Transgender Students Harassed ಮಂಗಳಮುಖಿ ವಿದ್ಯಾರ್ಥಿಗಳಿಂದ ಪ್ರತ್ಯೇಕ ಹಾಸ್ಟೆಲ್ ಗಾಗಿ ಅರ್ಜಿ

ರಾಜ್ಯದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮಂಗಳಮುಖಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಹಾಸ್ಟೆಲ್ ಗಳನ್ನು ನೀಡಬೇಕೆಂದು ಮನವಿ ಬಂದಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ನೀಡಿದೆ.

Transgender Students Harassed In Hostels Plea In Karnataka High Court For Separate Accommodation gow

ಬೆಂಗಳೂರು (ಮಾ.25): ರಾಜ್ಯದ ಎಲ್ಲಾ ಉನ್ನತ ಶಿಕ್ಷಣ (Higher Education) ಸಂಸ್ಥೆಗಳಲ್ಲಿ ತೃತೀಯಲಿಂಗಿ (Transgender) ವಿದ್ಯಾರ್ಥಿಗಳಿಗೆ ಪ್ರತ್ಯೇಕ ಹಾಸ್ಟೆಲ್‌ಗಳನ್ನು ಒದಗಿಸುವಂತೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ( public interest litigation ) ಕುರಿತು ಕರ್ನಾಟಕ ಹೈಕೋರ್ಟ್ (Karnataka High Court) ರಾಜ್ಯ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿದೆ.

ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ (Chief Justice Ritu Raj Awasthi ) ಮತ್ತು ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ (Justice SR Krishna Kumar ) ಅವರಿದ್ದ ವಿಭಾಗೀಯ ಪೀಠವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (Department of Women and Child Development), ಉನ್ನತ ಶಿಕ್ಷಣ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯಕ್ಕೆ ನೋಟಿಸ್ ಜಾರಿ ಮಾಡಿದೆ. ಅಲ್ಲದೆ ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ ತುರ್ತು ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಜೂನ್ 6ಕ್ಕೆ ಮುಂದೂಡಿದೆ.

ತಮ್ಮ ಸ್ವಘೋಷಿತ ಲಿಂಗಕ್ಕೆ ಅನುಗುಣವಾಗಿ ವ್ಯವಸ್ಥೆಗಳನ್ನು ನೀಡಲು ನಿರಾಕರಿಸುವುದು ಆರ್ಟಿಕಲ್ 14-15 ರ ಅಡಿಯಲ್ಲಿ ಸಮಾನತೆಯ ಉಲ್ಲಂಘನೆಯಾಗುತ್ತದೆ ಎಂದು ಅರ್ಜಿದಾರರಾದ ಡಾ.ತ್ರಿನೇತ್ರ ಹಲಾದರ್ ಗುಮ್ಮರಾಜು (Dr Trinetra Haladar Gummaraju) ಮನವಿಯಲ್ಲಿ ಹೇಳಿ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಲಿಂಗ ಗುರುತನ್ನು ಮಂಗಳಮುಖಿ ಎಂದು ನಮೂದಿಸಲು ಅವಕಾಶ ನೀಡಬೇಕು ಹಾಗೂ ಅವರಿಗಾಗಿ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಮಾಡಬೇಕು ಎಂದು ಹೈಕೋರ್ಟ್ ಗೆ ಮನವಿ ಮಾಡಿದ್ದರು.

Karnataka CET Schedule 2022 ಮಾರ್ಚ್ 25 ರಂದು ವೇಳಾಪಟ್ಟಿ ಪ್ರಕಟ

ಇದಲ್ಲದೆ, ತೃತೀಯಲಿಂಗಿ ವಿದ್ಯಾರ್ಥಿಗಳ (transgender students) ಪ್ರವೇಶಕ್ಕಾಗಿ ಮಾರ್ಗಸೂಚಿಗಳನ್ನು ರೂಪಿಸಲು ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ನಿರ್ದೇಶನಗಳನ್ನು ನೀಡುವಂತೆ ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದಾರೆ. ಜೊತೆಗೆ ಸ್ವಯಂ ಘೋಷಣೆ ಅಫಿಡವಿಟ್‌ಗಳನ್ನು ಒದಗಿಸುವ ಮೂಲಕ ವಿಶ್ವವಿದ್ಯಾಲಯದ ದಾಖಲೆಗಳಲ್ಲಿ ತಮ್ಮ ಲಿಂಗ ಗುರುತನ್ನು ಬದಲಾಯಿಸುವ ಆಯ್ಕೆಯನ್ನು ಒದಗಿಸುವುದು, ಮತ್ತು  ಟ್ರಾನ್ಸ್ಜೆಂಡರ್ ವಿದ್ಯಾರ್ಥಿಗಳಿಗೆ ಶಸ್ತ್ರಚಿಕಿತ್ಸೆ ಅಥವಾ ವೈದ್ಯಕೀಯ ಮಧ್ಯಸ್ಥಿಕೆಯ ಪುರಾವೆಯನ್ನು ನೀಡಲು ಒತ್ತಾಯಿಸಬಾರದು ಎಂದು ಅರ್ಜಿದಾರ ಮನವಿ ಮಾಡಿಕೊಂಡಿದ್ದಾರೆ.

ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) 2020 ರ ನಿಯಮಗಳ 10 ರ ಪ್ರಕಾರ, ಸರ್ಕಾರಕ್ಕೆ  ಸಂಬಂಧಪಟ್ಟ ಇಲಾಖೆಯು ಅಸ್ತಿತ್ವದಲ್ಲಿರುವ ಎಲ್ಲಾ ಶೈಕ್ಷಣಿಕ, ಸಾಮಾಜಿಕ ಭದ್ರತೆ ಮತ್ತು ಆರೋಗ್ಯ ಯೋಜನೆಗಳು ಮತ್ತು ಟ್ರಾನ್ಸ್‌ಜೆಂಡರ್ ವ್ಯಕ್ತಿಗಳನ್ನು ಸೇರಿಸಲು ಕಲ್ಯಾಣ ಕ್ರಮಗಳನ್ನು ಪರಿಶೀಲಿಸಬೇಕು.

ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಯುಜಿ ತರಗತಿ CUET ಪರೀಕ್ಷೆ ಕಡ್ಡಾಯ

ಆದಾಗ್ಯೂ, ತೃತೀಯಲಿಂಗಿಗಳಿಗೆ ಹಾಸ್ಟೆಲ್ ಸೌಲಭ್ಯಗಳ ಬಗ್ಗೆ ಯಾವುದೇ ನಿರ್ದೇಶನಗಳನ್ನು ನೀಡಲಾಗಿಲ್ಲ. ಆದ್ದರಿಂದ, ತೃತೀಯಲಿಂಗಿ ವಿದ್ಯಾರ್ಥಿಗಳು ಅಂತಹ ಒಗ್ಗೂಡುವಿಕೆ ಮತ್ತು ಹೊಂದಿಕೊಳ್ಳುವ ಶೈಕ್ಷಣಿಕ ವಾತಾವರಣದಿಂದ ವಂಚಿತರಾಗಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ತಾನು ಓದುತ್ತಿರುವಾಗ  ಎದುರಿಸಿದ ಸಂಕಷ್ಟಗಳನ್ನು ವಿವರಿಸಿದ ಅರ್ಜಿದಾರರು ಪಂಜಾಬ್ ವಿಶ್ವವಿದ್ಯಾಲಯ ( Panjab University ) ಮತ್ತು ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ನಿಂದ (Tata Institute of Sciences) ಟ್ರಾನ್ಸ್‌ಜೆಂಡರ್ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಹಾಸ್ಟೆಲ್‌ ನೀಡಿರುವ ಬಗ್ಗೆ  ಉಲ್ಲೇಖಿಸಿದ್ದಾರೆ.

ತೃತೀಯಲಿಂಗಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಹಾಸ್ಟೆಲ್‌ಗಳಿಲ್ಲದ ಕಾರಣ, ಅವರು ಹಾಸ್ಟೆಲ್‌ಗಳಲ್ಲಿ ರ್‍ಯಾಗಿಂಗ್, ನಿಂದನೆ ಮತ್ತು ಕಿರುಕುಳವನ್ನು ಎದುರಿಸುತ್ತಾರೆ, ಇದರಿಂದಾಗಿ ಅವರು ಪ್ರತ್ಯೇಕ ವಸತಿ ಪಡೆಯಲು ಸಾಧ್ಯವಾಗದೆ ತಮ್ಮ ಕೋರ್ಸ್‌ಗಳಿಂದ ಹೊರಹೋಗುವಂತಾಗುತ್ತಿದೆ ಎಂದು ಅವರು ಆರೋಪಿಸಿದರು.

Latest Videos
Follow Us:
Download App:
  • android
  • ios