Asianet Suvarna News Asianet Suvarna News

ಚಿತ್ರ ವಿಚಿತ್ರ ಹರಕೆ ಚೀಟಿ ಜೊತೆ ಸವದತ್ತಿ ಯಲ್ಲಮ್ಮನ ಹುಂಡಿಗೆ ಕೋಟ್ಯಂತರ ಹಣ!

  • ಸವದತ್ತಿ ಯಲ್ಲಮ್ಮ ದೇವಿ ಹುಂಡಿಯಲ್ಲಿ ಚಿತ್ರ ವಿಚಿತ್ರ ಹರಕೆಯ ಬರಹಗಳ ಚೀಟಿಗಳು ಪತ್ತೆ..!
  • ತಾಯಿಯಿಂದ ಮಗಳ ಮದುವೆಗೆ ಹರಕೆ.. ಹೆಂಡತಿಯಿಂದ ಗಂಡನ ಕುಡಿತದ ಚಟ ಬಿಡಿಸುವಂತೆ ಹರಕೆ..!
  • ಸಾಲದ ಹಣ ಮರಳಿ ಕೊಡಿಸು, ಪಿಎಸ್ಐ ಹುದ್ದೆ ಕರುಣಿಸು ಹೀಗೆ ಭಕ್ತರಿಂದ ತಾಯಿಗೆ ನಾನಾ ಬೇಡಿಕೆ
Record found collection at Saundatti Yellamma Temple belagavi gow
Author
Bengaluru, First Published Mar 25, 2022, 12:40 PM IST

ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್

ಬೆಳಗಾವಿ (ಮಾ.25): 'ತಾಯಿ ಯಲ್ಲಮ್ಮ ದೇವಿ ನನ್ನ ಗಂಡನ ಕುಡಿತದ ಚಟವನ್ನು ಬಿಡಿಸು‌. ಗಂಡನ ಕುಡುಕ ಸ್ನೇಹಿತರನ್ನು ಅವರಿಂದ ದೂರ ಮಾಡು. ಕುಡುಕರು ನನ್ನ ಗಂಡನ ಜೊತೆಗೆ ಸ್ನೇಹ ಮಾಡದಂತೆ ನೋಡಿಕೊಳ್ಳು ತಾಯಿ‌. ನನಗೆ ಪಿಎಸ್‍ಐ ಹುದ್ದೆ ಕರುಣಿಸು, ಮೊದಲ ಸಂಬಳ ನಿನ್ನ ಹು‌ಂಡಿಗೆ ಹಾಕುವೆ. ಅಮ್ಮ ನನ್ನ ಬಳಿ ಸಾಲ ಪಡೆದವರು ನಿನ್ನ ದಯೆಯಿಂದ ಮರಳಿಸುವಂತೆ ಮಾಡು. ತಾಯಿ ನಾನು ಇಷ್ಟಪಟ್ಟವರೊಂದಿಗೆ ನನಗೆ ವಿವಾಹ ಆಗುವಂತೆ ಮಾಡು. ನನ್ನ ಮಗಳಿಗೆ ನಮಗಿಂತ ನೂರು ಪಟ್ಟು ಅಧಿಕ ಆಸ್ತಿ ಇರುವ ಯುವಕನ ಜೊತೆ ಕಲ್ಯಾಣ ಪ್ರಾಪ್ತಿಗೊಳಿಸು' ಇವೆಲ್ಲಾ ಭಕ್ತರು ತಾಯಿ ಯಲ್ಲಮ್ಮ ದೇವಿಯ ಹುಂಡಿಗೆ ಹಾಕಿದ ಚೀಟಿಗಳಲ್ಲಿ ಇರುವ ಸಾರಾಂಶ.

ಕಳೆದ ನಾಲ್ಕು ದಿನಗಳಿಂದ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಯಲ್ಲಮ್ಮದೇವಿಯ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯುತ್ತಿದೆ. ಫೆಬ್ರವರಿ 1 ರಿಂದ ಮಾರ್ಚ್ 15ರ ಅವಧಿಯಲ್ಲಿ ದಾಖಲೆಯ ಮೊತ್ತದ ಕಾಣಿಕೆ ಸಂಗ್ರಹವಾಗಿದೆ. ಒಟ್ಟು 1 ಕೋಟಿ 46 ಲಕ್ಷ 50 ಸಾವಿರದ  695 ರೂ ಮೌಲ್ಯದ ಹಣ, ಚಿನ್ನಾಭರಣ‌ ಸಂಗ್ರಹವಾಗಿದೆ. ನಾಲ್ಕು ದಿನಗಳ ಕಾಲ ನಡೆದ ಹುಂಡಿ ಎಣಿಕೆಯಲ್ಲಿ  1,30,96,190 ಹಣ, 12,45,610 ಬಂಗಾರ, ಮತ್ತು 3,08,895 ರೂ ಬೆಳ್ಳಿ  ಸೇರಿ ಒಟ್ಟು ಹಣ 1,46,50,695 ಹಣ ಸಂಗ್ರಹವಾಗಿದೆ.

