ಜಾಗೃತರಾಗಿರಿ…. ವಾಯುಮಾಲಿನ್ಯದಿಂದ ಕಾಡುತ್ತೆ ಶ್ವಾಸಕೋಶದ ಕ್ಯಾನ್ಸರ್
ಇತ್ತಿಚಿನ ದಿನಗಳಲ್ಲಿ ವಾಯುಮಾಲಿನ್ಯ ಎಷ್ಟು ಹೆಚ್ಚಾಗಿದೆ ಎಂದರೆ, ವಾಸಿಸಲು ಯೋಗ್ಯವಾದ ಸ್ಥಳಗಳು ಸಹ ಇಲ್ಲದಂತಹ ಸ್ಥಿತಿ ಮುಂದಿನ ಕೆಲವೇ ದಿನಗಳಲ್ಲಿ ಕಂಡುಬರಬಹುದೇನೋ ಅನ್ನೋವಷ್ಟರ ಮಟ್ಟಿಗೆ ಹೆಚ್ಚಿದೆ. ವಾಯುಮಾಲಿನ್ಯದಿಂದ ಪರಿಸರ ಮಾತ್ರ ಹಾನಿಯಾಗೋದಲ್ಲ, ಇದರಿಂದ ಮನುಷ್ಯನ ಮೇಲೂ ಗಂಭೀರ ಪರಿಣಾಮ ಬೀರುತ್ತದೆ. ವಾಯುಮಾಲಿನ್ಯ ಶ್ವಾಸಕೋಶದ ಕ್ಯಾನ್ಸರ್ (Lung Cancer) ಅಪಾಯ ಹೆಚ್ಚಿಸುತ್ತದೆ. ಅಂದರೆ, ಈಗ ಧೂಮಪಾನ (Smoking) ಮಾಡದ ಜನರಿಗೂ ಈ ಕ್ಯಾನ್ಸರ್ ಬರಬಹುದು. ವಾಯುಮಾಲಿನ್ಯವು ಶ್ವಾಸಕೋಶದ ಕ್ಯಾನ್ಸರ್ ಮತ್ತು ಅದರ ರೋಗಲಕ್ಷಣಗಳಿಗೆ ಹೇಗೆ ಕಾರಣವಾಗುತ್ತಿದೆ ಎಂದು ತಿಳಿಯೋಣ.
ಶ್ವಾಸಕೋಶದ ಕ್ಯಾನ್ಸರ್ (lung cancer) ಯಾವುದೇ ವಯಸ್ಸಿನಲ್ಲಿ ಯಾರಿಗಾದರೂ ಸಂಭವಿಸಬಹುದು, ಆದರೆ ಹೆಚ್ಚಿನ ಪ್ರಕರಣಗಳ ಹಿಂದಿನ ಬಹು ಮುಖ್ಯವಾದ ಕಾರಣವೆಂದರೆ ಧೂಮಪಾನ. ಆದರೆ ನಿಮಗೆ ಗೊತ್ತಾ ಧೂಮಪಾನ ಮಾಡದಿದ್ದರೂ ನಿಮಗೆ ಶ್ವಾಸಕೋಶದ ಕ್ಯಾನ್ಸರ್ ಬಾಧಿಸಬಹುದು ಹೇಗೆ ಅಂತೀರಾ? ವಾಯುಮಾಲಿನ್ಯ ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವಾಗಬಹುದು ಎಂದು ಅಧ್ಯಯನವು ಕಂಡುಕೊಂಡಿದೆ.
