ಧಾರವಾಡ: ಕರ್ತವ್ಯ ಲೋಪ ಎಸಗಿದ ಎಲ್‌ ಆ್ಯಂಡ್‌ ಟಿಗೆ ಕೋಟಿ ರು. ದಂಡ!

ಅಸಮರ್ಪಕ ನೀರು ಪೂರೈಕೆ ಹಾಗೂ ಆರ್ಥಿಕ ಹಾನಿಯಾದ ಹಿನ್ನೆಲೆಯಲ್ಲಿ ಎಲ್‌ ಆ್ಯಂಡ್‌ ಟಿ ಕಂಪನಿಗೆ .1 ಕೋಟಿ ದಂಡ ವಿಧಿಸಿದ್ದಲ್ಲದೇ ಬೇಜವಾಬ್ದಾರಿ ಹಾಗೂ ಕರ್ತವ್ಯ ಲೋಪ ಮುಂದುವರಿಸಿದರೆ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಮೇಯರ್‌ ಈರೇಶ ಅಂಚಟಗೇರಿ ಆದೇಶಿಸಿದರು.

Penalty to L&T for inadequate water supply at dharwad rav

ಧಾರವಾಡ (ಮಾ 28) : ಅಸಮರ್ಪಕ ನೀರು ಪೂರೈಕೆ ಹಾಗೂ ಆರ್ಥಿಕ ಹಾನಿಯಾದ ಹಿನ್ನೆಲೆಯಲ್ಲಿ ಎಲ್‌ ಆ್ಯಂಡ್‌ ಟಿ ಕಂಪನಿಗೆ .1 ಕೋಟಿ ದಂಡ ವಿಧಿಸಿದ್ದಲ್ಲದೇ ಬೇಜವಾಬ್ದಾರಿ ಹಾಗೂ ಕರ್ತವ್ಯ ಲೋಪ ಮುಂದುವರಿಸಿದರೆ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಮೇಯರ್‌ ಈರೇಶ ಅಂಚಟಗೇರಿ ಆದೇಶಿಸಿದರು.

ಮಹಾನಗರ ಪಾಲಿಕೆ(Mahanagara Corporation Dharwad) ಕಚೇರಿ ಸುವರ್ಣ ಮಹೋತ್ಸವ(Suvarna mahotsav) ಸಭಾ ಭವನದಲ್ಲಿ ಸೋಮವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸರ್ವ ಪಕ್ಷದ ಸದಸ್ಯರು ನೀರಿನ ಸಮಸ್ಯೆಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಎಲ್‌ ಆ್ಯಂಡ್‌ ಟಿ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅಂತಿಮವಾಗಿ ಮೇಯರ್‌ ಈರೇಶ ಅಂಚಟಗೇರಿ ದಂಡ ವಿಧಿಸಿದ್ದಲ್ಲದೇ ಮುನ್ನೆಚ್ಚರಿಕೆ ಸಹ ನೀಡಿದರು. ಇದರೊಂದಿಗೆ ಗುತ್ತಿಗೆದಾರರ ಬಿಲ್‌, ನೌಕರರ ವೇತನ ಸೇರಿ ಎಲ್ಲ ಬಿಲ್‌ಗಳನ್ನು 15 ದಿನಗಳೊಳಗೆ ನೀಡಬೇಕು. ಬಾಕಿ ಉಳಿದರೆ ನೋಟಿಸ್‌ ನೀಡಲಾಗುವುದು ಎಂದರು.

