ವಾಯುಮಾಲಿನ್ಯ ತಡೆಗೆ ಅರಳೀಮರ ಹೆಚ್ಚು ಸಹಕಾರಿ; ಕೋಟಾ ಶ್ರೀನಿವಾಸ ಪೂಜಾರಿ
ಪರಿಸರ ನಮ್ಮೆಲ್ಲರ ಆಸ್ತಿ. ಪ್ರಧಾನಿ ಮೋದಿಯವರ ಹುಟ್ಟು ಹಬ್ಬದ ಪ್ರಯುಕ್ತ ಯಾವುದೇ ರೀತಿಯ ಆಡಂಬರವಿಲ್ಲದೆ, ಸಾರ್ವಜನಿಕರಿಗೆ ಹಾಗೂ ದೇಶಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ, ಮುಂದೊಂದು ದಿನ ವಾಯುಮಾಲಿನ್ಯದ ಆಗುವ ಅನಾಹುತ ತಡೆಗಟ್ಟಲು ಬಿಜೆಪಿ ಯುವಕರು ಅರಳಿಮರ ನೆಡುವ ಮೂಲಕ ಸಮಾಜಕ್ಕೆ ಮಾದರಿಯಾಗಲಿದ್ದಾರೆ ಎಂದು ಹೇಳಿದರು.
ಮೈಸೂರು (ಸೆ.19) : :ಬಿಜೆಪಿ ಹಿಂದುಳಿದ ವರ್ಗಗಳ ಮೊರ್ಚಾದ ವತಿಯಿಂದ ಸೇವಾ ಪಾಕ್ಷಿಕದ ಅಡಿಯಲ್ಲಿ ಅರಳಿಮರ ಗಿಡ ನೆಡಸುವ ಅಭಿಯಾನಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಸರ್ಕಾರಿ ಅತಿಥಿಗೃಹ ಆವರಣದಲ್ಲಿ ಅರಳಿಮರದ ಗಿಡ ನೆಡುವ ಮೂಲಕ ಭಾನುವಾರ ಚಾಲನೆ ನೀಡಿದರು.
ಮೊರಾರ್ಜಿ ವಸತಿ ಶಾಲೆ ಪಿಯುವರೆಗೆ ವಿಸ್ತರಣೆಗೆ ತೀರ್ಮಾನ: ಸಚಿವ ಕೋಟ
ನಂತರ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಪರಿಸರ ನಮ್ಮೆಲ್ಲರ ಆಸ್ತಿ. ಪ್ರಧಾನಿ ಮೋದಿಯವರ ಹುಟ್ಟು ಹಬ್ಬದ ಪ್ರಯುಕ್ತ ಯಾವುದೇ ರೀತಿಯ ಆಡಂಬರವಿಲ್ಲದೆ, ಸಾರ್ವಜನಿಕರಿಗೆ ಹಾಗೂ ದೇಶಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ, ಮುಂದೊಂದು ದಿನ ವಾಯುಮಾಲಿನ್ಯದ ಆಗುವ ಅನಾಹುತ ತಡೆಗಟ್ಟಲು ಬಿಜೆಪಿ ಯುವಕರು ಅರಳಿಮರ ನೆಡುವ ಮೂಲಕ ಸಮಾಜಕ್ಕೆ ಮಾದರಿಯಾಗಲಿದ್ದಾರೆ ಎಂದು ಹೇಳಿದರು.
ಚಾಮರಾಜ ಕ್ಷೇತ್ರದ ಶಾಸಕ ಎಲ್. ನಾಗೇಂದ್ರ ಮಾತನಾಡಿ, ಅರಳಿಮರ ಶ್ರೇಷ್ಠವಾದ ಮರ ಹಾಗೂ ವೈಜ್ಞಾನಿಕವಾಗಿ ಸಾರ್ವಜನಿಕರು ಹೆಚ್ಚು ಇರುವ ಸ್ಥಳಗಳಲ್ಲಿ ಅರಳಿಮರದ ಅವಶ್ಯಕತೆ ಇದೆ. ಪಾರ್ಕಿಗೊಂದು ಅರಳಿಮರ ಕಡ್ಡಾಯವಾಗಿ ಇರಬೇಕು. ಈಗಾಗಲೇ ಮೈಸೂರಿನ ಹೊರ ವರ್ತುಲ ರಸ್ತೆಯಲ್ಲಿ ಸಾವಿರಾರು ಅರಳಿಮರವನ್ನು ಸಂಘ ಸಂಸ್ಥೆಗಳ ಒಟ್ಟುಗೂಡಿ ನೆಡುವ ಮೂಲಕ ಕಾರ್ಯ ಪ್ರಾರಂಭವಾಗಿದೆ ಎಂದು ತಿಳಿಸಿದರು.
ಜಾಗೃತರಾಗಿರಿ…. ವಾಯುಮಾಲಿನ್ಯದಿಂದ ಕಾಡುತ್ತೆ ಶ್ವಾಸಕೋಶದ ಕ್ಯಾನ್ಸರ್
ಉಪ ಮೇಯರ್ ಡಾ.ಜಿ. ರೂಪ, ನಗರಪಾಲಿಕೆ ಸದಸ್ಯರಾದ ಸತೀಶ್, ಕೆ.ಜೆ. ರಮೇಶ್, ಬಿಜೆಪಿ ನಗರಾಧ್ಯಕ್ಷ ಟಿ.ಎಸ್. ಶ್ರೀವತ್ಸ, ಹಿಂದುಳಿದ ವರ್ಗಗಳ ಮೊರ್ಚಾದ ನಗರಾಧ್ಯಕ್ಷ ಜೋಗಿ ಮಂಜು, ಮುಖಂಡರಾದ ಗೋಪಾಲ್, ಮಣಿರತ್ನಂ, ಸೋಮಶೇಖರ್ ರಾಜು, ಹರೀಶ್, ಪುನೀತ್, ರಮೇಶ್, ಚಿಕ್ಕಮ್ಮ ಬಸವರಾಜ್, ಶಿವರಾಜ್, ಕೃಷ್ಣ ಮೂರ್ತಿ, ಜಗದೀಶ್, ವಿಜಯ್, ಸೂರಜ್, ಅಂಕಿತ್ ಮೊದಲಾದವರು ಇದ್ದರು.