ಸಮಾಜ ಸೇವೆ ಎಂಬುದು ವೈಯಕ್ತಿಕ ಸಂತೃಪ್ತಿಯ ಜೊತೆಗೆ ಸಮಾಜದ ಹಿತವನ್ನೂ ಕಾಪಾಡುತ್ತದೆ, ಸೇವಾ ಮನೋ​ಭಾ​ವವು ಅನುಕಂಪ ಕಲಿಸುತ್ತದೆ, ಅನುಭವ ನೀಡುತ್ತದೆ, ಮಾ​ನ​ವೀಯ ಭಾವನೆಗಳನ್ನು ಬೆಳೆಸುತ್ತದೆ. ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಶಿವಮೊಗ್ಗ (ಫೆ.1) : ಸಮಾಜ ಸೇವೆ ಎಂಬುದು ವೈಯಕ್ತಿಕ ಸಂತೃಪ್ತಿಯ ಜೊತೆಗೆ ಸಮಾಜದ ಹಿತವನ್ನೂ ಕಾಪಾಡುತ್ತದೆ ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ಹೇಳಿದರು.

ನಗ​ರ​ದ​ ಸಹ್ಯಾದ್ರಿ ಕಾಲೇಜಿನಲ್ಲಿ ಮಂಗಳವಾರ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ವಿದ್ಯಾರ್ಥಿ ಸಾಂಸ್ಕೃತಿಕ, ಎನ್‌ಸಿಸಿ ಕ್ರೀಡೆ, ಎನ್‌ಎಸ್‌ಎಸ್‌, ಯುವ ರೆಡ್‌ಕ್ರಾಸ್‌, ರೋವ​ರ್‍ಸ್ ಮತ್ತು ರೇಂಜ​ರ್‍ಸ್ ಘಟಕಗಳ ವಾರ್ಷಿಕ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜೀವಂತವಾಗಿ ಸಿದ್ದರಾಮಯ್ಯರನ್ನು ಬಿಜೆಪಿಗೆ ಸೇರಿಸಿಕೊಳ್ಳಲ್ಲ: ಕೆ.ಎಸ್ ಈಶ್ವರಪ್ಪ ವ್ಯಂಗ್ಯ

ಸೇವಾ ಮನೋ​ಭಾ​ವವು ಅನುಕಂಪ ಕಲಿಸುತ್ತದೆ, ಅನುಭವ ನೀಡುತ್ತದೆ, ಮಾ​ನ​ವೀಯ ಭಾವನೆಗಳನ್ನು ಬೆಳೆಸುತ್ತದೆ. ನಾವೆಲ್ಲರೂ ಒಂದೇ ಎಂಬ ಸಾಮರಸ್ಯವನ್ನು ಮೂಡಿಸುತ್ತದೆ. ವಿದ್ಯಾರ್ಥಿಗಳು ತಮ್ಮ ಅಂಕಗಳಿಗೆ ಆದ್ಯತೆ ನೀಡುವುದರ ಜೊತೆಗೆ ಸಮಾಜದ ಸಂಕಷ್ಟಗಳಿಗೆ ಸ್ಪಂದಿಸಬೇಕು ಎಂದು ಕರೆ ನೀಡಿದರು.

ತಮ್ಮ ವಿದ್ಯಾರ್ಥಿ ಜೀವನದ ಅನುಭವಗಳನ್ನು ತಿಳಿಸಿದ ಅವರು, ಒಳ್ಳೆಯ ಗುರುಗಳಿಂದ ನಾವು ಉತ್ತಮ ಸ್ಥಾನ ಪಡೆಯುತ್ತೇವೆ. ನಮಗೆ ಪಾಠ ಕಲಿಸಿದ ಗುರುಗಳನ್ನು ಎಂದೂ ಮರೆಯಬಾರದು. ನನ್ನ ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದ ಬೆಳವಣಿಗೆಗೆ ಶ್ರೀನಿವಾಸಮೂರ್ತಿ ಎಂಬ ಗುರುಗಳೂ ಸೇರಿದಂತೆ ಹಲವು ಶಿಕ್ಷಕರು ಕಾರಣರಾಗಿದ್ದಾರೆ ಎಂದರು.

