ಬಿಜೆಪಿಯ ಬೆಂಗಳೂರು ನಗರದ ಮೂರು ಜಿಲ್ಲಾ ಘಟಕಗಳ ವಿವಿಧ ಮೋರ್ಚಾಗಳಿಗೆ ಪದಾಧಿಕಾರಿಗಳನ್ನು ನೇಮಿಸಿದ್ದು, ಚಿತ್ರನಟಿ ಅಮೂಲ್ಯ ಅವರ ಪತಿ ಜಗದೀಶ್ ಚಂದ್ರ ಅವರನ್ನು ಬೆಂಗಳೂರು ಕೇಂದ್ರ ಜಿಲ್ಲಾ ಘಟಕ ಯುವ ಮೋರ್ಚಾ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಬೆಂಗಳೂರು : ಬಿಜೆಪಿಯ ಬೆಂಗಳೂರು ನಗರದ ಮೂರು ಜಿಲ್ಲಾ ಘಟಕಗಳ ವಿವಿಧ ಮೋರ್ಚಾಗಳಿಗೆ ಪದಾಧಿಕಾರಿಗಳನ್ನು ನೇಮಿಸಿದ್ದು, ಚಿತ್ರನಟಿ ಅಮೂಲ್ಯ ಅವರ ಪತಿ ಜಗದೀಶ್ ಚಂದ್ರ ಅವರನ್ನು ಬೆಂಗಳೂರು ಕೇಂದ್ರ ಜಿಲ್ಲಾ ಘಟಕ ಯುವ ಮೋರ್ಚಾ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಂಗಳೂರು ಕೇಂದ್ರ ಜಿಲ್ಲಾ ಘಟಕ:

ನೀತಾ ಎಂ.ಎನ್‌.ರೆಡ್ಡಿ- ಮಹಿಳಾ ಮೋರ್ಚಾ ಅಧ್ಯಕ್ಷೆ, ಜಗದೀಶ್ ಚಂದ್ರ- ಯುವ ಮೋರ್ಚಾ ಅಧ್ಯಕ್ಷ, ಮುನಿಯಲ್ಲಪ್ಪ- ಎಸ್‌.ಸಿ. ಮೋರ್ಚಾ ಅಧ್ಯಕ್ಷ, ಎಚ್.ಆರ್‌.ಕೃಷ್ಣಪ್ಪ- ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ, ಗಿರೀಶ್‌ ಕುಮಾರ್‌ ಆರ್.ಬಿ.- ಎಸ್‌.ಟಿ. ಮೋರ್ಚಾ ಅಧ್ಯಕ್ಷ, ರುದ್ರಪ್ಪ ವೈ- ರೈತ ಮೋರ್ಚಾ ಅಧ್ಯಕ್ಷ.

ಬೆಂಗಳೂರು ದಕ್ಷಿಣ ಜಿಲ್ಲಾ ಘಟಕ:

ಗುರುಪ್ರಸಾದ್‌ ಕೆ (ಗುರುಪ್ರಸಾದ್ ಮುನಿಕೃಷ್ಣ)- ಎಸ್‌.ಸಿ. ಮೋರ್ಚಾ ಅಧ್ಯಕ್ಷ, ಸೌಮ್ಯ ತಿಪ್ಪೇಸ್ವಾಮಿ- ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ, ಪಿ.ರಾಜು (ದಿನ್ನೂರ್‌) ಮತ್ತು ಸಿ.ಎನ್‌.ಚಂದ್ರಶೇಖರ್‌- ಹಿಂದುಳಿದ ವರ್ಗಗಳ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳು, ವೆಂಕಟೇಶ್ ರೆಡ್ಡಿ ಹಾಗೂ ರವಿ ಕೆ- ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳು.

ಬೆಂಗಳೂರು ಉತ್ತರ ಜಿಲ್ಲಾ ಘಟಕ:

ಯುವ ಮೋರ್ಚಾ- ಯತೀನ್ ವೆಂಕಟೇಶ್ (ಅಧ್ಯಕ್ಷ), ಪ್ರವೀಣ್‌ ಗೌಡ, ಪ್ರಕಾಶ್ ಎಸ್‌.ಪಿ. (ಪ್ರಧಾನ ಕಾರ್ಯದರ್ಶಿಗಳು). ಮಹಿಳಾ ಮೋರ್ಚಾ- ಮಂಜುಳಾ ದೇವಿ (ಅಧ್ಯಕ್ಷ), ಆರ್.ವಿ.ಸುಜಾತ, ಸುನೀತಾ ಮಂಜುನಾಥ್ (ಪ್ರಧಾನ ಕಾರ್ಯದರ್ಶಿಗಳು). ಹಿಂದುಳಿದ ವರ್ಗಗಳ ಮೋರ್ಚಾ- ಬಿ.ಎಂ.ಶ್ರೀನಿವಾಸ್‌ (ಅಧ್ಯಕ್ಷ), ಮಂಜುನಾಥ್ ಆರ್‌., ಹರೀಶ್ ರಾಮಾಂಜಿನಪ್ಪ (ಪ್ರಧಾನ ಕಾರ್ಯದರ್ಶಿಗಳು). ಎಸ್‌.ಸಿ.ಮೋರ್ಚಾ- ಪ್ರಮೋದ್ ಬಿ.ಸಿ. (ಅಧ್ಯಕ್ಷ), ಸುರೇಶ್‌, ವಿಜಯಕುಮಾರ್‌ (ಪ್ರಧಾನ ಕಾರ್ಯದರ್ಶಿಗಳು). ಎಸ್‌.ಟಿ.ಮೋರ್ಚಾ- ಡಾ.ಸದಾಶಿವ ನಾಯಕ್‌ (ಅಧ್ಯಕ್ಷ), ಜಗನ್ನಾಥ್, ವಿನೋದ್‌ (ಪ್ರಧಾನ ಕಾರ್ಯದರ್ಶಿಗಳು). ರೈತ ಮೋರ್ಚಾ- ಜೆ.ಜೆ.ಮೂರ್ತಿ (ಅಧ್ಯಕ್ಷ), ಜನಾರ್ದನ್, ರಾಜು ನಾಯಕ್‌ (ಪ್ರಧಾನ ಕಾರ್ಯದರ್ಶಿಗಳು). ಅಲ್ಪಸಂಖ್ಯಾತರ ಮೋರ್ಚಾ- ಇಮ್ರಾನ್‌ (ಅಧ್ಯಕ್ಷ), ಗೌತಮ್ ಜೈನ್‌, ಷಾ ವಾರಿಸ್‌ ಹಮೀದ್‌ (ಪ್ರಧಾನ ಕಾರ್ಯದರ್ಶಿಗಳು).