ಮಂಡ್ಯ(ಡಿ.17): ಕೆ.ಆರ್‌ .ಪೇಟೆ ತಾಲೂಕಿನಲ್ಲಿ ಸಚಿವರಾಗಿದ್ದ ವೇಳೆ ವಿದ್ಯುತ್‌ ಕ್ಷೇತ್ರದಲ್ಲಿ ಮತ್ತು ರಸ್ತೆ ಅಭಿವೃದ್ಧಿ ಕ್ರಾಂತಿಯನ್ನೇ ಮಾಡಿರುವ ಎಚ್‌.ಡಿ.ರೇವಣ್ಣರನ್ನು ಟೀಕಿಸುವ ಯಾವುದೇ ನೈತಿಕತೆ ಶಾಸಕ ಕೆ.ಸಿ.ನಾರಾಯಣಗೌಡರಿಗೆ ಇಲ್ಲ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಬಿ.ಎಲ್‌ .ದೇವರಾಜು ಹೇಳಿದ್ದಾರೆ.

ಮಾಜಿ ಸಿಎಂ ಕುಮಾರಸ್ವಾಮಿ ಹುಟ್ಟುಹಬ್ಬದ ಅಂಗವಾಗಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಮಾತನಾಡಿದ ಅವರು, ಮಾಜಿ ಸಚಿವ ಜೆಡಿಎಸ್‌ ಪಕ್ಷ ಅಧಿಕಾರದಲ್ಲಿ ಇದ್ದಾಗ ಅಭಿವೃದ್ಧಿಯ ಹರಿಕಾರರಾಗಿದ್ದರು. ಇಷ್ಟುದಿನಗಳ ಕಾಲ ರೇವಣ್ಣ ಅವರನ್ನು ಹೊಗಳುತ್ತಿದ್ದ ನಾರಾಯಣಗೌಡ ಬಿಜೆಪಿಗೆ ಹೋದ ತಕ್ಷಣ ಟೀಕಿಸುವುದು ಸರಿಯಲ್ಲ ಎಂದಿದ್ದಾರೆ.

ವಿದ್ಯಾರ್ಥಿಗಳಿಂದ ಬಾಬ್ರಿ ಮಸೀದಿ ಪ್ರತಿಕೃತಿ ಧ್ವಂಸ: ಕಲ್ಲಡ್ಕ ಭಟ್ ಸೇರಿ ಐವರ ವಿರುದ್ದ ಕೇಸ್

ಈ ಹಿಂದೆ ಅವರು ಮಾಡಿದ ಅಭಿವೃದ್ಧಿ ಕೆಲಸಗಳೇ ನಿಮಗೆ ಹೆಸರು ತಂದು ಕೊಟ್ಟಿದ್ದವು. ಇದನ್ನು ಅರ್ಥ ಮಾಡಿಕೊಂಡರೆ ಸಾಕು. ಟೀಕಿಸುವುದನ್ನು ಬಿಟ್ಟು ತಾಲೂಕಿನ ಅಭಿವೃದ್ಧಿ ಕೆಲಸಗಳನ್ನು ಮಾಡಿ ತೋರಿಸಲಿ ಎಂದು ಸಲಹೆ ನೀಡಿದರು. ರಾಜ್ಯದ ಸುಮಾರು 22 ಲಕ್ಷ ರೈತರ ಸುಮಾರು 46ಸಾವಿರ ಕೋಟಿ ರು. ಸಾಲನ್ನು ಮನ್ನಾ ಮಾಡುವ ಮೂಲಕ ರೈತರ ಆತ್ಮಹತ್ಯೆಯನ್ನು ತಪ್ಪಿಸುವ ಮೂಲಕ ರೈತರ ಕಣ್ಮಣಿಯಾಗಿದ್ದ ಕುಮಾರಣ್ಣ ಈ ಹಿಂದೆ 20 ತಿಂಗಳು, ಈಗ 14 ತಿಂಗಳು ಉತ್ತಮ ಆಡಳಿತ ನೀಡಿದ್ದಾರೆ. ಕೆಲವರು ಪಿತೂರಿ ನಡೆಸಿ ಕೇವಲ 14 ತಿಂಗಳಿಗೆ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಯಿತು ಎಂದು ಟೀಕಿಸಿದ್ದಾರೆ.

