲ್ದಾರ ಸುಮಂತ, ಅಷ್ಟಮಂಗಲ ಜ್ಯೋತಿಷಿ ವಿಷ್ಣುಮೂರ್ತಿ ನಂಬೂದ್ರಿ, ಕೊಪ್ಪ ಪಂಚಾಯತ್ ಅಧ್ಯಕ್ಷ ರಾಜು ನಾಯ್ಕ, ಮಾವಳ್ಳಿ-2ರ ಅಧ್ಯಕ್ಷ ಮಹೇಶ ನಾಯ್ಕ, ನಾಥಪಂಥ ಜೋಗಿ ಸಮಾಜದ ಅಧ್ಯಕ್ಷ ಶಿವರಾಮ ಬಳೇಗಾರ ಮುಂತಾದವರಿದ್ದರು. ಜೀರ್ಣೋದ್ಧಾರ ಸಮತಿಯ ಅಧ್ಯಕ್ಷ ಕೃಷ್ಣಾ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಆಡಳಿತ ಮಂಡಳಿ ಸದಸ್ಯ ವೆಂಕಟೇಶ ನಾಯ್ಕ ಅಂಗಡಿಮನೆ ಸ್ವಾಗತಿಸಿದರು. ಶಿಕ್ಷಕರಾದ ನಾರಾಯಣ ನಾಯ್ಕ, ಪರಮೇಶ್ವರ ನಾಯ್ಕ ನಿರೂಪಿಸಿದರು.