ಮಂಗಳೂರು(ಡಿ.17): ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದು ಈ ನಿಟ್ಟಿನಲ್ಲಿ ಎಷ್ಟೇ ಕ್ರಮ ಕೈಗೊಂಡರೂ ಕಾಮಕರ ಅಟ್ಟಹಾಸ ಮಾತ್ರ ನಿಂತಿಲ್ಲ. ಮಂಗಳೂರಿನಲ್ಲಿ ಶಾಲೆಯಿಂದ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಲು ಪ್ರಯತ್ನಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರಿನ ಐದನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಪ್ರಯತ್ನ ನಡೆಸಿದ್ದು, ಕಡಬ ಪೊಲೀಸರು ಆರೋಪಿ ಶಿವರಾಮ್‌ನನ್ನು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ಘಟನೆ ನಡೆದಿದ್ದು, ಡಿ.14 ರಂದು ಶಾಲಾ ವಿದ್ಯಾರ್ಥಿನಿ ಮೇಲೆ ಅತ್ಯಚಾರ ಪ್ರಯತ್ನ ನಡೆದಿದೆ.

ವಿದ್ಯಾರ್ಥಿನಿಯರ ಗುಪ್ತಾಂಗಕ್ಕೆ ಕೈ ಹಾಕಿ ಲೈಂಗಿಕ ಕಿರುಕುಳ..! ಸಿಕ್ಕಿಬಿದ್ದ ಕಾಮುಕ ಶಿಕ್ಷಕ

ಶಾಲೆ ಮುಗಿಸಿ ಮನೆಗೆ ಮರಳುತ್ತಿದ್ದ ಬಾಲಕಿಯನ್ನು ಯುವಕ ಪೊದೆಗೆ ಎಳೆದುಕೊಂಡು ಹೋಗಿದ್ದಾನೆ. ಕಿರುಚಾಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಯುವಕ ಬಾಲಕಿಯ ಮೇಲೆ ಅತ್ಯಾಚಾರ ನಡೆಸಲು ಪ್ರಯತ್ನಿಸಿದ್ದಾನೆ.

ಶಾಲಾ ಮಕ್ಕಳ ಗುಂಪು ಇದನ್ನು ನೋಡಿದ ಕಾರಣ ಬಾಲಕಿ ಪಾರಾಗಿದ್ದಾಳೆ. ಘಟನೆ ತಿಳಿದ ಪೊಲೀಸರು ಆರೋಪಿ ಶ್ರೀರಾಮ್‌ನನ್ನು ವಶಕ್ಕೆ ಪಡೆದಿದ್ದಾರೆ.