Asianet Suvarna News Asianet Suvarna News

ವಾಯು ವಿಹಾರ ಮಾಡ್ತಾ ಜಲಾಶಯ ವೀಕ್ಷಿಸಿದ ಸಿದ್ದರಾಮಯ್ಯ

ಆಲಮಟ್ಟಿಜಲಾಶಯದ ಬಲಭಾಗದ ಕೆಎಸ್‌ಡಿಸಿ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಇದ್ದ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಶುಕ್ರವಾರ ಬೆಳಗ್ಗೆ ಆಲಮಟ್ಟಿಜಲಾಶಯ ಸುತ್ತ-ಮುತ್ತಲಿನ ಪ್ರದೇಶದಲ್ಲಿ ಆರು ಕಿಮೀ ನಿರಂತರ ವಾಯು ವಿಹಾರ ನಡೆಸಿದರು.

opposition leader siddaramaiah visited Almatti Dam akb
Author
Belgaum, First Published Jul 16, 2022, 4:35 AM IST

ಆಲಮಟ್ಟಿಜಲಾಶಯದ ಬಲಭಾಗದ ಕೆಎಸ್‌ಡಿಸಿ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಇದ್ದ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಶುಕ್ರವಾರ ಬೆಳಗ್ಗೆ ಆಲಮಟ್ಟಿಜಲಾಶಯ ಸುತ್ತ-ಮುತ್ತಲಿನ ಪ್ರದೇಶದಲ್ಲಿ ಆರು ಕಿಮೀ ನಿರಂತರ ವಾಯು ವಿಹಾರ ನಡೆಸಿದರು. ಜಲಾಶಯದ ಬಲಭಾಗದ ಹಿನ್ನೀರಿನಲ್ಲಿ ನಿರ್ಮಿಸಲಾಗುತ್ತಿರುವ ಕೆರೂರು ಹಾಗೂ ಬಾದಾಮಿ ಪಟ್ಟಣಕ್ಕೆ ನಿರಂತರ ಕುಡಿಯುವ ನೀರಿನ ಯೋಜನೆಯ ಜಾಕವೆಲ್‌ ಪರಿಶೀಲಿಸಿದ ಸಿದ್ದರಾಮಯ್ಯ, ಅದರ ಕಾರ‍್ಯ ಪ್ರಗತಿಯ ಕುರಿತು ವಿವರಣೆ ಪಡೆದರು.

ಆಲಮಟ್ಟಿಜಲಾಶಯಕ್ಕೆ ತೆರಳಿ, ಜಲಾಶಯದ ಎಲ್ಲಾ 26 ಗೇಟ್‌ ಗಳಿಂದ ನೀರು ಧುಮಕ್ಕುತ್ತಿರುವ ದೃಶ್ಯ ಕಂಡು ಬೆರಗಾದರು. ಒಳಹರಿವು, ನೀರಿನ ಸಂಗ್ರಹ, ಸದ್ಯದ ಪ್ರವಾಹದ ಸ್ಥಿತಿಗತಿ ಸಂಪೂರ್ಣ ಮಾಹಿತಿಯನ್ನು ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ಡಿ. ಬಸವರಾಜ ಮಾಹಿತಿ ನೀಡಿದರು. ಜಲಾಶಯದ ಗೇಟ್‌ಗಳು, ಎತ್ತರ ಹಾಗೂ ನಾನಾ ತಾಂತ್ರಿಕ ಮಾಹಿತಿಯನ್ನು ಅವರು ಪಡೆದರು.

ಆಲಮಟ್ಟಿ ಡ್ಯಾಂನಿಂದ 75,000 ಕ್ಯುಸೆಕ್‌ ನೀರು ಬಿಡುಗಡೆ: ನದಿಪಾತ್ರದ ಜನರಲ್ಲಿ ಮುಂಜಾಗೃತೆಗೆ ಸೂಚನೆ

ಸಿದ್ದರಾಮಯ್ಯ ವಾಸ್ತವ್ಯವಿದ್ದ ಕೆಎಸ್‌ಟಿಡಿಸಿ ಪ್ರವಾಸಿ ಮಂದಿರ ಮುಂದೆ ಅವರ ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಅವರಿಗೆ ಸನ್ಮಾನಿಸಲು, ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಅವರ ಅಭಿಮಾನಿಗಳು ತಾ ಮುಂದೆ, ನಾ ಮುಂದೆ ಎಂಬಂತೆ ಮುಗಿಬಿದ್ದರು. ಮುಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಎಂಬ ಘೋಷಣೆಗಳು ನಿರಂತರ ಮೊಳಗಿದವು. ಮಾಜಿ ಸಚಿವ ಹುಲ್ಲಪ್ಪ ಮೇಟಿ, ಹೊಳೆಬಸು ಶೆಟ್ಟರ, ಸುಜಾತಾ ಕಳ್ಳಿಮನಿ, ಕೆಎಸ್‌ ಐಎಸ್‌ ಎಫ್‌ ಇನ್ಸಪೆಕ್ಟರ್‌ ಶರಣಬಸವರಾಜ ಸೇರಿದಂತೆ ನೂರಾರು ಜನರು ಇದ್ದರು.

ಮನವಿ  ಸಲ್ಲಿಕೆ:

ಆಲಮಟ್ಟಿಜಲಾಶಯದಿಂದ ನೀರು ಬಿಟ್ಟಾಗ ಬಾ​ತಗೊಳ್ಳುವ ಅರಳದಿನ್ನಿ ಗ್ರಾಮವನ್ನು ಸಂಪೂರ್ಣ ಸ್ಥಳಾಂತರಿಸಿ ಪುನರ್ವಸತಿ ಕೇಂದ್ರವನ್ನಾಗಿ ಘೋಷಿಸಬೇಕು ಎಂದು ಕೃಷ್ಣಾ ತೀರದ ರೈತ ನಿರಾಶ್ರಿತರ ಅಭಿವೃದ್ಧಿ ಯುವಕ ಸಂಘದಿಂದ ಇದೇ ವೇಳೆ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಯಿತು. ಗ್ರಾಮದ ಬಸವರಾಜ ಬೆಳಗಲ್ಲ, ಸಲೀಂ ಮುಲ್ಲಾ ಮತ್ತಿತರರು ಮನವಿ ಸಲ್ಲಿಸಿದರು. ಬಾದಾಮಿ ತಾಲೂಕಿನ ರೈತ ಸಂಘದ ಕಾರ್ಯಕರ್ತರು ಆಗಮಿಸಿ ಹೊಲದ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಕಗಲಗೊಂಬದಿಂದ ಕಟಗೇರಿ ಗ್ರಾಮಕ್ಕೆ ರಸ್ತೆ ನಿರ್ಮಿಸುವಂತೆ ಆಗ್ರಹಿಸಿದರು.
Rajyasabha Poll: ಸಿದ್ದರಾಮಯ್ಯ ನಡೆ ಹಿಂದಿನ ರಹಸ್ಯವೇನು? ಬಯಸಿದ್ದು ಸಿಕ್ತಾ?

Follow Us:
Download App:
  • android
  • ios