ಹೊಸನಗರ[ಜ.28]: ನಿಗೂಢ ಬೆಂಕಿ ಅವಘಡಕ್ಕೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹಿರಿಮನೆ ಗ್ರಾಮಸ್ಥರು ಸಾಕ್ಷಿಯಾಗಿದ್ದಾರೆ. ವಾರದಲ್ಲಿ ಮೂರು ಬಾರಿ ಬೆಂಕಿ ಅವಘಡ ಸಂಭವಿಸಿದ್ದು, ಭಯದಲ್ಲೇ ಗ್ರಾಮವನ್ನು ತೊರೆಯಲು ಗ್ರಾಮಸ್ಥರು ಚಿಂತಿಸುತ್ತಿದ್ದಾರೆ.

ಕರ್ನಲ್ ಮೆಗ್ಗಾನ್ ಮತ್ತು ಮಂಗನ ಕಾಯಿಲೆ..ಒಂದು ನೆನಪು

ಕರಿಮನೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಹಿರಿಮನೆಯ ಪಾಂಡುಗೌಡ ಮನೆಯ ಕೊಟ್ಟಿಗೆ ಬೆಂಕಿ ತಗುಲಿದ್ದು, ಅಗ್ನಿ ಆರ್ಭಟಕ್ಕೆ ಕೊಟ್ಟಿಗೆಗೆ ಹಾಕಿದ್ದ ಸಿಮೆಂಟ್ ಸೀಟುಗಳು ಸಿಡಿದುಹೋಗಿವೆ. ಸ್ಥಳೀಯರು ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಬೆಂಕಿ ತಗುಲುವಿಕೆಗೆ ಯಾವುದೇ ನಿರ್ದಿಷ್ಟ ಕಾರಣ ತಿಳಿದುಬಂದಿಲ್ಲ. 

ಶಿವಮೊಗ್ಗ: ನಟೋರಿಯಸ್ ರೌಡಿಗಳ ಎಣ್ಣೆ ಪಾರ್ಟಿಗೆ ಪೊಲೀಸ್ ಕ್ವಾಟರ್ಸ್ ಅಡ್ಡೆ

ಕಳೆದೊಂದು ವಾರದಲ್ಲಿ ಮೂರು ಬಾರಿ ಈ ಗ್ರಾಮದಲ್ಲೇ ಬೆಂಕಿ ಅವಘಡ ಸಂಭವಿಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಹಿರಿಮನೆಯ ತೋಟಪ್ಪಗೌಡ, ರತ್ನಮ್ಮ, ಧರ್ಮಪ್ಪ, ಪಾಂಡುಗೌಡ ಅವರ ಮನೆಯಲ್ಲಿ ಈ ಪ್ರಕರಣಗಳು ಬೆಳಕಿಗೆ ಬಂದಿವೆ. ನಿಗೂಢ ಬೆಂಕಿಯ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಪ್ರಕರಣ ಭೇದಿಸಲು ಆಗ್ರಹಿಸಿದ್ದಾರೆ.