BJPಯಿಂದ 50 ಕೋಟಿ, ಮಂತ್ರಿಗಿರಿಯ ಆಫರ್‌ ಬಂದಿತ್ತು ಎಂದ JDS ಶಾಸಕ

ಇನ್ನಷ್ಟುದಿನ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಮುಂದುವರೆದಿದ್ದರೆ ಮಂಡ್ಯ ಜಿಲ್ಲೆಯಲ್ಲಿ ಹೊಸ ಸಕ್ಕರೆ ಕಾರ್ಖಾನೆ ನಿರ್ಮಿಸುವ ಮೂಲಕ ಮಂಡ್ಯ ಜಿಲ್ಲೆಯ ರೈತರಿಗೆ ಅನುಕೂಲ ಮಾಡಿಕೊಡುತ್ತಿದ್ದರು. ಆದರೆ, ಇದಕ್ಕೆ ಅವಕಾಶ ನೀಡಲಿಲ್ಲ. ಇದರಿಂದ ಜಿಲ್ಲೆಯ ರೈತರಿಗೆ ಅಪಾರ ನಷ್ಟವಾಗಿದೆ ಎಂದು ಹೇಳಿದರು. ಮಂಡ್ಯ ಜಿಲ್ಲೆಯ ರೈತರು, ಜನರ ಅಭ್ಯುದಯಕ್ಕೆ ಶ್ರಮಿಸಿದ ಜೆಡಿಎಸ್‌ ಪಕ್ಷವನ್ನು ಮಂಡ್ಯ ಲೋಕಸಭಾ ಕ್ಷೇತ್ರ ಹಾಗೂ ಕೆ.ಆರ್‌.ಪೇಟೆ ಉಪ ಚುನಾವಣೆಯಲ್ಲಿ ಮತದಾರರು ಗೆಲ್ಲಿಸದೇ ಇರುವುದು ನೋವಿನ ಸಂಗತಿ ಬೇಸರ ವ್ಯಕ್ತಪಡಿಸಿದ್ದಾರೆ.

ಮಂಗಳೂರು: 5 ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ

ಈ ವೇಳೆ ಮುಖಂಡರಾದ ಪೂವನಹಳ್ಳಿ ರೇವಣ್ಣ, ಬಂಡಿಹೊಳೆ ಅಶೋಕ್‌ ಕುಮಾರ್‌, ಬಿ.ಎಸ್‌.ಪುಟ್ಟಸ್ವಾಮೀಗೌಡ, ಎಚ್‌.ಆರ್‌.ನಾಗರಾಜೇಗೌಡ, ವಸಂತಕುಮಾರ್‌, ಕಂಠಿ ಕುಮಾರ್‌, ಕೋಟಿ ಸುಬ್ಬೇಗೌಡ, ಬಿ.ವಿ.ನಾಗೇಶ್‌, ದೊಡ್ಡಗಾಡಿಗನಹಳ್ಳಿ ರಂಗರಾಜು, ಕೆ.ವಿ.ದಿವಾಕರ್‌, ತನ್ವೀರ್‌ ಪಾಷಾ, ಸಚಿನ್‌ ಕೃಷ್ಣ, ದಡದಹಳ್ಳಿ ಅತೀಕ್‌, ಪುರಸಭಾ ಸದಸ್ಯ ಗಿರೀಶ್‌, ಶ್ರೀನಿಧಿ, ಕೆ.ಟಿ.ಶ್ರೀನಿವಾಸ್‌, ದೊಡ್ಡಗಾಡಿಗನಹಳ್ಳಿ ಲೋಕೇಶ್‌, ತಾಲೂಕು ಎಚ್‌.ಡಿ.ಕುಮಾರಸ್ವಾಮಿ ಅಭಿಮಾನಿಗಳ ಸಂಘದ ಲೋಕೇಶ್‌, ಕುಮಾರ್‌ ಉಪಸ್ಥಿತರಿದ್ದರು.