ಇದು ಬೆಂಗಳೂರಲ್ಲಿ ಮಾತ್ರ, ಬಾಡಿಗೆದಾರನ ಸ್ಟಾರ್ಟ್ಅಪ್ ಉದ್ಯಮಕ್ಕೆ ಮನೆ ಮಾಲೀಕನೇ ಟೆಕ್ ಗುರು!
ಕೆಲ ವಿದ್ಯಮಾನ ಬೆಂಗಳೂರಲ್ಲಿ ಮಾತ್ರ ನಡೆಯುತ್ತಿದೆ. ಈ ಪೈಕಿ ಬಾಡಿಗೆದಾರನಿಗೆ ಮನೆ ಮಾಲೀಕನಗೆ ಟೆಕ್ ಸಲಹೆಗಾರನಾದ ರೋಚಕ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಲ್ಲಿ ಮನೆ ಮಾಲೀಕರ ಕಾರ್ಯವ್ಯಾಪ್ತಿ ಟೆಕ್ ಗುರು ತನಕೆ ಇದೆ ಅನ್ನೋದು ಈ ಘಟನೆ ಮೂಲಕ ಬಹಿರಂಗವಾಗಿದೆ.
ಬೆಂಗಳೂರು(ನ.27) ಬೆಂಗಳೂರಿನಲ್ಲಿ ನಡೆಯುವ ಹಲವು ಘಟನೆಗಳು ವಿಶ್ವದಲ್ಲೇ ಭಾರಿ ಸುದ್ದಿಯಾಗುತ್ತದೆ, ಚರ್ಚೆಯಾಗುತ್ತದೆ. ಈ ಪೈಕಿ ಬೆಂಗಳೂರಲ್ಲಿ ಮನೆ ಹುಡುಕುವ ಸಾಹಸ, ಮನೆ ಮಾಲೀಕರ ನೂರೆಂಟ್ ಪ್ರಶ್ನೆ, ಷರತ್ತು ಸೇರಿದಂತೆ ಹಲವು ಈಗಾಗಲೇ ಸದ್ದು ಮಾಡಿದೆ. ಇದೀಗ ಬಾಡಿಗೆದಾರನ ಹಲವು ವಿಚಾರದಲ್ಲಿ ಮನೆ ಮಾಲೀಕರು ಮೂಗು ತೂರಿಸುವುದು ವರದಿಯಾಗಿದೆ. ಆದರೆ ಮನೆ ಮಾಲೀಕನ ಕಾರ್ಯವ್ಯಾಪ್ತಿ ಇಲ್ಲಿಗೆ ಮುಗಿದಿಲ್ಲ. ಇಲ್ಲೊಬ್ಬ ಮನೆ ಮಾಲೀಕನ, ತನ್ನ ಬಾಡಿಗೆದಾರನ ಸ್ಟಾರ್ಟ್ ಅಪ್ ಕಂಪನಿಯ ಟೆಕ್ ಗುರುವಾಗಿಯೂ ಕಾರ್ಯನಿರ್ವಹಿಸಿದ ಅಪರೂಪದ ಘಟನೆ ಬೆಳಕಿಗೆ ಬಂದಿದೆ. ಸ್ವತಃ ಸ್ಟಾರ್ಟ್ ಅಪ್ ಸಂಸ್ಥಾಪಕ ವೆಟ್ರಿ ವೆಂಥನ್ ಈ ಘಟನೆಯನ್ನು ಬಿಚ್ಚಿಟ್ಟಿದ್ದಾರೆ.
ವೆಟ್ರಿ ವೆಂಥನ್ ಮಾಡಿರುವ ಟ್ವೀಟ್ ಹಾಗೂ ಸ್ಕ್ರೀನ್ ಶಾಟ್ ಇದೀಗ ಎಲ್ಲೆಡೆ ಹರಿದಾಡುತ್ತಿದೆ. ವೆಟ್ರಿ ವೆಂಥನ್ ಅಹಮ್ಮದಾಬಾದ್ ಐಐಎಂನಲ್ಲಿ ಪದವಿ ಪಡೆದು ಉದ್ಯೋಗ ಅರಸುತ್ತಾ ಬೆಂಗಳೂರಿಗೆ ಆಗಮಿಸಿದ್ದಾರೆ. ಬೆಂಗಳೂರು ಮೊದಲೇ ಟೆಕ್ ಸಿಟಿ. ಎಂಜಿನೀಯರ್ ಸೇರಿದಂತೆ ಟೆಕ್ಕಿಗಳಿಗೆ ಕೈತುಂಬ ಸಂಬಳ ನೀಡುವ ನಗರ ಬೆಂಗಳೂರು. ಇಷ್ಟೇ ಅಲ್ಲ ಹಲವು ಸ್ಟಾರ್ಟ್ ಅಪ್, ಟೆಕ್ ಉದ್ಯಮಕ್ಕೆ ಮುನ್ನಡಿ ಬರೆಯುತ್ತದೆ. ಹೀಗೆ ವೆಟ್ರಿ ವೆಂಥನ್ ಬೆಂಗಳೂರಿಗೆ ಆಗಮಿಸಿದ್ದಾರೆ. ಉದ್ಯೋಗ ಮಾಡುತ್ತಲೇ ಹೊಸ ಸ್ಟಾರ್ಟ್ ಆಪ್ ಆರಂಭಿಸಿದ್ದಾರೆ.
