ವಿಜಯಪುರ (ಮೇ.31):  ಕೊರೋನಾ ಮಹಾಮಾರಿ ರಾಜ್ಯದಲ್ಲಿ ಈಗ ನಿಯಂತ್ರಣಕ್ಕೆ ಬರುತ್ತಿದೆ.  ಕೊರೋನಾ ಹಾವಳಿ ಎಲ್ಲೆಲ್ಲಿ ಕಡಿಮೆಯಾಗಿದೆ ಅಲ್ಲಿ ಲಾಕ್ ಡೌನ್ ತೆಗೆಯಬೇಕು.  ಉದ್ಯೋಗ ಸೃಷ್ಟಿ ಆಗುವಂತೆ ಸಹಕಾರವನ್ನು ರಾಜ್ಯ ಸರ್ಕಾರ ಮಾಡಬೇಕು ಎಂದು ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.  

ವಿಜಯಪುರದಲ್ಲಿಂದು ಮಾತನಾಡಿದ ಬಿಜೆಪಿ ಮುಖಂಡ ಬಸನಗೌಡ ಪಾಟೀಲ್  ರಾಜಕೀಯ ಕುರ್ಚಿ ಸಲುವಾಗಿ ಲಾಕ್ ಡೌನ್ ದುರುಪಯೋಗ ಆಗಬಾರದು.  ಲಾಕ್ ಡೌನ್ ಮುಂದೆವರೆಸುವ ಚರ್ಚೆ ಅನವಶ್ಯಕ.  7 ನೇ ತಾರಿಕಿನ ಒಳಗೆ ಲಾಕ್ ಡೌನ್ ಅನ್ನು ಹಂತ ಹಂತವಾಗಿ ಕಡಿಮೆ ಮಾಡಬೇಕು ಎಂದು ಶಾಸಕ ಯತ್ನಾಲ್ ಹೇಳಿದರು. 

ಲಿಂಗಾಯತ ಮಠಾಧೀಶರಿಗೆ ವಿಜಯೇಂದ್ರ ತಮ್ಮ ಚೇಲಾಗಳ ಮೂಲಕ ಆಮಿಷ ಒಡ್ಡುತ್ತಿದ್ದಾರೆ.  ಯಡಿಯೂರಪ್ಪ ನವರ ಸ್ಥಾನಕ್ಕೆ ಕಂಟಕ ಬರುತ್ತಿದೆ, ನೀವು ಕೇಂದ್ರ ಸರ್ಕಾರಕ್ಕೆ ಬಯ್ಯಿರಿ, ನರೇಂದ್ರ ಮೋದಿಗೆ ಬಾಯಿಗೆ ಬಂದಂಗೆ ಬಯ್ಯಿರಿ ಎಂದು ವಿಜಯೇಂದ್ರ ವ್ಯವಸ್ಥಿತ ತಂತ್ರ ಹೆಣೆದಿದ್ದಾನೆ.  ಈಗಾಗಲೇ ಹಲವರನ್ನು ಭೇಟಿಯಾಗುವ ಕಾರ್ಯಕ್ರಮ ಆರಂಭಿಸಿದ್ದಾರೆ ಎಂದರು. 

ಸಿಎಂ ಕರೆದ ಸಭೆಗೆ ಯತ್ನಾಳ್ ಗೈರು: ಎಲ್ಲವೂ ಸರಿ ಇಲ್ಲ ಎನ್ನುವುದು ಮತ್ತೊಮ್ಮೆ ಸಾಬೀತು .