Dharwad ಕಾರ್ಮಿಕರ ದಿನದಂದೇ ಬೀದಿಗಿಳಿದ ಗುತ್ತಿಗೆ ನೌಕರರು, ಸಿಎಂ ನಿವಾಸಕ್ಕೆ ಮುತ್ತಿಗೆ

ಇದಕ್ಕೂ ಮುಂಚೆ ನಡೆದ ಸಭೆಯಲ್ಲಿ ಎಲ್‌ ಆ್ಯಂಡ್‌ ಟಿ(L&T Company) ಕಂಪನಿಗೆ ನೀಡಿರುವ ನೀರು ಪೂರೈಕೆ ಮತ್ತು ನಿರ್ವಹಣೆ ಜವಾಬ್ದಾರಿ ಹಿಂಪಡೆದು ಕರ್ನಾಟಕ ಜಲ ಮಂಡಳಿ(Karnataka water board)ಗೆ ನೀಡಬೇಕು ಎಂದು ಪಾಲಿಕೆ ಸದಸ್ಯರು ಪಕ್ಷಾತೀತವಾಗಿ ಆಗ್ರಹಿಸಿದರು. ಸದಸ್ಯೆ ಸುವರ್ಣ ಕಲ್ಲಕುಂಟ್ಲ ಮಾತನಾಡಿ, ನಮ್ಮ ವಾರ್ಡಿನಲ್ಲಿ 10 ತಿಂಗಳಿಂದ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಈ ಕುರಿತು ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಕ್ರಮಕೈಗೊಂಡಿಲ್ಲ ಎಂದು ದೂರಿದರು. ಇದಕ್ಕೆ ದನಿಗೂಡಿಸಿದ ಸದಸ್ಯ ಇಕ್ಬಾಲ್‌ ನವಲೂರ, ಕಲುಷಿತ ನೀರು ಪೂರೈಕೆ ಹಿನ್ನೆಲೆಯಲ್ಲಿ ವೀಕ್ಷಣೆಗೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಆಗಮಿಸಿದಾಗ ಜನರು ಕಲುಷಿತ ನೀರಿನ ಬದಲು ವಿಷ ನೀಡಿ ಎಂದು ಅಳಲು ತೋಡಿಕೊಂಡಿದ್ದರು ಎಂದರು.

ಹಿರಿಯ ಸದಸ್ಯ ವೀರಣ್ಣ ಸವಡಿ ಮಾತನಾಡಿ, ಎಲ್‌ ಆ್ಯಂಡ್‌ ಟಿಗೆ ನೀರು ಪೂರೈಕೆ ಮತ್ತು ನಿರ್ವಹಣೆ ಜವಾಬ್ದಾರಿ ನೀಡಿದ ದಿನದಿಂದ ಸಮಸ್ಯೆ ಎದುರಾಗಿದೆ. ಮುಖ್ಯಮಂತ್ರಿಯಿಂದ ಎಲ್ಲ ಹಂತದಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದರೂ ಪರಿಹಾರ ಸಿಕ್ಕಿಲ್ಲ. ಹೀಗಾಗಿ, ಜಲ ಮಂಡಳಿಗೆ ಮರಳಿ ಜವಾಬ್ದಾರಿ ನೀಡಬೇಕು. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಸರ್ವ ಪಕ್ಷದ ಸದಸ್ಯರು ಬೆಂಬಲ ಸೂಚಿಸಿದರು. ಸಭಾ ನಾಯಕ ತಿಪ್ಪಣ್ಣ ಮಜ್ಜಗಿ ಮಾತನಾಡಿದರು. ಈ ವಿಷಯವಾಗಿ ಸದಸ್ಯರಾದ ರಾಜಣ್ಣ ಕೊರವಿ, ವಿಜಯಲಕ್ಷ್ಮೀ ಹಿಂಡಸಗೇರಿ, ಕವಿತಾ ಕಬ್ಬೇರ, ಇಸ್ಮಾಯಿಲ್‌ ಭದ್ರಾಪುರ ಮಾತನಾಡಿದರು. ಉಪ ಮೇಯರ್‌ ಉಮಾ ಮುಕುಂದ, ಪಾಲಿಕೆ ಆಯುಕ್ತ ಡಾ. ಬಿ. ಗೋಪಾಲಕೃಷ್ಣ ಇದ್ದರು.

ಪ್ರತಿಷ್ಠಿತ ಎಲ್ & ಟಿ ಕಂಪನಿಗೆ ಖಡಕ್ ವಾರ್ನಿಂಗ್ ಕೊಟ್ಟ ಸಚಿವ ಸೋಮಶೇಖರ್

ಇನ್ನು ಕೆಲ ದಿನಗಳಲ್ಲೇ ಚುನಾವಣೆ ಘೋಷಣೆ ಆಗುವ ಕಾರಣ ಜಲ ಮಂಡಳಿಗೆ ನಿರ್ವಹಣೆ ಮರಳಿಸುವುದು ಸದ್ಯದ ಸ್ಥಿತಿಯಲ್ಲಿ ಅಸಾಧ್ಯ. ಸಂಪುಟ ಸಭೆಯಲ್ಲಿ ಕೈಗೊಂಡ ತೀರ್ಮಾನಕ್ಕೆ ವಿರುದ್ಧ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವುದು ಅಸಾಧ್ಯ. ಹೀಗಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಸಮಸ್ಯೆ ಪರಿಹರಿಸುವ ಕೆಲಸವಾಗಲಿ. ಅದಕ್ಕಾಗಿಯೇ ಕಂಪನಿಗೆ ದೊಡ್ಡ ಮೊತ್ತದ ದಂಡ ವಿಧಿಸಲಾಗಿದೆ.

Latest Videos
Follow Us:
Download App:
  • android
  • ios