Panchamasali Reservation; 2ಎ ಮೀಸಲಾತಿ ನೀಡಿದರೆ ಸಿಎಂಗೆ ಸನ್ಮಾನ: ಮೃತ್ಯುಂಜಯ ಶ್ರೀ
ಡಿ. 19ರ ಒಳಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಿದರೆ ಸನ್ಮಾನ ಮಾಡಲಾಗುವುದು. ಇಲ್ಲದಿದ್ದರೆ ಮತ್ತೆ ನಿರಂತರ ಹೋರಾಟಕ್ಕೆ ಸಿದ್ಧ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜ. ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಲಕ್ಷ್ಮೇಶ್ವರ (ಡಿ.9) : ಡಿ. 19ರ ಒಳಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಿದರೆ ಸನ್ಮಾನ ಮಾಡಲಾಗುವುದು. ಇಲ್ಲದಿದ್ದರೆ ಮತ್ತೆ ನಿರಂತರ ಹೋರಾಟಕ್ಕೆ ಸಿದ್ಧ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜ. ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಡಿ. 17ರಂದು ಗದಗನಲ್ಲಿ ನಡೆಯಲಿರುವ ಪಂಚಮಸಾಲಿ ಜಿಲ್ಲಾ ಮಟ್ಟದ ಸಮಾವೇಶಕ್ಕೆ ಆಗಮಿಸಲು ಸಮಾಜ ಬಾಂಧವರಿಗೆ ಬುಧವಾರ ಆಹ್ವಾನ ನೀಡಿ ನಂತರ ಅವರು ಮಾತನಾಡಿದರು. ರಾಜ್ಯದಲ್ಲಿ 1.30 ಕೋಟಿ ಪಂಚಮಸಾಲಿ ಸಮಾಜದವರು ಇದ್ದಾರೆ. 2ಎ ಮೀಸಲಾತಿ ಸಂಬಂಧ ಕಳೆದ ನಾಲ್ಕೈದು ವರ್ಷಗಳಿಂದ ಹೋರಾಟ ಮಾಡುತ್ತಿದ್ದು, ಮೀಸಲಾತಿ ನೀಡುವ ವಿಚಾರದಲ್ಲಿ ಸರ್ಕಾರವು ಸಕಾರಾತ್ಮಕವಾಗಿ ಸ್ಪಂದಿಸುತ್ತ ಬಂದಿದೆ. ಡಿ. 19ರಿಂದ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೂ ಮೊದಲೇ ಮೀಸಲಾತಿ ಪ್ರಕಟಿಸುವ ಭರವಸೆ ಇದೆ.
ಮೀಸಲಾತಿ ಘೋಷಿಸಿದರೆ ಸನ್ಮಾನ, ಇಲ್ಲವೇ ವಿರಾಟ ಸಮಾವೇಶ: ಜಯಮೃತ್ಯುಂಜಯ ಶ್ರೀ
ಮೀಸಲಾತಿ ನೀಡುವ ಮೂಲಕ ಸರ್ಕಾರ ಪಂಚಮಸಾಲಿ ಸಮಾಜದ ಋುಣ ತೀರಿಸಬೇಕು. ಒಂದು ವೇಳೆ ಡಿ. 19ರ ಒಳಗಾಗಿ ಮೀಸಲಾತಿ ಪ್ರಕಟಿಸಿದರೆ ಮುಖ್ಯಮಂತ್ರಿಗಳನ್ನು ಸನ್ಮಾನಿಸಲಾಗುವುದು. ಇಲ್ಲದಿದ್ದರೆ ಡಿ. 22ರಂದು ಬೆಳಗಾವಿಯ ವಿಧಾನಸೌಧದ ಎದುರು ಲಕ್ಷಾಂತರ ಪಂಚಮಸಾಲಿ ಸಮಾಜ ಬಾಂಧವರೊಂದಿಗೆ ಹೋರಾಟ ಆರಂಭಿಸುತ್ತೇವೆ ಎಂದು ಸ್ಪಷ್ಟಪಡಿಸಿದ ಸ್ವಾಮೀಜಿ, ಗದಗ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮನವಿ ಮಾಡಿದರು.