40 ಸಾವಿರ ಬಾಡಿಗೆ ಮನೆಗೆ 5 ಲಕ್ಷ ರೂ ಅಡ್ವಾನ್ಸ್, ಬೆಂಗಳೂರು ಮಾಲೀಕನ ಬೇಡಿಕೆಗೆ ಮಹಿಳೆ ಸುಸ್ತು!
ವೆಟ್ರಿ ವೆಂಥನ್ ಬಾಡಿ ಮನೆಯಲ್ಲಿದ್ದುಕೊಂಡೇ ಸ್ಟಾರ್ಟ್ ಅಪ್ ಕಂಪನಿ ಆರಂಭಿಸಿದ್ದಾರೆ. ಸರಿಯಾದ ಸಮಯಕ್ಕೆ ಬಾಡಿಗೆ ಪಾವತಿ ಮಾಡುತ್ತಾ ತನ್ನ ಸ್ಟಾರ್ಟ್ ಅಪ್ ಸಂಸ್ಥೆಯಲ್ಲಿ ತೊಡಗಿಸಿಕೊಂಡ ವೆಟ್ರಿ ವೆಂಥನ್‌ಗೆ ಮನೆ ಮಾಲೀಕ ಹಲವು ಸಲಹೆಗಳನ್ನು ನೀಡುತ್ತಾ ಹೋಗಿದ್ದಾರೆ. ಆರಂಭದಲ್ಲಿ ಗಂಭೀರವಾಗಿ ಪರಿಗಣಿಸಿದ ವೆಟ್ರಿ ವೆಂಥನ್ ಬಳಿಕ ಮನೆ ಮಾಲೀಕನ ಸಲಹೆಯನ್ನು ಸ್ವೀಕರಿಸಿದ್ದಾರೆ. ಪ್ರತಿ ಹೆಜ್ಜೆಯಲ್ಲೂ ಮನೆ ಮಾಲೀಕ ಕೆಲ ಟೆಕ್ ಸಲಹೆಗಳನ್ನು ನೀಡಿದ್ದಾರೆ. ಇದು ವೆಟ್ರಿ ವೆಂಥನ್‌ಗೆ ನೆರವಾಗಿದೆ.
ಇತ್ತ ಸ್ಟಾರ್ಟ್ ಅಪ್ ಸಂಸ್ಥೆಯಲ್ಲಿ ಹೆಚ್ಚು ತೊಡಗಿಸಿಕೊಂಡ ವೆಟ್ರಿ ವೆಂಥನ್ ಬ್ಯೂಸಿಯಾಗಿದ್ದಾರೆ. ಈ ವೇಳೆ ಮನೆ ಮಾಲೀಕ ಕಳುಹಿಸಿದ ಮೆಸೇಜ್ ಹಾಗೂ ಚಾಟ್ ವಿವರವನ್ನು ವೆಟ್ರಿ ವೆಂಥನ್ ಹಂಚಿಕೊಂಡಿದ್ದಾರೆ. ಇಷ್ಟೇ ಅಲ್ಲ ಟ್ವೀಟ್‌ನಲ್ಲಿ ಕೇವಲ ಬೆಂಗಳೂರಿನಲ್ಲಿ ಮಾತ್ರ ನಿಮ್ಮ ಮನೆ ಮಾಲೀಕ ನಿಮ್ಮ ಸ್ಟಾರ್ಟ್ ಅಪ್ ಕಂಪನಿಯ ಟೆಕ್ ಸಲಹೆಗಾರನಾಗಲು ಸಾಧ್ಯ ಎಂದು ಬರೆದುಕೊಂಡಿದ್ದಾರೆ. ಮನೆ ಮಾಲೀಕ ಕಾರ್ಪೋರೇಟ್ ಸಲಹೆಗಳು, ಟೆಕ್ ಸಲಹೆಗಳು ನಮ್ಮ ಸ್ಟಾರ್ಟ್ ಅಪ್ ಕಂಪನಿ ಅಭಿವೃದ್ಧಿಗೆ ನೆರವಾಗಿದೆ ಎಂದಿದ್ದಾರೆ.
