ಮಲೆನಾಡಿನ ಮಿಡಿ ಮಾವು ತಜ್ಞ ಬಿ.ವಿ. ಸುಬ್ಬರಾವ್ ಇನ್ನಿಲ್ಲ

ಕರ್ನಾಟಕದ ಪಶ್ಚಿಮ ಘಟ್ಟ ಮತ್ತು ಮಲೆನಾಡಿನಲ್ಲಿ ಮಿಡಿ ಮಾವು ಬೆಳೆಯನ್ನು ಪ್ರಸಿದ್ಧಿಗೊಳಿಸಿದ ಕೃಷಿ ವಿಜ್ಞಾನಿ ಬಿ.ವಿ. ಸುಬ್ಬರಾವ್ (87) ನಿಧನರಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನವರಾದ ಅವರು 120 ಜಾತಿಯ ಮಾವಿನ ಮಿಡಿಗಳನ್ನು ಬೆಳೆಸಿದ್ದರು.

Karnataka western Ghats midi mangoes expert B V Subbarao is no more sat

ಶಿವಮೊಗ್ಗ (ನ.27): ಕರ್ನಾಟಕದ ಪಶ್ಚಿಮ ಘಟ್ಟ ಹಾಗೂ ಮಲೆನಾಡಿನ ಭಾಗದಲ್ಲಿ ಮಿಡಿ ಮಾವು ಬೆಳೆಯನ್ನು ಪ್ರಸಿದ್ಧಿಗೊಳಿಸಿದ ಕೃಷಿ ವಿಜ್ಞಾನಿ ಬಿ.ವಿ. ಸುಬ್ಬರಾವ್ (87) ನಿಧನ ಹೊಂದಿದ್ದಾರೆ.

ಮಿಡಿ ಮಾವು ತಜ್ಞ ಬಿ.ವಿ. ಸುಬ್ಬರಾವ್ ಅವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕೆಳದಿ ಗ್ರಾಮ ಪಂಚಾಯಿತತಿ ವ್ಯಾಪ್ತಿಯ ಬೇಳೂರು ಗ್ರಾಮದವರಾಗಿದ್ದರು. ಇನ್ನು ವಯೋಸಹಜವಾಗಿ ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾಗಿದ್ದ ಇವರು, ಇಂದು ಸಂಜೆ ವೇಳೆ ಅನಾರೋಗ್ಯದಿಂದ ಮನೆಯಲ್ಲಿಯೇ ಕೊನೆ ಉಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಸುಬ್ಬರಾವ್ ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.

ಮಲೆನಾಡಿನ ಮಿಡಿಮಾವಿ ತಜ್ಷರೆಂದೇ ಖ್ಯಾತವಾಗಿದ್ದ ಸುಬ್ಬರಾವ್ ಅವರು ತಮ್ಮ ಜಮೀನಿನಲ್ಲಿ 120 ಜಾತಿಯ ಮಾವಿನ ಮಿಡಿಗಳನ್ನು ಬೆಳೆಸಿದ್ದರು. ಗುಣಮಟ್ಟದ ತಳಿ ಸಂರಕ್ಷಣೆಯಲ್ಲಿ ವಿಶೇಷವಾಗಿ ಕೆಲಸ ಮಾಡಿದ್ದ ಸುಬ್ಬರಾವ್ ಅವರನ್ನು ಮಿಡಿ ಸುಬ್ಬಣ್ಣ ಎಂದೇ ಗುರುತಿಸಲಾಗುತ್ತಿತ್ತು. ಕೃಷಿ ವಿಶ್ವವಿದ್ಯಾಲಯ ಮಟ್ಟದಲ್ಲಿಯೇ ಇವರ ಸಂಶೋಧನೆ ನಡೆಯುತ್ತಿದ್ದವು. ಅವರ ಸಾಧನೆ ಗುರುತಿಸಿ ಹಲವು ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ. ಕನ್ನಡಪ್ರಭ ಪತ್ರಿಕೆಯೂ ಕೊಡಮಾಡುವ 'ರೈತ ರತ್ನ' ಪ್ರಶಸ್ತಿಗೂ ಇವರು ಭಾಜನಾಗಿದ್ದಾರೆ.

Latest Videos
Follow Us:
Download App:
  • android
  • ios