ಬಾಗಲಕೋಟೆ ಹೋಳಿ ಹಬ್ಬ ಆಚರಣೆ ಮಂಗಳವಾರ ಉದ್ಘಾಟನೆಗೊಳ್ಳಲಿದೆ. ಈ ಉತ್ಸವದಲ್ಲಿ ಕಾಮದಹನ, ಮಾ.5 ರಿಂದ 7ರವರೆಗೆ ಮೂರು ದಿನಗಳ ಬಣ್ಣದಾಟ, ಸೋಗಿನ ಪ್ರದರ್ಶನ ಹಾಗೂ ಮಾ.6 ರಂದು ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆಯೊಂದಿಗೆ ವಿಶೇಷ ರೇನ್ ಡ್ಯಾನ್ಸ್ ಕಾರ್ಯಕ್ರಮಗಳು ಜರುಗಲಿವೆ.

ಬಾಗಲಕೋಟೆ: ಬಾಗಲಕೋಟೆ ಹೋಳಿ ಹಬ್ಬ ಆಚರಣೆ ಸಮಿತಿಯಿಂದ ಮಂಗಳವಾರ ಸಂಜೆ ಹೋಳಿ ಉತ್ಸವ ಉದ್ಘಾಟನಾ ಸಮಾರಂಭ ನಗರದ ಬಸವೇಶ್ವರ ವೃತ್ತದ ಬಳಿಯ ಹೊಳೆ ಆಂಜನೇಯ ದೇವಸ್ಥಾನ ಆವರಣದಲ್ಲಿ ನಡೆಯಲಿದೆ ಎಂದು ಹೋಳಿ ಹಬ್ಬ ಆಚರಣೆ ಸಮಿತಿ ಪ್ರಧಾನ ಕಾರ್ಯದರ್ಶಿ ಮಹಾಬಳೇಶ್ವರ ಗುಡಗುಂಟಿ ಹೇಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ಮುಖಂಡರಾದ ಮಲ್ಲಿಕಾರ್ಜುನ ಮೇಟಿ ಉದ್ಘಾಟಿಸಲಿದ್ದು, ಹೋಳಿ ಹಬ್ಬ ಆಚರಣೆ ಸಮಿತಿ ಅಧ್ಯಕ್ಷ ಕಳಕಪ್ಪ ಬಾದೋಡಗಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಮಾರುತಿ ಶಿಂಧೆ, ಬಾಬುದಾರರಾದ ನರಸಿಂಹ ಮಧ್ವರಾಜ ಕುಲಕರ್ಣಿ, ಪತ್ರಕರ್ತ ರವಿ ಹಳ್ಳೂರ, ಉಪನ್ಯಾಸಕ ಮೋಹನ ದೇಶಪಾಂಡೆ ಆಗಮಿಸಲಿದ್ದಾರೆಂದರು.

ಮಾ.4ರಂದು ಕಾಮದಹನ

ಹೋಳಿ ಆಚರಣೆ ಸಮಿತಿ ಅಧ್ಯಕ್ಷ ಕಳಕಪ್ಪ ಬಾದೋಡಗಿ ಮಾತನಾಡಿ, ಮಂಗಳವಾರ ಸಂಜೆ ಹೋಳಿ ಹಬ್ಬಕ್ಕೆ ಚಾಲನೆ ದೊರೆಯಲಿದ್ದು, ನಂತರ ಕಿಲ್ಲಾ ಓಣಿಯ ಕಾಮದಹನ ನಡೆಯಲಿದೆ. ನಂತರ ಮಾ.4ರಂದು ಬೆಳಗ್ಗೆಯಿಂದ ರಾತ್ರಿವರೆಗೆ ಬಾಗಲಕೋಟೆ ನಗರ, ವಿದ್ಯಾಗಿರಿ, ನವನಗರ ಸೇರಿ ಎಲ್ಲೆಡೆಯ ಕಾಮದಹನ ಜರುಗಲಿದೆ. ಮಾ.5 ರಿಂದ 7ರವರೆಗೆ ಮೂರು ದಿನಗಳ ಕಾಲ ಬಣ್ಣದಾಟ ನಡೆಯಲಿದ್ದು, 5 ಓಣಿಗಳ ಸೋಗಿನ ಪ್ರದರ್ಶನ ಜರುಗಲಿದೆ ಎಂದು ತಿಳಿಸಿದರು.

ವಿದ್ಯಾಗಿರಿ, ನವನಗರದಲ್ಲಿಯೂ ಸೋಗಿನ ಪ್ರದರ್ಶನ, ಬಣ್ಣದ ಗಾಡಿಗಳ ಮೆರವಣಿಗೆ ನಡೆಯಲಿವೆ. ಊರಿನ ಯುವಕರು ಊರು ಬಿಟ್ಟು ಹೋಗಬಾರದು. ಶಾಂತಿ ಸೌಹಾರ್ದತೆಯಿಂದ ಹೋಳಿ ಹಬ್ಬದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿಕೊಂಡರು.

ಇದನ್ನೂ ಓದಿ: ಬಾಗಲಕೋಟೆ: ಹೋಳಿಯಾಟಕ್ಕೆ ಬರಲಿದ್ದಾರೆ ರಷ್ಯನ್ ಬೆಡಗಿ ಮೀನಾ! ಭಾರತದ ಆರಿಯಾ, ಅಕ್ಷಯ್

ಮಾ.6ರಂದು ರೇನ್ ಡ್ಯಾನ್ಸ್ 

ಹೋಳಿ ಹಬ್ಬದ ಎರಡನೇ ದಿನ ಮಾ.6ರಂದು ನಗರದ ಬಸವೇಶ್ವರ ವೃತ್ತದಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 4.30ರವರೆಗೆ ರೇನ್ ಡ್ಯಾನ್ಸ್ ಆಯೋಜನೆ ಮಾಡಲಾಗಿದೆ. ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಇದೆ. ಹುಬ್ಬಳ್ಳಿಯಿಂದ ಡಿಜಿ ಆಪರೇಟರ್ ಹಾಗೂ ಡ್ಸಾನ್ಸರ್ ಆಗಮಿಸಲಿದ್ದಾರೆಂದು ವೀರಣ್ಣ ಬಂಗಾರಶೆಟ್ಟಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶಿವುಕುಮಾರ ಮೇಲ್ನಾಡ, ಸಂಜೀವ ವಾಡಕರ್, ರಾಜು ನಾಯಕ ಉಪಸ್ಥಿತರಿದ್ದರು.

ಇದನ್ನೂ ಓದಿ: ಪಂಕಾ ಮಸೀದಿ, ಮುಸ್ಲಿಮರಿಗೆ ಸೇರಿದ ಅಂಗಡಿಗಳು ಕಾಣದಂತೆ ಬೃಹತ್ ಪರದೆ ಹಾಕಿ RSS ಶೋಭಾಯಾತ್ರೆ