'ಸಿಎಂ ಬಿಎಸ್‌ವೈಗೆ ಕಂಟಕ : ಅನಾಹುತಕ್ಕಿಂತ ಮುಂಚೆ ಬಿಎಸ್‌ವೈ ನಿವೃತ್ತಿ ಒಳಿತು '

  • ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಹೊಗಳು ಭಟರಿಂದ ಕಂಟಕ
  • ಆಗುವ ಅನಾಹುತಗಳಿಗಿಂತಲೂ ಮುಂಚೆಯೇ ಅವರು ಗೌರವಯುತವಾಗಿ ರಾಜಕೀಯ ನಿವೃತ್ತಿ ಉತ್ತಮ
  • ಯಾವುದೇ ರಾಷ್ಟ್ರೀಯ ನಾಯಕರು ನನ್ನನ್ನು ಸಂಪರ್ಕಿಸಿಲ್ಲ ಎಂದ ಶಾಸಕ
respectful retirement is best for CM BS yediyurappa Says Yatnal snr

ವಿಜಯಪುರ (ಜೂ.06): ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಹೊಗಳು ಭಟರಿಂದ ಕಂಟಕವಿದೆ ಎಂದು ಭವಿಷ್ಯ ನುಡಿದಿರುವ ಬಸನಗೌಡ ಪಾಟೀಲ್‌ ಯತ್ನಾಳ್‌, ಮುಂದೆ ಆಗುವ ಅನಾಹುತಗಳಿಗಿಂತಲೂ ಮುಂಚೆಯೇ ಅವರು ಗೌರವಯುತವಾಗಿ ರಾಜಕೀಯ ನಿವೃತ್ತಿ ಹೊಂದಬೇಕು ಸಲಹೆ ನೀಡಿದ್ದಾರೆ. 

ಶನಿವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಸಿಎಂ ಮೂವರು ಹೊಗಳು ಭಟರನ್ನು ಇಟ್ಟುಕೊಂಡಿದ್ದಾರೆ. ಬರುವ ದಿನಗಳಲ್ಲಿ ಅವರಿಗೆ ಹೊಗಳುಭಟರಿಂದ ಬಹಳ ದೊಡ್ಡ ಅಪಾಯ ಕಾದಿದೆ ಎಂದರು.

'ಯಡಿಯೂರಪ್ಪ ಸ್ಥಾನಕ್ಕೆ ಕಂಟಕ : ವಿಜಯೇಂದ್ರ ವ್ಯವಸ್ಥಿತ ತಂತ್ರ' .

ಇದೇ ವೇಳೆ ಸಿಎಂ ಯಡಿಯೂರಪ್ಪ ಶಾಸಕಾಂಗ ಪಕ್ಷದ ಸಭೆ ಏಕೆ ಕರೆಯುತ್ತಿಲ್ಲ? ಅದಕ್ಕೆ ಮುಖ್ಯಮಂತ್ರಿಗಳಿಗೆ ಹೆದರಿಕೆ ಏಕೆ ಎಂದು ಯತ್ನಾಳ ಪ್ರಶ್ನಿಸಿದರು.

ಹೊಗಳುಭಟರಿಂದ ಹೊರಬರದಿದ್ದರೆ ಬಹಳ ಅಪಮಾನಕಾರಿಯಾಗಿ ರಾಜಕೀಯ ನಿವೃತ್ತಿ ಹೊಂದಬೇಕಾಗುತ್ತದೆ. ಮುಂದೆ ಆಗುವ ಅನಾಹುತಗಳಿಗೆ ಕಾರಣವಾಗದೇ ಗೌರವಯುತವಾಗಿ ರಾಜಕೀಯದಿಂದ ನಿವೃತ್ತಿಯಾಗಬೇಕು ಎಂದು ಅಭಿಪ್ರಾಯಪಟ್ಟರು.

ರಾಷ್ಟ್ರೀಯ ನಾಯಕರು ಸಂಪರ್ಕಿಸಿಲ್ಲ:  ನಾಯಕತ್ವ ಬದಲಾವಣೆ ಕುರಿತು ಅತೃಪ್ತ ಶಾಸಕರ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್‌ ಒನ್‌ಟುಒನ್‌ ಸಭೆ ನಡೆಸಲಿದ್ದು ಅದಕ್ಕೆ ಯತ್ನಾಳಗೆ ಆಹ್ವಾನ ನೀಡಿಲ್ಲ ಎನ್ನುವುದು ಸುಳ್ಳು ಸುದ್ದಿಯಾಗಿದೆ. ನನ್ನ ಜತೆಗೆ ರಾಷ್ಟ್ರೀಯ ನಾಯಕರು ಮಾತನಾಡುತ್ತಾರೆ ಎಂಬುವುದು ಕೂಡ ಶುದ್ಧ ಸುಳ್ಳಾಗಿದ್ದು ಇಲ್ಲಿಯವರೆಗೆ ಯಾವುದೇ ರಾಷ್ಟ್ರೀಯ ನಾಯಕರು ನನ್ನನ್ನು ಸಂಪರ್ಕಿಸಿಲ್ಲ ಎಂದು ಸ್ಪಷ್ಟಪಡಿಸಿದರು.

Latest Videos
Follow Us:
Download App:
  • android
  • ios