Asianet Suvarna News Asianet Suvarna News

BJPಯಿಂದ 50 ಕೋಟಿ, ಮಂತ್ರಿಗಿರಿಯ ಆಫರ್‌ ಬಂದಿತ್ತು ಎಂದ JDS ಶಾಸಕ

ಬಿಜೆಪಿಯಿಂದ ನನಗೂ ಆಫರ್ ಬಂದಿತ್ತು. 50 ಕೋಟಿ ರೂಪಾಯಿ ಹಾಗೂ ಮಂತ್ರಿಗಿರಿಯ ಆಫರ್‌ ನನಗೆ ಸಿಕ್ಕಿತ್ತು ಎಂದು ಜೆಡಿಎಸ್ ಶಾಸಕ ಹೇಳಿದ್ದಾರೆ. ಈಗಾಗಲೇ ಮಂಡ್ಯದಲ್ಲಿ ಇಬ್ಬರು ಜೆಡಿಎಸ್ ಶಾಸಕರು ಬಿಜೆಪಿ ಸೇರುವ ತಯಾರಿಯಲ್ಲಿದ್ದು, ಆಪರೇಷನ್ ಕಮಲ ಮಂದುವರಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

i too got offer of 50 crores from bjp says MLA K Annadani in mandya
Author
Bangalore, First Published Dec 17, 2019, 11:37 AM IST

ಮಂಡ್ಯ(ಡಿ.17): ಜಿಲ್ಲೆಯ ಜೆಡಿಎಸ್‌ನ ಯಾವುದೇ ಶಾಸಕರು ಪಕ್ಷ ಬಿಟ್ಟು ಹೋಗುವುದಿಲ್ಲ. 6 ಶಾಸಕರು ನೈತಿಕತೆಯ ಸಿದ್ಧಾಂತ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದೇವೆ. ಜೆಡಿಎಸ್‌ ಪಕ್ಷಕ್ಕೆ ನಮ್ಮೆಲ್ಲಾ ಶಾಸಕರು ನಿಷ್ಠೆಯನ್ನು ಹೊಂದಿರುವುದಾಗಿ ಶಾಸಕ ಡಾ. ಕೆ.ಅನ್ನದಾನಿ ಸ್ಪಷ್ಟಪಡಿಸಿದ್ದಾರೆ.

ಪಟ್ಟಣದ ಗಂಗಾಧರೇಶ್ವರ ದೇವಸ್ಥಾನದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಹುಟ್ಟುಹಬ್ಬದ ಅಂಗವಾಗಿ ನಡೆದ ವಿಶೇಷ ಪೂಜೆಯನ್ನು ನೆರೆವೇರಿಸಿ ಮಾತನಾಡಿ, ಮಂಡ್ಯ ಜಿಲ್ಲೆಗೆ ಜೆಡಿಎಸ್‌ ಕೊಡುಗೆ ಅಪಾರವಾಗಿದೆ. ಬರಡು ಪ್ರದೇಶದಂತಿದ್ದ ಕೆ.ಆರ್‌ ಪೇಟೆಗೆ ಎಚ್‌ .ಡಿ. ದೇವೇಗೌಡರು ಹೇಮಾವತಿ ನೀರನ್ನು ಕೊಟ್ಟಿದ್ದರ ಫಲವಾಗಿ ಇಂದು ಹಚ್ಚ ಹಸಿರಿನಿಂದ ಕೂಡಿದೆ ಎಂದಿದ್ದಾರೆ.

ಇಬ್ಬರು ಶಾಸಕರು JDSಗೆ ಬೈ ಬೈ..! ಮುಂದುವರಿಯುತ್ತಾ ಆಪರೇಷನ್ ಕಮಲ..?

ಬಿಜೆಪಿ ಪಕ್ಷದಿಂದ ನನಗೂ 50 ಕೋಟಿ ರು. ಜೊತೆಗೆ ಮಂತ್ರಿಗಿರಿ ನೀಡುತ್ತೇನೆ ಎಂದು ಆಫರ್‌ ಬಂದಿತ್ತು. ಆದರೆ, ತಾನು ಪಕ್ಷಕ್ಕೆ ನಿಷ್ಠೆಯನ್ನು ಹೊಂದಿರುವುದರಿಂದ ತಿರಸ್ಕರಿಸಿದೆ. ಎಲ್ಲಾ 6 ಶಾಸಕರು ಜೆಡಿಎಸ್‌ ಪಕ್ಷದಲ್ಲಿಯೇ ಇದ್ದು, ಪಕ್ಷ ಸಂಘಟನೆಗೆ ನಿರಂತರವಾಗಿ ಶ್ರಮಿಸುವುದಾಗಿ ಹೇಳಿದರು. ರೈತರ ಸಾಲಮನ್ನಾ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕುಮಾರಸ್ವಾಮಿ ಮಂಡ್ಯ ಜಿಲ್ಲೆಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದಿದ್ದಾರೆ.

ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕುಮಾರಸ್ವಾಮಿ ಅವರಿಗೆ ಮತ್ತೊಂದು ಬಾರಿ ಅಧಿಕಾರ ಸಿಗಬೇಕು. ಅದಕ್ಕಾಗಿ ದೇವರು ಆಯಸ್ಸು ಆರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸಿದರು. ನಂತರ ತಾಲೂಕು ಆಸ್ಪತ್ರೆಯಲ್ಲಿ ಹಣ್ಣು ಹಂಪಲು ನೀಡಲಾಯಿತು. ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ರವಿ, ಪುರಸಭೆ ಸದಸ್ಯರಾದ ಸಿದ್ದರಾಜು, ಪ್ರಶಾಂತ್‌, ಮುಖಂಡರಾದ ಶ್ರೀಧರ್‌ , ಮಾದೇಶ್‌, ಮೆಹಬೂಬ್ ಪಾಷ, ನಾಗೇಂದ್ರ ಉಪಸ್ಥಿತರಿದ್ದರು.

ಮಂಗಳೂರು: 5 ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ

Follow Us:
Download App:
  • android
  • ios