ನಾನು ಮಠಾಧೀಶರಿಗೆ ಸಾಮಾಜಿಕ ಜಾಲ ತಾಣದ ಮೂಲಕ ವಿನಂತಿ ಮಾಡಿಕೊಂಡಿದ್ದೇನೆ.  ಯಡಿಯೂರಪ್ಪನವರ ಕುಟುಂಬದಿಂದ ನಮ್ಮ ಲಿಂಗಾಯತರ ಮಾನ ಮರ್ಯಾದೆ ಹಾಳಾಗಿದೆ.  ವೀರಶೈವ ಲಿಂಗಾಯತರಲ್ಲಿ ಒಳ್ಳೆಯ ಮುಖ್ಯಮಂತ್ರಿಗಳಾಗಿ ಹೋಗಿದ್ದಾರೆ.  ನಿಜಲಿಂಗಪ್ಪನವರು, ಜೆ ಎಚ್ ಪಟೇಲರು ವಿರೇಂದ್ರ ಪಾಟೀಲರಂತೆ ಇವರು ಒಳ್ಳೆಯ ಮುಖ್ಯಮಂತ್ರಿಗಳಾಗಿದ್ದರೆ ನಾವು ಬೆಂಬಲಿಸುತ್ತಿದ್ದೆವು. ಆದರೆ ಇಂದು ಇಡೀ ಕುಟುಂಬ ಲೂಟಿಗೆ ನಿಂತಿದೆ.  ಉದಾಹರಣೆಗೆ ಜಿಂದಾಲ್ 3666 ಎಕರೆ ಭೂಮಿಯನ್ನು ಒಂದು ಲಕ್ಷ ಇಪ್ಪತ್ತೈದು ಸಾವಿರದಂಗೆ ಕೊಡುತ್ತಾರೆ ಎಂದರು.

ಇನ್ನು ಇಡೀ ದೇಶದ ಯಾವುದೇ ಮೂಲೆಯಲ್ಲಾದರೂ 1ಲಕ್ಷ 25 ಸಾವಿರ ಬೆಲೆಗೆ ಇಡೀ ದೇಶದಲ್ಲಿ ಎಲ್ಲಾದರೂ ಭೂಮಿ‌ ಸಿಗತ್ತಾ ಹೇಳಲಿ. ಈ ಭೂಮಿ ವಿಚಾರದಲ್ಲಿ ಮೂರುವರೆ ಸಾವಿರ ಕೋಟಿಯಷ್ಟು  ಅವ್ಯವಹಾರ ವಾಗಿದೆ.  ವಿಜಯೇಂದ್ರ ನಿನ್ನೆ 16 ಆಂಬುಲೆನ್ಸ್ ಕೊಟ್ಟು ಮೈ ಸೇವಾ ಎಂದು ಆಂಬುಲೆನ್ಸ್ ಕೊಟ್ಟಿದ್ದಾರೆ.  ಅಂದರೆ ಮೈತ್ರಾದೇವಿ ಯಡಿಯೂರಪ್ಪ ಸೇವಾ ಎಂಬ ಹೆಸರಿನಲ್ಲಿ ಕೊಟ್ಟಿದ್ದಾರೆ. 

ಒಬ್ಬ ರಾಜ್ಯದ ಮುಖ್ಯಮಂತ್ರಿ ಹೆಸರಿಟ್ಟುಕೊಂಡು ಎಲ್ಲ ವಿಧಾನ ಸಭೆಗೆ ಒಂದು ಆಂಬುಲೆನ್ಸ್ ಕೊಡಬೇಕಿತ್ತು.  3500 ಕೋಟಿ ಕೊಟ್ಟಿದ್ದರೆ ಗ್ರಾಮ ಪಂಚಾಯತಿಗೆ ಒಂದು ನೂರು ಬೆಡ್ ನ ಆಸ್ಪತ್ರೆ ಮಾಡಬಹುದಿತ್ತು.  ಒಂದಿಷ್ಟು ಆಂಬುಲೆನ್ಸ್ ಕೊಟ್ಟು ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸ ವಿಜಯೇಂದ್ರ ಮಾಡುತ್ತಿದ್ದಾರೆ ಎಂದ ಶಾಸಕ ಯತ್ನಾಳ್ ವಾಕ್‌ ಪ್ರಹಾರ ನಡೆಸಿದರು.