ಹಣ, ಚಿನ್ನಾಭರಣ‌ ಜೊತೆ ಚಿತ್ರ ವಿಚಿತ್ರ ಹರಕೆ ಚೀಟಿಗಳು ಸಹ ಪತ್ತೆಯಾಗಿವೆ. ಕೋಟಿ ಕೋಟಿ ದೇಣಿಗೆ ಹಣದ ಜೊತೆಗೆ ಹರಕೆ ಚೀಟಿಯನ್ನು ಸಹ ಭಕ್ತರು ಹುಂಡಿಗೆ ಹಾಕಿದ್ದಾರೆ. ದೇಶದ ನಾನಾ ಭಾಗಗಳಿಂದ ಸವದತ್ತಿ ಯಲ್ಲಮ್ಮನಗುಡ್ಡಕ್ಕೆ ಆಗಮಿಸಿದ ಭಕ್ತರು, ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಹಾಳೆಗಳಲ್ಲಿ ಬರೆದು ಹುಂಡಿಯಲ್ಲಿ ಹಾಕಿದ್ದಾರೆ. ಅವುಗಳನ್ನು ಈಡೇರಿಸಿದರೆ ಹರಕೆ ತೀರಿಸುವುದಾಗಿಯೂ ತಿಳಿಸಿದ್ದಾರೆ. ಹೆಚ್ಚಿನವರು ತಮ್ಮ ಮಗ ಅಥವಾ ಮಗಳಿಗೆ ಉತ್ತಮ ವಧು-ವರನನ್ನು ಕರುಣಿಸುವಂತೆ ಕೇಳಿಕೊಂಡಿದ್ದಾರೆ.

ಬಸ್‌ ಸಿಗದೆ ಲಗೇಜ್‌ ಆಟೋದಲ್ಲಿ ಕುರಿಗಳ ರೀತಿ ಪಾವಗಡ ಜನರ ಪ್ರಯಾಣ!

ನಾಲ್ಕು ದಿನಗಳ ಎಣಿಕೆವೇಳೆ ಯಲ್ಲಮ್ಮಾ ದೇವಸ್ಥಾನ ಹುಂಡಿಯಲ್ಲಿ 1.30 ಕೋಟಿ ರೂ ಸಂಗ್ರಹವಾಗಿದೆ ಎಂದು ಸವದತ್ತಿ ಯಲ್ಲಮ್ಮ ದೇವಸ್ಥಾನ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಉಳ್ಳಾಗಡ್ಡಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ 12.45 ಲಕ್ಷ ರೂ ಮೌಲ್ಯದ ಚಿನ್ನ ಹಾಗೂ 3.08 ಲಕ್ಷದ ಬೆಳ್ಳಿ ಆಭರಣಗಳನ್ನು ಭಕ್ತರು ದೇವಿಗೆ ಕಾಣಿಕೆಯಾಗಿ ನೀಡಿದ್ದಾರೆ. ಹಲವರು ತಮ್ಮ ಇಷ್ಟಾರ್ಥಗಳನ್ನು ಇಡೇರಿಸುವಂತೆ ದೇವಿಗೆ ಪತ್ರವನ್ನು ಬರೆದು ಹುಂಡಿಯಲ್ಲಿ ಹಾಕಿದ್ದಾರೆ. ಮುಂದಿನ ವಾರ ಮಾರ್ಚ್ 28 ಹಾಗೂ ಮಾರ್ಚ್ 29ರಂದು ಇನ್ನೂ ಎರಡು ದಿನಗಳ ಕಾಲ ಹುಂಡಿ ಎಣಿಕೆ ಕಾರ್ಯ ನಡೆಯಲಿದೆ ಎಂದು ತಿಳಿಸಿದ್ದಾರೆ.

ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ, ಸದಸ್ಯರಾದ ಕೋಳ್ಳಪ್ಪಗೌಡ ಗಂದಿಗವಾಡ, ವಾಯ್ ವಾಯ್ ಕಾಳಪ್ಪನ್ನವರ, ಪುಂಡಲೀಕ ಮೇಟಿ, ರಾಜೇಶ್ವರಿ ಚಂದರಗಿ, ಲಕ್ಷ್ಮೀ ಹೂಲಿ, ಬೆಳಗಾವಿ ಸಹಾಯಕ ಧಾರ್ಮಿಕ ಧತ್ತಿ ಇಲಾಖೆ ಬಸವರಾಜ ಜಿರಗಾಳ, ಸವದತ್ತಿ ತಹಶೀಲ್ದಾರ ಪ್ರಶಾಂತ ಪಾಟೀಲ, ಸವದತ್ತಿ ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಚನ್ನಪ್ಪನವರ, ದೇವಸ್ಥಾನ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ ಮಳಗೆ, ನಾಗರತ್ನಾ ಚೋಳಿನ, ಅಭಿಯಂತರ ಎ ವ್ಹಿ ಮೂಳ್ಳೂರ, ಕಿರಿಯ ಅಭಿಯಂತರ ಡಿ ಆರ್ ಚವ್ಹಾಣ, ಎಸ್ ಎಲ್ ಯಲಿಗಾರ, ಎಎಸ್‍ಆಯ್ ಎನ್ ವ್ಹಿ ಧಾರವಾಡ, ಪಿ ಎಫ್ ಗೋವನಕೊಪ್ಪ ಸೇರಿ ಇತರರು ಹುಂಡಿ ಎಣಿಕೆ ಕಾರ್ಯ ವೇಳೆ ಉಪಸ್ಥಿತರಿದ್ದರು.

TRANSGENDER STUDENTS HARASSED ಮಂಗಳಮುಖಿ ವಿದ್ಯಾರ್ಥಿಗಳಿಂದ ಪ್ರತ್ಯೇಕ ಹಾಸ್ಟೆಲ್ ಗಾಗಿ ಅರ್ಜಿ

Follow Us:
Download App:
  • android
  • ios