ವಿದ್ಯಾರ್ಥಿಗಳು ಓದಿನ ಜೊತೆಗೆ ಎನ್‌.ಎಸ್‌.ಎಸ್‌., ಕ್ರೀಡೆಯಂತಹ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಅತ್ಯಂತ ಅಗತ್ಯ. ಬದುಕು ರೂಪಿಸಿಕೊಳ್ಳಲು ಇಂತಹ ಆಸಕ್ತಿಗಳು ನಮಗೆ ನೆರವು ನೀಡುತ್ತವೆ ಎಂದ ಅವರು, ಕಾಲೇಜಿಗೆ ಹೆಚ್ಚುವರಿಯಾಗಿ ಎಂಟು ಕೊಠಡಿಗಳನ್ನು ಮಂಜೂರು ಮಾಡಿಸುವ ಭರವಸೆ ನೀಡಿದರು.

ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ ಮಾತನಾಡಿ, ಕನ್ನಡ ನಮ್ಮ ಅಂತರಂಗದ ಭಾಷೆಯಾಗಬೇಕು. ಸಾಧ್ಯವಾದಷ್ಟುಸಂಬಂಧವಾಚಕಗಳನ್ನು ಕನ್ನಡದಲ್ಲಿ ಬಳಸಬೇಕು. ಸಂಸ್ಕೃತಿ ಸಂಸ್ಕಾರ ಮುಖ್ಯ. ಅದನ್ನು ನಮ್ಮ ಪರಿಸರದಿಂದ, ಶಿಕ್ಷಣದಿಂದ ಕಲಿಯಬೇಕು ಎಂದರು.

ಸಿದ್ದರಾಮಯ್ಯ ಕೋಲಾರಕ್ಕೆ ಹೋಗಿ ಬಾದಾಮಿ ಜನರಿಗೆ ಮೋಸ: ಈಶ್ವರಪ್ಪ ಆಕ್ರೋಶ

ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಂ.ಕೆ. ವೀಣಾ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕುವೆಂಪು ವಿ.ವಿ. ಕುಲಸಚಿವ ಪ್ರೊ.ನವೀನ್‌ಕುಮಾರ್‌ ಎಚ್‌.ಕೆ., ಕಾಲೇಜಿನ ಹಿರಿಯ ವಿದ್ಯಾರ್ಥಿ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಪುರಸ್ಕೃತ ಎಚ್‌.ಮಂಜುನಾಥ್‌, ಪ್ರಾಚಾರ್ಯ ಪ್ರೊ. ಧನಂಜಯ ಕೆ.ಬಿ. ಪ್ರೊ. ಎನ್‌.ರಾಜೇಶ್ವರಿ, ಎನ್‌ಎಸ್‌ಎಸ್‌ ವಿಭಾಗದ ಸಂಚಾಲಕಿ ಡಾ. ಶುಭಾ ಮರವಂತೆ, ಎಂ.ಪರಶುರಾಮ್‌, ಪ್ರಾಧ್ಯಾಪಕ ಡಾ.ಶಿವಮೂರ್ತಿ, ಡಾ.ಕುಂದನ್‌ ಬಸವರಾಜ್‌, ಡಾ. ಕೆ.ವಿ.ಗಿರಿಧರ್‌, ಡಾ. ಕೆ.ಎಸ್‌.ಸರಳಾ, ವಿದ್ಯಾರ್ಥಿ ಪ್ರತಿನಿಧಿಗಳಾದ ಎಚ್‌.ತಾರಾದೇವಿ, ಉದಯ್‌ ಶಂಕರ್‌, ಚಿನ್ಮಯಿ, ಜಿ.ಕಾವ್ಯ ಉಪಸ್ಥಿತರಿದ್ದರು.