ಸ್ಕ್ರೀನ್‌ಶಾಟ್‌ನಲ್ಲಿ ಮನೆ ಮಾಲೀಕ, ವೆಟ್ರಿ ವೆಂಥನ್‌ಗೆ ಮೆಸೇಜ್ ಮಾಡಿದ್ದಾರೆ. ನಾಳೆ ಸಂಜೆ 5 ಗಂಟೆಗೆ ಫ್ರೀ ಇದ್ದೀರಾ ಭೇಟಿಯಾಗಲು ಸಮಯವಿದೆಯಾ, ನಿಮ್ಮ ಪ್ರಾಡಕ್ಟ್ ರಿವೀವ್ಯೂ ಕುರಿತು ಮಾತನಾಡಬೇಕಿದೆ ಎಂದು ಮನೆ ಮಾಲೀಕ ಕೇಳಿದ್ದಾರೆ. ತ್ವರಿತಗತಿಯಲ್ಲಿ ಕೆಲ ಪ್ರಾಜೆಕ್ಟ್ ನಡೆಯುತ್ತಿದೆ. ಮುಂದಿನ ಗುರುವಾರದೊಳಗೆ ಮುಗಿಸಬೇಕಿದೆ. ಮುಂದಿನ ವಾರಾಂತ್ಯ ಅಂದರೆ ಶನಿವಾರ ಭೇಟಿಯಾಗಲು ಸಾಧ್ಯವ, 2 ರಿಂದ 3 ಗಂಟೆಗೆ ಎಂದು ವೆಟ್ರಿ ಕೇಳಿದ್ದಾರೆ. ಇದಕ್ಕೆ ಮನೆ ಮಾಲೀಕ ಸರಿ ಎಂದಿದ್ದಾರೆ.
ಇದಕ್ಕೂ ಮೊದಲಿನ ಮೆಸೇಜ್‌ನಲ್ಲಿ ವೆಟ್ರಿ ಬಾಡಿಗೆ ದಿನಾಂಕದಲ್ಲಿ ಕೆಲ ತಪ್ಪುಗಳಿವೆ. 2023ರ ನವೆಂಬರ್ ಎಂದು ಉಲ್ಲೇಖಿಸಿದ್ದೀರಿ. ಈ ದಿನಾಂಕ ತಪ್ಪನ್ನು ಸರಿಪಡಿಸುವಿರಾ ಎಂದು ಕೇಳಿದ್ದಾರೆ. ಇದಕ್ಕೆ ಮನೆ ಮಾಲೀಕ ಖಂಡಿತವಾಗಿ ಸರಿಪಡಿಸುತ್ತೇನೆ ಎಂದು ಉತ್ತರಿಸಿದ್ದಾರೆ. ಮನೆ, ಬಾಡಿಗೆ ವಿಚಾರದಲ್ಲಿ ಮಾತನಾಡುತ್ತಿದ್ದ ಬಾಡಿಗೆದಾರ ಹಾಗೂ ಮನೆ ಮಾಲೀಕ ಇದೀಗ ಸ್ಟಾರ್ಟ್ ಅಪ್ ಕಂಪನಿಯ ಟೆಕ್ ಸಲಹೆಗಾರನಾಗಿ ಹಲವು ಸಲಹೆ ನೀಡುತ್ತಿದ್ದಾರೆ. ಈ ಮಾಹಿತಿಯನ್ನು ವೆಟ್ರಿ ವೆಂಥನ್ ಬಿಚ್ಚಿಟ್ಟಿದ್ದಾರೆ.
ಬೆಂಗಳೂರು ಮನೆ ಬಾಡಿಗೆಗೆ ಸಂದರ್ಶನ: ಪಾಸ್ ಅದವಳಿಗೆ ಆಫರ್ ಲೆಟರ್!
ಹಲವರು ಈ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದು ಬೆಂಗಳೂರಲ್ಲಿ ಮಾತ್ರ ಸಾಧ್ಯ ಎಂದಿದ್ದಾರೆ. ಇದೇ ವೇಳೆ ಕೆಲವರು 11 ತಿಂಗಳ ಬಾಡಿಗೆ ಕಡಿಕಗೊಳಿಸಲು ಹೇಳಿ ಎಂದು ಸೂಚಿಸಿದ್ದಾರೆ.