ಮಹೇಶ ಹೊಗೆಸೊಪ್ಪಿನ, ಅಯ್ಯಪ್ಪ ಅಂಗಡಿ, ಶಿವಾನಂದ ದೇಸಾಯಿ, ಯಲ್ಲಪ್ಪ ಪಲ್ಲೇದ ಮಾತನಾಡಿದರು. ಸೋಮನಗೌಡ ಪಾಟೀಲ, ಶಂಕರ ಗೋಡಿ, ಶರಣು ಗೋಡಿ, ಬಸವರಾಜ ಹೊಗೆಸೊಪ್ಪಿನ, ದೊಡ್ಡೀರಪ್ಪ ಬನ್ನಿಕೊಪ್ಪ, ಬಸವರಾಜ ಕಲ್ಲೂರ, ಮಂಜಪ್ಪ ಮುಳಗುಂದ, ರಮೇಶ ಹಾಳದೋಟದ, ರುದ್ರಪ್ಪ ಉಮಚಗಿ, ಬಸವರಾಜ ಗಡ್ಡೆಪ್ಪನವರ ಇದ್ದರು.
ಸರ್ಕಾರಕ್ಕೆ ಡಿ. 19ರ ವರೆಗೆ ಗಡುವು
ಸರ್ಕಾರ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಿದರೆ ಸಿಎಂ ಬೊಮ್ಮಾಯಿಗೆ ಕುಂದಾ ತಿನಿಸಿ, ಕಲ್ಲು ಸಕ್ಕರೆಯಿಂದ ತುಲಾಭಾರ ಮಾಡುತ್ತೇವೆ. ಇಲ್ಲದಿದ್ದರೆ ಸುವರ್ಣಸೌಧದ ಎದುರು ಪ್ರತಿಭಟನೆ ನಡೆಸುತ್ತೇವೆ ಎಂದು ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಮಹಾಪೀಠದ ಬಸವಜಯ ಮೃತ್ಯುಂಜಯ ಶ್ರೀಗಳು ಎಚ್ಚರಿಕೆ ನೀಡಿದರು.
ಪಟ್ಟಣದ ವೀರಶೈವ ಪಂಚಮಸಾಲಿ ಜಾಗ್ರತಾ ಸೇವಾ ಸಂಘ, ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ಗಜೇಂದ್ರಗಡ- ಉಣಚಗೇರಿ ಇವರ ಆಶ್ರಯದಲ್ಲಿ ನಡೆಯುವ ಕಿತ್ತೂರ ಚೆನ್ನಮ್ಮ ಅವರ 244ನೇ ಜಯಂತ್ಯುತ್ಸವ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ 191ನೇ ಜಯಂತ್ಯುತ್ಸವ ಮತ್ತು 199ನೇ ವಿಜಯೋತ್ಸವ ಹಾಗೂ 2ಎ ಮೀಸಲಾತಿಗಾಗಿ ಹಕ್ಕೊತ್ತಾಯದ ಪಂಚಮಸಾಲಿ ಸಮಾಜದ ಬೃಹತ್ ಸಮಾವೇಶ ಹಿನ್ನೆಲೆಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಸ್ಥಳೀಯ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ಸಿದ್ದಪ್ಪ ಬಂಡಿ ಮಾತನಾಡಿ, ಡಿ. 9ರ ಶುಕ್ರವಾರ ಬೆಳಗ್ಗೆ 10.30ಕ್ಕೆ ಪಟ್ಟಣದಲ್ಲಿ ಬೃಹತ್ ಬೈಕ್ ರಾರಯಲಿ, ಡಿ. 10 ರ ಶನಿವಾರ ಬೆಳಿಗ್ಗೆ 9 ಗಂಟೆಗೆ ಪಟ್ಟಣದ ಮೈಸೂರ ಮಠದಿಂದ ಕಿತ್ತೂರು ಚನ್ನಮ್ಮನವರ, ಸಂಗೊಳ್ಳಿ ರಾಯಣ್ಣನ ಮೂರ್ತಿ ಹಾಗೂ ಬಸವಜಯ ಮೃತ್ಯುಂಜಯ ಸ್ವಾಮಿಗಳ ಮೆರವಣಿಗೆ ಜತೆಗೆ 555 ಕುಂಭ ಮೇಳದೊಂದಿಗೆ ಸಕಲ ವಾದ್ಯ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ 1.30ಕ್ಕೆ ಎಪಿಎಂಸಿ ಎದುರಿನ ಬಯಲು ಜಾಗೆಯಲ್ಲಿ ನಡೆವ ಸಮಾವೇಶಕ್ಕೆ 15 ಸಾವಿರಕ್ಕೂ ಅಧಿಕ ಜನ ಭಾಗವಹಿಸಲಿದ್ದು ಮಹಿಳೆಯರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.
