Shivamogga News : ರೈಲ್ವೆ ಓವರ್ ಬ್ರಿಡ್ಜ್ ಕಾಮಗಾರಿ : ಸಂಚಾರ ಮಾರ್ಗ ಬದಲು
- ರೈಲ್ವೆ ಓವರ್ ಬ್ರಿಡ್ಜ್ ಕಾಮಗಾರಿ : ಸಂಚಾರ ಮಾರ್ಗ ಬದಲು
- ತಾತ್ಕಾಲಿಕವಾಗಿ ಪರ್ಯಾಯ ಮಾರ್ಗಗಳಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ
ಶಿವಮೊಗ್ಗ(ಜ.04): ನಗರದ ಸವಳಂಗ ರಸ್ತೆಯ ರೈಲ್ವೆ ಗೇಟ್‌ಗೆ (Railway Gate) ರೈಲ್ವೆ ಓವರ್ ಬ್ರಿಡ್ಜ್ ಕಾಮಗಾರಿ ನಡೆಯುತ್ತಿದೆ. ಆದ್ದರಿಂದ ಸುಗಮ ಸಂಚಾರದ ದೃಷ್ಠಿಯಿಂದ ತಾತ್ಕಾಲಿಕವಾಗಿ ಪರ್ಯಾಯ ಮಾರ್ಗಗಳಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿ, ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಶಿವಮೊಗ್ಗ (Shivamogga) ದಿಂದ ಸವಳಂಗದ ಕಡೆ ಸಂಚರಿಸುವ ಬಸ್ ಮತ್ತು ಶಾಲಾ - ವಾಹನಗಳು (School) ಶಿವಮೊಗ್ಗ ಬಸ್ ಸ್ಟ್ಯಾಂಡ್ - ಸಾಗರ ರಸ್ತೆ - ಆಲ್ಕೊಳ ಸರ್ಕಲ್- ವಿನೋಬ ನಗರ ಪೊಲೀಸ್ ಚೌಕಿ -ಮೇದಾರ ಕೇರಿ- ಬೊಮ್ಮನಕಟ್ಟೆ ರೈಲ್ವೆ ಗೇಟ್- ಬಸವನಗಂಗೂರು- ಹುಣಸೋಡು- ಅಬ್ಬಲಗೆರೆ ಎಡಕ್ಕೆ ತಿರುಗಿ ಸವಳಂಗ ರಸ್ತೆಗೆ ಬಂದು ಸೇರಬೇಕು.
ಸವಳಂಗ ಕಡೆಯಿಂದ ಶಿವಮೊಗ್ಗ ನಗರಕ್ಕೆ ಬರುವ ಬಸ್ (Bus) ಮತ್ತು ಶಾಲಾ ವಾಹನಗಳು ನವುಲೆ ಗಣಪತಿ ದೇವಸ್ಥಾನದ ಎಡಕ್ಕೆ ತಿರುಗಿ ತ್ರಿಮೂರ್ತಿ ನಗರ- ರಾಗಿಗುಡ್ಡ ಚಾನಲ್ ಬಲಗಡೆ ಏರಿ ಮೇಲೆ -ಮಲ್ಲಿಕಾರ್ಜುನ ನಗರ- ನೆಕ್ಸಾ ಶೋ ರೂಂ ಹತ್ತಿರ ಬಲಗಡೆ -ಹೊನ್ನಾಳಿ ರಸ್ತೆ -ಸಂಗೊಳ್ಳಿ ರಾಯಣ್ಣ ಸರ್ಕಲ್- ಕೆಇಬಿ ಸರ್ಕಲ್- ಶಂಕರ ಮಠ ಸರ್ಕಲ್ ಮುಖಾಂತರ ಚಲಿಸಬೇಕು.
ಶಿವಮೊಗ್ಗದಿಂದ (Shivamogga) ಸವಳಂಗ ಕಡೆಗೆ ಹೊರಹೋಗುವ ಲಘು ವಾಹನಗಳೂ ಶಿವಮೊಗ್ಗ ಬಸ್‌ಸ್ಟ್ಯಾಂಡ್ -ಉಷಾ ನರ್ಸಿಂಗ್ ಹೋಂ ಕಡೆಯಿಂದ ಬರುವ ವಾಹನಗಳು ರಾಜ್‌ಕುಮಾರ್ ಸರ್ಕಲ್ (ಮೇದಾರ ಕೇರಿ)- ಬೊಮ್ಮನಕಟ್ಟೆರೈಲ್ವೆಗೆಟ್ ಬಲಗಡೆಯಿಂದ -ಕೀರ್ತಿನಗರ- ಅಶ್ವತ್ ನಗರ- ಎಲ್‌ಬಿಎಸ್ ನಗರ 2ನೇ ಕ್ರಾಸ್ ಮೂಲಕ ಸವಳಂಗ ರಸ್ತೆ ಸೇರಬೇಕು.
