ತ್ರಯಂಬಕೇಶ್ವರ, ಓಂಕಾರೇಶ್ವರ ಸೇರಿ ಜ್ಯೋತಿರ್ಲಿಂಗ ದರ್ಶನ ಯೋಜನೆ ಘೋಷಿಸಿದ ಭಾರತೀಯ ರೈಲ್ವೇ!

ಭಾರತೀಯ ರೈಲ್ವೇ ಮಹತ್ವದ ಯೋಜನೆ ಘೋಷಿಸಿದೆ. ಭಾರತದ ಪ್ರಮುಖ ಮೂರು ಜ್ಯೋತಿರ್ಲಿಂಗ ದರ್ಶನಕ್ಕಾಗಿ ರೈಲು ಸೇವೆ ಒದಗಿಸಲಾಗುತ್ತಿದೆ. ತ್ರಯಂಬಕೇಶ್ವರ, ಓಂಕಾರೇಶ್ವರ ಹಾಗೂ ಕಾಶಿವಿಶ್ವನಾಥ ದರ್ಶನ ಜೊತೆಗೆ ಪವಿತ್ರ ಸ್ಥಳಗಳ ದರ್ಶನವೂ ಈ ಯೋಜನೆಯಲ್ಲಿ ಸೇರಿದೆ.

Indian Railways unveils most awaited projects of connectivity to 3 jyotirlingas ckm

ನವದೆಹಲಿ(ನ.27) ಭಾರತೀಯ ರೈಲ್ವೇ ಪವಿತ್ರ ತೀರ್ಥ ಕ್ಷೇತ್ರ ಸೇರಿದಂತೆ ಹಲವು ಧಾರ್ಮಿಕ ಸ್ಥಳಗಳಿಗೆ ರೈಲು ಸೇವೆ ನೀಡುತ್ತಿದೆ. ಈ ಮೂಲಕ ಭಕ್ತರು ಸುಲಭವಾಗಿ ಹಾಗೂ ಕಡಿಮೆ ಖರ್ಚಿನಲ್ಲಿ ಧಾರ್ಮಿಕ ಸ್ಥಳಗಳ ದರ್ಶನ ಪಡೆಯಲು ಸಾಧ್ಯವಿದೆ. ಇದೀಗ ಭಾರತೀಯ ರೈಲ್ವೇ ಮತ್ತೊಂದು ಮಹತ್ವಾಕಾಕ್ಷಿ ರೈಲು ಯೋಜನೆ ಘೋಷಿಸಿದೆ. ಭಾರತದ 12 ಜ್ಯೋತಿರ್ಲಿಂಗಗಳ ಪೈಕಿ ಮೂರು ಪ್ರಮುಖ ಜ್ಯೋತಿರ್ಲಿಂಗ ದರ್ಶನ ಯೋಜನೆ ಇದಾಗಿದೆ.  ತ್ರಯಂಬಕೇಶ್ವರ, ಓಂಕಾರೇಶ್ವರ ಹಾಗೂ ಕಾಶಿವಿಶ್ವನಾಥ ದರ್ಶನ ಪಡೆಯಲು ಭಕ್ತರು ಹೆಚ್ಚು ಪ್ರಯಾಸ ಪಡಬೇಕಿಲ್ಲ. ಭಾರತೀಯ ರೈಲ್ವೇ ಈ ಸೇವೆ ನೀಡಲಿದೆ.

ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶ ಮೂರು ರಾಜ್ಯಗಳಲ್ಲಿರುವ ಮೂರು ಜ್ಯೋತಿರ್ಲಿಂಗ ಹಾಗೂ ತೀರ್ಥ ಕ್ಷೇತ್ರಗಳ ದರ್ಶನವನ್ನು ಈ ರೈಲು ಸೇವೆಯಲ್ಲಿ ಪಡೆಯಲು ಸಾಧ್ಯವಿದೆ. ಕಾಶಿಯಲ್ಲಿರುವ ತ್ರಯಂಬಕೇಶ್ವರ,ಖಂಡ್ವಾದಲ್ಲಿರುವ ಓಂಕಾರೇಶ್ವರ ಹಾಗೂ ಕಾಶಿಯಲ್ಲಿರುವ ವಿಶ್ವನಾಥನ ಸನ್ನಿಧಿ ಧರ್ಶನ ಪಡೆಯಲು ಸಾಧ್ಯವಾಗಲಿದೆ.

 15ರೂ ನೀರಿನ ಬಾಟಲಿ 20 ರೂಗೆ ಮಾರಾಟ, ವೆಂಡರ್‌ಗೆ 1 ಲಕ್ಷ ರೂ ದಂಡ ವಿಧಿಸಿದ ರೈಲ್ವೇ!

