Dharwad ಕಾರ್ಮಿಕರ ದಿನದಂದೇ ಬೀದಿಗಿಳಿದ ಗುತ್ತಿಗೆ ನೌಕರರು, ಸಿಎಂ ನಿವಾಸಕ್ಕೆ ಮುತ್ತಿಗೆ
ಧಾರವಾಡದ ಜಲಮಂಡಳಿಯ ಗುತ್ತಿಗೆ ನೌಕರರ ಪ್ರತಿಭಟನೆ
ಕಳೆದ ನಾಲ್ಕು ದಿನಗಳಿಂದ ಧಾರವಾಡದ ಜಮಂಡಳಿ ಬಳಿ ನಡೆಯುತ್ತಿರುವ ಪ್ರತಿಬಟನೆ
ಹುಬ್ಬಳ್ಳಿಯಲ್ಲಿರುವ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ತೀರ್ಮಾನ
ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ
ಧಾರವಾಡ, (ಮೇ.01) : ಧಾರವಾಡದ ಜಲಮಂಡಳಿಯ ಗುತ್ತಿಗೆ ನೌಕರರು ನಾಲ್ಕು ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಎಲ್ ಆ್ಯಂಡ ಟಿ ದೊಡ್ಡ ಕಂಪೆನಿ ಅವರು ಅಧಿನದಲ್ಲಿ ಕೆಲಸ ಮತ್ತು ಅವರ ಶರತ್ತುಗಳಿಗೆ ನಾವು ಒಪ್ಪುವುದಿಲ್ಲ ಎಂದು 600 ಕ್ಕೂ ಹೆಚ್ಚು ಮಹಾನಗರ ಪಾಲಿಕೆಯ ಸಿಬ್ಬಂದಿಗಳು ಇಂದು(ಭಾಣುವಾರ) ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಧಾರವಾಡ ಜಲಮಂಡಳಿಯಿಂದ Rally ಮುಖಾಂತರ ತೆರಳಿದರು.
ಧಾರವಾಡ ಹುಬ್ಬಳ್ಳಿ ಮಹಾನಗರ ಪಾಲಿಕೆಯಲ್ಲಿ 6 ಗುತ್ತಿಗೆ ಕಾರ್ಮಿಕರು ಕಳೆದ 15 ರಿಂದ 20 ವರ್ಷದಿಂದ ಪಾಲಿಕೆಯಲ್ಲಿ ಕೆಲಸವನ್ನ ಮಾಡುತ್ತಿದ್ದಾರೆ. ಸರಕಾರ ಮಹಾನಗರ ಪಾಲಿಕೆ ಸದ್ಯ ನೀರು ಸರಬುರಾಜು ಮಾಡಲು ಎಲ್ ಆ್ಯಂಡ ಟಿ ಕಂಪನಿಗೆ ಹಸ್ತಾಂತರ ಮಾಡಲಾಗಿದೆ. ಆದರೆ ಮಹಾನಗರ ಪಾಲಿಕೆಯ ಸಿಬ್ಬಂದಿಗಳು ನಮಗೆ ಪಾಲಿಕೆಯಿಂದ ಎಲ್ ಆ್ಯಂಡ ಟಿ ಕಂಪನಿಗೆ ಹಸ್ತಾಂತರಿಸಬೇಕು ಎಂದು ಕಾರ್ಮಿಕರು ಪಟ್ಟು ಹಿಡದಿದ್ದರು.. ಇನ್ನೊಂದಡೆ ಇದೆ ಎಪ್ರಿಲ್ 30 ರೊಳಗೆ ನಿವೆಲ್ಲ ಕೆಲಸಕ್ಕೆ ಹಾಜರಾಗಬೇಕು ಎಂದು ಪಾಲಿಕೆ ಗುತ್ತಿಗೆ ನೌಕರರಿಗೆ ನೋಟಿಸ್ ಕೊಟ್ಟಿತ್ತು , ಹಾಜರಾಗದಿದ್ರೆ ಕೆಲಸದಿಂದ ತೆಗೆದು ಹಾಕಿ ಬೇರೆ ನೇಮಕಾತಿ ಮಾಡಿಕ್ಕೊಳ್ಳಲಾವುದು ಎಂದು ನೋಟಿಸ್ ನೀಡಿದ್ದರು..
ಮೇ 1 ಕಾರ್ಮಿಕರ ದಿನಾಚರಣೆಯ ಅಂಗವಾಗಿ ಇಂದು(ಭಾನುವಾರ) ಧಾರವಾಡ ಜಲಮಂಡಳಿಯಿಂದ 600 ಕ್ಕೂ ಹೆಚ್ಷು ಕಾರ್ಮಿಕರು ರ‌್ಯಾಲಿ ಮುಖಾಂತರ ಹುಬ್ಬಳ್ಳಿಯಲ್ಲಿರುವ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಹೊರಟಿದ್ದಾರೆ. Rallyಯಲ್ಲಿ ಅಹಿತಕರ ಘಟನಗಳು ಆಗಬಾರದು ಎಂದು ಪೋಲಿಸ್ ಬಂದೋಬಸ್ತ್ ನೀಡಲಾಗಿದ್ದು, ನವಲೂರು, ಕೆಎಂಎಪ್, ಎಸ್ ಡಿ ಎಂ, ನವನಗರ ಮಾರ್ಗವಾಗಿ ಹುಬ್ಬಳ್ಳಿಗೆ ತಲುಪಿ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಹೊರಟಿದ್ದಾರೆ.
ಕಾರ್ಮಿಕರ ಬೇಡಿಕೆ ನಮ್ಮನ್ನ ಯಾವುದೇ ಕಾರಣಕ್ಕೂ ಎಲ್ ಆ್ಯಂಡ ಟಿ ಕಂಪನಿಗೆ ಹಸ್ತಾಂತರ ಮಾಡಬಾರದು ಮಾಡಿದರೆ ಪಾಲಿಕೆಯವರು ನಮಗೆ ಲೆಟರ್ ಹೆಡ್ ಮೆಲೆ ಕಾರ್ಮಿಕರನ್ನ ಎಲ್ ಆ್ಯಂಡ ಟಿ ಕಂಪನಿಗೆ ಹಸ್ತಾಂತರಿಸಬೇಕು ಎಂದು ಕಾರ್ಮಿಕರು ಒಂದು ಕಡೆ ತಮ್ಮ ಬೇಡಿಕೆಯನ್ನ ಇಟ್ಟಿದ್ದಾರೆ..ಇನ್ನೊಂದಡೆ ಒಂದು ವೇಳೆ ಎಲ್ ಆಂಡ್ ಟಿ ಕಂಪನಿಯ ಅವಧಿ ಮುಗಿದು ಹೋದರೆ ನಮ್ಮನ್ನ ಯಾರು ಕೆಲಸಕ್ಕೆ ಸೇರಿಸಿಕ್ಕೊಳ್ಳುತ್ತಾರೆ ಎಂದು ಕಾರ್ಮಿಕರ ಅಳಲು ಆಗಿದೆ..ಇನ್ನು ಮಹಾನಗರ ಪಾಲಿಕೆಯ ಅಧಿಕಾರಿಗಳು ಕಾರ್ಮಿಕರಿಗೆ ಸೂಕ್ತವಾದ ಉತ್ತರ ಕೊಡದೆ ಇರೋದಕ್ಕೆ ಕಾರ್ಮಿಕರು ಸಿಎಂ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಮುತ್ತಿಗೆ ಹಾಕಲು ಹೊರಟಿದ್ದಾರೆ....