* ಪಶ್ಚಿಮ ಘಟ್ಟದ ಪ್ರಕೃತಿ ಸೌಂದರ್ಯ ಆಸ್ವಾದಿಸಲು ವಿಸ್ಟಾಡೋಮ್ ರೈಲು ಸಂಚಾರ ಆರಂಭ* ವಿಸ್ಟಾಡೋಮ್‌ ಬೋಗಿಗಳ ರೈಲಿಗೆ ಹಸಿರು ನಿಶಾನೆ ತೋರಿಸಿದ ಕಟೀಲ್‌* ಕರ್ನಾಟಕದಲ್ಲಿ ಮಾತ್ರ ಎರಡು ವಿಸ್ಟಾಡೋಮ್‌ ಬೋಗಿ ಹೊಂದಿರುವುದು ಗಮನಾರ್ಹ 

ಮಂಗಳೂರು(ಜು.12): ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಪ್ರವಾಸೋದ್ಯಮ ಉತ್ತೇಜಿಸುವ ಸಲುವಾಗಿ ಮಂಗಳೂರು-ಬೆಂಗಳೂರು ಮಧ್ಯೆ ಹಗಲು ಹೊತ್ತು ಪಶ್ಚಿಮ ಘಟ್ಟದ ಪ್ರಕೃತಿ ಸೌಂದರ್ಯ ಆಸ್ವಾದಿಸಲು ಗಾಜಿನ ಛಾವಣಿ ಹೊಂದಿರುವ (ವಿಸ್ಟಾಡೋಮ್‌) ಬೋಗಿಯ ರೈಲು ಸಂಚಾರ ಆರಂಭಿಸಲಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದಕ್ಷಿಣ ಕನ್ನಡ ಸಂಸದ ನಳಿನ್‌ ಕುಮಾರ್‌ ಕಟೀಲು ಭಾನುವಾರ ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣದಲ್ಲಿ ಯಶವಂತಪುರ- ಮಂಗಳೂರು ನಡುವೆ ಸಂಚರಿಸುವ ವಿಸ್ಟಾಡೋಮ್‌ ಬೋಗಿಗಳ ರೈಲಿಗೆ ಹಸಿರು ನಿಶಾನೆ ತೋರಿಸಿದರು.

ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲೇ ಈ ಬೋಗಿಯ ರೈಲು ಸಂಚಾರ ಇದು ಪ್ರಥಮ. ಮುಂಬೈನಲ್ಲಿ ಈಗಾಗಲೇ ಒಂದು ವಿಸ್ಟಾಡೋಮ್‌ ಬೋಗಿ ಅಳವಡಿಸಲಾಗಿದ್ದರೆ, ಕರ್ನಾಟಕದಲ್ಲಿ ಮಾತ್ರ ಎರಡು ವಿಸ್ಟಾಡೋಮ್‌ ಬೋಗಿ ಹೊಂದಿರುವುದು ಗಮನಾರ್ಹ. ಭಾನುವಾರ ಪ್ರಥಮ ಪ್ರಯಾಣದಲ್ಲಿ ಎಲ್ಲ ಎರಡು ಬೋಗಿಗಳೂ ಭರ್ತಿಯಾಗಿದ್ದವು.

ಬೆಂಗಳೂರು-ಮಂಗಳೂರು ಮಧ್ಯೆ ನೂತನ ವಿಸ್ಟಾಡೋಮ್‌ ರೈಲು

ಈ ರೈಲು ಪ್ರತಿದಿನ ಬೆಳಗ್ಗೆ 11.30ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಟು ರಾತ್ರಿ 8.20ಕ್ಕೆ ಯಶವಂತಪುರ ತಲುಪಲಿದೆ. ಭಾನುವಾರ ಮಾತ್ರ ಬೆಳಗ್ಗೆ 9.15ಕ್ಕೆ ಹೊರಟು ರಾತ್ರಿ 8.05ಕ್ಕೆ ಬೆಂಗಳೂರು ತಲುಪಲಿದೆ. ಟಿಕೆಟ್‌ ದರ 1395 ರು. 

ಏನಿದರ ವಿಶೇಷತೆ?

- ರೈಲಿನೊಳಗೆ ಕುಳಿತು ಗಾಜಿನ ಛಾವಣಿಯಲ್ಲಿ ಪ್ರಕೃತಿ ಸೌಂದರ್ಯ ಸವಿಯಬಹುದು
- ಬೆಂಗಳೂರು-ಮಂಗಳೂರು ರೈಲಲ್ಲಿ 2 ಬೋಗಿ ಅಳವಡಿಕೆ, ಪ್ರತಿ ಬೋಗಿಯಲ್ಲಿ 44 ಸೀಟು
- ವಿಸ್ಟಾಡೋಮ್‌ ಬೋಗಿಯಲ್ಲಿನ ಆಸನಗಳು 360 ಡಿಗ್ರಿಯಷ್ಟು ತಿರುಗುತ್ತವೆ
- ಅಗಲವಾದ ದೊಡ್ಡ ಕಿಟಕಿ, ಓವೆನ್‌, ಫ್ರಿಜ್‌, ಜೈವಿಕ ಶೌಚಾಲಯ ಇರುತ್ತದೆ