ಈ ರೈಲು ಯೋಜನೆ ಕಾಮಗಾರಿ ಶೀಘ್ರದಲ್ಲೇ ಆರಂಭಗೊಳ್ಳಲಿದೆ. ವಿಶೇಷ ಅಂದರೆ ಅಷ್ಟೇ ವೇಗದಲ್ಲಿ ರೈಲು ಯೋಜನೆ ಪೂರ್ಣಗೊಳಿಸಲು ಪ್ಲಾನ್ ಮಾಡಲಾಗಿದೆ. ಜಲಗಾವಂ-ಮನ್ಮಡ್  160 ಕಿಲೋಮೀಟರ್ ವ್ಯಾಪ್ತಿಯ ನಾಲ್ಕನೇ ರೈಲ್ವೇ ಲೈನ್, ಭುಸವಾಲ್-ಖಂಡ್ವಾ 131 ಕಿಲೋಮೀಟರ್ ವ್ಯಾಪ್ತಿಯ ಮೂರನೇ ಹಾಗೂ ನಾಲ್ಕನೈ ರೈಲ್ವೇ ಲೈನ್, ಪ್ರಯಾಗ್‌ರಾಜ್-ಮಣಿಕಪುರದ 84 ಕಿಲೋಮೀಟರ್ ವ್ಯಾಪ್ತಿಯ ಮೂರನೇ ರೈಲ್ವೈ ಲೈನ್ ಕಾಮಾಗಾರಿ ನಡೆಯಬೇಕಿದೆ. ಒಟ್ಟು 375 ಕಿಲೋಮೀಟರ್ ದೂರದ ರೈಲ್ವೇ ಲೈನ್ ಕಾಮಾಗಾರಿ ನಡೆಸಲಾಗುತ್ತದೆ. ಈ ಮೂಲಕ ಮೂರು ಜ್ಯೂತಿರ್ಲಿಂಗ್ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತಿದೆ.

ಹೊಸದಾಗಿ ಕಾಮಗಾರಿ ನಡೆಯುವ 375 ಕಿಲೋಮೀಟರ್ ದೂರದ ರೈಲು ಹಳಿ ಒಟ್ಟು 7 ಜಿಲ್ಲೆಗಳ ಮೂಲಕ ಹಾದು ಹೋಗಲಿದೆ. 1,300 ಗ್ರಾಮದ 38 ಲಕ್ಷ ಮಂದಗೆ ಈ ರೈಲು ಯೋಜನೆಯಿಂದ ನೆರವಾಗಲಿದೆ. ಈ ಜ್ಯೋತಿರ್ಲಿಂಗ ದರ್ಶನದ ಜೊತೆಗೆ ಪ್ರಯಾಗರಾಜ್, ಚಿತ್ರಕೂಟ, ಗಯಾ, ಶಿರಡಿ ಸೇರಿದಂತೆ ಹಲವು ತೀರ್ಥ ಕ್ಷೇತ್ರಗಳ ಸಂದರ್ಶನವೂ ನಡೆಯಲಿದೆ. ಶೀಘ್ರದಲ್ಲೇ ಕಾಮಾಗಾರಿಗಳು ಆರಂಭಗೊಳ್ಳಲಿದೆ. 

ಭಾರತೀಯ ರೈಲ್ವೇ ಈಗಾಗಲೇ ಧಾರ್ಮಿಕ ಕ್ಷೇತ್ರಗಳ ಸಂದರ್ಶನ ಹಾಗೂ ದರ್ಶನಕ್ಕಾಗಿ ವಿಶೇಷ ರೈಲು ವ್ಯವಸ್ಥೆ ಮಾಡಿದೆ. ಭಾರತೀಯ ರೈಲ್ವೇಯ ತೀರ್ಥ ಕ್ಷೇತ್ರ ದರ್ಶನ ಟೂರ್ ಪ್ಯಾಕೇಜ್ ಮೂಲಕ ಕಡಿಮೆ ಖರ್ಚಿನಲ್ಲಿ ಪವಿತ್ರ ಸ್ಥಳಗಳ ದರ್ಶನ ಪಡೆಯಲು ಸಾಧ್ಯವಿದೆ. ಈ ಸಾಲಿಗೆ ಇದೀಗ ಜ್ಯೋತೀರ್ಲಿಂಗ ದರ್ಶನವೂ ಸೇರಿಕೊಳ್ಳಲಿದೆ.
 

Latest Videos
Follow Us:
Download App:
  • android
  • ios