ಡಿ.19ಕ್ಕೆ ಮೀಸಲಾತಿ ಘೋಷಿಸದಿದ್ದರೆ, 22ಕ್ಕೆ ಸುವರ್ಣ ಸೌಧ ಮುತ್ತಿಗೆ: ಬೊಮ್ಮಾಯಿ ಸರ್ಕಾರಕ್ಕೆ ಕೂಡಲ ಶ್ರೀ ಎಚ್ಚರಿಕೆ
ಪಂಚಮಸಾಲಿ ಮಹಾಸಭೆಯ ರಾಷ್ಟಿ್ರಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಹಿರೇಕೊಪ್ಪ ಹಾಗೂ ವೀರೇಶ ಸಂಗಮದ ಮಾತನಾಡಿ, ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹಕ್ಕೊತ್ತಾಯದ ಬೃಹತ್ ಸಮಾವೇಶಕ್ಕೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಶಾಸಕ ಕಳಕಪ್ಪ ಬಂಡಿ ಉದ್ಘಾಟಿಸಲಿದ್ದಾರೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ ಚೆನ್ನಮ್ಮನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಿದ್ದು, ಮಾಜಿ ಶಾಸಕ ಡಾ. ವಿಜಯಾನಂದ ಕಾಶಪ್ಪನವರ ರಾಯಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಿದ್ದಾರೆ. ಸಚಿವ ಸಿ.ಸಿ. ಪಾಟೀಲ ಘನ ಉಪಸ್ಥಿತಿ ಇರಲಿದ್ದು, ಸಮಾಜದ ಅಧ್ಯಕ್ಷ ಸಿದ್ದಪ್ಪ ಬಂಡಿ ಅಧ್ಯಕ್ಷ ವಹಿಸಲಿದ್ದಾರೆ. ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ, ಡಾ. ಮುರಗೇಶ ನಿರಾಣಿ, ಸಂಸದ ಸಂಗಣ್ಣ ಕರಡಿ, ಶಾಸಕರಾದ ಶಿವಾನಂದ ಪಾಟೀಲ, ಅರವಿಂದ ಬೆಲ್ಲದ, ಲಕ್ಷ್ಮೀ ಹೆಬ್ಬಾಳಕರ, ಮಾಜಿ ವಿಪ ಸದಸ್ಯ ಡಾ. ಎಂ.ಪಿ. ನಾಡಗೌಡ, ಮಾಜಿ ಸಚಿವ ವಿನಯ ಕುಲಕರ್ಣಿ ಸೇರಿ ಇತರರು ಆಗಮಿಸಲಿದ್ದಾರೆ ಎಂದರು. ಈ ವೇಳೆ ಚಂಬಣ್ಣ ಚವಡಿ, ಮುತ್ತಣ್ಣ ಮ್ಯಾಗೇರಿ, ಅಮರೇಶ ಬೂದಿಹಾಳ, ಟಿ.ಎಸ್. ರಾಜೂರ, ಪ್ರಭು ಚವಡಿ, ಅಮರೇಶಪ್ಪ ಪಲ್ಲೇದ, ಕಳಕಪ್ಪ ಸಂಗನಾಳ, ಈಶ್ವರಪ್ಪ ಮ್ಯಾಗೇರಿ ಸೇರಿ ಇತರರು ಇದ್ದರು.