ಕ್ಯಾನ್ಸರ್ ರಿಸರ್ಚ್ ಯುಕೆಯಿಂದ ಧನಸಹಾಯ ಪಡೆದ ಫ್ರಾನ್ಸಿಸ್ ಕ್ರಿಕ್ ಇನ್ಸ್ಟಿಟ್ಯೂಟ್ ಮತ್ತು ಯೂನಿವರ್ಸಿಟಿ ಕಾಲೇಜ್ ಲಂಡನ್ನ ವಿಜ್ಞಾನಿಗಳು ವಾಯುಮಾಲಿನ್ಯವು (air pollution) ಶ್ವಾಸಕೋಶದ ಕ್ಯಾನ್ಸರ್ ಸೇರಿ ವಿವಿಧ ಕ್ಯಾನ್ಸರ್‌ಗಳಿಂದ ಉಂಟಾಗುವ ಸಾವಿನ ಅಪಾಯವನ್ನು ಹೆಚ್ಚಿಸುತ್ತದೆ ಎಂಬುದನ್ನು ಕಂಡು ಹಿಡಿದಿದ್ದಾರೆ.
ವಾಯುಮಾಲಿನ್ಯವು ಶ್ವಾಸಕೋಶದ ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತದೆ
ಧೂಮಪಾನ (smoking) ಮಾಡದವರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಗೆ ಕಾರಣವಾಗಬಲ್ಲ ವಾಯುಗಾಮಿ ಮಾಲಿನ್ಯಕಾರಕಗಳಿಗೆ ವಿಜ್ಞಾನಿಗಳು ಹೊಸ ಕಾರ್ಯವಿಧಾನವನ್ನು ಕಂಡುಹಿಡಿದಿದ್ದಾರೆ. ಅವುಗಳ ಬಗ್ಗೆ ತಿಳಿಯೋಣ.
ಹವಾಮಾನ ಬದಲಾವಣೆಗೆ ಸಂಬಂಧಿಸಿದ ಕಣಗಳು ಶ್ವಾಸನಾಳದ ಜೀವಕೋಶಗಳಲ್ಲಿ ಮಾರಣಾಂತಿಕ ಬದಲಾವಣೆಗಳನ್ನು ಪ್ರಚೋದಿಸುತ್ತವೆ ಮತ್ತು ಶ್ವಾಸಕೋಶದ ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಗಾಗಿ ಹೊಸ ತಂತ್ರಗಳಿಗೆ ಬಾಗಿಲು ತೆರೆಯುತ್ತವೆ ಎಂದು ಅವರು ಕಂಡು ಕೊಂಡರು. ಸಾಮಾನ್ಯವಾಗಿ ಕಾರ್ ಹೊಗೆ ಮತ್ತು ಇಂಧನ ಹೊಗೆಯಲ್ಲಿ ಇರುವ ಕಣಗಳು, ಶ್ವಾಸಕೋಶದ ಕ್ಯಾನ್ಸರ್ ನ ಹೆಚ್ಚಿನ ಅಪಾಯದೊಂದಿಗೆ ಸಂಬಂಧ ಹೊಂದಿವೆ.
ಧೂಮಪಾನಕ್ಕಿಂತ ವಾಯುಮಾಲಿನ್ಯದಿಂದಾಗಿ ಶ್ವಾಸಕೋಶದ ಕ್ಯಾನ್ಸರ್ ಗೆ ಕಾರಣವಾಗುವ ಸಾಧ್ಯತೆ ಹೆಚ್ಚಿದ್ದರೂ, ಮಾನವನ ಆರೋಗ್ಯವನ್ನು ಸುಧಾರಿಸಲು ಹವಾಮಾನದ ಬಗ್ಗೆ ಗಮನ ಹರಿಸುವುದು ಇನ್ನೂ ಮುಖ್ಯವಾಗಿದೆ. ವಾಯು ಮಾಲಿನ್ಯ ಕಡಿಮೆ ಮಾಡಿದಷ್ಟು ನಮ್ಮ ಆರೋಗ್ಯ ಉತ್ತಮವಾಗಿರುತ್ತೆ.