ಸವಳಂಗ ಕಡೆಯಿಂದ ಶಿವಮೊಗ್ಗಕ್ಕೆ ಬರುವ ಲಘು ವಾಹನಗಳು (Vehicle) ನವುಲೆ ಗಣಪತಿ ದೇವಸ್ಥಾನದಿಂದ ತ್ರಿಮೂರ್ತಿ ನಗರ- ರಾಗಿಗುಡ್ಡ ಚಾನಲ್ ಬಲಗಡೆ ಏರಿ ಮೇಲೆ - ಮಲ್ಲಿಕಾರ್ಜುನ ನಗರ- ನೆಕ್ಸಾ ಶೋ ರೂಂ ಹತ್ತಿರ ಬಲಗಡೆ -ಹೊನ್ನಾಳಿ ರಸ್ತೆ -ಸಂಗೊಳ್ಳಿ ರಾಯಣ್ಣ ಸರ್ಕಲ್- ಕೆಇಬಿ ಸರ್ಕಲ್- ಶಂಕರಮಠ ಸರ್ಕಲ್ ಮುಖಾಂತರ ಚಲಿಸಬೇಕು.
ಶಿವಮೊಗ್ಗದಿಂದ ಸವಳಂಗ ಕಡೆಗೆ ಹೊರಹೋಗುವ ಲಾರಿ ಮತ್ತು ಭಾರಿ ವಾಹನಗಳು ಶಿವಮೊಗ್ಗ ಬಸ್‌ಸ್ಟ್ಯಾಂಡ್- ಆಲ್ಕೊಳ ಸರ್ಕಲ್- ಆಯನೂರು- ಹಾರನಹಳ್ಳಿ ಮಾರ್ಗದ ಮೂಲಕ ಸವಳಂಗ ಸೇರಬೇಕು. ಎಂಆರ್‌ಎಸ್ ಸರ್ಕಲ್- ಸಂದೇಶ್ ಮೋಟಾರ್ಸ್ ಸರ್ಕಲ್- ಗೋಪಾಳ- ಆಲ್ಕೋಳ ಸರ್ಕಲ್ -ಆಯನೂರು -ಹಾರನಹಳ್ಳಿ- ಸವಳಂಗ ಸೇರುವುದು. ಸವಳಂಗದಿಂದ ಶಿವಮೊಗ್ಗ ಕಡೆಗೆ ಬರುವ ಲಾರಿ ಮತ್ತು ಭಾರಿ ವಾಹನಗಳು ಸವಳಂಗ -ಹಾರನಹಳ್ಳಿ -ಆಯನೂರು -ಆಲ್ಕೊಳ ಸರ್ಕಲ್ -ಗೋಪಾಳ- ಸಂದೇಶ ಮೋಟಾರ್ಸ್ ಸರ್ಕಲ್ ಕಡೆಗೆ ಸಂಚರಿಸಲು ಅವಕಾಶ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ (DC) ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.
ಶಿವಮೊಗ್ಗ ನಗರಕ್ಕೆ ಯಶವಂತಪುರದಿಂದ ವಿಸ್ಟಾಡೋಮ್ ಕೋಚ್ : ಪ್ರಯಾಣಿಕರ ಅನುಕೂಲಕ್ಕಾಗಿ ಯಶವಂತಪುರ - ಶಿವಮೊಗ್ಗ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲಿಗೆ ( Intercity express Train ) ತಾತ್ಕಾಲಿಕವಾಗಿ ಎಸಿ ವಿಸ್ಟಾಡೋಮ್ ಕೋಚ್‌ನ್ನು (vistadome coach ) ಸೇರ್ಪಡೆ ಮಾಡಲಾಗಿದೆ. ಡಿ.25 ರಿಂದ ಮಾರ್ಚ್ 31 ರವರೆಗೆ ವಿಸ್ಟಾಡೋಮ್ ಕೋಚ್ ಸೌಲಭ್ಯ ನೀಡಲಾಗುವುದು ಎಂದು ನೈರುತ್ಯ ರೇಲ್ವೆ (Railway) ತಿಳಿಸಿದೆ.
ವಿಸ್ಟಾಡೋಮ್ ಕೋಚ್ ಆರಾಮದಾಯಕ ಆಸನ ವ್ಯವಸ್ಥೆ ಹೊಂದಿರುತ್ತದೆ. ರೈಲಿನ ಕೋಚ್ ನಲ್ಲಿ ಸೀಟುಗಳನ್ನು 180 ಡಿಗ್ರಿಯಲ್ಲಿ ಅನುಕೂಲಕ್ಕೆ ತಕ್ಕಂತೆ ತಿರುಗಿಸಬಹುದಾಗಿದೆ. ಅಗಲವಾದ ಗಾಜಿನ ಕಿಟಕಿಗಳ ಮೂಲಕ ಪ್ರಯಾಣದುದ್ದಕ್ಕೂ ಪ್ರಕೃತಿಯ ಸೌಂದರ್ಯವನ್ನು ವೀಕ್ಷಿಸಬಹುದಾಗಿದೆ. ಪ್ರತಿ ಕೋಚ್ 44 ಸೀಟ್ ವ್ಯವಸ್ಥೆ ಹೊಂದಿರುತ್ತದೆ. ಈ ರೈಲು ಯಶವಂತಪುರದಿಂದ ಬೆಳಗ್ಗೆ 9- 15 ಕ್ಕೆ ಹೊರಟರೆ ಮಧ್ಯಾಹ್ನಾ 2.30ಕ್ಕೆ ಶಿವಮೊಗ್ಗ ತಲುಪಲಿದೆ.