ಶ್ವಾಸಕೋಶದ ಕ್ಯಾನ್ಸರ್ ನ ಲಕ್ಷಣಗಳು
ಶ್ವಾಸಕೋಶದ ಕ್ಯಾನ್ಸರ್ ಅನೇಕ ದೇಶಗಳಲ್ಲಿ ಕ್ಯಾನ್ಸರ್ ಸಾವುಗಳಿಗೆ ಪ್ರಮುಖ ಕಾರಣವಾಗಿದೆ. ಈ ರೀತಿಯ ಕ್ಯಾನ್ಸರ್ ನ ಪ್ರಾರಂಭವು ಶ್ವಾಸಕೋಶದಿಂದ ಪ್ರಾರಂಭವಾಗುತ್ತದೆ ಮತ್ತು ದೇಹದ ಇತರ ಭಾಗಗಳಿಗೆ ಹರಡುತ್ತದೆ. ಶ್ವಾಸಕೋಶದ ಕ್ಯಾನ್ಸರ್ ರೋಗಲಕ್ಷಣಗಳನ್ನು ಸಾಮಾನ್ಯವಾಗಿ ನಿರ್ಲಕ್ಷಿಸಲಾಗುತ್ತದೆ, ಆದರೆ ಅದು ಎಷ್ಟು ಬೇಗ ಪತ್ತೆಯಾಗುತ್ತದೆಯೋ, ಅಷ್ಟು ಬೇಗ ಚಿಕಿತ್ಸೆ ಸುಲಭವಾಗುತ್ತದೆ. ಶ್ವಾಸಕೋಶದ ಕ್ಯಾನ್ಸರ್ ನ ಲಕ್ಷಣಗಳ (signs of lung cancer) ಬಗ್ಗೆ ತಿಳಿದುಕೊಳ್ಳೋಣ:
ಶ್ವಾಸಕೋಶದ ಕ್ಯಾನ್ಸರ್ ನ ಆರಂಭಿಕ ಚಿಹ್ನೆಗಳು:
ಕೆಮ್ಮಿನ ಉಲ್ಬಣ
ಕೆಮ್ಮಿನಲ್ಲಿ ಲೋಳೆ
ಗ್ರೈಂಡಿಂಗ್ ಮಿಲ್ ನಂತೆ ಗಿರಕಿ ಹೊಡೆಯುವ ಶಬ್ದ
ದುರ್ಬಲನೆ
ಹಸಿವಿನಲ್ಲಿ ಬದಲಾವಣೆಗಳು
ತೂಕ ನಷ್ಟ
ಉಸಿರಾಟದ ಸೋಂಕುಗಳು
ಉಸಿರಾಡುವಾಗ ಎದೆಯ ನೋವು ಹೆಚ್ಚಾಗುತ್ತದೆ
ಶ್ವಾಸಕೋಶದ ಕ್ಯಾನ್ಸರ್ ನ ತಡವಾಗಿ ಕಾಣಿಸಿಕೊಳ್ಳುವ ಲಕ್ಷಣಗಳು
ಈ ರೋಗಲಕ್ಷಣಗಳು ಕೊನೆಯ ಸ್ಟೇಜ್ ನಲ್ಲಿ ಕಾಣಿಸಿಕೊಳ್ಳುತ್ತವೆ
ಕುತ್ತಿಗೆ ಅಥವಾ ಕಾಲರ್ ಬೋನ್ ಮೇಲೆ ಉಬ್ಬುಗಳು
ಮೂಳೆಗಳಲ್ಲಿ, ವಿಶೇಷವಾಗಿ ಸೊಂಟ, ಪಕ್ಕೆಲುಬುಗಳು ಅಥವಾ ಬೆನ್ನಿನಲ್ಲಿ ನೋವು
ತಲೆನೋವು
ತಲೆತಿರುಗುವಿಕೆ
ಸಮತೋಲನ ಸಮಸ್ಯೆ
ಕೈ ಮತ್ತು ಕಾಲುಗಳಲ್ಲಿ ಜುಮ್ಮೆನಿಸುವುದು
ಕಾಮಾಲೆ
ರೆಪ್ಪೆಯ ಬಾಗುವಿಕೆ
ಭುಜಗಳಲ್ಲಿ ನೋವು
ಮೇಲಿನ ದೇಹ ಮತ್ತು ಮುಖದ ಹಿಗ್ಗುವಿಕೆ